Thursday, December 12, 2024

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳು

Most read

೧.ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ ಅಸ್ತಿತ್ವಕ್ಕೆ:
ಬೀಜೋತ್ಪಾದನಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರಗಳು, ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ಮತ್ತು ಜೈವಿಕ ನಿಯಂತ್ರಣ/ಪರತAತ್ರ ಜೀವಿ ಪ್ರಯೋಗಾಲಯಗಳು, ಈ ನಾಲ್ಕು ಘಟಕಗಳನ್ನು ಒಂದೇ ಸೂರಿನಡಿ ತಂದು ಅವುಗಳಿಂದ ಬರುವ ಆದಾಯ ಹಾಗೂ ಸರ್ಕಾರದಿಂದ ನೀಡುವ ಅನುದಾನವನ್ನು ಜೊತೆಗೂಡಿಸಿ ಸದರಿ ಘಟಕಗಳನ್ನು ಅಭಿವೃದ್ಧಿಪಡಿಸಲು “ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ” ಯನ್ನು ಸ್ಥಾಪಿಸಲು ಹಾಗೂ ಸದರಿ ಏಜೆನ್ಸಿಯ ಪ್ರಕಾರ್ಯದಂತೆ ಕಾರ್ಯನಿರ್ವಹಿಸಲು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ ಪಾಟೀಲ ಇಂದಿಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

೨.ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲ್ಲೂಕಿನ ಸೋಗಾನೆ ಗ್ರಾಮದಲ್ಲಿರುವ ಶಿವಮೊಗ್ಗ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ಅಭಿವೃದ್ಧಿಗೆ ರೂ.೧೨೭.೪೪ ಕೋಟಿಗಳ ಹೆಚ್ಚುವರಿ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ.

೩.ಎನ್.ಎಚ್.ಎಮ್ ಸಿಬ್ಬಂದಿ ಮುಂದುವರಿಕೆ: ರಾಷ್ಟಿçÃಯ ಆರೋಗ್ಯ ಅಭಿಯಾನದಡಿಯಲ್ಲಿ ಮಂಜೂರಾದ ಒಟ್ಟು ೭೦೪೫ ಸಮುದಾಯ ಆರೋಗ್ಯ ಅಧಿಕಾರಿ ಉದ್ದೆಗಳ ಕಾಲಾವಧಿಯನ್ನು ಗುತ್ತಿಗೆ ಆಧಾರದಲ್ಲಿ ೨೦೨೫ನೇ ಮಾರ್ಚ್ ಅಂತ್ಯದವರೆಗೆ ಕೇಂದ್ರ ಸರ್ಕಾರದಿಂದ ೨೦೨೪-೨೫ನೇ ಸಾಲಿಗೆ ಖಔP ರಲ್ಲಿ ಅನುಮೋದನೆಯಾಗಿರುವ ಒಟ್ಟು ರೂ.೨೭೮.೬೪ ಕೋಟಿಗಳ ಅನುದಾನದಲ್ಲಿ ಭರಿಸಿ ಮುಂದುವರೆಸಲು ಅನುಮೋದನೆ ನೀಡಿದೆ.

೪.ಅರಣ್ಯವಾಸಿಗಳಿಗೆ ಪುನರ್‌ವಸತಿ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸಾರಾಗೋಡು ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿನ ೧೯ ಸ್ವಾಧೀನದಾರರನ್ನು ಸ್ಥಳಾಂತರಿಸಿ, ಪುನರ್ ವಸತಿಗಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹಾದಿಓಣಿ ಗ್ರಾಮದ ಸ.ನಂ.೨೦ ಮತ್ತು ೨೧ರಲ್ಲಿ ಒಟ್ಟು ೩೩-೨೪ ಎಕರೆ/ಗುಂಟೆ ಜಮೀನನ್ನು (ಪ್ರತಿ ಕುಟುಂಬಕ್ಕೆ ೨ ಎಕರೆ ಸಾಗುವಳಿಗಾಗಿ ಹಾಗೂ ೪ ಗುಂಟೆ ವಸತಿಗಾಗಿ) ಉಚಿತವಾಗಿ ಮಂಜೂರಾತಿಗೆ ಅನುಮೋದಿಸಿದೆ.

