Saturday, July 27, 2024

ಮಂಗಳೂರು | ಕಾಲೇಜಿಗೆ ತೆರಳುತ್ತಿದ್ದ ಮೂವರು ವಿದ್ಯಾರ್ಥಿನಿಯರ ಮೇಲೆ ಆಸಿಡ್‌ ದಾಳಿ : ವ್ಯಕ್ತಿ ಬಂಧನ!

Most read

ಧರ್ಮ ದಂಗಲ್, ಹಿಜಾಬ್ ಗಲಾಟೆ, ಕೋಮು ದ್ವೇಷ ಎಂಬ ಸುದ್ದಿಗಳು ಬಂದಾಗೆಲ್ಲ ಮೊದಲು ಸುದ್ದಿಯಾಗುವುದೆ ಬಿಜೆಪಿಯ ಪ್ರಯೋಗ ಶಾಲೆ ಮಂಗಳೂರು. ಈಗ ಮಂಗಳೂರು ಮತ್ತೆ ಸುದ್ದಿಯಲ್ಲಿದೆ, ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ ಮಾಡಿ ಪರಾರಿಯಾಗಿದ್ದಾರೆ.

ದಕ್ಷಿಣ ಕನ್ನಡದ ಕಡಬದ ಸರಕಾರಿ ಕಾಲೇಜಿನ ಬಳಿ ಮೂವರು ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ ನಡೆದಿದೆ. ಮಾಸ್ಕ್ ಮತ್ತು ಟೋಪಿ ಹಾಕಿಕೊಂಡು ಬಂದ ಆರೋಪಿಯು ಕಾಲೇಜಿಗೆ ತೆರಳುತ್ತಿದ್ದ ಮೂವರು ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ ಮಾಡಿದ್ದಾನೆ.

ಆಸಿಡ್ ದಾಳಿಗೆ ಒಳಗಾಗಿರುವ ಮೂವರನ್ನು ಅಲೀನಾ, ಅರ್ಚನಾ, ಅಮೃತ ಎಂದು ಗುರುತಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.

ಆರೋಪಿಯು ಕೇರಳ ಮೂಲದವನಾಗಿದ್ದು, ಆತನನ್ನು ಅಬೀನ್ ಎಂದು ಗುರುತಿಸಲಾಗಿದೆ. ಈಗಾಗಲೇ ಆತನನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಕೃತ್ಯಕ್ಕೆ ಕಾರಣವೇನು ಎಂಬುದನ್ನು ವಿಚಾರಣೆ ನಂತರ ತಿಳಿದುಬರಲಿದೆ.

More articles

Latest article