ಹಿಂದೂ – ಮುಸ್ಲಿಂ ತುಷ್ಟೀಕರಣ; ಕೆಸರೆರಚಾಟದ ರಾಜಕಾರಣ

ಮುಸಲ್ಮಾನ ಸಮುದಾಯಕ್ಕೆ ಕೊಡುತ್ತಿರುವ ಯಾವುದೇ ರೀತಿಯ ಸವಲತ್ತುಗಳು ಅವರಿಗೆ ಕೊಡುವ ಭಿಕ್ಷೆಯಲ್ಲ, ಅದು ಅವರ ಹಕ್ಕಾಗಿದೆ. ಆ ಸಮುದಾಯದವರು ದೇಶಪ್ರೇಮದಿಂದಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಮಾಡಿದ ಪ್ರಾಣತ್ಯಾಗದ ಋಣ ಈ ದೇಶವಾಸಿಗಳ ಮೇಲಿದೆ. ಆ ಸಮುದಾಯದವರ ಶ್ರಮದ ಬೆವರಿನ ಪಾಲು ಈ ದೇಶವನ್ನು ಕಟ್ಟುವಲ್ಲಿ ಬಳಕೆಯಾಗಿದೆ. ಆ ಸಮುದಾಯದವರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಟ್ಟುವ ತೆರಿಗೆಯ ಹಣ ಈ ದೇಶದ ಅಭಿವೃದ್ಧಿಗೆ ಬಳಕೆಯಾಗಿದೆ. ಹೀಗಿರುವಾಗ ಆ ಸಮುದಾಯಕ್ಕೆ ಸರಕಾರ ಒಂದಿಷ್ಟು ಅನುಕೂಲಗಳನ್ನು ಸಂವಿಧಾನದ ಅಡಿಯಲ್ಲಿ ಮಾಡಿಕೊಟ್ಟರೆ ಅದು ತುಷ್ಟೀಕರಣ ಹೇಗಾಗುತ್ತದೆ? –ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ರಾಜಕೀಯ ಕ್ಷೇತ್ರದಲ್ಲಿ ಈ ತುಷ್ಟೀಕರಣ ಎನ್ನುವ ಪದ ಜಾಸ್ತಿ ಚಾಲ್ತಿಯಲ್ಲಿದೆ. ಇಂಗ್ಲಿಷಿನಲ್ಲಿ ‘appeasement’ ಎಂದು ಕರೆಯುವ ‘ತುಷ್ಟೀಕರಣ ನೀತಿ’ ರಾಜಕೀಯದ ಭಾಗವೇ ಆಗಿದೆ. “ಯಾವುದೇ ಒಂದು ವ್ಯಕ್ತಿ, ಗುಂಪು ಅಥವಾ ಸಮುದಾಯವನ್ನು ಸಂತೃಪ್ತಿಪಡಿಸುವ  ಉದ್ದೇಶದಿಂದ ಅತಿಯಾದ ಸವಲತ್ತು ಹಾಗೂ ರಿಯಾಯಿತಿಗಳನ್ನು ನೀಡುವುದು” ತುಷ್ಟೀಕರಣ ಎನ್ನಿಸಿಕೊಳ್ಳುತ್ತದೆ.

ಕಾಂಗ್ರೆಸ್ ಪಕ್ಷದ ಮೇಲೆ ತುಷ್ಟೀಕರಣದ ಗುರುತರ ಆರೋಪವನ್ನು ಸಂಘ ಪರಿವಾರಿಗರು ಹೇರುತ್ತಲೇ ಬಂದಿದ್ದಾರೆ. “ತಮ್ಮ ಓಟ್ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಮುಸಲ್ಮಾನ ಸಮುದಾಯವನ್ನು ಓಲೈಸಿಕೊಳ್ಳಲು ಹೆಚ್ಚಿನ ಅನುಕೂಲಗಳನ್ನು ಕಾಲಕಾಲಕ್ಕೆ ಒದಗಿಸುತ್ತಾ ಬಂದಿದೆ” ಎಂಬುದು ಬಿಜೆಪಿ ಪಕ್ಷದ ಪ್ರಮುಖ ಆರೋಪವಾಗಿದೆ.

