ರಾಷ್ಟ್ರಮಟ್ಟದಲ್ಲಿನ ಜೈವಿಕ ತಂತ್ರಜ್ಞಾನ ಕ್ಷೇತ್ರವನ್ನುಗಮನದಲ್ಲಿಟ್ಟುಕೊಂಡು, ಇಂದಿನ ಸ್ಥಿತಿಗತಿಯನ್ನು ಮೌಲ್ಯಮಾಪನ ಮಾಡಿ ಜೈವಿಕ ತಂತ್ರಜ್ಞಾನ ನೀತಿ-4.0 ಅನ್ನು ಪ್ರಕಟಿಸಲಾಗಿದೆ. ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ರಾಜ್ಯಕ್ಕೆಆಹ್ವಾನಿಸಲು ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕಜಾಗತಿಕ ಸಾಮರ್ಥ್ಯ ಕೇಂದ್ರಗಳ ನೀತಿಯನ್ನು (Karnataka GlobalCapability Centre Policy 2024) ಪ್ರಕಟಿಸಿದೆ. ನವೆಂಬರ್ 2024 ರ ದಿನಾಂಕ 19 ರಿಂದ 21 ರವರೆಗೆ ಆಯೋಜಿಸಿದ್ದ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ 51 ದೇಶಗಳಿಂದ ಒಟ್ಟಾರೆ 35,000ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಆಕರ್ಷಿಸಲಾಗಿದೆ. ಹೂಡಿಕೆದಾರರ ಸಂಪರ್ಕದಂತಹ ವಿವಿಧ ಉಪಕ್ರಮಗಳ ಮೂಲಕ ನವೋದ್ಯಮಗಳು ಈ ಶೃಂಗಸಭೆಯಲ್ಲಿ ಲಾಭ ಪಡೆದಿವೆ. “ಗೃಹಜ್ಯೋತಿ” ಯೋಜನೆಯಡಿ ಪ್ರಸ್ತುತ 1.62 ಕೋಟಿ ಗ್ರಾಹಕರು ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಆಗಸ್ಟ್ -2023 ರಿಂದ ಜನವರಿ- 2025 ರವರೆಗೆ ಒಟ್ಟಾರೆ 17290 ಕೋಟಿ ರೂ.ಗಳಷ್ಟು ಬೃಹತ್ ಸಹಾಯಧನವನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ಬಿಡುಗಡೆ ಮಾಡಲಾಗಿದೆ. ನನ್ನ ಸರ್ಕಾರವು 2000 ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಪಿಎಸ್ಪಿ ಯೋಜನೆಯ ಅನುಷ್ಠಾನಕ್ಕೆ ದಿನಾಂಕ 11.03.2024ರಂದು ರೂ.8645 ಕೋಟಿಯ ಕಾಮಗಾರಿಗೆ ಕಾರ್ಯಾದೇಶ ನೀಡಿದೆ. ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ 11.5 ಮೆಗಾವ್ಯಾಟ್ ಸ್ಥಾವರವನ್ನು ವೇಸ್ಟ್ ಟು ಎನರ್ಜಿ ಯೋಜನೆಯಡಿ ಬಿಡದಿಯಲ್ಲಿ ದಿನಾಂಕ: 19.12.2024ರಂದು ಯಶಸ್ವಿಯಾಗಿಕಾರ್ಯಾರಂಭಗೊಳಿಸಿದೆ. ರೈತರಿಗೆ ಹಗಲಿನ ವೇಳೆಯಲ್ಲಿ ವಿಶ್ವಾಸಾರ್ಹ ವಿದ್ಯುತ್ ಒದಗಿಸಲು ಮತ್ತು ರೈತರ ಜೀವನಶೈಲಿಯನ್ನು ಸುಧಾರಿಸಲು 40,000 ಜಾಲಮುಕ್ತ ಸೌರಪಂಪ್ ಸೆಟ್ ಗಳಿಗೆ ವಿಕೇಂದ್ರೀಕೃತ ಫೀಡರ್ ಸೌರೀಕರಣಕ್ಕಾಗಿ 2392ಮೆಗಾವ್ಯಾಟ್ ಸಾಮರ್ಥ್ಯದ ಯೋಜನೆಯನ್ನು ಪಿ.