Thursday, December 12, 2024

ಕ್ಷೇತ್ರ ಬಿಟ್ಟುಕೊಡುವಷ್ಟು ಜೆಡಿಎಸ್ ಮುಖಂಡರು ದುರ್ಬಲರಾಗಿದ್ದಾರೆ ಅಂತ ಭಾವಿಸಿರಲಿಲ್ಲ: ಡಿಕೆ ಶಿವಕುಮಾರ್

Most read

ರಾತ್ರಿ ಎಲ್ಲಾ ಸಭೆಗಳು ನಡೆದಿವೆ ಆದ್ರೆ ಜೆಡಿಎಸ್ ನವರು ಬಿಜೆಪಿಗೆ ಸೀಟು ಬಿಟ್ಟು ಕೊಡುತ್ತಾರೆ ಅಂತ ಯಾರೋ ಫೋನ್ ಮಾಡಿ ಹೇಳಿದ್ರು. ಜೆಡಿಎಸ್ ನಾಯಕರು ಅಷ್ಟೊಂದು ದುರ್ಬಲ ಹಾಗೂ ಅಷ್ಟು ಬೇಗ ಹೆದರುತ್ತಾರೆ ಅಂತ ಅಂದುಕೊಂಡಿರಲಿಲ್ಲ ಎಂದು ಎನ್‌ಡಿಎ ಸೀಟು ಹಂಚಿಕೆ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಖಾಸಗಿ ಕಾಲೇಜೊಂದರಲ್ಲ್ಲಿ ಚನ್ನಪಟ್ಟಣದ ಕಾರ್ಯಕರ್ತರೊಡನೆ ಮಾತುಕತೆ ನಡೆಸಿ ನಗುತ್ತಾ ಹೊರಬಂದ ಶಿವಕುಮಾರ್, ಸಭೆಯಲ್ಲಿದ್ದಾಗ ಯಾರೋ ಫೋನ್ ಮಾಡಿ ಹೇಳಿದ್ರು, ಏನೋ ಕ್ಷೇತ್ರನಾ ಬಿಟ್ಟು ಕೊಡ್ತಾ ಇದ್ದಾರೆ ಅಂತ ಮಾಹಿತಿ ಬಂತು. ಅವರು ಇಷ್ಟು ವೀಕ್ ಅಂತ ನಾನು ಅಂದುಕೊಂಡಿರಲಿಲ್ಲ, ಫೈಟ್ ಮಾಡ್ತಾರೆ ಅಂತ ಅನ್ಕೊಂಡಿದ್ದೆ ಆದರೆ ಬಿಟ್ಟುಕೊಡುತ್ತಾರೆ ಅಂತ ಈಗ ಮಾಹಿತಿ ಬಂತು. ನಾನು ನಮ್ಮ ಕಾರ್ಯಕರ್ತರ ಮುಖಂಡರ ಅಭಿಪ್ರಾಯ ಕೇಳಿದ್ದೇನೆ. ಯಾರೇ ಅಭ್ಯರ್ಥಿಯಾದರು, ಡಿಕೆ ಶಿವಕುಮಾರ್ ಅಭ್ಯರ್ಥಿ ಅಂತ ಕೆಲಸ ಮಾಡಬೇಕು ಅಂತ ಹೇಳಿದ್ದೇವೆ ಎಂದರು.

ಯುದ್ಧಕ್ಕೂ ಮುನ್ನ ಶಸ್ತ್ರ ತ್ಯಾಗನಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದನ್ನ ನೀವು ಅವರ ಬಳಿಯೇ ಕೇಳಬೇಕು. ಕಾರ್ಯಕರ್ತರು ಎಲ್ಲರ ಜೊತೆಗೂ ಮಾತನಾಡಿದ್ದೇನೆ ಅವರ ಅಭಿಪ್ರಾಯ ಹೇಳಿದ್ದಾರೆ. ರಾಜಕಾರಣದಲ್ಲಿ ಹಲವು ಸಾಧ್ಯತೆಗಳು ಇರುತ್ತವೆ. ಯಾರು ಬೇಕಾದರೂ ಕ್ಯಾಂಡಿಡೇಟ್ ಆಗಬಹುದು. ಕಾರ್ಯಕರ್ತರನ್ನು ನಿಲ್ಲಿಸಿದ್ರು ಕೂಡ ತಯಾರಿರಬೇಕು ಅಂತ ಹೇಳಿದ್ದೇವೆ ಎಂದರು.

More articles

Latest article