ಮುಸಲ್ಮಾನ ಸಮುದಾಯವನ್ನು ವಿರೋಧಿಸುತ್ತಲೇ ಬಂದಿರುವ ಇಸ್ಲಾಮೋಫೋಬಿಯಾ ರೋಗ ಪೀಡಿತ ಮತಾಂಧರು ಮುಸಲ್ಮಾನರನ್ನು ಭಯೋತ್ಪಾದಕರು, ಆತಂಕವಾದಿಗಳು, ದೇಶದ್ರೋಹಿಗಳು ಎಂದು ಆರೋಪಿಸುತ್ತಲೇ ಬಂದಿದ್ದಾರೆ. “ಭಾರತ-ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್ ಆಟವಾದರೆ ಮುಸಲ್ಮಾನರು  ಪಾಕಿಸ್ತಾನದ ತಂಡವನ್ನು ಬೆಂಬಲಿಸುತ್ತಾರೆ, ಪಾಕಿಸ್ತಾನ ತಂಡ ಗೆದ್ದರೆ ಪಟಾಕಿ ಹಾರಿಸುತ್ತಾರೆ, ಅವರೆಲ್ಲಾ ಪಾಕಿಸ್ತಾನ ಪ್ರೇಮಿಗಳು, ಭಾರತದ ದ್ರೋಹಿಗಳು, ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ, ಆದ್ದರಿಂದ ಮುಸಲ್ಮಾನರಿಗೆ ಯಾವುದೇ ಸವಲತ್ತು ರಿಯಾಯಿತಿಗಳನ್ನು ಕೊಡಬಾರದು” ಎನ್ನುವುದು ಸಂಘ ಪರಿವಾರದವರ ಧೋರಣೆಯಾಗಿದೆ. ಈ ಮತಾಂಧ ಭಕ್ತರು ಮುಸಲ್ಮಾನರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟಲು ಈ ರೀತಿ ದ್ವೇಷೋತ್ಪಾದನೆಯನ್ನು ಮಾಡುತ್ತಲೇ ಇರುತ್ತಾರೆ. ಕಾಂಗ್ರೆಸ್ ಸರಕಾರ ಮುಸ್ಲಿಂ ಸಮುದಾಯಕ್ಕೆ ಒಂದಿಷ್ಟು ಅನುಕೂಲ ಮಾಡಿಕೊಟ್ಟರೆ ತುಷ್ಟೀಕರಣ ಎಂದು ಬಾಯಿ ಬಡಿದುಕೊಳ್ಳುತ್ತಾರೆ.

ಭಾರತ ದೇಶದಲ್ಲಿ ಮುಸಲ್ಮಾನರ ಜನಸಂಖ್ಯೆ ಅಂದಾಜು 20 ಕೋಟಿಯಷ್ಟಿದೆ. ಅಂದರೆ ಒಟ್ಟು ಜನಸಂಖ್ಯೆಯಲ್ಲಿ 15%. ಭಾರತದ ಎರಡನೇ ಅತಿ ದೊಡ್ಡ ಧಾರ್ಮಿಕ ಸಮುದಾಯವದು. “ಅಯ್ಯೋ ನೋಡಿ, ಮುಸಲ್ಮಾನರು ಮೂರ್ನಾಲ್ಕು ಮದುವೆಯಾಗುತ್ತಾರೆ. ಹೆಚ್ಚು ಮಕ್ಕಳನ್ನು ಹೆರುತ್ತಾರೆ. ಹೀಗೆ ಆದರೆ ಅವರ ಜನಸಂಖ್ಯೆ ಜಾಸ್ತಿಯಾಗಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ, ಈ ದೇಶ ಪಾಕಿಸ್ತಾನ ಅರಬಸ್ತಾನವಾಗುತ್ತದೆ” ಎಂಬ ಭಯವನ್ನು ಧರ್ಮಾಂಧರು ಹುಟ್ಟಿಸುತ್ತಲೇ ಬಂದಿದ್ದಾರೆ. ಆದರೆ 2011 ರ ಜನಗಣತಿ ಪ್ರಕಾರ 17.22 ಕೋಟಿಯಷ್ಟಿದ್ದ ಮುಸಲ್ಮಾನರ ಜನಸಂಖ್ಯೆ ಈಗ 20 ಕೋಟಿ ಎಂದು ಅಂದಾಜಿಸಲಾಗಿದೆ. ಜನಸಂಖ್ಯೆಯ ಬೆಳವಣಿಗೆಯನ್ನು ಗಮನಿಸಿದರೆ ಆಗಲೂ ಮುಸಲ್ಮಾನರು 14.2% ಇದ್ದರು. ಈಗಲೂ 14% ರಿಂದ 15% ಒಳಗೆ ಇದ್ದಾರೆ. ಕಳೆದ 25 ವರ್ಷಗಳಿಂದ ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗಿದ್ದರೂ ಶೇಕಡಾವಾರು ಲೆಕ್ಕದಲ್ಲಿ ಏನೂ ವ್ಯತ್ಯಾಸವಾಗಿಲ್ಲ. ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗುತ್ತಲೇ ಇದೆ ಎಂಬುದಕ್ಕೆ ಆಧಾರವೇನಿಲ್ಲ. 2026 ರಲ್ಲಿ ನಡೆಯುವ ಜನಗಣತಿ ಇನ್ನೂ ಖರಾರುವಕ್ಕಾಗಿ ತಿಳಿಸಬಹುದಾಗಿದೆ.

