ಹಾಸನ ನಗರಸಭೆ ಅಧ್ಯಕ್ಷ ಹುದ್ದೆ ಜೆಡಿಎಸ್‌ ತೆಕ್ಕೆಗೆ: ಪ್ರೀತಂಗೌಡ ಬಣಕ್ಕೆ ಹಿನ್ನಡೆ

ಹಾಸನದಲ್ಲಿಂದು ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಡೆಯಲಿದ್ದು ಸಾಕಷ್ಟು ರಾಜಕೀಯ ಬೆಳವಣಿಗೆಗಳು ಕಂಡು ಬಂದಿವೆ. ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಡುವುದಾಗಿ ಬಿಜೆಪಿ ನಾಯಕ ಪ್ರೀತಂಗೌಡ ಜೆಡಿಎಸ್‌ ಅನ್ನು ಕೇಳಿದ್ದರು ಸಹ ಕ್ಯಾರೆ ಅನ್ನದೆ ಚುನಾವಣೆಯಲ್ಲಿ ಸ್ಪರ್ಧಿಸಿ ಜೆಡಿಎಸ್‌ ನಗರಸಭೆ ಅಧ್ಯಕ್ಷೆ ಹುದ್ದೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

9ನೇ ವಾರ್ಡ್‌ ನಿಂದ ಗೆದ್ದಿದ್ದ ಚಂದ್ರೇಗೌಡ ಈಬಾರಿ ನಗರಸಭೆ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿ ಪೂರ್ಣ ಬಹುಮತ ಪಡೆದು ಆಯ್ಕೆಯಾಗಿದ್ದಾರೆ.

35 ಸದಸ್ಯ ಬಲದ ನಗರಸಭೆಯಲ್ಲಿ ಜೆಡಿಎಸ್​ 17, ಬಿಜೆಪಿ 14 ಕಾಂಗ್ರೆಸ್​ ಹಾಗೂ ಪಕ್ಷೇತರರು 2 ಸ್ಥಾನ ಪಡೆದುಕೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ JDSನ 14 ಸದಸ್ಯರು, ಇಬ್ಬರು ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳನ್ನು ಜೆಡಿಎಸ್​ ಟೀಂ ಹೈದರಾಬಾದ್​ಗೆ ಕಳುಹಿಸಿತ್ತು. ಅಧ್ಯಕ್ಷ ಸ್ಥಾನಕ್ಕೆ 18 ಮತಗಳ ಅಗತ್ಯವಿದ್ದು, ಜೆಡಿಎಸ್ ಬಳಿ ಈಗಾಗಲೇ 17 ಸದಸ್ಯರು ಜೆಡಿಎಸ್ ಪಕ್ಷದವರು ಇರುವುದರಿಂದ ಜೆಡಿಎಸ್ ಅಧ್ಯಕ್ಷ ಸ್ಥಾನ ದೊರಕಿದೆ.

More articles

Latest article

Most read