ಭಾರತ – ಪಾಕಿಸ್ತಾನ ನಡುವೆ ಯುದ್ಧ ನಡೆದರೆ ನಿಮ್ಮ ಜೊತೆ ನಿಲ್ಲೋದಿಲ್ಲ: ಭಾರತಕ್ಕೆ ಅಮೆರಿಕ ಹೀಗೆ ಹೇಳಿದ್ದೇಕೆ?

ಹೊಸದಿಲ್ಲಿ/ವಾಷಿಂಗ್ಟನ್: ಭಾರತ – ಪಾಕಿಸ್ತಾನ ನಡುವೆ ಯುದ್ಧ ಸಂಭವಿಸಿದರೆ ಭಾರತಕ್ಕೆ ಬೆಂಬಲ ನೀಡುವುದಿಲ್ಲ! ಭಾರತೀಯ ರಾಜತಾಂತ್ರಿಕರಿಗೆ ಈ ಸಂದೇಶವನ್ನು ಅಮೆರಿಕ ಸ್ಪಷ್ಟಪಡಿಸಿದೆ ಎಂದು ಸಂಡೇ ಗಾರ್ಡಿಯನ್ ವರದಿ ಮಾಡಿದೆ.

ಅಮೆರಿಕಾ ಅಧಿಕಾರಿಗಳು ಭಾರತೀಯ ರಾಜತಾಂತ್ರಿಕರೊಂದಿಗೆ ನಡೆಸಿದ ರಹಸ್ಯ ಮಾತುಕತೆಯಲ್ಲಿ ಭಾರತ ನಮ್ಮ ಸ್ಟ್ರಾಟಜಿಕ್ ಪಾರ್ಟ್ನರ್ ಆಗಿದೆ, ಆದರೆ ಪಾಕಿಸ್ತಾನದೊಂದಿಗಿನ ಸಂಘರ್ಷದಲ್ಲಿ ನಾವು ಯಾವುದೇ ಬೆಂಬಲ ನೀಡುವುದಿಲ್ಲ. ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳ ಆಧಾರದ ಮೇಲೆ ಮಾತ್ರ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಲಾಗಿದೆ.

ಭಾರತದ ಮೇಲೆ ಪಾಕಿಸ್ತಾನ ಭಯೋತ್ಪಾದಕ ದಾಳಿ ನಡೆಸಿದರೂ ಅಮೆರಿಕಾ ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಏಕಾಂಗಿಯಾಗಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದು ಭಾರತಕ್ಕೆ ದೊಡ್ಡ ಶಾಕ್ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಹಿನ್ನೆಲೆ ಏನು?
ಇತ್ತೀಚೆಗೆ ಪಹಲ್ಗಾಂವ್ ಭಯೋತ್ಪಾದಕ ದಾಳಿ ಮತ್ತು ಭಾರತದ ‘ಆಪರೇಷನ್ ಸಿಂಧೂರ್’ ನಂತರ ಅಮೆರಿಕಾ ಎರಡೂ ದೇಶಗಳಿಗೆ ಸಂಘರ್ಷ ನಿಲ್ಲಿಸುವಂತೆ ಒತ್ತಾಯಿಸಿತ್ತು. ಅಮೆರಿಕ ಉಪಾಧ್ಯಕ್ಷ ಜೆಡಿ ವೇನ್ಸ್ ಸಹ “ಇದು ನಮ್ಮ ವ್ಯವಹಾರವಲ್ಲ” ಎಂದು ಹೇಳಿದ್ದರು. ಈಗ ಈ ಗುಪ್ತ ಸಂದೇಶವು ಅದನ್ನೇ ದೃಢಪಡಿಸುತ್ತಿದೆ.

ಅಮೆರಿಕಾ ಚೀನಾ ವಿರುದ್ಧ ಭಾರತವನ್ನು ಬಳಸಿಕೊಳ್ಳಲು ಬಯಸುತ್ತದೆ, ಆದರೆ ಪಾಕಿಸ್ತಾನದೊಂದಿಗಿನ ಸಂಘರ್ಷದಿಂದ ದೂರ ಉಳಿಯುತ್ತದೆ. ಯಾಕೆಂದರೆ ಈ ಸಂಘರ್ಷದಲ್ಲಿ ಅಮೆರಿಕ ಹಿತಾಸಕ್ತಿ ಇರುವುದಿಲ್ಲ.

ಯುದ್ಧದ ಸಂದರ್ಭದಲ್ಲಿ ಅಮೆರಿಕ ತನ್ನ ಜೊತೆ ನಿಲ್ಲುವುದಿಲ್ಲ ಎಂಬುದು ಗೊತ್ತಿರುವುದರಿಂದಲೇ ಭಾರತ ಹಿಂದಿನಿಂದಲೂ ರಕ್ಷಣಾ ಉಪಕರಣಗಳ ಖರೀದಿ ವಿಷಯದಲ್ಲಿ ಕೇವಲ ಅಮೆರಿಕ ಮೇಲೆ ಅವಲಂಬಿಸಿಲ್ಲ. ರಷ್ಯಾ, ಇಸ್ರೇಲ್ ಮತ್ತು ಇತರೆ ದೇಶಗಳಿಂದಲೂ ರಕ್ಷಣಾ ಸಾಮಗ್ರಿಗಳನ್ನು ಕೊಳ್ಳುತ್ತದೆ.

ಆದರೆ ಅಮೆರಿಕ ಒತ್ತಡಕ್ಕೆ ಮಣಿದು ರಷ್ಯಾದಿಂದ ತೈಲ ಖರೀದಿ ನಿಲ್ಲಿಸುತ್ತಿರುವುದು ಭಾರತಕ್ಕೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ. ಬಹುಕಾಲದಿಂದ ಭಾರತದ ಮಿತ್ರ ದೇಶವಾಗಿದ್ದ ರಷ್ಯಾ ಮತ್ತು ಭಾರತ ನಡುವೆ ಸಂಬಂಧ ಹಳಸುವ ಸಾಧ್ಯತೆ ಇದೆ.

More articles

Latest article

Most read