ಈಗ ಭಾರತವು ಜಗತ್ತಿನಲ್ಲಿ ಮೂರನೇ ಅತಿದೊಡ್ಡ ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶವಾಗಿದೆ. 2030 ರಲ್ಲಿ ಅವರ ಸಂಖ್ಯೆ 25 ಕೋಟಿಗಳಷ್ಟಾಗಬಹುದೆಂದು ಅಂದಾಜಿಸಲಾಗಿದ್ದು ಆಗ ಮುಸ್ಲಿಂ ಜನಸಂಖ್ಯೆ ಹೊಂದಿರುವ ಜಗತ್ತಿನ ಅತಿ ದೊಡ್ಡ ದೇಶವಾಗಿ ಭಾರತ ಹೊರಹೊಮ್ಮುತ್ತದೆ.

ಇಲ್ಲಿ ಒಂದು ಸ್ಪಷ್ಟತೆಯನ್ನು ಕೊಡಬೇಕಿದೆ. ಈ 20 ಕೋಟಿ ಇರುವ ಮುಸಲ್ಮಾನರು ಭಾರತ ಸಂಜಾತರೇ ಆಗಿದ್ದಾರೆ. ತಲೆತಲೆಮಾರುಗಳಿಂದ ಭಾರತದಲ್ಲೇ ವಾಸಿಸುತ್ತಿದ್ದಾರೆ. ಬಹುತೇಕರು ವೈದಿಕಶಾಹಿ ಶೋಷಣೆ ಹಾಗೂ ಮುಸ್ಲಿಂ ದೊರೆಗಳ ಪ್ರಲೋಭನೆಯಿಂದಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದವರಾಗಿದ್ದಾರೆ. ಅಂದರೆ ಹಿಂದೂಯೇತರ ಧರ್ಮದವರಾಗಿದ್ದರೂ ಅಪ್ಪಟ ಭಾರತೀಯರೇ ಆಗಿದ್ದಾರೆ. ಹಿಂದೂಸ್ತಾನದಲ್ಲಿ ಇರುವವರೆಲ್ಲರೂ ಹಿಂದೂಗಳು ಎನ್ನುವ ವಿಶಾಲಾರ್ಥದಲ್ಲಿ ಗ್ರಹಿಸುವುದಾದರೆ ಎಲ್ಲಾ ಮುಸಲ್ಮಾನರೂ ಹಿಂದೂಗಳೇ ಆಗಿದ್ದಾರೆ. ಈ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಪ್ರಾಣಾರ್ಪಣೆ ಮಾಡಿದವರಲ್ಲಿ ಮುಸಲ್ಮಾನರ ಸಂಖ್ಯೆಯೂ ಗಣನೀಯವಾಗಿದೆ. “ಸಾರೆ ಜಹಾಸೆ ಅಚ್ಚಾ ಹಿಂದೂ ಸಿತಾ ಹಮಾರಾ” ಎನ್ನುವ ಸಾರ್ವಕಾಲಿಕ ದೇಶಭಕ್ತಿ ರಚಿಸಿದ್ದೇ ಒಬ್ಬ ಮುಸಲ್ಮಾನ.  ಮುಸಲ್ಮಾನರ ವಿರುದ್ಧ ದ್ವೇಷಕಾರುವ ಸಂಘಿ ಸಂತಾನಗಳ ಕೊಡುಗೆ ಸ್ವಾತಂತ್ರ್ಯಕ್ಕಾಗಿ ನಡೆದ ಆಂದೋಲನದಲ್ಲಿ ನಗಣ್ಯವಾಗಿದೆ.

