Tuesday, December 10, 2024

ಕಾಂತಾರ-1 ಶೂಟಿಂಗ್; ಸಹ ಕಲಾವಿದರ ಬಸ್ ಅಪಘಾತ: ಯಾರಿಗೆ, ಏನಾಯ್ತು?

Most read

ಕೊಲ್ಲೂರು: ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಸಿನಿಮಾ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದ್ದು ಯಾರಿಗೆ ತಾನೇ ತಿಳಿದಿಲ್ಲ? ಇದು ವರ್ಲ್ಡ್ ವೈಡ್ ಹೆಸರು ಮಾಡಿದ ಸಿನೆಮಾ. ಆ ಯಶಸ್ಸಿನ ನಡುವೆಯೇ ಪ್ರೀಕ್ವೇಲ್ ಘೋಷಣೆ ಮಾಡಿದ್ದರು. 2025ಕ್ಕೆ ಅನೌನ್ಸ್ ಎಂಬುದನ್ನು ಹೊಂಬಾಳೆ ಈಗಾಗಲೇ ಘೋಷಣೆ ಮಾಡಿದೆ. ಈ ಮಧ್ಯೆ ಕಾಂತಾರ-1 ಸಿನಿಮಾದ ಶೂಟಿಂಗ್ ಕೂಡ ನಡೆಯುತ್ತಿದೆ. ಶೂಟಿಂಗ್ ಆರಂಭಕ್ಕೂ ಮುನ್ನವೇ ನಟ ರಿಷಬ್ ಶೆಟ್ಟಿ ದೈವದ ಅನುಮತಿಯನ್ನು ಕೇಳಿದ್ದರು. ಇದೀಗ ಅದೇಕೋ ಒಂದೊಂದೇ ಅಡ್ಡಿಆತಂಕಗಳು ಕಾಂತಾರ-1 ಸಿನಿಮಾಗೆ ಕಾಡುತ್ತಿವೆ.

ಕಾಂತಾರ-1 ಸಿನಿಮಾದ ಶೂಟಿಂಗ್ ಮುಗಿಸಿ ಜೂನಿಯರ್ ಆರ್ಟಿಸ್ಟ್ ಗಳನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ ಪಲ್ಟಿ ಹೊಡೆದಿದೆ. ಈ ಘಟನೆಯಲ್ಲಿ ಆರು ಮಂದಿಗೆ ಗಂಭೀರ ಗಾಯವಾಗಿದೆ. ಸಮೀಪದ ಆಸ್ಪತ್ರೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಾಂತಾರ-1 ಸಿನಿಮಾ ಶೂಟಿಂಗ್ ಕೊಲ್ಲೂರು ಸುತ್ತಮುತ್ತ ನಡೆಯುತ್ತಿತ್ತು. ಜೂನಿಯರ್ ಆರ್ಟಿಸ್ಟ್ ಗಳಿದ್ದ ಮಿನಿ ಬಸ್ ಜಡ್ಕಳ್ ಬಳಿ ಪಲ್ಟಿಯಾಗಿದೆ.

ಕಾಂತಾರ-1 ಸಿನಿಮಾದ ಚಿತ್ರೀಕರಣ ಕರಾವಳಿಯ ಹಲವು ಭಾಗಗಳಲ್ಲಿ ನಡೆಯುತ್ತಿದೆ. ಸಿನಿಮಾಗೆ ಸಹ ಕಲಾವಿದರನ್ನು ಕರೆತರಲಾಗಿದೆ. ಕೆಲವು ದಿನಗಳ ಹಿಂದೆ ಜೂನಿಯರ್ ಆರ್ಟಿಸ್ಟ್ ಗಳು ಸರಿಯಾದ ಸೌಲಭ್ಯ ನೀಡುತ್ತಿಲ್ಲವೆಂದು ಕೋಪಗೊಂಡಿದ್ದರು. ಈ ಆರೋಪ ಬೃಹತ್ ಸಂಸ್ಥೆಯಾದ ಹೊಂಬಾಳೆಗೆ ಮುಜುಗರ ತಂದಿತ್ತು. ಇದರ ಬೆನ್ನಲ್ಲೇ ಹೊಂಬಾಳೆ ಸ್ಪಷ್ಟನೆ ನೀಡಿ ಇದು ನಮ್ಮಿಂದ ಆದ ತಪ್ಪಲ್ಲ. ಜೂನಿಯರ್ ಆರ್ಟಿಸ್ಟ್ ಗಳನ್ನು ಕಳುಹಿಸಿಕೊಡುವ ತಂಡದಿಂದ ಆಗಿರುವ ತಪ್ಪು ಎಂದು ತಿಳಿಸಿದ್ದರು. ಇದೀಗ ಜೂನಿಯರ್ ಆರ್ಟಿಸ್ಟ್ ಗಳಿದ್ದ ಮಿನಿ ಬಸ್ ಅಪಘಾತಕ್ಕೊಳಗಾಗಿದೆ.

More articles

Latest article