ಎಲ್‌ನಿನೋ ಬಿಸಿ ಮಾರುತ ಪ್ರಭಾವ : ರಾಜ್ಯದ 20ಕ್ಕೂ ಅಧಿಕ ತಾಲೂಕುಗಳಲ್ಲಿ ಬರ

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಾಗಿದ್ದು  ರಾಜ್ಯದ  ಹುಮನಾಬಾದ್‌,ಬೀದರ್‌, ಭಾಲ್ಕಿ ಸೇರಿದಂತೆ  20 ಕ್ಕೂ ಅಧಿಕ ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿದೆ.  ಜೂನ್‌ 1ರಿಂದ ಇಲ್ಲಿವರೆಗೂ ರಾಜ್ಯದಲ್ಲಿ ಶೇ. 37ರಷ್ಟು ಮಳೆ ಕೊರತೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ತಜ್ಞರು ಮಾಹಿತಿ ನೀಡಿದ್ದಾರೆ.

ಎಲ್‌ನಿನೋ ಬಿಸಿ ಗಾಳಿ ಮಾರುತದಿಂದ ಕ್ಷೀಣಗೊಂಡು ಮಳೆ ಕೊರತೆಗೆ ಕಾರಣವಾಗಿದೆ. ರಾಜ್ಯಕ್ಕೆ ಮುಂಗಾರು ಆಗಮಿಸಿ 20 ದಿನ ಕಳೆದರೂ ಕೆಲವು ತಾಲೂಕುಗಳಲ್ಲಿ ಮಾತ್ರ ಅಲ್ಲಲ್ಲಿ ಮಳೆಯಾಗಿದೆ. ಬಹುತೇಕ ತಾಲೂಕುಗಳಲ್ಲಿ ಮಳೆ ಕೊರತೆಯಾಗಿ ಬಿತ್ತನೆ ನಡೆದಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ರಾಜ್ಯದಲ್ಲಿ ಈ ಬಾರಿ ಬರ ಆವರಿಸಲಿದೆ ಎಂಬ ಆತಂಕ ಕಾಡುತ್ತಿದೆ.

ವಾಡಿಕೆಯಂತೆ ಜೂನ್ 1 ರಿಂದ ಜೂನ್ 19ರ ಅವಧಿಯಲ್ಲಿ ರಾಜ್ಯದಲ್ಲಿ 11.63 ಸೆಂ .ಮೀ ಮಳೆಯಾಗಬೇ ಕಿತ್ತು. ಆದರೆ ಕೇವಲ 7.30 ಸೆಂ .ಮೀ ಮಳೆಯಷ್ಟೇ ದಾಖಲಾಗಿದೆ. ಇದು ಕೃಷಿ ಚಟುವಟಿಕೆಗಳ ಮೇ ಲೆಯೂತೀ ವ್ರ ಪರಿಣಾಮ ಬೀರುವ ಆತಂಕ ಮೂಡಿಸಿದೆ.

ಯಾವ ಜಿಲ್ಲೆಗಳಲ್ಲಿ ಮಳೆ ಕೊರತೆ : ರಾಜ್ಯದ ಒಟ್ಟು 31 ಜಿಲ್ಲೆಗಳ ಪೈಕಿ ದಕ್ಷಿಣ ಒಳನಾಡಿನ ಮೂರು, ಉತ್ತರ ಒಳನಾಡಿನ ಐದು, ಮಲೆನಾಡಿನ ನಾಲ್ಕು, ಕರಾವಳಿಯ ಮೂರು ಜಿಲ್ಲೆಗಳು ಸೇರಿ ಒಟ್ಟು 15 ಜಿಲ್ಲೆಗಳಲ್ಲಿ ತೀವ್ರ ಮಳೆ ಕೊರತೆ ಎದುರಾಗಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ತಜ್ಞರು ಹೇಳಿದ್ದಾರೆ.

ಬಾರದ ಛಾಯೆ ಎದುರಾಗಿರುವ ತಾಲೂಕುಗಳು : ಕಲ್ಯಾಣ ಕರ್ನಾಟಕ ಜಿಲ್ಲೆಯ ಬಹುತೇಕ ತಾಲೂಕಗಳಲ್ಲು ಮಳೆ ಕೊರತೆಯಾಗಿ ಬಿತ್ತನೆಗೆ ಹಿನ್ನಡೆಯಾಗಿದೆ. ಹೀಗಾಗಿ ಬಹುತೇಕ ತಾಲೂಕುಗಳಲ್ಲಿ ಬರದ ಛಾಯೆ ಎದುರಾಗಿದೆ. ಹುಮಾನಬಾದ್‌ನಲ್ಲಿ ಶೇ.-93ರಷ್ಟು ಮಳೆ ಕೊರತೆಯಾಗಿದೆ. ಚಿಟಗುಪ್ಪದಲ್ಲಿ ಶೇ. -90, ಬೀದರ್‌ ಶೇ. -79, ಭಾಲ್ಕಿ ಶೇ. -65ರಷ್ಟು ಮಳೆ ಕೊರತೆಯಾಗಿದೆ.

ಮುಂಗಾರು ಅವಧಿಯಲ್ಲಿ ಮಳೆಯ ಅಬ್ಬರ ಇರುತ್ತಿದ್ದ ಮಲೆನಾಡಿನ ತಾಲೂಕುಗಳಲ್ಲೂ ಬರ ಎದುರಾಗಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಶೇ.-73ರಷ್ಟು ಮಳೆ ಕೊರತೆಯಾಗಿದೆ. ಅದೇ ರೀತಿ ಹೊಸ ಶೇ.-61 ರಷ್ಟು ಮಳೆ ಕೊರತೆ ಎದುರಿಸುತ್ತಿದೆ.

ಕರಾವಳಿ ವಲಯದಲ್ಲಿ ಹೆಬ್ರಿ ಶೇ -62, ಅಂಕೋಲಾ ಶೇ -67, ಕಾರವಾರ ಶೇ -62, ಮೂಡಬಿದಿರೆ ಶೇ -60ರಷ್ಟು ಮಳೆ ಕೊರತೆಯಾಗಿ ಬರ ಪರಿಸ್ಥಿತಿ ಇದೆ. ಇನ್ನು  ದಾವಣಗೆರೆ ಶೇ -65ರಷ್ಟು, ಚನ್ನಗಿರಿ ಶೇ -74, ಹಗರಿಬೊಮ್ಮನಹಳ್ಳಿ ಶೇ -52), ಸಂಡೂರು ಶೇ -74 ಹಾಗೂ ಗಂಗಾವತಿ ಶೇ. -75ರಷ್ಟು ಮಳೆ ಕಡಿಮೆಯಾಗಿ ಬರ ಉಂಟಾಗಿದೆ.

ಪ್ರದೇಶ ಕೊರತೆ (ಶೇಕಡವಾರು) ವಾಡಿಕೆ ಮಳೆ ಮಳೆ ಪ್ರಮಾಣ

ಕರಾವಳಿ ಪ್ರದೇಶ 57 45.40 (ಸೆಂ.ಮೀ) 19.39

ಮಲೆನಾಡು ಪ್ರದೇಶ 52 19.29 9.19

ಉತ್ತರ ಒಳನಾಡು 19 6.52 5.28

ದಕ್ಷಿಣ ಒಳನಾಡು 4 4.90 4.73    

More articles

Latest article

Most read