ಉಪ ಚುನಾವಣೆ | ದಾವಣಗೆರೆ ದಕ್ಷಿಣ ಮತಕ್ಷೇತ್ರ; ಮುಸ್ಲಿಂ ಸಮುದಾಯದ ಪಾತ್ರ

ಚುನಾವಣೆ ಎನ್ನುವುದು ರಾಜಕೀಯದ ಚದುರಂಗದಾಟ. ಆಟದ ಯಜಮಾನಿಕೆಯನ್ನು ಸೂತ್ರಧಾರರ ಕೈಗೊಪ್ಪಿಸಿದರೆ ಮುಸ್ಲಿಂ ಸಮುದಾಯ ಕೇವಲ ಅವರಾಡಿಸಿದಂತೆ ಆಡುವ ಪಾತ್ರಧಾರಿಗಳಾಗುತ್ತಾರೆ. ನಮ್ಮ ಸಂಖ್ಯಾಬಲ ಹೆಚ್ಚಿದ್ದಲ್ಲಿ ನಾವೇ ಸೂತ್ರಧಾರರು ಎಂಬುದನ್ನು ಸಾಬೀತು ಪಡಿಸುವವರೆಗೂ ಮುಸ್ಲಿಂ ಸಮುದಾಯವನ್ನು ಬೇರೆಯವರು ಬಳಸಿಕೊಳ್ಳುತ್ತಾರೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಶಾಮನೂರು ಶಿವಶಂಕರಪ್ಪನವರ ನಿಧನದಿಂದಾಗಿ ದಾವಣಗೆರೆ ದಕ್ಷಿಣ ಮತಕ್ಷೇತ್ರದಲ್ಲಿ ಉಪಚುನಾವಣೆ ಘೋಷಣೆಯಾಗಿದೆ. 80 ಸಾವಿರಕ್ಕೂ ಹೆಚ್ಚು ಮುಸ್ಲಿಂ ಮತದಾರರಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿಗೆ ಅವಕಾಶ ಕೊಡಬೇಕೆಂಬುದು ಮುಸ್ಲಿಂ ಸಮುದಾಯದವರ ಬೇಡಿಕೆಯಾಗಿತ್ತು. ಆ ಭರವಸೆ ಮೇರೆಗೆ ಸಾಧಿಕ್ ಪೈಲ್ವಾನ್ ಉಮೇದುವಾರಿಕೆ ಫೈಲ್ ಮಾಡಿದ್ದರು. ಎಲ್ಲಿ ಪೈಲ್ವಾನರಿಗೆ ಕಾಂಗ್ರೆಸ್ ಟಿಕೆಟ್ ಕೊಡುತ್ತದೋ ಎನ್ನುವ ಆತಂಕದಿಂದ ಬಿ ಫಾರಂ ಸಿಗುವ ಮೊದಲೇ ಶ್ಯಾಮನೂರುರವರ ಕುಟುಂಬ ಅವರ ಮೊಮ್ಮಗ ಸಮರ್ಥ ಹೆಸರಲ್ಲಿ ನಾಮಿನೇಶನ್ ಫೈಲ್ ಮಾಡಿತು.

ಕೊನೆಗೂ ಒತ್ತಡಕ್ಕೆ ಮಣಿದ ಕಾಂಗ್ರೆಸ್ ಸಮರ್ಥ ಉಮೇದುವಾರಿಕೆಯನ್ನು ಸಮರ್ಥಿಸಿಕೊಂಡಿತು ಹಾಗೂ ದೇವರೇ ಬಂದರೂ ಹಿಂದೆ ಸರಿಯುವುದಿಲ್ಲ ಎಂದಿದ್ದ ಪೈಲ್ವಾನರನ್ನು ಸಿದ್ದರಾಮಯ್ಯನವರು ಹಿಂದೆ ಸರಿಸಿದರು.

ಈಗ ಮುಸಲ್ಮಾನ ಸಮುದಾಯದವರು ಚುನಾವಣೆಯಲ್ಲಿ ಯಾರ ಪರವಾಗಿ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವ ಗೊಂದಲದಲ್ಲಿದ್ದಾರೆ. ಅತೀ ಹೆಚ್ಚು ಮತದಾರರಿರುವ ತಮ್ಮ ಸಮುದಾಯಕ್ಕೆ ಅವಕಾಶ ಕೊಡದೇ ವಂಚಿಸಲಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಮುಸಲ್ಮಾನರು ಅಸಹನೆ ಹೊರಗೆ ಹಾಕುತ್ತಿದ್ದಾರೆ. ಚುನಾವಣಾ ಕಣದಿಂದ ಹಿಂದೆ ಸರಿದ ಸಾಧಿಕ್ ಪೈಲ್ವಾನ್ ಮೇಲೆ ಸಿಟ್ಟಾಗಿದ್ದಾರೆ. ಕಾಂಗ್ರೆಸ್ ನಮ್ಮ ಸಮುದಾಯವನ್ನು ಕೇವಲ ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ ಎಂಬ ಆಕ್ರೋಶ ಮುಸ್ಲಿಮರಲ್ಲಿದೆ.