೫.“ಓದು ಕರ್ನಾಟಕ” ಕ್ಕೆ ಅನುಮೋದನೆ ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ೪ ಮತ್ತು ೫ನೇ ತರಗತಿ ವಿದ್ಯಾರ್ಥಿಗಳಿಗೆ ೨೦೨೪-೨೫ನೇ ಶೈಕ್ಷಣಿಕ ಸಾಲಿನಲ್ಲಿ ಕಲಿಕಾ ಸಾಮಗ್ರಿಗಳನ್ನು ವಿನ್ಯಾಸಗೊಳಿಸಿ, ಮುದ್ರಿಸಿ, ವಿತರಿಸು ಹಾಗೂ ಶಿಕ್ಷಕರಿಗೆ ಅಗತ್ಯ ತರಬೇತಿ ನೀಡುವ ಒಟ್ಟು ರೂ.೧೪.೨೪ ಕೋಟಿಗಳ ಅಂದಾಜು ಮೊತ್ತದ “ಓದು ಕರ್ನಾಟಕ” ಚಟುವಟಿಕೆಗೆ ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದರು. ೪ ಮತ್ತು ೫ನೇ ತರಗತಿಯ ಸರ್ಕಾರಿ ಪ್ರಾಥಮಿಕ ಶಾಲೆಗಳ ಒಟ್ಟು ೧೦,೦೩,೮೨೧ ವಿದ್ಯಾರ್ಥಿಗಳಿಗೆ ನೆರವಾಗುವಂತೆ ಸುಮಾರು ೪೨,೨೫೫ ಶಾಲೆಗಳಿಗೆ ತಲಾ ೩೦ ವಿದ್ಯಾರ್ಥಿಗಳ ಸಂಖ್ಯೆಗೆ ೫೬,೪೪೩ ಕಲಿಕಾ ಸಾಮಗ್ರಿಗಳ ಸೆಟ್‌ಗಳನ್ನು ವಿನ್ಯಾಸಗೊಳಿಸಿ, ಮುದ್ರಿಸಿ “ನಿಪುಣ್ ಭಾರತ್” ಕಾರ್ಯಕ್ರಮದ ಅಡಿಯಲ್ಲಿ ಒದಗಿಸಲಾಗುವುದು.

೬.ಪರಿಶಿಷ್ಟರ ಮೇಲಿನ ದೌರ್ಜನ್ಯಕ್ಕೆ ಪ್ರತ್ಯೇಕ ಪೊಲೀಸ್ ಠಾಣೆ: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ೩೩ ಘಟಕಗಳನ್ನು ವಿಶೇಷ ಪೊಲೀಸ್ ಠಾಣೆಗಳೆಂದು ಘೋಷಿಸಲು ಹಾಗೂ ಸದರಿ ಠಾಣೆಗಳ ನಿರ್ವಹಣೆಗಾಗಿ ಅಗತ್ಯವಿರುವ ೪೫೦ ವಿವಿಧ ಹುದ್ದೆಗಳಿಗೆ ಮಂಜೂರಾತಿಯನ್ನು ನೀಡಿದೆ.

೭.ಮುಧೋಳ ನಗರಕ್ಕೆ ಕೃಷ್ಣಾ ನದಿಯಿಂದ ಕುಡಿಯುವ ನೀರು: ಬಾಗಲಕೋಟೆ ಜಿಲ್ಲೆಯ ಮುಧೋಳ ನಗರಕ್ಕೆ ಗುಳಬಾಳ ಹಳ್ಳಿ ಹತ್ತಿರದ ಕೃಷ್ಣಾ ನದಿ ಮೂಲದಿಂದ ಸುಧಾರಿತ ನೀರು ಸರಬರಾಜು ವ್ಯವಸ್ಥೆ ಒದಗಿಸುವ ರೂ.೧೭೭.೧೦ ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

೮.ಅಧಿವೇಶನ: ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಅಧಿವೇಶನವನ್ನು ಬೆಳಗಾವಿಯಲ್ಲಿ ಡಿಸೆಂಬರ್ ೨ನೇ ವಾರದಲ್ಲಿ ಸಮಾವೇಶಗೊಳಿಸಲು ಪರಿಶೀಲಿಸಲಾಗುತ್ತಿದ್ದು, ದಿನಾಂಕ:, ಸ್ಥಳ ಮತ್ತು ಅಧಿವೇಶನದ ಅವಧಿಯನ್ನು ನಿರ್ಣಯಿಸಲು ಮುಖ್ಯಮಂತ್ರಿಗಳಿಗೆ ಸಚಿವ ಸಂಪುಟ ಅಧಿಕಾರ ನೀಡಿದೆ.