ಭಾರತೀಯರಾದ ಮುಸಲ್ಮಾನರನ್ನು ಈ ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಲೇ ಬಂದಿವೆ. ಓಟ್ ಬ್ಯಾಂಕ್ ರೀತಿಯಲ್ಲಿ ಮತಗಳಿಕೆಯ ಪರಿಕರವಾಗಿ ಈ ಸಮುದಾಯ ಬಳಕೆಯಾಗಿದೆ. ಹಾಗಂತ ಓಟುಗಳು ಸುಮ್ಮನೇ ಬರುವುದಿಲ್ಲ. ಆ ಸಮುದಾಯದವರಿಗೂ ಕೆಲವಾರು ಸವಲತ್ತುಗಳನ್ನು ಕೊಡಬೇಕಾಗುತ್ತದೆ. ಹಾಗೆ ಕೊಡಮಾಡುವ ಅನುಕೂಲಗಳಿಗೆ ಈ ಮತಾಂಧರು ತುಷ್ಟೀಕರಣ ಎಂದು ಹುಯಿಲೆಬ್ಬಿಸುತ್ತಿದ್ದಾರೆ.

ಮುಸಲ್ಮಾನ ಸಮುದಾಯಕ್ಕೆ ಕೊಡುತ್ತಿರುವ ಯಾವುದೇ ರೀತಿಯ ಸವಲತ್ತುಗಳು ಅವರಿಗೆ ಕೊಡುವ ಭಿಕ್ಷೆಯಲ್ಲ, ಅದು ಅವರ ಹಕ್ಕಾಗಿದೆ. ಆ ಸಮುದಾಯದವರು ದೇಶಪ್ರೇಮದಿಂದಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಮಾಡಿದ ಪ್ರಾಣತ್ಯಾಗದ ಋಣ ಈ ದೇಶವಾಸಿಗಳ ಮೇಲಿದೆ. ಆ ಸಮುದಾಯದವರ ಶ್ರಮದ ಬೆವರಿನ ಪಾಲು ಈ ದೇಶವನ್ನು ಕಟ್ಟುವಲ್ಲಿ ಬಳಕೆಯಾಗಿದೆ. ಆ ಸಮುದಾಯದವರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಟ್ಟುವ ತೆರಿಗೆಯ ಹಣ ಈ ದೇಶದ ಅಭಿವೃದ್ಧಿಗೆ ಬಳಕೆಯಾಗಿದೆ. ಹೀಗಿರುವಾಗ ಆ ಸಮುದಾಯಕ್ಕೆ ಸರಕಾರ ಒಂದಿಷ್ಟು ಅನುಕೂಲಗಳನ್ನು ಸಂವಿಧಾನದ ಅಡಿಯಲ್ಲಿ ಮಾಡಿಕೊಟ್ಟರೆ ಅದು ತುಷ್ಟೀಕರಣ ಹೇಗಾಗುತ್ತದೆ?

