Saturday, May 18, 2024

ನಮ್ಮ ತೆರಿಗೆಯಲ್ಲಿ ನಮ್ಮ ಹಕ್ಕು ಸಿಕ್ಕರೆ ಗೃಹಲಕ್ಷ್ಮಿ ಯೋಜನೆ ಸಹಾಯಧನ 4 ಸಾವಿರಕ್ಕೆ ಹೆಚ್ಚಳ: ಡಿಕೆ ಸುರೇಶ್

Most read

ನಮ್ಮ ತೆರಿಗೆ ನಮ್ಮ ಹಕ್ಕು ಅಭಿಮಾನದಿಂದ ಕೇಂದ್ರ ಸರ್ಕಾರಕ್ಕೆ ತೀವ್ರ ಮುಜುಗರವಾಗಿದೆ. ದಕ್ಷಿಣ ಭಾರತಕ್ಕೆ ತೆರಿಕೆ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಅದೇನಾದರು ಸರಿಯಾಗಿ ಬಂದರೆ ಗೃಹಲಕ್ಷ್ಮಿ ಯೋಜನೆ (Gruha Lakshmi scheme ) ಅಡಿ ರಾಜ್ಯ ಸರ್ಕಾರ ಮಹಿಳೆಯರಿಗೆ ಪ್ರತಿ ತಿಂಗಳು ನೀಡುತ್ತಿರುವ ರೂ. 2000 ಬದಲಾಗಿ 4000 ನೀಡಲು ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.

ತೆರಿಗೆಗಳ ರೂಪದಲ್ಲಿ ರಾಜ್ಯದಲ್ಲಿ ಸಂಗ್ರಹವಾಗುವ ರೂ 4.30 ಲಕ್ಷ ಕೋಟಿ ಹಣ ಕೇಂದ್ರಕ್ಕೆ ಹೋಗುತ್ತದೆ. ಆ ಮೊತ್ತದಲ್ಲಿ ಶೇಕಡ 60ರಷ್ಟು ಹಣ ರಾಜ್ಯಕ್ಕೆ ವಾಪಸ್ಸು ಬಂದರೆ ಕರ್ನಾಟಕ ಸರ್ಕಾರ ನೀರಾವರಿ ಯೋಜನೆಗಳನ್ನು (Irrigation projects) ಪೂರ್ತಿಗೊಳಿಸುತ್ತದೆ, ರಸ್ತೆಗಳನ್ನು ನಿರ್ಮಿಸುತ್ತದೆ ಮತ್ತು ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕಡೆ ಹಣ ವ್ಯಯಿಸುತ್ತದೆ ಎಂದು ಸುರೇಶ್ ಹೇಳಿದರು.

ಅಷ್ಟು ಮಾತ್ರವಲ್ಲದೆ, ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಗಳಿಗೆ ಗೃಹ ಲಕ್ಷ್ಮಿ ಯೋಜೆನೆ ಅಡಿ ನೀಡಲಾಗುತ್ತಿರುವ ಮಾಹೆಯಾನ ರೂ. 2,000 ಸಹಾಯಧನವನ್ನು ರೂ. 4.000 ಗಳಿಗೆ ಹೆಚ್ಚಿಸಲು ಯಾವುದೇ ಅಭ್ಯಂತರವಿರಲ್ಲ ಎಂದು ಸುರೇಶ್ ಹೇಳಿದರು. ಜಾತಿಗಣತಿ ವರದಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವರದಿಯನ್ನು ಓದದೆ ಯಾವುದೇ ಪ್ರತಿಕ್ರಿಯೆ ನೀಡಲಾರೆ ಎಂದರು.

ಈಗ ರಾಜ್ಯದ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣ ದುಪ್ಪಟ್ಟಾಗುವ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ನಮ್ಮ ತರಿಕೆ ನಮ್ಮ ಹಕ್ಕನ್ನು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತಾರೆಯೇ ಕಾದುನೋಡಬೇಕು.

More articles

Latest article