ಕೇಂದ್ರ ಚುನಾವಣಾ ಆಯೋಗವು 15 ರಾಜ್ಯಗಳ 56 ರಾಜ್ಯಸಭೆ ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆಸುವುದಾಗಿ ಇಂದು ತಿಳಿಸಿದೆ. ಇದರಲ್ಲಿ ಕರ್ನಾಟಕದ 4 ರಾಜ್ಯಸಭಾ (Rajyasabha) ಸ್ಥಾನಗಳು ಒಳಗೊಂಡಿದೆ.
15 ರಾಜ್ಯಗಳಲ್ಲಿ ಫೆಬ್ರವರಿ 27 ರಂದು 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ (Election Commission Of India) ಸೋಮವಾರ ಪ್ರಕಟಿಸಿದೆ. ನಾಮಪತ್ರ ಸಲ್ಲಿಸಲು ಫೆ.15 ರಂದು ಕೊನೆಯ ದಿನಾಂಕವಾಗಿದ್ದು, ಫೆ.27ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಅದೇ ದಿನ ಮತ ಎಣಿಕೆ ಕೂಡ ನಡೆಯಲಿದೆ.
ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶ ತಲಾ ಐದು ರಾಜ್ಯಸಭಾ ಸ್ಥಾನಗಳನ್ನು ಹೊಂದಿದ್ದು, ಕರ್ನಾಟಕದಲ್ಲಿ ನಾಲ್ಕು. ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ ಮತ್ತು ರಾಜಸ್ಥಾನದಲ್ಲಿ ತಲಾ ಮೂರು. ಛತ್ತೀಸ್‌ಗಢ, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮೇಲ್ಮನೆಯಲ್ಲಿ ತಲಾ ಒಂದು ಸ್ಥಾನಕ್ಕೆ ರಾಜ್ಯಸಭಾ ಚುನಾವಣೆ ನಡೆಯಲಿದೆ.
ರಾಜ್ಯಸಭೆ ಸದಸ್ಯರ ಅವಧಿಯು 6 ವರ್ಷಗಳಾಗಿದ್ದು, ಶಾಶ್ವತ ಸದನವಾಗಿರುವ ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು ಸದಸ್ಯರು ಪ್ರತಿ ಎರಡು ವರ್ಷಗಳಿಗೊಮ್ಮೆ ನಿವೃತ್ತರಾಗುತ್ತಾರೆ.
ರಾಜ್ಯದ ಹೆಸರು | ನಿವೃತ್ತಿಯಾಗುವ ಸದಸ್ಯರ ಸಂಖ್ಯೆ |
ಆಂಧ್ರಪ್ರದೇಶ | 3 |
ಬಿಹಾರ | 6 |
ಛತ್ತೀಸ್‌ಗಢ | 1 |
ಗುಜರಾತ್ | 4 |
ಹರಿಯಾಣ | 1 |
ಹಿಮಾಚಲ ಪ್ರದೇಶ | 1 |
ಕರ್ನಾಟಕ | 4 |
ಮಧ್ಯಪ್ರದೇಶ | 5 |
ಮಹಾರಾಷ್ಟ್ರ | 6 |
ತೆಲಂಗಾಣ | 3 |
ಉತ್ತರ ಪ್ರದೇಶ | 10 |
ಉತ್ತರಾಖಂಡ | 1 |
ಪಶ್ಚಿಮ ಬಂಗಾಳ | 5 |
ಒಡಿಶಾ | 3 |
ರಾಜಸ್ಥಾನ | 3 |
ರಾಜ್ಯಸಭಾ ಚುನಾವಣೆ 2024: ಪ್ರಮುಖ ದಿನಾಂಕಗಳ ಪಟ್ಟಿ
1. ಅಧಿಸೂಚನೆ : ಫೆಬ್ರವರಿ 08, 2024 (ಗುರುವಾರ)
2. ನಾಮನಿರ್ದೇಶನಗಳ ಕೊನೆಯ ದಿನಾಂಕ: ಫೆಬ್ರವರಿ 15, 2024 (ಗುರುವಾರ)
3. ನಾಮನಿರ್ದೇಶನಗಳ ಪರಿಶೀಲನೆ: ಫೆಬ್ರವರಿ 16, 2024 (ಶುಕ್ರವಾರ)
4. ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆಯ ದಿನಾಂಕ: ಫೆಬ್ರವರಿ 20, 2024
5. ಮತದಾನದ ದಿನಾಂಕ: ಫೆಬ್ರವರಿ 27, 2024 (ಮಂಗಳವಾರ)
6. ಮತದಾನದ ಸಮಯ: 09:00 ರಿಂದ 04:00 ರವರೆಗೆ
7. ಮತಗಳ ಎಣಿಕೆ: ಫೆಬ್ರವರಿ 27, 2024 (ಮಂಗಳವಾರ) ಸಂಜೆ 05:00 ಗಂಟೆಗೆ