ಹೋಗಲಿ, ಮುಸ್ಲಿಂ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ಕೊಡಲಾಗಿದೆಯಾ? ಇಲ್ಲವಲ್ಲಾ. 2024 ರ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳು ಒಟ್ಟು 78 ಮುಸಲ್ಮಾನ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ಕೊಟ್ಟಿದ್ದು ಅದರಲ್ಲಿ ಕೇವಲ 24 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ‌ಅಂದರೆ ಒಟ್ಟು ಇರುವ 543 ಎಂಪಿ ಸ್ಥಾನಗಳಲ್ಲಿ ಕೇವಲ 24 ಮುಸ್ಲಿಂ ಸಂಸದರಿದ್ದು ಅದು 4.4% ಪ್ರಾತಿನಿಧ್ಯತೆಯನ್ನು ಮಾತ್ರ ಹೊಂದಿದೆ. ಅಂದರೆ 15% ಇರುವ ಮುಸಲ್ಮಾನರಲ್ಲಿ ಕೇವಲ 4.4% ಪ್ರಾತಿನಿಧ್ಯತೆ ಇದೆ ಎಂದರೆ ಅದು ಅತೀ ಕಡಿಮೆಯೇ. ಹೀಗೆ ಆಯ್ಕೆಯಾದವರೆಲ್ಲರೂ ಬಿಜೆಪಿಯೇತರ ಪಕ್ಷದವರಾಗಿದ್ದಾರೆ. ಯಾಕೆಂದರೆ ಬಿಜೆಪಿ ಪಕ್ಷ ಯಾವೊಬ್ಬ ಮುಸಲ್ಮಾನರಿಗೂ ಚುನಾವಣೆಯಲ್ಲಿ ಟಿಕೇಟ್ ಕೊಡದೇ ತನ್ನ ಮುಸ್ಲಿಂ ದ್ವೇಷವನ್ನು ಸಾಧಿಸಿತ್ತು. 245 ಸಂಖ್ಯೆ ಇರುವ ರಾಜ್ಯಸಭೆಯಲ್ಲೂ ಸಹ ಮುಸ್ಲಿಂ ಸದಸ್ಯರ ಸಂಖ್ಯೆ ಕೇವಲ 10 ರಿಂದ 12 ಅಷ್ಟೇ. ಬಿಜೆಪಿ ಹಾಗೂ ಎನ್‌ ಡಿ ಎ ಕೂಟದಿಂದ ಒಬ್ಬರೂ ಇಲ್ಲ. ಇದು ಆಡಳಿತದ ಕೇಂದ್ರದಿಂದ ಮುಸಲ್ಮಾನರನ್ನು ಆದಷ್ಟೂ ದೂರವಿಡುವ ಹುನ್ನಾರವಾಗಿದೆ. ಮುಸಲ್ಮಾನರಿಂದ ಮತಗಳನ್ನು ಪಡೆದು ಅವರ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯತೆ ಕೊಡದೇ ಇರುವುದು ದ್ರೋಹವಾಗಿದೆ.

ಆದರೂ ಈ ಬಿಜೆಪಿ ಪಕ್ಷದ ನಾಯಕರು ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳ ಮೇಲೆ ಮುಸ್ಲಿಂ ತುಷ್ಟೀಕರಣದ ಆರೋಪ ಮಾಡುತ್ತಲೇ ಬಂದಿವೆ. ಅವು ಹೇಗಿವೆಯೆಂದರೆ..

* ಮುಸ್ಲಿಂ ಸಮುದಾಯವನ್ನು ಓಟ್ ಬ್ಯಾಂಕ್ ಮಾಡಿಕೊಳ್ಳಲಾಗಿದೆ,

* ರಾಜಕೀಯ ಲಾಭಕ್ಕೆ ಅವರಿಗೆ ವಿಶೇಷ ಸವಲತ್ತು ನೀಡಲಾಗಿದೆ,

* ಮುಸ್ಲಿಂ ವೈಯಕ್ತಿಕ ಕಾನೂನುಗಳಿಗೆ ಪ್ರೋತ್ಸಾಹ ನೀಡಲಾಗಿದೆ.

* ಹಜ್ ಯಾತ್ರೆಗೆ ಸಬ್ಸಿಡಿ ಕೊಡಲಾಗಿದೆ.

* ಮದ್ರಸಾಗಳಿಗೆ ಅನುದಾನ ನೀಡಲಾಗಿದೆ.

* ಉರ್ದು ಭಾಷೆಗೆ ರಕ್ಷಣೆ ಕೊಡಲಾಗಿದೆ

ಎಂಬುದು ಬಿಜೆಪಿಗರು ಮಾಡುವ ಗುರುತರ ಆರೋಪಗಳಾಗಿವೆ.

