ಬೆಳಗಾವಿ: ಬೆಳಗಾವಿ ಪೊಲೀಸರು ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು JMFC ಕೋರ್ಟ್ ಗೆ ಹಾಜರುಪಡಿಸಿದ್ದಾರೆ. JMFC ಕೋರ್ಟ್ ನ್ಯಾಯಾಧೀಶರಾದ ಸ್ಪರ್ಶ ಎಂ.ಡಿಶೋಜಾ ವಿಚಾರಣೆ ನಡೆಸುತ್ತಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಸಿ.ಟಿ.ರವಿ ಪರವಾಗಿ ವಕೀಲ ಎಂ.ಪಿ.ಝಿರಲಿ ವಾದ ಮಂಡಿಸುತ್ತಿದ್ದಾರೆ. ಸಿ.ಟಿ.ರವಿ ಪರ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿದೆ. ಬಿಜೆಪಿ ನಾಯಕರು ಸಿ.ಟಿ.ರವಿ ಪಕ್ಕದಲ್ಲೇ ಕುಳಿತಿದ್ದಾರೆ.
ಸಿ.ಟಿ.ರವಿ ನ್ಯಾಯಾಧೀಶರಿಗೆ ಕೈ ಮುಗಿದು ನಿಂತಿದ್ದಾರೆ. ನ್ಯಾಯಾಧೀಶರು ರವಿ ಅವರ ವಯಸ್ಸು ಕೇಳಿದಾಗ ನನ್ನ ವಯಸ್ಸು 58 ವರ್ಷ, ನನ್ನ ಊರು ಚಿಕ್ಕಮಗಳೂರು ಎಂದು ಕೈಮುಗಿದುಕೊಂಡು ಉತ್ತರಿಸಿದ್ದಾರೆ.
ನನ್ನನ್ನು 3 ಜಿಲ್ಲೆಗಳಲ್ಲಿ ಸುತ್ತಾಡಿಸಿದ್ದಾರೆ. ಬೆಳಗಾವಿ, ಧಾರವಾಡ, ಬಾಗಲಕೋಟೆಯಲ್ಲಿ ಸುತ್ತಾಡಿಸಿದ್ದಾರೆ. ಇಲ್ಲಿಗೆ ಬರುವವರೆಗೂ ನಿಗೂಢ ಜಾಗಕ್ಕೆ ಕರೆದೊಯ್ಯುತ್ತಿದ್ದರು. ಕ್ರಶರ್ ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿದ್ದರು. ಪೊಲೀಸರು ಬೇಕೆಂದೇ ಹಿಂಸೆ ಕೊಟ್ಟಿದ್ದಾರೆ ರವಿ ವಿವರಣೆ ನೀಡಿದ್ದಾರೆ. ಪೊಲೀಸರಿಂದ ನನ್ನ ಮೇಲೆ ಹಲ್ಲೆಯಾಗಿದೆ. ಖಾನಾಪುರ ಠಾಣೆಯಲ್ಲಿ ಹಲ್ಲೆ ನಡೆಸಿದ್ದಾರೆ. ನಾನು ಕೇಳಿಕೊಂಡರೂ ಪೊಲೀಸರು ಹೇಳಿಲ್ಲ. ನನ್ನ ಕುಟುಂಬಕ್ಕೂ ಮಾಹಿತಿ ನೀಡಿಲ್ಲ. ಯಾವ ಕಾರಣಕ್ಕೆ ನನ್ನ ಬಂಧಿಸಿದ್ದಾರೆ ಎಂದೂ ಪೊಲೀಸರು ಹೇಳಿದ್ದಾರೆ.
ನಂತರ ಜಾಮೀನು ನೀಡುವಂತೆ ರವಿ ಪರ ವಕೀಲರು ಮನವಿ ಮಾಡಿಕೊಂಡರು. ಜಾಮೀನು ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ. ವಿಚಾರಣೆ ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದೆ. ಮಧ್ಯಾಹ್ನ ಸಿ.ಟಿ.ರವಿ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.