ಹೂಸ್ಟನ್: ವಾಷಿಂಗ್ ಮೆಷಿನ್ ವಿಚಾರಕ್ಕೆ ಕರ್ನಾಟಕ ಮೂಲದ ವ್ಯಕ್ತಿಯನ್ನು ಇಲ್ಲಿನ ಟೆಕ್ಸಾಸ್ ನಲ್ಲಿ ಭೀಕರವಾಗಿ ಹತ್ಯೆ ಮಾಡಿರುವ ದುರಂತ ಪ್ರಕರಣ ವರದಿಯಾಗಿದೆ. ಹತ್ಯೆಗೀಡಾದ ವ್ಯಕ್ತಿಯನ್ನು ಕರ್ನಾಟಕ ಮೂಲಕ ಚಂದ್ರಮೌಳಿ ನಾಗಮಲ್ಲಯ್ಯ ಎಂದು ಗುರುತಿಸಲಾಗಿದೆ. 50 ವರ್ಷದ ಇವರನ್ನು ಇವರ ಪತ್ನಿ ಮತ್ತು 18 ವರ್ಷದ ಪುತ್ರನ ಎದುರಿನಲ್ಲೇ ಯೊರ್ದನಿಸ್ ಕೊಬೊಸ್-ಮಾರ್ಟಿನೇಜ್ (37) ಎಂಬಾತ ಕೊಲೆ ಮಾಡಿದ್ದಾನೆ.
ಡಲ್ಲಾಸ್‌ನ ಡೌನ್‌ಟೌನ್ ಸ್ಕೂಟಿಸ್ ಮೋಟೆಲ್ ನಲ್ಲಿ ಈ ಪ್ರಕರಣ ನಡೆದಿದೆ. ಆರೋಫಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಚಂದ್ರಮೌಳಿ ಮತ್ತು ಮಾರ್ಟಿನೇಜ್ ಇಬ್ಬರೂ ಸಹದ್ಯೋಗಿಗಳು ಎಂದು ತಿಳಿದು ಬಂದಿದೆ. ನಾಗಮಲ್ಲಯ್ಯ ಹಾಗೂ ಮಾರ್ಟಿನೇಜ್ ನಡುವೆ ವಾಷಿಂಗ್ ಮಷಿನ್ ಹಾಳಾಗಿದ್ದಕ್ಕೆ ಜಗಳ ಆರಂಭವಾಗಿ ಹತ್ಯೆಯಲ್ಲಿ ಕೊನೆಗೊಂಡಿದೆ. ಆರೋಪಿಯ ಅಪರಾಧ ಸಾಬೀತಾದರೆ, ಜೀವಾವಧಿ ಇಲ್ಲವೇ ಮರಣದಂಡನೆ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಪ್ರಕರಣದ ಕೆಲವು ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮಾರ್ಟಿನೇಜ್ ಹರಿತವಾದ ಕತ್ತಿಯಿಂದ ದಾಳಿಗೆ ಮುಂದಾಗುತ್ತಿದ್ದಂತೆ ನಾಗಮಲ್ಲಯ್ಯ ಅವರು ತಮ್ಮ ಪತ್ನಿ ಹಾಗೂ ಪುತ್ರ ಇದ್ದ ಮೋಟೆಲ್ ಕಚೇರಿಯತ್ತ ಓಡಿದ್ದಾರೆ. ಆದರೂ, ಆರೋಪಿ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಕೊಲೆ ಮಾಡಿದ್ದಾನೆ.
ನಂತರ ರಸ್ತೆಯಲ್ಲಿ ಬಿದ್ದ ತಲೆಯನ್ನು ಆರೋಪಿ ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿಯಿಯಲ್ಲಿ ಸೆರೆಯಾಗಿದೆ. ಮಾರ್ಟಿನೇಜ್ ಅಪರಾದ ಹಿನ್ನಲೆ ಹೊಂದಿರುವ ವ್ಯಕ್ತಿಯಾಗಿದ್ದು, ಈಗಾಗಲೇ ಕೆಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎದು ಪೊಲೀಸರು ತಿಳಿಸಿದ್ದಾರೆ.