ಮುಸ್ಲಿಂ ತುಷ್ಟೀಕರಣಕ್ಕೆ ಪ್ರತಿಯಾಗಿ ಬಿಜೆಪಿ ಹಿಂದೂ ತುಷ್ಟೀಕರಣದ ಹಾದಿ ಹಿಡಿದಿದೆ. ಹಿಂದೂಗಳಿಗೆ ಸರಕಾರಿ ಸವಲತ್ತುಗಳನ್ನು ಕೊಡುವುದಕ್ಕಿಂತಲೂ ಮುಸಲ್ಮಾನರಿಗೆ ಕೊಟ್ಟ ಅಲ್ಪ ಸ್ವಲ್ಪ ಅನುಕೂಲತೆಗಳನ್ನೇ ಮುಂಚೂಣಿಗೆ ತಂದು ತುಷ್ಟೀಕರಣ ಎಂದು ಅಪಪ್ರಚಾರ ಮಾಡುತ್ತಾ ಹಿಂದೂಗಳನ್ನು ಮುಸಲ್ಮಾನ ಸಮುದಾಯದ ಮೇಲೆ ಎತ್ತಿ ಕಟ್ಟಿ ಮತಾಂಧತೆಯ ದ್ವೇಷವನ್ನು ಬಿಜೆಪಿ ಹಾಗೂ ಸಂಘ ಪರಿವಾರ ಬಿತ್ತುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಹಜ್ ಸಬ್ಸಿಡಿ ರದ್ದು ಮಾಡಿದೆ, ಟ್ರಿಪಲ್ ತಲಾಕಿನಂತಹ ಮುಸ್ಲಿಂ ವೈಯಕ್ತಿಕ ಕಾನೂನನ್ನು ನಿಷೇಧಿಸಿದೆ. ಈಗ ಏಕರೂಪದ ಕಾನೂನನ್ನು ತರಲು ಹೊರಟಿದೆ.

ಈ ದೇಶವನ್ನು ದೀರ್ಘ ಕಾಲ ಆಳಿದ ಕಾಂಗ್ರೆಸ್ ಪಕ್ಷವು ನಿಷ್ಟೆಯಿಂದ ಮುಸ್ಲಿಂ ತುಷ್ಟೀಕರಣ ಮಾಡಿದ್ದೇ ಆಗಿದ್ದರೆ ಆ ಸಮುದಾಯ ಶಿಕ್ಷಣ, ಬಡತನ, ಬ್ಯಾಂಕ್ ಸಾಲ ಬಳಕೆ, ಸರಕಾರಿ ಯೋಜನೆಗಳ ಪ್ರಯೋಜನ ಪಡೆಯುವುದರಲ್ಲಿ ಯಾಕೆ ಹಿಂದುಳಿದಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗಿಂತಲೂ ಮುಸ್ಲಿಂ ಸಮುದಾಯ ಹಿಂದುಳಿದಿದೆ ಎಂದು ಸಾಚಾರ್ ಸಮಿತಿ ವರದಿಯಲ್ಲಿ ಹೇಳಿದೆ.‌ 15 % ಜನಸಂಖ್ಯೆ ಇರುವ ಮುಸ್ಲಿಂ ಸಮುದಾಯದವರು ಸರಕಾರಿ ಉದ್ಯೋಗಗಳಲ್ಲಿ ಕೇವಲ 2 ರಿಂದ 3 % ಮಾತ್ರ ಯಾಕಿದ್ದಾರೆ? ಅಂದರೆ ತುಷ್ಟೀಕರಣ ಎಂಬುದು ಮತಾಂಧ ಬಿಜೆಪಿಗರ ಸೃಷ್ಟಿಯಾಗಿದೆ. ಮುಸಲ್ಮಾನರನ್ನು ರಾಷ್ಟ್ರದ ಶತ್ರುಗಳು, ದೇಶದ್ರೋಹಿಗಳು ಎಂದು ಚಿತ್ರಿಸಿ ಹಿಂದೂ ಸಮುದಾಯದ ಧ್ರುವೀಕರಣ ಮಾಡುವ ಹುನ್ನಾರವಾಗಿದೆ.

