Saturday, July 27, 2024

ಒಂದೇ ವಾರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಲಿದೆ: ಕೇಂದ್ರ ಸಚಿವ ಶಂತನು ಠಾಕೂರ್

Most read

24 ಪರಗಣ/ ಪ/ಬಂಗಾಳ: ಪೌರತ್ವ ಕಾಯಿದೆಯನ್ನ ಇನ್ನು ಒಂದು ವಾರದ ಒಳಗಾಗಿ ದೇಶದಾದ್ಯಂತ ಜಾರಿ ಮಾಡುವುದು ಖಾತ್ರಿ ಎಂದು ಕೇಂದ್ರ ಸಚಿವ ಶಂತನು ಠಾಕೂರ್ ಘೋಷಿಸಿದ್ದಾರೆ. ಪಶ್ಚಿಮ ಬಂಗಾಳದ 24 ಪರಗಣ ಪ್ರಾಂತ್ಯದಲ್ಲಿ ಸಾರ್ವಜನಿಕ ಮೆರವಣಿಗೆಯೊಂದರಲ್ಲಿ ಭಾಗವಹಿಸಿ ಮಾತಾಡುವ ಸಂದರ್ಭದಲ್ಲಿ, ‘ಅಯೋಧ್ಯೆಯಲ್ಲಿ ರಾಮಮಂದಿರವನ್ನು ಉದ್ಘಾಟಿಸಲಾಗಿದೆ, ಇನ್ನು ಒಂದೇ ವಾರದಲ್ಲಿ CAA (ಪೌರತ್ವ ತಿದ್ದುಪಡಿ ಕಾಯ್ದೆ)ಯನ್ನು ದೇಶದೆಲ್ಲೆಡೆ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ. ಬಿಜೆಪಿ ಸಂಸದರಾಗಿರುವ ಶಂತನು ಠಾಕೂರ್ ಬಂಗಾಳಿ ಭಾಷೆಯಲ್ಲಿ ಹೇಳಿರುವುದನ್ನು ಪಿಟಿಐ ವರದಿ ಮಾಡಿದೆ.

ಮೋದಿ ಸರ್ಕಾರವು ಜಾರಿಗೆ ಉದ್ದೇಶಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯು 2019ರ ಡಿಸೆಂಬರ್ ತಿಂಗಳಲ್ಲಿ ದೇಶದಾದ್ಯಂತ ಪ್ರತಿರೋಧವನ್ನು ಎದುರಿಸಿತ್ತು.

ಪೌರತ್ವ ಕಾಯ್ದೆ ಹಾಗೂ ಅದರೊಂದಿಗೆ ಬಿಜೆಪಿ ಸರ್ಕಾರ ಉದ್ದೇಶಿಸಿದ್ದ ರಾಷ್ಟ್ರೀಯ ಜನಸಂಖ್ಯಾ ನೋಂದಣಿಗಳು ದೇಶದ ಒಂದು ವರ್ಗದ ಜನತೆಯನ್ನು ಅದರಲ್ಲೂ ವಿಶೇಷವಾಗಿ ತಳಸಮುದಾಯಗಳ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಎರಡನೆ ದರ್ಜೆ ಪ್ರಜೆಗಳಾಗಿ ಮಾಡುತ್ತವೆ ಎಂಬ ಆತಂಕದ ಹಿನ್ನೆಲೆಯಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಇದೀಗ ಲೋಕಸಭಾ ಚುನಾವಣೆ ಘೋಷಣೆಗೊಳ್ಳುವ ಕೆಲವೇ ತಿಂಗಳ ಮೊದಲು ಈ ಕುರಿತು ಮತ್ತೆ ಪ್ರಸ್ತಾಪವಾಗಿತ್ತಿರುವುದರ ಹಿಂದೆ ಬಿಜೆಪಿಯ ಕೋಮು ವಿಭಜಕ ಅಜೆಂಡಾ ಇದೆ ಎಂಬ ಶಂಕೆ ವ್ಯಕ್ತವಾಗಿದೆ.

More articles

Latest article