ಆರೋಗ್ಯಕರ ಹಸು ಮತ್ತು ಎತ್ತುಗಳ ಮೂತ್ರದಲ್ಲೂ 14 ವಿಧದ ಹಾನಿಕಾರಕ ಬ್ಯಾಕ್ಟೀರಿಯಾಗಳು ಪತ್ತೆ
ಇಶೆರಿಶಿಯಾ ಕೋಲಿ ಸೇರಿದಂತೆ ಸೋಂಕು ಉಂಟುಮಾಡುವ ಜೀವಾಣುಗಳ ಉಪಸ್ಥಿತಿ
ಎಮ್ಮೆ ಮೂತ್ರವು ಕೆಲವು ಬ್ಯಾಕ್ಟೀರಿಯಾಗಳ ಮೇಲೆ ಹೆಚ್ಚು ಪರಿಣಾಮಕಾರಿ.
ಬರೇಲಿ: ತಾಜಾ ಗೋಮೂತ್ರದಲ್ಲಿ ಮಾನವ ಆರೋಗ್ಯಕ್ಕೆ ಹಾನಿಕಾರಕವಾಗುವ ಬ್ಯಾಕ್ಟೀರಿಯಾಗಳು ಇರುವ ಸಾಧ್ಯತೆ ಇದೆ. ಆದ್ದರಿಂದ ಅದನ್ನು ನೇರವಾಗಿ ಸೇವಿಸುವುದು ಸುರಕ್ಷಿತವಲ್ಲ ಎಂದು ಬರೇಲಿ ಕೇಂದ್ರವಾಗಿರುವ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (IVRI) ನಡೆಸಿದ ಅಧ್ಯಯನವು ತಿಳಿಸಿದೆ.
ಈ ಅಧ್ಯಯನವನ್ನು ಸಂಸ್ಥೆಯ ವಿಜ್ಞಾನಿ ಭೋಜ್ ರಾಜ್ ಸಿಂಗ್ ಅವರ ನೇತೃತ್ವದಲ್ಲಿ ಮೂವರು ಪಿಎಚ್‌ಡಿ ವಿದ್ಯಾರ್ಥಿಗಳೊಂದಿಗೆ ನಡೆಸಲಾಗಿದ್ದು, ಆರೋಗ್ಯಕರ ಹಸುಗಳು ಮತ್ತು ಎತ್ತುಗಳಿಂದ ಸಂಗ್ರಹಿಸಿದ ಮೂತ್ರದ ಮಾದರಿಗಳಲ್ಲಿ ಕನಿಷ್ಠ 14 ವಿಧದ ಹಾನಿಕಾರಕ ಬ್ಯಾಕ್ಟೀರಿಯಾಗಳು ಕಂಡುಬಂದಿವೆ. ಅವುಗಳಲ್ಲಿ ಇಶೆರಿಶಿಯಾ ಕೋಲಿ (ಇ. ಕೋಲಿ -E. coli) ಕೂಡ ಸೇರಿದ್ದು, ಇದು ಸಾಮಾನ್ಯವಾಗಿ ಹೊಟ್ಟೆಯ ಸೋಂಕುಗಳಿಗೆ ಕಾರಣವಾಗುತ್ತದೆ ಎಂದು ವರದಿ ಹೇಳಿದೆ.
ಇನ್ನೊಂದು ಪ್ರಮುಖ ಸಂಗತಿ ಎಂದರೆ, ಎಮ್ಮೆ ಮೂತ್ರವು ಕೆಲವು ಬ್ಯಾಕ್ಟೀರಿಯಾಗಳ ವಿರುದ್ಧ ಹೆಚ್ಚು ಪರಿಣಾಮಕಾರಿ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಆರೋಗ್ಯಕರ ಹಸು ಮತ್ತು ಎತ್ತುಗಳ ಮೂತ್ರದಲ್ಲೂ 14 ವಿಧದ ಹಾನಿಕಾರಕ ಬ್ಯಾಕ್ಟೀರಿಯಾಗಳು ಇಶೆರಿಶಿಯಾ ಕೋಲಿ ಸೇರಿದಂತೆ ಸೋಂಕು ಉಂಟುಮಾಡುವ ಜೀವಾಣುಗಳ ಉಪಸ್ಥಿತಿ ಇರುವುದನ್ನು ಅಧ್ಯಯನವು ಹೊರಹಾಕಿದೆ. ಎಮ್ಮೆ ಮೂತ್ರವು ಕೆಲವು ಬ್ಯಾಕ್ಟೀರಿಯಾಗಳ ಮೇಲೆ ಹೆಚ್ಚು ಪರಿಣಾಮಕಾರಿ ಎಂದೂ ಅದು ಹೇಳಿದೆ.
ಇದಕ್ಕೆ ಸಂಬಂಧಿಸಿದಂತೆ, ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (Indian Veterinary Research Institute) ಯ ಮಾಜಿ ನಿರ್ದೇಶಕ ಆರ್.ಎಸ್. ಚೌಹಾನ್ ಅವರು, “ಡಿಸ್ಟಿಲ್ ಮಾಡಿದ ಗೋಮೂತ್ರವು ಮಾನವನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಎಂಬುದನ್ನು ನಾವು ಕಂಡಿದ್ದೇವೆ. ಆದರೆ ಈ ಅಧ್ಯಯನದಲ್ಲಿ ಡಿಸ್ಟಿಲ್ ಮಾಡಿದ ಮೂತ್ರವನ್ನು ಬಳಸಲಾಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸಂಶೋಧನೆಯ ಫಲಿತಾಂಶಗಳನ್ನು ಆನ್‌ಲೈನ್ ವೇದಿಕೆ ‘ರಿಸರ್ಚ್‌ಗೇಟ್’ನಲ್ಲಿ ಪ್ರಕಟಿಸಲಾಗಿದೆ. ಭೋಜ್ ರಾಜ್ ಸಿಂಗ್ ಅವರು ಸಂಸ್ಥೆಯ ಎಪಿಡೆಮಿಯಾಲಜಿ ವಿಭಾಗದ ಮುಖ್ಯಸ್ಥರಾಗಿದ್ದಾರೆ.


