ಇಬ್ಭಾಗಗೊಂಡಿರುವ ರೈತ ಸಂಘಟನೆಗಳನ್ನು ಮತ್ತೆ ಒಗ್ಗೂಡಿಸುವೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ

ರೈತ ದಿನಾಚರಣೆ ಹೊತ್ತಿಗೆ ಇಬ್ಬಾಗಗೊಂಡಿರುವ ರೈತ ಸಂಘಟನೆಗಳನ್ನು ಮತ್ತೆ ಒಂದುಗೂಡಿಸುತ್ತೇನೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದಾರೆ.

ಬೆಸಗರಹಳ್ಳಿ ಸಮೀಪ ರೈತ ಮುಖಂಡರನ್ನು ಭೇಟಿ ಮಾಡಿ ಸಂಘಟನೆ ವಿಚಾರ ಮಾತುಕತೆ ನಡೆಸಿದ ಅವರು, ಸ್ಥಳೀಯ ರೈತ ನಾಯಕರ ಕೆಲವೊಂದು ಭಿನ್ನಾಭಿಪ್ರಾಯಗಳಿಂದ ರೈತ ಸಂಘಟನೆಯಲ್ಲಿ ಗೊಂದಲ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಇಬ್ಬಾಗವಾಗಿರುವ ಎಲ್ಲಾ ರೈತ ಸಂಘಗಳನ್ನು ಒಂದುಗೂಡಿಸಲು ಮುಂದಾಗಿದ್ದೇಬಮನೆ. ರೈತರ ನಾಯಕರೊಂದಿಗೆ ಮಾತುಕತೆ ನಡೆಸಿ ಬಲ ತುಂಬುವ ಕೆಲಸ ಮಾಡಲಾಗುವುದು ಎಂದು ಹೇಳಿದ್ದಾರೆ.

ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ರೈತ ಮುಖಂಡರು ಕಾರ್ಯಕರ್ತರ ಸಭೆ ನಡೆಸಿ ಒಂದೇ ವೇದಿಕೆಯಲ್ಲಿ ಕರೆತರುವ ಪ್ರಯತ್ನ ನಡೆಸಲಾಗುತ್ತಿದೆ. ರೈತ ದಿನಾಚರಣೆ ವೇಳೆಗೆ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಎಂದು ಭರವಸೆ ನೀಡಿದ್ದಾರೆ.

More articles

Latest article

Most read