ಲಂಚ ಪ್ರಕರಣಗಳಲ್ಲಿ ಸಂಸದರು, ಶಾಸಕರಿಗೆ ವಿನಾಯಿತಿ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪು

Most read

ಭಾಷಣ ಅಥವಾ ಮತಗಳಿಗಾಗಿ ಲಂಚ ನೀಡುವ ಪ್ರಕರಣಗಳಲ್ಲಿ ಸಂಸದರು ಮತ್ತು ಶಾಸಕರಿಗೆ ಕಾನೂನು ಕ್ರಮದಿಂದ ವಿನಾಯಿತಿ ನೀಡುವ ಹಿಂದಿನ ಆದೇಶವನ್ನು ಸುಪ್ರೀಂ ಕೋರ್ಟ್ ‌ನ ಏಳು ನ್ಯಾಯಾಧೀಶರ ಸಂವಿಧಾನ ಪೀಠ ಸೋಮವಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಪಿ.ವಿ.ನರಸಿಂಹ ಅವರ ತೀರ್ಪನ್ನು ನಾವು ಒಪ್ಪುವುದಿಲ್ಲ. ಮತ ಚಲಾಯಿಸಲು ಅಥವಾ ಭಾಷಣ ಮಾಡಲು ಲಂಚ ನೀಡಿದ ಆರೋಪದ ಮೇಲೆ ಶಾಸಕರಿಗೆ ಮತ್ತು ಸಂಸದರಿಗೆ ವಿನಾಯಿತಿ ನೀಡುವ ಪಿ.ವಿ.ನರಸಿಂಹ ಪ್ರಕರಣದ ತೀರ್ಪುನ್ನು ನಾವು ಒಪ್ಪುವುದಿಲ್ಲ. ಇದರಿಂದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸಿಜೆಐ ಡಿ.ವೈ.ಚಂದ್ರಚೂಡ್ ಹೇಳಿದರು.

ಸಂಸತ್ತಿನ ಅಥವಾ ರಾಜ್ಯ ವಿಧಾನಸಭೆಯ ಕಲಾಪಗಳಲ್ಲಿ ಭಾಷಣಗಳು ಅಥವಾ ಮತಗಳಿಗಾಗಿ ಲಂಚಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಂಸತ್ ಸದಸ್ಯರು (ಸಂಸದರು) ಮತ್ತು ವಿಧಾನಸಭೆ ಸದಸ್ಯರು (ಶಾಸಕರು) ಕಾನೂನು ಕ್ರಮದಿಂದ ವಿನಾಯಿತಿ ಪಡೆಯಲು ಸಾಧ್ಯವೇ ಎಂದು ಕೇಳಿತ್ತು.

ಲಂಚವು ಎಂದಿಗೂ ವಿನಾಯಿತಿಯ ವಿಷಯವಾಗಲು ಸಾಧ್ಯವಿಲ್ಲ ಮತ್ತು ಸಂಸದ, ಒಬ್ಬ ಶಾಸಕನನ್ನು ಕಾನೂನಿಗಿಂತ ದೊಡ್ಡವರಲ್ಲ ಎಂದು ಕೇಂದ್ರವು ಹೇಳಿತ್ತು. ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್ ಮತ್ತು ಅಮಿಕಸ್ ಕ್ಯೂರಿ ಪಿ.ಎಸ್.ಪಟ್ವಾಲಿಯಾ ಸೇರಿದಂತೆ ವಕೀಲರ ತಂಡವು ಎರಡು ದಿನಗಳ ಸುದೀರ್ಘ ವಾದಗಳನ್ನು ಮಂಡಿಸಿದ ನಂತರ ತೀರ್ಪನ್ನು ಕಾಯ್ದಿರಿಸಲಾಗಿತ್ತು. ಈಗ ಈ ತೀರ್ಪನ್ನು ಪ್ರಕಟಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ, ಎಂ.ಎಂ.ಸುಂದರೇಶ್, ಪಿ.ಎಸ್.ನರಸಿಂಹ, ಜೆ.ಬಿ.ಪರ್ಡಿವಾಲ, ಸಂಜಯ್ ಕುಮಾರ್ ಮತ್ತು ಮನೋಜ್ ಮಿಶ್ರಾ ಇದ್ದರು.

More articles

Latest article