ಶಿಕಾರಿಪುರದ ಅಪ್ರಾಪ್ತ ಬಾಲಕಿ ಸಾವಿನ ಪ್ರಕರಣ : ಬಿಜೆಪಿ ಮುಖಂಡನನ್ನು ರಕ್ಷಿಸಲಾಗುತ್ತಿದೆಯಾ?

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರದಲ್ಲಿ ಅಪ್ರಾಪ್ತ ಬಾಲಕಿಯ ನಿಗೂಢ ಸಾವಿನ ಪ್ರಕರಣದಲ್ಲಿ ಪೊಲೀಸರು ನಿನ್ನೆ ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ.

ಈ ನಾಲ್ವರಲ್ಲಿ ಬಿಜೆಪಿ ಮುಖಂಡ ಹಾಗೂ ಮುದ್ದನಗಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷ ಇಟ್ಟಿಗೆಹಳ್ಳಿಯ ಗಂಗಾನಾಯ್ಕ, ಆತನ ಹೆಂಡತಿ ಸೌಭಾಗ್ಯ , ಸೋಗಿಲು ಗ್ರಾಮದ ಪೂರ್ಯಾನಾಯ್ಕ ಮತ್ತು ರಂಜಿತಾ ಎಂಬುವವರು ಆರೋಪಿಗಳು. ಒಂದು ವರ್ಷದ ಹಿಂದೆ  ಆರೋಪಿ ಸೌಭಾಗ್ಯ ನಡೆಸುತ್ತಿದ್ದ ಪಿಜಿಯಲ್ಲಿ ಇದ್ದ ಅಪ್ರಾಪ್ತ ಬಾಲಕಿಯ ಮೃತ ಶರೀರವನ್ನು ಸೂಟ್ಕೇಸಿನಲ್ಲಿ ತುಂಬಿಕೊಂಡು ಈ ನಾಲ್ಕು ಜನ ಆರೋಪಿಗಳು ಕದ್ದು ಸಾಗಿಸಿ ಕಾರ್ಗಲ್ ಜೋಗದ ಬಳಿಯ ಮಾವಿನಗುಂಡಿಯಲ್ಲಿ ಎಸೆದು ಬಂದಿದ್ದರು ಎಂಬುದು ಇವರ ಮೇಲಿನ ಆರೋಪ.
ಇದೀಗ ಮೃತದೇಹದ ಅವಶೇಷಗಳು ಸಿಕ್ಕಿದ್ದು ಅದನ್ನು ಪರೀಕ್ಷೆಗಾಗಿ ಎಫ್ ಎಸ್ ಎಲ್ ಗೆ ಕಳಿಸಿಕೊಡಲಾಗಿದೆ ಎಂದು ಶಿವಮೊಗ್ಗದ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ಆ ಹುಡುಗಿಯ ಶವವನ್ನು ಅಷ್ಟು ದೂರ ಹೋಗಿ ಹಾಕಿ ಬಂದರು ಎಂಬುದು ತನಿಖೆಯಾದ ನಂತರವಷ್ಟೇ ತಿಳಿದುಬರಬಹುದು. ಆದರೆ ಈಗಲೇ ಆ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬ ಕತೆಯನ್ನು ಸಾರುವ ಕೆಲಸವನ್ನು ಪೊಲೀಸ್ ಇಲಾಖೆಯೇ ಮಾಡುತ್ತಿದೆಯಾ ಎಂಬ ಅನುಮಾನ ಕಾಡುತ್ತಿದೆ. ಇಲ್ಲಿ ಆರೋಪಿ ಗಂಗಾನಾಯ್ಕ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಮುಖಂಡನಾಗಿದ್ದು, ಗ್ರಾಮ ಪಂಚಾಯತಿ ಅಧ್ಯಕ್ಷನೂ ಆಗಿರುವುದರಿಂದ ಈ ಸಾವಿನ ತನಿಖೆ ಸರಿಯಾಗಿ ನಡೆದರೆ ಭಯಾನಕ ಸತ್ಯಗಳು ಹೊರಬರಲಿವೆ ಎಂದು ಹೇಳಲಾಗಿದೆ.

ಇನ್ನು ಈ ಕೃತ್ಯ ಇಷ್ಟು ತಡವಾಗಿ ಹೊರಬರಲು ಕಾರಣವೇನು ಎಂಬುದನ್ನು ತನಿಖೆ ನಡೆದಿದರೆ ಈ ಪ್ರಕರಣವನ್ನು ಮುಚ್ಚಿಹಾಕಲು ಕೆಲ ಪೊಲೀಸರೇ ಕೆಲಸ ಮಾಡಿರು ಸತ್ಯ ಹೊರಬರುತ್ತದದಲ್ಲದೆ ಈ ಕುರಿತು ಮಾಹಿತಿ ತಿಳಿದಿದ್ದ ಪೊಲೀಸರ ಒಳಗಿನ ಅಂತಃಕಲಹದಿಂದಲೇ ಈಗ ಇದು ಬಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿಯೇ ಇಡೀ ಪ್ರಕರಣವನ್ನು ತಿಪ್ಪೆ ಸಾರಿಸುವ ಕೆಲಸಕ್ಕೆ ಪೊಲೀಸ್ ಇಲಾಖೆಯೇ ನಿಂತಿದೆಯಾ ಎಂಬ ಅನುಮಾನವನ್ನು ಶಿಕಾರಿಪುರದ ನಾಗರಿಕರು ವ್ಯಕ್ತಪಡಿಸುತ್ತಿದ್ದಾರೆ. ಇಲ್ಲವಾದರೆ ಅದು ಆತ್ಮಹತ್ಯೆ ಎಂಬ ತೀರ್ಮಾನಕ್ಕೆ ಪೊಲೀಸ್ ಇಲಾಖೆ ಬಂದಿದ್ದಾದರೂ ಹೇಗೆ ಎಂಬ ಪ್ರಶ್ನೆ ಕೇಳುತ್ತಿದ್ದಾರೆ.

ಇದೀಗ ಬಂಧಿತನಾಗಿರುವ ಆರೋಪಿ ಗಂಗಾನಾಯ್ಕ ಈ ಹಿಂದೆಯೂ ಕೆಲ ಪ್ರಕರಣಗಳಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂದು ಹೇಳಲಾಗುತ್ತದೆ. ಹೀಗಾಗಿ ಈತನ ಹೆಂಡತಿಯೇ ನಡೆಸುತ್ತಿದ್ದ ಪಿಜಿಯಲ್ಲಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಿ, ಅದನ್ನು ಮುಚ್ಚಿ ಹಾಕಲು ಆಕೆಯ ಶವವನ್ನು ಸೂಟ್ಕೇಸಿನಲ್ಲಿ ತುಂಬಿ ಮಾವಿನಗುಂಡಿ ಘಾಟಿಯಲ್ಲಿ ಎಸೆದು ಬಂದಿದ್ದರು ಎಂಬ ಅನುಮಾನ ವ್ಯಕ್ತವಾಗಿದೆ. ಈ ಕುರಿತು ನಿಷ್ಪಕ್ಷಪಾತಿ ತನಿಖೆ ಆದಲ್ಲಿ ಮಾತ್ರ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸಾಧ್ಯ.

More articles

Latest article

Most read