ರಾಜ್ಯಕ್ಕೆ ಬಂದ ಮೋದಿಗೆ ಗೋ ಬ್ಯಾಕ್ ಬಿಸಿ ಮುಟ್ಟಿಸಿದ ಕಾಂಗ್ರೆಸ್

Most read

ಬೆಂಗಳೂರು: ಹೆಚ್ಚಿನ ಬರ ಪರಿಹಾರಕ್ಕೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಆಯೋಜನೆ ಮಾಡಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಕಂದಾಯ ಸಚಿವ ಕೃಷ್ಣಬೈರೇಗೌಡ, ಎಂಸಿ ಸುಧಾಕರ್, ದಿನೇಶ್ ಗುಂಡೂರಾವ್, ಚಲುವರಾಯಸ್ವಾಮಿ, ಕೆ.ಎಚ್. ಮುನಿಯಪ್ಪ, ಡಾ.ಜಿ ಪರಮೇಶ್ವರ್, ರಾಜೀವ್‌ಗೌಡ, ರಿಜ್ವಾನ್ ಅರ್ಷದ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದಾರೆ.

ಬರ ಪರಿಹಾರದಲ್ಲಿ ಕರ್ನಾಟಕಕ್ಕೆ ಮೋಸ ಮಾಡಿದ ಬಿಜೆಪಿಗೆ ಧಿಕ್ಕಾರ ಕೂಗಿದ್ದು, ರಾಜ್ಯಕ್ಕೆ ಚೊಂಬಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಚೊಂಬು ಪ್ರತಿಭಟನೆ ಮುಂದುವರಿಕೆ ಮಾಡಿದ್ದಾರೆ. ಹೆಚ್ಚಿನ ಬರ ಪರಿಹಾರಕ್ಕೆ ಒತ್ತಾಯಿಸಿ ಚೊಂಬು ಪ್ರತಿಭಟನೆ ನಡೆಸುತ್ತಿದ್ದಾರೆ. ಚೊಂಬು ಹಿಡಿದು ಘೋಷಣೆ ಕೂಗಿದ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕೈ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಜ್ಯಕ್ಕೆ ಪ್ರಧಾನಮಂತ್ರಿ ಮೋದಿ ಆಗಮನದ ಹಿನ್ನೆಲೆ, ಪಿಎಂ ಮೋದಿಗೆ ಕಾಂಗ್ರೆಸ್ ನಿಂದ ಚೊಂಬಿನ ಸ್ವಾಗತ ಕೋರಿದ್ದಾರೆ. ಗೋ ಬ್ಯಾಕ್ ಮೋದಿ ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ದಾರೆ. ಕೊಡಿ ಕೊಡಿ ನ್ಯಾಯ ಕೊಡಿ ಎಂದು ಸುರ್ಜೆವಾಲ ಕನ್ನಡದಲ್ಲಿ ಘೋಷಣೆ ಕೂಗಿದ್ದಾರೆ. ಮೇಕೆದಾಟು ಅನುಮತಿ ಕೊಡದ, ಮಹಾದಾಯಿಗೆ ಕೊಕ್ಕೆ ಹಾಕಿದ ಬಿಜೆಪಿಗೆ ಧಿಕ್ಕಾರ ಕೂಗಿದ್ದಾರೆ. ಮೋಸ ಮೋಸ ಬಿಜೆಪಿಯ ಮೋಸ, ಕೊಡಿ ರೈತರಿಗೆ ನ್ಯಾಯ ಕೊಡಿ, ಪೂರ್ತಿ ಪರಿಹಾರ ಕೊಡಿ ಎಂದು ಘೋಷಣೆ ಕೂಗಿದ ಜೊತೆಗೆ ಕರ್ನಾಟಕಕ್ಕೆ ಅನ್ಯಾಯ ಮಾಡಿದ ಮೋದಿ ಗೋ ಬ್ಯಾಕ್ ಘೋಷಣೆಯು ಕೂಗಿದ್ದಾರೆ. ಚೊಂಬು ಕೊಟ್ಟ ಮೋದಿ ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದು, ನಮ್ಮ ಕಷ್ಟಕ್ಕೆ ನವೆಂಬರ್, ಸೆಪ್ಟೆಂಬರ್ ಮನವಿ ಸಲ್ಲಿಸಿದ್ದೇವು. ಅಲ್ಲಿಂದ ಇಲ್ಲಿಯವರೆಗೆ 50 ಸಾವಿರ ಕೋಟಿ ನಷ್ಟ ಆಗಿದೆ. ನಾವೇನು ಭೀಕ್ಷೆ ಕೇಳುತ್ತಿದ್ದೇವಾ. ನಮಗೆ, ಸಿದ್ದರಾಮಯ್ಯರಿಗಾಗಿ ಹಣ ಕೇಳುತ್ತಿದ್ದೇವಾ‌‌. ರಾಜ್ಯಕ್ಕೆ ಬಿಜೆಪಿ, ಜೆಡಿಎಸ್ ಮುಖಂಡರು ದ್ರೋಹ ಮಾಡಿದ್ದಾರೆ. ಬಿಜೆಪಿ- ಜೆಡಿಎಸ್ ನವರು ರಾಜ್ಯ ದ್ರೋಹಿಗಳು ಎಂದು ಕಿಡಿಕಾರಿದ್ದಾರೆ.

More articles

Latest article