ಜಾರ್ಖಂಡ್‌ನಲ್ಲಿ ಇಂದು (ಬುಧವಾರ) ಬೆಳಿಗ್ಗೆ 7:00 ಗಂಟೆಗೆ ಆರಂಭವಾದ ಮತದಾನವು 15 ಜಿಲ್ಲೆಗಳ 43 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಕಣದಲ್ಲಿ 73 ಮಹಿಳೆಯರು ಸೇರಿದಂತೆ ಒಟ್ಟು 683 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಇಂದು ನಿರ್ಧರಿಸಲಿದ್ದಾರೆ.
ಮತದಾನಕ್ಕೂ ಮುನ್ನ ಜಾರ್ಖಂಡ್‌ನ ವಿವಿಧ ಮತಗಟ್ಟೆಗಳಲ್ಲಿ ಅಣಕು ಮತದಾನವನ್ನೂ ನಡೆಸಲಾಯಿತು.ಮತಗಟ್ಟೆಗಳ ಬಳಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಸಂಜೆ 5.00 ಗಂಟೆಯವರೆಗೆ ಮತದಾನ ನಡೆಯಲಿದೆ. 31 ಕ್ಷೇತ್ರಗಳ ವ್ಯಾಪ್ತಿಯ 950 ಸೂಕ್ಷ್ಮ ಬೂತ್‌ಗಳಲ್ಲಿ ಸಂಜೆ 4.00 ಗಂಟೆಗೆ ಮತದಾನ ಮುಕ್ತಾಯಗೊಳ್ಳಲಿದೆ.
ಶಾಂತಿ ಕಾಪಾಡಲು ಮತ್ತು ಚುನಾವಣಾ ಪ್ರಕ್ರಿಯೆಗಳು ಸರಿಯಾಗಿ ನಡೆಸಲು 200 ಕಂಪನಿಗಳ ಭದ್ರತಾ ಪಡೆಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.
ಪ್ರಮುಖ ಅಭ್ಯರ್ಥಿಗಳಾದ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಮತ್ತು ಕಾಂಗ್ರೆಸ್ ನಾಯಕ ಅಜೋಯ್ ಕುಮಾರ್ ಕಣದಲ್ಲಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎಯು ಜೆಎಂಎಂ ನೇತೃತ್ವದ ಒಕ್ಕೂಟವನ್ನು ಸೋಲಿಸುವ ಗುರಿಯನ್ನು ಹೊಂದಿದೆ.
ಜಾರ್ಖಂಡ್‌ನ ಉಳಿದ 38 ಕ್ಷೇತ್ರಗಳಿಗೆ ನವೆಂಬರ್ 20 ರಂದು ಮತದಾನ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಎಂಎಂ 30, ಬಿಜೆಪಿ 25 ಮತ್ತು ಕಾಂಗ್ರೆಸ್ 16 ಸ್ಥಾನಗಳನ್ನು ಗೆದಿದ್ದವು. ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಜೆಎಂಎಂ ನಡುವೆ ನೇರಾ ಪೈಪೋಟಿ ಏರ್ಪಟ್ಟಿದೆ.