ಮಹಾರಾಷ್ಟ್ರ ವಿಧಾನಸಭೆಯಲ್ಲಿ ಚುನಾವಣಾ ಆಯೋಗ ರಾಜಿ; ರಾಹುಲ್‌ ಗಾಂಧಿ ಆರೋಪ

Most read

ಬೋಸ್ಟನ್: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗವು ನಿಯಮಗಳಲ್ಲಿ ರಾಜಿ ಮಾಡಿಕೊಂಡಿದೆ ಎಂದು ಕಾಂಗ್ರೆಸ್‌ ಮುಖಂಡ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಅವರು ಭಾನುವಾರ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದರು.

ವಿಧಾನಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿರುವ ವಯಸ್ಕರಿಗಿಂತ ಹೆಚ್ಚಿನ ವಯಸ್ಕರು ಮತದಾನ ಮಾಡಿದ್ದಾರೆ. ಚುನಾವಣಾ ಆಯೋಗ ನಮಗೆ ಸಂಜೆ 5.30ರ ಹೊತ್ತಿಗೆ ಮತದಾನದ ಅಂಕಿ ಅಂಶದ ಮಾಹಿತಿ ನೀಡಿತ್ತು. ಆದರೆ 5.30ರಿಂದ 7.30ರವರೆಗೆ 65 ಲಕ್ಷ ಮತದಾರರು ಮತ ಚಲಾಯಿಸಿದ್ದಾರೆ. ಇದು ಭೌತಿಕವಾಗಿ ಅಸಾಧ್ಯ. ಒಬ್ಬ ಮತದಾರ ಮತ ಹಾಕಲು 3 ನಿಮಿಷವಾದರೂ ಬೇಕು. ಒಂದು ವೇಳೆ ಅವರು ಹೇಳಿದಂತೆ 65 ಲಕ್ಷ ಜನ ಮತಚಲಾಯಿಸಿದ್ದರೆ, ಮತದಾರರ ಸರತಿ ಸಾಲು ಬೆಳಗಿನ ಜಾವ 2 ಗಂಟೆಯವರೆಗೂ ಇರಬೇಕಿತ್ತು ಎಂದು ಶಂಕಿಸಿದ್ದಾರೆ.

ಸಂಜೆ 5.30 ರ ಸಮಯದ ವಿಡಿಯೋವನ್ನು ಕೇಳಿದಾಗ ಚುನಾವಣಾ ಆಯೋಗ ನೀಡಲು ನಿರಾಕರಿಸಿದೆ. ಆ ಹೊತ್ತಿಗೆ ಕಾನೂನನ್ನೂ ಬದಲಾಯಿಸಿದ್ದರು. ಹಾಗಾಗಿ ಈಗ ನಾವು ವಿಡಿಯೋ ದಾಖಲೆ ಕೇಳಲು ಸಾಧ್ಯವಿಲ್ಲ. ಇದರಿಂದ ಚುನಾವಣಾ ಆಯೋಗ ಆಡಳಿತ ಪಕ್ಷದೊಂದಿಗೆ ರಾಜಿಯಾಗಿದೆ ಎನ್ನುವುದು ಸ್ಪಷ್ಟವಾಗಿದೆ, ವ್ಯವಸ್ಥೆಯಲ್ಲೂ ಲೋಪಗಳಾಗಿವೆ ಎನ್ನುವುದನ್ನು ಹಲವು ಬಾರಿ ಹೇಳುತ್ತಲೇ ಬಂದಿದ್ದೇನೆ ಎಂದು ಹೇಳಿದರು.

More articles

Latest article