ಎಂ ಕುಸುಮ್ ಯೋಜನೆಯ ಅಡಿಯಲ್ಲಿ ಕೈಗೆತ್ತಿಕೊಂಡಿದೆ. ರಾಜ್ಯದ ಜನರಿಗೆ ಆಹಾರ ಖಾತ್ರಿಯನ್ನು ಸಮರ್ಪಕಗೊಳಿಸಲು ಸಂವಿಧಾನದ ಮೂಲತತ್ವಗಳಿಗೆ ಅನುಗುಣವಾಗಿ ನಡೆದುಕೊಳ್ಳಲು ಉದ್ದೇಶಿಸಿ 1,28,48,173 ಪಡಿತರ ಚೀಟಿಗಳಒಟ್ಟು 4,48,41,976 ಫಲಾನುಭವಿಗಳಿಗೆ ಅನ್ನಭಾಗ್ಯಯೋಜನೆಯಡಿ ಆಹಾರ ಧಾನ್ಯ ಹಂಚಿಕೆ ಮಾಡಲಾಗಿದೆ.ಆಹಾರ ಖಾತ್ರಿ ಯೋಜನೆಯಡಿ 5 ಕೆ.ಜಿ. ಧಾನ್ಯಗಳನ್ನು ನೀಡುವುದರ ಜೊತೆಗೆ ರಾಜ್ಯ ಸರ್ಕಾರ ಘೋಷಿಸಿದ್ದ14 5 ಕೆ.ಜಿ. ಆಹಾರ ಧಾನ್ಯಗಳಿಗೆ ಬದಲಾಗಿ ತಿಂಗಳಿಗೆ ತಲಾ 170 ರೂ. ಗಳಂತೆ ಹಣವನ್ನು ನೇರವಾಗಿ ಅವರ ಖಾತೆಗಳಿಗೆ ವರ್ಗಾಯಿಸುತ್ತಿತ್ತು. ಇದಕ್ಕಾಗಿ ರಾಜ್ಯ ಸರ್ಕಾರವು ಜುಲೈ-2023 ರ ಮಾಹೆಯಿಂದ ಸೆಪ್ಟೆಂಬರ್-2024ರ ಮಾಹೆಯವರೆಗೆ 10009 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಈ ಹಿಂದೆ ಕೇಂದ್ರ ಸರ್ಕಾರದ ಸಂಸ್ಥೆಗಳು ಅಕ್ಕಿ ಕೊಡುವುದಿಲ್ಲ ಎಂದು ತಿಳಿಸಿದ್ದರಿಂದ ಹಣ ವರ್ಗಾಯಿಸುವ ವ್ಯವಸ್ಥೆ ತಂದಿದ್ದೆವು. ಈಗ ಭಾರತೀಯ ಆಹಾರ ನಿಗಮವು ಅಕ್ಕಿ ಕೊಡಲು ಮುಂದಾಗಿರುವುದರಿಂದ ತಲಾ 10 ಕೆ.ಜಿ. ಆಹಾರ ಧಾನ್ಯಗಳನ್ನು ನೀಡಲು ಪ್ರಾರಂಭಿಸಲಾಗುತ್ತಿದೆ. ಅರಣ್ಯ ವಲಯವನ್ನು ಹೆಚ್ಚಿಸಲು 15 ಸಾವಿರ ಎಕರೆ ಭೂಮಿಯನ್ನು ಹೆಚ್ಚುವರಿಯಾಗಿ ಕಾಯ್ದಿಟ್ಟ ಅರಣ್ಯ ಎಂದು ಅಧಿಸೂಚನೆ ಹೊರಡಿಸಿದೆ. ಕಳೆದ 20 ತಿಂಗಳುಗಳಲ್ಲಿ ಬೆಂಗಳೂರು ನಗರದಲ್ಲಿ 117 ಎಕರೆ ಸೇರಿದಂತೆ ರಾಜ್ಯಾದ್ಯಂತ ಬೆಲೆಕಟ್ಟಲಾಗದ ಸುಮಾರು 5000 ಎಕರೆ ಒತ್ತುವರಿ ತೆರವು ಮಾಡಿಸಲಾಗಿದೆ. ಬೆಂಗಳೂರು ನಗರದಲ್ಲಿ ಹಸಿರು ವಲಯ ಸಂರಕ್ಷಿಸಲು ಮತ್ತು ಅಪರೂಪದ ಪಕ್ಷಿಗಳ ನೆಲೆಯನ್ನು ಕಾಪಾಡಲು ಹೆಸರಘಟ್ಟ ಕೆರೆ ಪ್ರದೇಶದ 5678 ಎಕರೆ ಪ್ರದೇಶವನ್ನು ಗ್ರೇಟರ್ ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿ, ಭೂಕಬಳಿಕೆಗೆ ಕಡಿವಾಣ ಹಾಕಲಾಗಿದೆ. ಯಲಹಂಕ ಬಳಿಯ ಮಾದಪ್ಪನಹಳ್ಳಿಯ 153 ಎಕರೆ ನೆಡುತೋಪಿನಲ್ಲಿ ಬೃಹತ್ ಉದ್ಯಾನ ನಿರ್ಮಿಸಲು ಪ್ರಾರಂಭಿಸಿದೆ. 41. ಪ್ರಸ್ತುತ ನಿಂತು ಹೋಗಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್.ಎಂ.ಟಿ.ಗೆ ಪೀಣ ಪ್ಲಾಂಟೇಷನ್ನಲ್ಲಿ ನೀಡಲಾಗಿದ್ದ 15 42. 43. 44. ಸುಮಾರು 14300 ಕೋಟಿ ರೂ. ಮೌಲ್ಯದ ಅರಣ್ಯ ಭೂಮಿ ಹಿಂಪಡೆದು, ಶಾಸ ತಾಣವಾಗಿ ಉಳಿಸಲು ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ. ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ 2024-25ರ ಸಾಲಿನಲ್ಲಿ 78.9ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿದ್ದು,ಮಾನವ-ಆನೆ ಸಂಘರ್ಷ ತಡೆಗೆ ಬಂಡೀಪುರದಲ್ಲಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ ರಾಜ್ಯಗಳ ಅರಣ್ಯ ಸಚಿವರು, ಅಧಿಕಾರಿಗಳುಸಭೆ ಹಾಗೂ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಮಾವೇಶವನ್ನು ಯಶಸ್ವಿಯಾಗಿ ನಡೆಸಿ, ಬೆಂಗಳೂರು ಚಾರ್ಟರ್ ಅನ್ನು ಸಿದ್ಧಪಡಿಸಿ ಅಂಗೀಕರಿಸಲಾಗಿದೆ. ರಾಜ್ಯದ ಜನರ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ ಯೋಜನೆಯನ್ನು ಪ್ರಾರಂಭಿಸಿ 10.8 ಲಕ್ಷಪಿ.ಯು.ಸಿ ವಿದ್ಯಾರ್ಥಿಗಳ ಅನೀಮಿಯ ಪರೀಕ್ಷೆ ಮಾಡಿದಾಗ ಶೇ.32.5 ರಷ್ಟು ಮಕ್ಕಳಲ್ಲಿ ಅನೀಮಿಯ ಇರುವುದು ಕಂಡುಬಂದಿದೆ. ಈ ಮಕ್ಕಳಿಗೆ ರಕ್ತವೃದ್ಧಿ ಚಿಕಿತ್ಸೆ ನೀಡಿದ್ದರಿಂದ ರಕ್ತಹೀನತೆಯುಳ್ಳವರಲ್ಲಿ ಶೇ.60ರಷ್ಟು ಮಕ್ಕಳು ಗುಣಮುಖರಾಗಿದ್ದಾರೆ. ಎರಡನೆ ಹಂತದಲ್ಲಿ 1 ರಿಂದ 10ನೇ ತರಗತಿ ಮಕ್ಕಳ ಅನೀಮಿಯ ಸ್ಥಿತಿಗತಿಗಳ ತಪಾಸಣೆಯನ್ನು ಪ್ರಾರಂಭಿಸಲಾಗುತ್ತಿದೆ. ಆಶಾ ಕಿರಣ ಎಂಬ ಯೋಜನೆಯಡಿ 1.4 ಕೋಟಿ ಜನರ ಕಣ್ಣಿನ ತಪಾಸಣೆಗಳನ್ನು ಮಾಡಿ 3.3 ಲಕ್ಷ ಜನರಿಗೆ ಉಚಿತ ಕನ್ನಡಕ ವಿತರಿಸಲಾಗಿದೆ. 93,800 ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಎಂಬ ಯೋಜನೆಯನ್ನು ನಿಮ್ಮಾನ್ಸಿನ ಸಹಯೋಗದೊಂದಿಗೆ 16 ಪ್ರಾರಂಭಿಸಿ 2,60,878 ಜನರಿಗೆ ತಪಾಸಣೆ ಮಾಡಿ 32,630 ನರರೋಗಿಗಳಿಗೆ ಚಿಕಿತ್ಸೆ ಮಾಡಲಾಗಿದೆ. ತುರ್ತು ವೈದ್ಯಕೀಯ ಸೇವೆಗಳನ್ನು ನೀಡಲು 108 ಆರೋಗ್ಯ ಕವಚ ತುರ್ತು ಸೇವೆಗಳಿಗೆ 288 ಅಡ್ವಾನ್ಸ್ ಲೈಫ್ ಸಪೋರ್ಟ್ (ಎಎಲ್ಎಸ್) ಆಂಬ್ಯುಲೆನ್ಸ್ಗಳನ್ನು ಮತ್ತು 39 ಸಂಖ್ಯೆಯ ಬೇಸಿಕ್ ಲೈಫ್ ಸಪೋರ್ಟ್ (ಬಿಎಲ್ಎಸ್) ಆಂಬ್ಯುಲೆನ್ಸ್ಗಳನ್ನು ಒದಗಿಸಲಾಗಿದೆ. ರಾಜ್ಯದಲ್ಲಿ ಕಿಡ್ನಿ ರೋಗಿಗಳಿಗೆ ಉಚಿತವಾಗಿ ನೀಡುವ ಡಯಾಲಿಸಿಸ್ ಕೇಂದ್ರಗಳನ್ನು 192 ರಿಂದ 220 ಕ್ಕೆ ವಿಸ್ತರಿಸಿ 3.67 ಲಕ್ಷ ಡಯಾಲಿಸಿಸ್ ಸೈಕಲ್ ಸೇವೆಗಳನ್ನು ಒದಗಿಸಲಾಗಿದೆ. ರಾಜ್ಯದಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ 5 ಆಸ್ಪತ್ರೆಗಳನ್ನು ಹಾಗೂ 50 ಹಾಸಿಗೆಗಳ ಸಾಮರ್ಥ್ಯದ 14 ಕ್ರಿಟಿಕಲ್ ಕೇರ್ ಬ್ಲಾಕ್ಗಳನ್ನು ಮತ್ತು 100 ಹಾಸಿಗೆಗಳ ಸಾಮರ್ಥ್ಯದ ಒಂದು ಕ್ರಿಟಿಕಲ್ ಕೇರ್ ಬ್ಲಾಕ್ ಅನ್ನು ಸ್ಥಾಪಿಸಿದೆ. ಇದರ ಜೊತೆಗೆ 857 ಕೋಟಿ ರೂ. ಅನುದಾನದಲ್ಲಿ ಪಿ.