ಸಂವಿಧಾನಕ್ಕೆ ದಕ್ಕೆ ಬಂದರೆ ವಚನಕ್ಕೆ ದಕ್ಕೆ ಬಂದಂತೆ : ಎಚ್.ಎನ್. ನಾಗಮೋಹನ ದಾಸ್

Most read

ಬೆಂಗಳೂರು : ಭಾರತದ ಸಂವಿಧಾನವನ್ನು ನಾವು ಓದಿಕೊಂಡರೆ ವಚನಗಳನ್ನು ಓದಿಕೊಂಡಂತೆ, ವಚನಗಳನ್ನು ಓದಿಕೊಂಡರೆ ಭಾರತದ ಸಂವಿಧಾನವನ್ನು ಓದಿಕೊಂಡಂತೆ. ಭಾರತದ ಸಂವಿಧಾನ ಜಾರಿಯಾದರೆ ನಮ್ಮ ವಚನಗಳು ಜಾರಿಯಾದಂತೆ. ಸಂವಿಧಾನವನ್ನು ಕಳೆದುಕೊಂಡರೆ ವಚನಗಳನ್ನು ಕಳೆದುಕೊಂಡಂತೆ. ಸಂವಿಧಾನಕ್ಕೆ ದಕ್ಕೆ ಬಂದರೆ ವಚನಕ್ಕೆ ದಕ್ಕೆ ಬಂದಂತೆ ಎಂದು ನಿವೃತ್ತ ನ್ಯಾಯಮೂರ್ತಿಗಳಾದ ಎಚ್.ಎನ್. ನಾಗಮೋಹನ ದಾಸ್ ಅವರು ಹೇಳಿದರು.

ನಗರದ ಗಾಂಧಿಭವನದಲ್ಲಿ ನಡೆದ ಜಿ.ಬಿ. ಪಾಟೀಲರ ಲಿಂಗಾಯತ ಚಳುವಳಿ 2017-18 ಕೃತಿಯ ಲೋಕಾರ್ಪಾಣೆಯಲ್ಲಿ ಮಾತನಾಡಿದ ಅವರು, ದೇಶದ ಉದ್ದಕ್ಕೂ ನ್ಯಾಯದೀಶರ ಮೇಲೆ ಅಪವಾದಗಳು ಇವೆ, ಜಗತ್ತಿನಲ್ಲಿ ಅನೇಕ ಕ್ರಾಂತಿಗಳು ನಡೆದಿದೆ ಪ್ರತಿಯೊಂದು ಕ್ರಾಂತಿಯು ಒಂದಲ್ಲ ಒಂದು ರೀತಿಯ ಬದಲಾವಣೆಯನ್ನು ತಂದು ಕೊಟ್ಟಿದೆ. ಆದರೆ ಯಾವ ಕ್ರಾಂತಿಯು ತರಲಾರದಷ್ಟು ಬದಲಾವಣೆಯನ್ನು ಜಗತ್ತಿನಲ್ಲಿ ಪುಸ್ತಕಗಳು ತಂದಿವೆ ಎಂದರು.

“12ನೇ ಶತಮಾನದಲ್ಲಿ ಶರಣರು ರಚಿಸಿರುವಂತಹ ವಚನಗಳು ಈ ಜಗತ್ತನ್ನ ಬದಲಿಸುವುದಕ್ಕೆ ಪ್ರೇರಣೆ ನೀಡಿರುವಂತಹ ಸಾಹಿತ್ಯ ಕೃತಿ. ಹಾಗಾಗಿ ನಾವೆಲ್ಲರೂ ಪುಸ್ತಕಗಳನ್ನು ಕೊಂಡುಕೊಳ್ಳೋಣ. ಪುಕ್ಸಟ್ಟೆ ಓದುವುದು ಬೇಡ, ಓದೋಣ, ಧಾನಮಾಡೋಣ, ಸಾದ್ಯವಾದರೆ ಪುಸ್ತಕಗಳನ್ನು ಬರೆಯೋಣ ಎಂದು ಹೇಳಿದರು. ಹಾಗೂ ನನ್ನ 50 ವರ್ಷದ ಕೆಲಸದ ಅನುಭವವದಲ್ಲಿ 25 ವರ್ಷಗಳ ಕಾಲ ವಕೀಲರನಾಗಿ ಕೆಲಸ ಮಾಡಿದ್ದೇನೆ. 10 ವರ್ಷ ನ್ಯಾಯಮೂರ್ತಿಯಾಗಿ ಕೆಲಸ ಮಾಡಿದ್ದೇನೆ, 5 ವರ್ಷ ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲನಾಗಿ ಕೆಲಸ ಮಾಡಿದ್ದೇನೆ. ಆದರೆ ಇಷ್ಟು ವರ್ಷದಲ್ಲಿ ನನ್ನ ಹತ್ತಿರ ಬಂದಿರುವ ಕೇಸ್‌ ಗಳಲ್ಲಿ ಎಲ್ಲರೂ ಹೊಲ-ಗದ್ದೆ, ಹಣ, ಮನೆ ಬೇಕು ಎನ್ನುವುದನ್ನು ಮಾತ್ರ ಕೇಳಿದ್ದೀನಿ, ಆದರೆ  ನಮ್ಮ ಹಿರಿಯರು ಓದಿ ಬಿಟ್ಟು ಹೋಗಿರುವಂತಹ ಪುಸ್ತಕಗಳು ಬೇಕು ಎಂದು ಯಾರು ಬಂದಿಲ್ಲ” ಎಂದು ಹೇಳಿದರು.