ಹಿಂದೂ ತುಷ್ಟೀಕರಣ

ಈ ಆರೆಸ್ಸೆಸ್ ಹಾಗೂ ಬಿಜೆಪಿ ಮಾಡುತ್ತಿರುವುದೂ ಹಿಂದೂ ತುಷ್ಟೀಕರಣವನ್ನು. ಕಾಂಗ್ರೆಸ್ ಹಾಗೂ ಇತರೇ ವಿರೋಧ ಪಕ್ಷಗಳ ಮೇಲೆ ಮುಸ್ಲಿಂ ತುಷ್ಟೀಕರಣದ ಆರೋಪ ಮಾಡುವ ಬಿಜೆಪಿಗರು ಮುಸ್ಲಿಂ ಗುಮ್ಮನನ್ನು ತೋರಿಸುತ್ತಲೇ ಹಿಂದೂಗಳ ತುಷ್ಟೀಕರಣ ಮಾಡುತ್ತಿದ್ದಾರೆ.

* ಮುಸಲ್ಮಾನರ ವಿರುದ್ಧ ಹಿಂದೂಗಳ ಭಾವನೆಗಳನ್ನು ಕೆರಳಿಸುವುದು.

* ಹಿಂದೂ ಧಾರ್ಮಿಕ ಸಂಪ್ರದಾಯ ಆಚರಣೆಗಳನ್ನು ವೈಭವೀಕರಿಸುವುದು ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರೋತ್ಸಾಹಿಸುವುದು.

* ರಾಷ್ಟ್ರೀಯತೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು.

* ಹಿಂದೂ ದೇವಾಲಯಗಳ ನಿರ್ವಹಣೆಯಲ್ಲಿ ಸರಕಾರವೇ ಭಾಗವಹಿಸುವುದು.

* ಹಿಂದೂ ದೇವಾಲಯಗಳ ಅಭಿವೃದ್ಧಿ ಹಾಗೂ ಧಾರ್ಮಿಕ ಯೋಜನೆಗಳನ್ನು ಹಮ್ಮಿಕೊಳ್ಳುವುದು. ಉದಾಹರಣೆಗೆ – ಅಯೋಧ್ಯೆ ರಾಮಮಂದಿರ, ಕಾಶಿ, ಮಥುರಾ, ಕೇದಾರನಾಥ ಮುಂತಾದುವು..

* ಹಿಂದೂಗಳ ತೀರ್ಥಯಾತ್ರೆಗಳಿಗೆ ಸರಕಾರಿ ಹಣವನ್ನು ಬಳಸುವುದು. ಉದಾಹರಣೆಗೆ ಕುಂಭಮೇಳ, ಅಮರನಾಥ ಯಾತ್ರೆ ಮುಂತಾದುವು.

* ಗೋರಕ್ಷಣೆ ಹಾಗೂ ಗೋಹತ್ಯಾ ನಿಷೇಧದಂತಹ ಕಾನೂನುಗಳನ್ನು ತರುವುದು.

* ಹಿಂದೂಗಳಿಗೆ ಅನುಕೂಲಕರವಾಗಿ ಮುಸ್ಲಿಂ ವೈಯಕ್ತಿಕ ಕಾನೂನುಗಳನ್ನು ಬದಲಾಯಿಸುವುದು. ಉದಾಹರಣೆಗೆ – ಏಕರೂಪ ನಾಗರಿಕ ಸಂಹಿತೆ ( UCC)

* ಹಿಂದೂಗಳ ಭಾವನೆಗಳನ್ನು ಪ್ರಚೋದಿಸುವ ದ್ವೇಷ ಭಾಷಣಗಳನ್ನು ಮಾಡುವುದು.

* ಅಲ್ಪಸಂಖ್ಯಾತರ ಮೇಲೆ ಆಕ್ರಮಣ ಮಾಡುವುದು.

* ಹಿಂದೂತ್ವ ಅಪಾಯದಲ್ಲಿದೆ ಎಂಬ ಸುಳ್ಳು ಸಂಕಥನವನ್ನು ಹುಟ್ಟುಹಾಕುವುದು.

