ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ನ್ಯಾಯಾಲಯ ಏನೇ ತೀರ್ಪು ನೀಡಿದರು ನಾನು ಸ್ವೀಕರಿಸುತ್ತೇನೆ. ‘ನನಗೆ ದೇವರು ಮತ್ತು ನ್ಯಾಯಾಲಯದ ಬಗ್ಗೆ ನಂಬಿಕೆ ಇದೆ. ಅವರು ಏನು ಕೊಟ್ಟರೂ ಪ್ರಸಾದ ಅಂತಾ ಸ್ವೀಕಾರ ಮಾಡುತ್ತೇನೆ’ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಎತ್ತಿನಹೊಳೆ ಯೋಜನೆ ಮೊದಲ ಹಂತದ ಪ್ರಾಯೋಗಿಕ ನೀರು ಹರಿವಿಗೆ ಚಾಲನೆ ನೀಡಲು ಸಕಲೇಶಪುರಕ್ಕೆ ಬಂದಿದ್ದ ವೇಳೆ ಹೈಕೋರ್ಟ್ ವಿಚಾರಣೆ ಕುರಿತು ಮಾಧ್ಯಮ ಜೊತೆ ಮಾತನಾಡಿ, ಏನೂ ಆಗಲ್ಲ, ನ್ಯಾಯಾಲಯದಲ್ಲಿ ತೀರ್ಪು ಏನೇ ಬಂದರೂ ಪ್ರಸಾದ ಅಂತಾ ಸ್ವೀಕರಿಸುತ್ತೇನೆ ಎಂದರು.
ಇನ್ನು ಸಿಎಂ ಸಿದ್ದರಾಮಯ್ಯ ವಿರುದ್ಧ ಇಂದು ಹೈಕೋರ್ಟ್‌ನಲ್ಲಿ ಪ್ರಾಸಿಕ್ಯೂಷನ್ ವಿಚಾರಣೆ ಸಂಬಂಧ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ ಅವರು, ಸಿಎಂ ಏನು ಮಾಡಿದ್ದಾರೆ ಎಲ್ಲರೂ ಕಾತುರದಿಂದ ಇದ್ದಾರೆ? ಏನೂ ಆಗುವುದಿಲ್ಲ, ಇದು ಅಷ್ಟು ಸುಲಭದ ಕೆಲಸವಲ್ಲ. ಅವರು ಏನಾದರೂ ಸಹಿ ಮಾಡಿ, ತಪ್ಪು ಮಾಡಿದ್ರೆ ಪರ್ವಾಗಿಲ್ಲ ಆದರೆ ಜಮೀನು ಕಳೆದುಕೊಂಡಿದ್ದಾರೆ ಅರ್ಜಿ ಕೊಟ್ಟವ್ರೆ ಬಿಜೆಪಿಯವರು ಅರ್ಜಿ ಪಡೆದುಕೊಂಡೇ ಸೈಟ್ ಕೊಟ್ಟವ್ರೆ ಇಷ್ಟು ಬಿಟ್ಟರೆ ಇನ್ನೇನಿದೆ? ಇದರಲ್ಲೇ ಸಿಎಂ ಅವರ ತಪ್ಪೇನಿದೆ? ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಪುತ್ರ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂಬ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಆರೋಪ ವಿಚಾರವಾಗಿ, ‘ ನೋಡಿ ನಾನು ಅವರಿಗೆಲ್ಲ, ಆ ನಕಲಿಗಳಿಗೆಲ್ಲ ಉತ್ತರ ಕೊಡಲ್ಲ. ಅಸಲಿಯತ್ತು ಇದ್ರೆ ಮಾತ್ರ ಉತ್ತರ ಕೊಡ್ತೇನೆ ಎನ್ನುವ ಮೂಲಕ ಪರೋಕ್ಷವಾಗಿ ಹೆಚ್‌ಡಿ ಕುಮಾರಸ್ವಾಮಿಗೆ ನಕಲಿ ಮನುಷ್ಯನೆಂದು ಟಾಂಗ್ ನೀಡಿದರು.