Saturday, July 27, 2024

ಪ್ಯಾರಾ ಒಲಿಂಪಿಕ್ಸ್ ‌ನಲ್ಲಿ ಚಿನ್ನ ಗೆದ್ದ ಅಥ್ಲೀಟ್‌ಗೆ ಲೋಕಸಭಾ ಟಿಕೆಟ್ ನೀಡಿದ ಬಿಜೆಪಿ

Most read

ಲೋಕಸಭಾ ಚುನಾವಣೆ 2024ಕ್ಕೆ ಬಿಜೆಪಿಯಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬಿಜೆಪಿ ಹಿರಿಯ ಪ್ಯಾರಾ-ಅಥ್ಲೀಟ್ ದೇವೇಂದ್ರ ಝಜಾರಿಯಾ ಅವರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.

ಆಡಳಿತಾರೂಢ ಭಾರತೀಯ ಜನತಾ ಪಕ್ಷ (BJP) ಮಾರ್ಚ್ 2 ರ ಶನಿವಾರದಂದು ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ವಿವಿಧ ರಾಜ್ಯಗಳ 195 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.

ಇನ್ನು ಕೆಲವೇ ದಿನಗಳಲ್ಲಿ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಗಳ ಹೆಸರನ್ನು ಹಂತಹಂತವಾಗಿ ಘೋಷಿಸುತ್ತಿವೆ.

ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ ಅಳೆದು ತೂಗಿ ಅರ್ಹರಿಗೆ ಟಿಕೆಟ್ ನೀಡುವ ಕೆಲಸ ಮಾಡಿದೆ. ಈ ಮೊದಲು ಹಲವು ಕ್ರಿಕೆಟಿಗರ ಹೆಸರುಗಳು ಚರ್ಚೆಯಾಗುತ್ತಿದ್ದವು. ಆದರೆ ಬಿಜೆಪಿ ಹಿರಿಯ ಪ್ಯಾರಾ-ಅಥ್ಲೀಟ್ ದೇವೇಂದ್ರ ಝಜಾರಿಯಾ ಅವರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.

ಸತತ ಮೂರನೇ ಬಾರಿಗೆ ಸರ್ಕಾರ ರಚಿಸುವ ಉದ್ದೇಶದಿಂದ ಈ ಬಾರಿ ಲೋಕಸಭೆ ಚುನಾವಣೆಯನ್ನು ಗೆಲ್ಲುವ ರಣತಂತ್ರವನ್ನು ಮಾಡಿದೆ. ಕಾಂಗ್ರೆಸ್ ಕೂಡ ಆಡಳಿತಾರೂಢ ಬಿಜೆಪಿಯ ಸುಳ್ಳು ಬರವಣಿ, ಭಾಷಣಗಳನ್ನು ಜನರ ಬಳಿ ಮುಂದಿರಿಸಿ, ಗ್ಯಾರಂಟಿ ಯೋಜನೆಗಳ ಮೇಲೆ ಮತ ಸೆಳೆಯುತ್ತಿದೆ.

ದೇವೇಂದ್ರ ಝಜಾರಿಯಾ ಪದ್ಮಭೂಷಣ ಪಡೆದ ಮೊದಲ ಪ್ಯಾರಾ ಅಥ್ಲೀಟ್

ದೇವೇಂದ್ರ ಜಜಾರಿಯಾ ಅವರು ಹಲವು ಬಾರಿ ಪ್ಯಾರಾಲಿಂಪಿಕ್ಸ್ ಪದಕ ವಿಜೇತರಾಗಿದ್ದಾರೆ, 2004 ರ ಅಥೆನ್ಸ್‌ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ತಮ್ಮ ಚೊಚ್ಚಲ ಚಿನ್ನವನ್ನು ಗೆದ್ದಿದ್ದರು, 2016 ರಲ್ಲಿ ರಿಯೊ ಗೇಮ್ಸ್‌ನಲ್ಲಿ ಅವರ ಎರಡನೇ ಚಿನ್ನದ ಪದಕ ಮತ್ತು ಕಳೆದ ವರ್ಷ 2020 ಟೋಕಿಯೊ ಆವೃತ್ತಿಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

ಭಾರತೀಯ ಪ್ಯಾರಾಲಿಂಪಿಕ್ ಜಾವೆಲಿನ್ ಎಸೆತಗಾರ ದೇವೇಂದ್ರ ಜಜಾರಿಯಾ ಅವರಿಗೆ ಕ್ರೀಡಾ ಕ್ಷೇತ್ರದಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಮಾರ್ಚ್ 21 2022ರಲ್ಲಿ ನೀಡಲಾಯ್ತು.

More articles

Latest article