* ಲವ್ ಜಿಹಾದ್, ಹಲಾಲ್, ಹಿಜಾಬ್ ನಂತಹ ವಿವಾದಗಳನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸುವುದು.

* ಭಾರತ ಹಿಂದೂ ರಾಷ್ಟ್ರ ಎಂದು ಪ್ರಚಾರ ಮಾಡುವುದು…

ಹೀಗೆ, ಹಲವಾರು ಆಯಾಮಗಳಲ್ಲಿ ಅಲ್ಪಸಂಖ್ಯಾತ ಧರ್ಮೀಯರನ್ನು ಟಾರ್ಗೆಟ್ ಮಾಡುತ್ತಾ, ಮುಸ್ಲಿಂ ದ್ವೇಷವನ್ನು ಹೆಚ್ಚಿಸುತ್ತಾ, ಹಿಂದೂ ಧರ್ಮ ಅಪಾಯದಲ್ಲಿದೆ ಎಂಬ ಸುಳ್ಳು ನರೇಶನ್ ಸೃಷ್ಟಿಸುತ್ತಾ ಬಂದಿರುವ ಆರೆಸ್ಸೆಸ್ ಹಾಗೂ ಬಿಜೆಪಿ ಹಲವು ಆಯಾಮಗಳಲ್ಲಿ ಹಿಂದೂ ಸಮುದಾಯವನ್ನು ತುಷ್ಟೀಕರಣ ಮಾಡುತ್ತಾ ಮುಸ್ಲಿಂ ದ್ವೇಷವನ್ನು ಹರಡುತ್ತಿದೆ.

ಭಾರತ ಎಂದೂ ಯಾವುದೇ ಒಂದು ಧರ್ಮ ಸಮುದಾಯಕ್ಕೆ ಸೇರಿದ್ದಂತೂ ಅಲ್ಲವೇ ಅಲ್ಲ. ಸಂವಿಧಾನದಲ್ಲಿ ಯಾವುದೇ ಧರ್ಮಕ್ಕೂ ವಿಶೇಷ ಸವಲತ್ತಿಲ್ಲ. ಎಲ್ಲಾ ಧರ್ಮೀಯರಿಗೂ ಸಮಾನವಾದ ನ್ಯಾಯ ಹಾಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಕೊಡಲಾಗಿದೆ.‌ ಹೀಗಾಗಿ ಭಾರತ ಹಿಂದೂ ರಾಷ್ಟ್ರವೂ ಅಲ್ಲ, ಮುಸ್ಲಿಂ ದೇಶ ಆಗಲೂ ಸಾಧ್ಯವಿಲ್ಲ. ಡಾ.ಅಂಬೇಡ್ಕರ್ ವಿರಚಿತ ಸಂವಿಧಾನ ಅಸ್ತಿತ್ವದಲ್ಲಿ ಇರುವವರೆಗೂ ಭಾರತ ಸರ್ವ ಜನಾಂಗದ ತೋಟವಾಗಿಯೇ ಇರುತ್ತದೆ. ಈ ತೋಟದ ಶಾಂತಿಯನ್ನು ಭಗ್ನ ಗೊಳಿಸುವ, ಮತಾಂಧತೆಯ ಮೂಲಕ ದ್ವೇಷವನ್ನು ಹರಡುತ್ತಿರುವ ವ್ಯಕ್ತಿಗಳು ಹಾಗೂ ಶಕ್ತಿಗಳನ್ನು ಈ ದೇಶದ ಎಲ್ಲಾ ಜನರೂ ವಿರೋಧಿಸಬೇಕಿದೆ. ಸಂವಿಧಾನದ ಸಮಾನತೆಯ ಆಶಯವನ್ನು ಕಾಪಾಡಿಕೊಳ್ಳಬೇಕಿದೆ. ಎಲ್ಲಾ ಜಾತಿ ಧರ್ಮದವರಿಗೂ ಅವರ ಜನಸಂಖ್ಯೆಗೆ ಅನುಗುಣವಾಗಿ ಸಕಲ ಸವಲತ್ತುಗಳು ಹಾಗೂ ರಾಜಕೀಯ ಪ್ರಾತಿನಿಧ್ಯತೆ ದೊರೆಯಬೇಕಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು.

More articles

Latest article

Most read