೯.ಮೈಸೂರಲ್ಲಿ ಜಿ.ಟಿ.ಟಿ.ಸಿ: ಮೈಸೂರು ಜಿಲ್ಲೆಯ ವರುಣಾ ಹೋಬಳಿ ಚೋರನಹಳ್ಳಿ ಗ್ರಾಮದಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ಜಿಟಿಟಿಸಿ ಬಹುಕೌಶಲ್ಯಾಭಿವೃದ್ಧಿ ಕೇಂದ್ರವನ್ನು ನಬಾರ್ಡ್ನ ಆರ್.ಐ.ಡಿ.ಎಫ್ ಟ್ರಾಂಚ್-೩೦ ರಡಿ ಅನುಮೋದಿಸಿರುವ ರೂ.೩೫.೦೦ ಕೋಟಿಗಳ ಮೊತ್ತದಲ್ಲಿ ಸ್ಥಾಪಿಸಲು ನಿರ್ಣಯಿಸಲಾಗಿದೆ.

೧೦.ಬೆಂಗಳೂರು-ಬೀದರ್ ವಿಮಾನ ಸಂಚಾರ: ಬೀದರ್ ವಿಮಾನ ನಿಲ್ದಾಣದ ಬೆಂಗಳೂರು – ಬೀದರ್-ಬೆಂಗಳೂರು ಮಾರ್ಗವಾಗಿ ವಿಮಾನಯಾನ ಕಾರ್ಯಾಚರಣೆ ಮಾಡಲು ನಿರ್ಣಯಿಸಲಾಗಿದೆ.

೧೧.ಆದಿಚುಂಚನಗಿರಿ ಸಂಸ್ಥೆಗೆ ಜಮೀನು: ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕು ಮತ್ತು ಟೌನ್‌ನಲ್ಲಿ ಬರುವ ವಿ.ಸಿ ಕಾಲೋನಿಯಲ್ಲಿರುವ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಅಸೆಸ್‌ಮೆಂಟ್ ಸಂಖ್ಯೆ: ೪೭೧ ರಲ್ಲಿನ ೧೨೦*೨೦೦ ಚ.ಅ ಅಳತೆಯ ಜಮೀನನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ನಾಗಮಂಗಲ, ಮಂಡ್ಯ ಜಿಲ್ಲೆ ಇವರಿಗೆ ಮಂಜೂರು ಮಾಡುವ ಬಗ್ಗೆ ಮತ್ತು ವಿ.ಸಿ ಕಾಲೋನಿಯ ಪಕ್ಕದಲ್ಲಿ ಸ.ನಂ.೧೦ ರಲ್ಲಿ ಕಾವೇರಿ ನೀರಾವರಿ ನಿಗಮಕ್ಕೆ ಸೇರಿರುವ ಜಮೀನನ್ನು ಬಿಜಿಎಸ್ ಶಿಕ್ಷಣ ಸಂಸ್ಥೆಯವರು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸದೇ ಆ ಸಂಸ್ಥೆಗೆ ಒದಗಿಸಲು ನಿರ್ಣಯಿಸಲಾಗಿದೆ.
೧೨.ಹಾಸನ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ.

೧೩.ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಿಗೆ ಮೂಲಸೌಕರ್ಯ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಹೊಸದಾಗಿ ಮಂಜೂರು ಮಾಡಿದ ವಿದ್ಯಾರ್ಥಿ ನಿಲಯಗಳಿಗೆ ಮೂಲಭೂತ ಸೌಕರ್ಯಗಳನ್ನು ರೂ.೩೯.೦೭ ಕೋಟಿಗಳ ಮೊತ್ತದಲ್ಲಿ ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ನಿರ್ಣಯಿಸಿದೆ.

೧೪.ರಾಯಚೂರು ವಿಶ್ವವಿದ್ಯಾಲಯಕ್ಕೆ ಮರುನಾಮಕರಣ: ರಾಯಚೂರು ವಿಶ್ವವಿದ್ಯಾಲಯವನ್ನು “ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ” ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

More articles

Latest article