ಹೋರಾಟದ ಹಾದಿಯಲ್ಲಿ ಏಳು-ಬೀಳು ಎನ್ನುವುದು ಸಾಮಾನ್ಯ ಆದರೆ ಅಂತಿಮವಾಗಿ ಜನರ ಸಮಸ್ಯೆಗೆ ಜನಪರ ಹೋರಾಟಗಳೇ ಮದ್ದು. ಈ ಚಳುವಳಿ ಯಶಸ್ಸಿಗೆ ಜನರು ಭಾಗವಹಿಸುವುದು ತುಂಬಾ ಮುಖ್ಯ. ಒಂದು ಕ್ರಾಂತಿಕಾರಿಕ ಬದಲಾವಣೆ ಬರಬೇಕು ಅಂದರೆ ಜನರು ಭಾಗವಹಿಸಬೇಕಾಗಿದೆ  ಆ ಜನರು ಭಾಗವಹಿಸಬೇಕಾದರೆ ನಾವು ಮೊದಲು ಹೆಜ್ಜೆ ಹಿಡಬೇಕು ಎಂದು ಅಭಿಪ್ರಾಯಪಟ್ಟರು.

“ನಾನು ತುಂಬಾ ಪುಸ್ತಕಗಳನ್ನು ಬರೆದಿದ್ದೇನೆ ಅದರಲ್ಲಿ ಒಂದು ಪುಸ್ತಕ 20 ಲಕ್ಷದ ವರೆಗೆ ಮಾರಾಟವಾಗಿದೆ. ಆ ಪುಸ್ತಕಕ್ಕೆ ಯಾವ ಪ್ರಶಸ್ತಿಯು ಬರಲಿಲ್ಲ. ಆದರೆ “ಸಂವಿಧಾನ ಮತ್ತು ವಚನಗಳು” ಎಂಬ ಕೃತಿ ಬರೆದೆ  ಇದಕ್ಕೆ ರಾಜ್ಯ ಪ್ರಶಸ್ತಿ ಬಂತು. ಈ ಪುಸ್ತಕದಲ್ಲಿ ನಾನು ಬರೆದಿರುವುದು ಭಾರತದ ಸಂವಿಧಾನದಲ್ಲಿ ಬಸವ ವಚನಗಳ ತತ್ವ ಪ್ರತಿಬಿಂಬಿಸಿದೆ. 12ನೇ ಶತಮಾನದಲ್ಲಿ ವಚನಕಾರರು ಸಮಾಜಕ್ಕೆ ಈ ಜಗತ್ತಿಗೆ ಏನು ಸಂದೇಶವನ್ನು ಕೊಟ್ಟಿದ್ದಾರೋ ಅದು ನಮ್ಮ ಸಂವಿಧಾನದಲ್ಲಿ ಇದೆ. ಭಾರತದ ಸಂವಿಧಾನವನ್ನು ನಾವು ಓದಿಕೊಂಡರೆ ವಚನಗಳನ್ನು ಓದಿಕೊಂಡಂತೆ, ವಚನಗಳನ್ನು ಓದಿಕೊಂಡರೆ ಭಾರತದ ಸಂವಿಧಾನವನ್ನು ಓದಿಕೊಂಡಂತೆ. ಭಾರತದ ಸಂವಿಧಾನ ಜಾರಿಯಾದರೆ ನಮ್ಮ ವಚನಗಳು ಜಾರಿಯಾದಂತೆ. ಸಂವಿಧಾನವನ್ನು ಕಳೆದುಕೊಂಡರೆ ವಚನಗಳನ್ನು ಕಳೆದುಕೊಂಡಂತೆ. ಸಂವಿಧಾನಕ್ಕೆ ದಕ್ಕೆ ಬಂದರೆ ವಚನಕ್ಕೆ ದಕ್ಕೆ ಬಂದಂತೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ಎಚ್.ಎನ್. ನಾಗಮೋಹನ ದಾಸ್, ಸಾಣೇಹಳ್ಳಿ ಶಾಖಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗುರುಮಹಾಂತ ಸ್ವಾಮೀಜಿ, ವಿಧಾನ ಪರಿಷತ್‌ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಶಾಸಕರಾದ ಬಿ.ಆರ್. ಪಾಟೀಲ್,‌ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ, ಪ್ರಾಧ್ಯಪಕರಾದ ಪ್ರಶಾಂತ ನಾಯಕ, ಪುಸ್ತಕದ ಲೇಖಕರಾದ ಜಿ.ಬಿ.ಪಾಟೀಲರು ಉಪಸ್ಥತರಿದ್ದರು.

More articles

Latest article