ಹೆಚ್.ಸಿ., ಸಿ.ಹೆಚ್.ಸಿ. ಮತ್ತು ತಾಲ್ಲೂಕು ಆಸ್ಪತ್ರೆಗಳ 88 ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಜೀವ ಸಾರ್ಥಕತೆ ಸಂಸ್ಥೆಯು 4 ಸರ್ಕಾರಿ ಆಸ್ಪತ್ರೆಗಳನ್ನು ಒಳಗೊಂಡಂತೆ. 78 ಆಸ್ಪತ್ರೆಗಳು ಅಂಗಾಂಗ ಕಸಿ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ. ಇಲ್ಲಿಯವರೆಗೆ 344 ಬಿ.ಪಿ.ಎಲ್. ರೋಗಿಗಳಿಗೆ ಸಾಸ್ಟ್ (SAST) ಯೋಜನೆಯಡಿ ಉಚಿತವಾಗಿ ಅಂಗಾಂಗ ಕಸಿ ಮಾಡಲಾಗಿದೆ. ಇದಕ್ಕಾಗಿ ರಾಷ್ಟ್ರಮಟ್ಟದಲ್ಲಿ 2ನೇ ಅತ್ಯತ್ತಮ ಪ್ರಶಸ್ತಿ ಲಭಿಸಿದೆ. 17 49. ಡಾ. ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆಯಲ್ಲಿ ಇಲ್ಲಿಯವರೆಗೆ 416 ಹೃದಯಾಘಾತ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಜನರಿಗೆ ಕೈಗೆಟುಕುವ ಮಾದರಿಯಲ್ಲಿ ಆರೋಗ್ಯ ಸೇವೆಯನ್ನು ಕಲ್ಪಿಸುವ ಉದ್ದೇಶದಿಂದ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ 450 ಹಾಸಿಗೆ ಸಾಮರ್ಥ್ಯ ಆಸ್ಪತ್ರೆಯ ಕಟ್ಟಡವನ್ನು 143 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗಿದ್ದು ಈವರೆಗೆ 15,778 ಒಳರೋಗಿಗಳು ಹಾಗೂ 78,848 ಹೊರರೋಗಿಗಳು ಚಿಕಿತ್ಸೆಯನ್ನು ಪಡೆದಿರುತ್ತಾರೆ. ಜಿಮ್ಸ್ ಕಲಬುರಗಿಯಲ್ಲಿ, ರೂ. 54.80 ಕೋಟಿ ವೆಚ್ಚದಲ್ಲಿ ಟ್ರಾಮಾ ಕೇರ್ ಆಸ್ಪತ್ರೆಯನ್ನು ಫೆಬ್ರವರಿ 2024 ರಿಂದ ಪ್ರಾರಂಭಿಸಿದ್ದು, ರೋಗಿಗಳು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.ರೂ.92ಕೋಟಿ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಕೆಕೆಆರ್ಡಿಬಿ ವತಿಯಿಂದ ಗುಲ್ಬರ್ಗಾದಲ್ಲಿ 371 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನೆ ಸಂಸ್ಥೆಯನ್ನು ರೂ.304.20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 22.12.2024 ರಂದು ಲೋಕಾರ್ಪಣೆ ಮಾಡಲಾಗಿದೆ. ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕ್ಯಾಥ್ ಲ್ಯಾಬ್ ಸೌಲಭ್ಯದೊಂದಿಗೆ Super Speciality Cardiac unitಅನ್ನು ರೂ.10 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಗಿದೆ.