ಸುಳ್ಯ : ಸುಳ್ಯದ ಶಿವಕೃಪ ಕಲಾಮಂದಿರದ ಸಭಾಂಗಣದಲ್ಲಿ ಪ್ರಜಾಧ್ವನಿ ಕರ್ನಾಟಕದ ವತಿಯಿಂದ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಜಾಧ್ವನಿ ಕರ್ನಾಟಕದ ಅಧ್ಯಕ್ಷರಾದ ಅಶೋಕ ಎಡಮಲೆ ವಹಿಸಿದ್ದರು.
ಕಾರ್ಯಕ್ರಮವು ಸಂವಿಧಾನ ಪೀಠಿಕೆ ವಾಚನದೊಂದಿಗೆ ಆರಂಭಗೊಂಡಿತು. ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಗಾಂಧೀಜಿಯವರ ತತ್ವ-ಆದರ್ಶಗಳನ್ನು ಸ್ಮರಿಸಿ, ಅವುಗಳನ್ನು ಅನುಸರಿಸುವ ಸಂಕಲ್ಪದೊಂದಿಗೆ ಗೋಪಾಲ್ ಪೆರಾಜೆ ಪ್ರಸ್ತಾವಿಕವಾಗಿ ಮಾತನಾಡಿದರು. ಜಾನಿ ಕೆ.ಪಿ. ಮುಖ್ಯ ಭಾಷಣ ಮಾಡಿದರು. ಪಿ.ಸಿ. ಜಯರಾಮ್, ದಿವಾಕರ್ ಪೈ, ಕೆ.ಪಿ. ಮೋಹನ್ ಕಡಬ, ಮತ್ತು ಭರತ್ ಕುಕ್ಕುಜಡ್ಕ ಚಿಂತನೀಯ ಮಾತುಗಳನ್ನಾಡಿದರು. ವಸಂತ್ ಪೆಲತಡ್ಕ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು, ಹಾಗೂ ಕರುಣಾಕರ ಪಳ್ಳತ್ತಡ್ಕ ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾಧವ ಸುಳ್ಯಕೋಡಿ, ಉಮ್ಮರ್ ಪಿಎ, ಲೋಲಜಾಕ್ಷ ಭೂತಕಲ್ಲು, ಮಹಮ್ಮದ್ ಕುಂಞ ಗೂನಡ್ಕ, ಶಿವಶಂಕರ್ ಕಡಬ, ಪ್ರಮಿಳಾ ಪೆಲ್ತಡ್ಕ, ಜೂಲಿಯಾನಾ ಕ್ರಾಸ್ತ, ಲೆಸ್ಸಿ ಮೊನಲಿಸಾ, ವಿಶ್ವನಾಥ ನೆಲ್ಲಿ ಬಂಗಾರಡ್ಕ, ಸೆಬಾಸ್ಟಿಯನ್ ಕ್ರಾಸ್ತ, ಮಂಜುನಾಥ ಮಡ್ತಿಲ, ಇಬ್ರಾಹಿಂ ಕಲೀಲ್, ಚೆನ್ನಕೇಶವ ಕಣಿಪಿಲ ಮತ್ತು ಇತರರು ಉಪಸ್ಥಿತರಿದ್ದರು.