ಎರಡೂ ರಾಜ್ಯಗಳಲ್ಲೂ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಎಕ್ಸಿಟ್ ಪೋಲ್ ಹೇಳಿದೆ. ಅದರಂತೆ ನಾವು 50ಕ್ಕೂ ಹೆಚ್ಚು ಸೀಟ್ ಗೆದ್ದು ಸರ್ಕಾರ ರಚಿಸಲಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾತಾನಡಿದ ಅವರು, ಜನರು ಬದಲಾವಣೆ ಕೇಳಿದ್ದಾರೆ. ಅವರೇ ಬದಲಾವಣೆಗೆ ನಾಂದಿ ಹಾಡಿದ್ದಾರೆ. ಅದಕ್ಕೆ ಈ ಬಾರಿ ಹರಿಯಾಣದಲ್ಲಿ ಬದಲಾವಣೆಯಾಗುತ್ತದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಬಿಜೆಪಿಯರ ಕುತಂತ್ರ ಉಲ್ಟಾ ಆಗಿದೆ. ನಮ್ಮ ಕಾಂಗ್ರೆಸ್ ಮತ್ತು ಹಾಗೂ ಎಸ್ ಸಿ ಪಕ್ಷ ಮೈತ್ರಿಯಿಂದ ಅಲ್ಲಿ ಸರ್ಕಾರ ರಚಿಸಲಿದೆ. ಅಲ್ಲಿಯೂ ನಾವು ಬಹುಮತ ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ನಾವು ಗ್ಯಾರಂಟಿ ಯೋಜನೆಯಲ್ಲಿ ಬಡವರನ್ನು ಮೇಲೆತ್ತುವ ಉದ್ದೇಶದಿಂದ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಮೊದ ಮೊದಲು ಇದನ್ನು ಬಿಜೆಪಿಯವರು ವಿರೋಧ ಮಾಡಿದ್ರು. ಯಾವಾಗ ಇದು ಜನಕ್ಕೆ ಉಪಯೋಗ ಆಗುತ್ತೆ ಅಂತ ಗೊತ್ತಾಯ್ತು ಅವರು ಕೂಡ ಬೇರೆ ರಾಜ್ಯಗಳಿಗೆ ಆಶ್ವಾಸನೆ ಕೊಡಲು ಶುರು ಮಾಡಿದ್ರು. ಈಗ ಅದನ್ನ ಮಾಡಿದ್ದಾರ ನೋಡಬೇಕು. ಆದರೆ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹೇಳಿದನ್ನು ನಡೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.