ಈಗ ಮುಸಲ್ಮಾನರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದೇ ಕುತೂಹಲಕಾರಿ ಸಂಗತಿ. ಮುಸ್ಲಿಂ ವಿರೋಧಿ ನಿಲುವನ್ನು ಹೊಂದಿರುವ ಬಿಜೆಪಿಗೆ ಮತ ಚಲಾಯಿಸಲು ಸಾಧ್ಯವಿಲ್ಲ. ಕಳೆದ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಇರುತ್ತಿದ್ದುದರಿಂದ ಮುಸಲ್ಮಾನರಿಗೆ ಮತ ಚಲಾಯಿಸಲು ಕಾಂಗ್ರೆಸ್ಸೇತರ ಪರ್ಯಾಯವಿತ್ತು. ಆದರೆ ಯಾವಾಗ ಜಾತ್ಯತೀತ ಬ್ರ್ಯಾಂಡಿನ ಜೆಡಿಎಸ್ ಹೋಗಿ ಕೋಮುವಾದಿ ಬ್ರ್ಯಾಂಡಿನ ಬಿಜೆಪಿ ಜೊತೆ ಕೂಡಿಕೆ ಮಾಡಿಕೊಂಡಿತೋ ಆಗ ಮುಸಲ್ಮಾನರು ಜೆಡಿಎಸ್ ಸಾಂಗತ್ಯವನ್ನು ತೊರೆದಾಗಿತ್ತು. ಈಗ ಕಾಂಗ್ರೆಸ್ ಬಿಟ್ಟರೆ ಮುಸಲ್ಮಾನರಿಗೆ ಬೇರೆ ಯಾವ ಆಯ್ಕೆ ಇದೆ?

ಇದೇ ಕಾರಣಕ್ಕೆ ಕಾಂಗ್ರೆಸ್ ಮುಸಲ್ಮಾನರನ್ನು “ಟೇಕ್ ಇಟ್ ಆಸ್ ಗ್ರ್ಯಾಂಟೆಡ್” ಎನ್ನುವಂತೆ ಪರಿಗಣಿಸಿದೆಯಾ? ಹೇಗೂ ಮುಸ್ಲಿಮರು ಬಿಜೆಪಿಗೆ ಮತ ಹಾಕುವುದಿಲ್ಲ ಎನ್ನುವ ಕಾನ್ಫಿಡೆನ್ಸ್ ಮೇಲೆ ಮುಸ್ಲಿಂ ಅಭ್ಯರ್ಥಿಗೆ ಅವಕಾಶ ಕೊಡಲಿಲ್ವಾ? ಶಾಮನೂರು ಕುಟುಂಬದ ಪ್ರಭಾವವನ್ನು ಎದುರಿಸಲಾರದೇ ಮುಸಲ್ಮಾನರನ್ನು ಹೇಗೋ ಸಮಾಧಾನಪಡಿಸಬಹುದು ಎನ್ನುವುದು ಕಾಂಗ್ರೆಸ್ ವಿಚಾರವಾ? ಬಿಜೆಪಿ ಎಸ್ಟಿ ಸಮುದಾಯದವರಿಗೆ ಟಿಕೇಟ್ ನೀಡಿದ್ದರಿಂದಾಗಿ ವೀರಶೈವ ಲಿಂಗಾಯತ ಮತಗಳು ಕಾಂಗ್ರೆಸ್ಸಿಗೆ ಸಾಮೂಹಿಕವಾಗಿ ವರ್ಗಾವಣೆ ಆಗುತ್ತವೆ ಹಾಗೂ ಮುಸಲ್ಮಾನರು ಕೈಗೆ ಕೈಕೊಟ್ಟರೂ ಲಿಂಗಾಯತ ಮತಗಳು ಕೈ ಹಿಡಿಯುತ್ತವೆ ಎಂಬುದು ಶ್ಯಾಮನೂರು ಕುಟುಂಬದ ಲೆಕ್ಕಾಚಾರವಾ? ಇದರಿಂದಾಗಿಯೇ ಶ್ಯಾಮನೂರುರವರ ಮಗ ಹಾಲಿ ಶಾಸಕ ಮಲ್ಲಿಕಾರ್ಜುನನವರು ‘ಮುಸ್ಲಿಂ ಮುಖಂಡ ಸಚಿವ ಜಮೀರ್ ಅಹಮದ್ ಚುನಾವಣಾ ಪ್ರಚಾರಕ್ಕೆ ಬರದೇ ಇದ್ದರೂ ಪರವಾಗಿಲ್ಲ’ ಎಂದು ಹೇಳಿಕೆ ಕೊಟ್ಟಿದ್ದು. ಎಲ್ಲಿ ಮುಸಲ್ಮಾನರ ಮತಗಳು ಕೈತಪ್ಪಿ ಹೋಗುತ್ತವೋ ಎನ್ನುವ ಆತಂಕದಿಂದ ಸಿಎಂ ಸಿದ್ದರಾಮಯ್ಯನವರೇ ಜಮೀರ್ ಅಹ್ಮದ್ ರವರ ಮನ ಒಲಿಸಿ ದಾವಣಗೆರೆಯಲ್ಲಿ  ಪ್ರಚಾರ ಮಾಡಲು ಒಪ್ಪಿಸಿದ್ದು. ಇದರಿಂದಲಾದರೂ ಮುಸಲ್ಮಾನರ ಆಕ್ರೋಶ ತಣ್ಣಗಾಗಲಿ ಎನ್ನುವ ತಂತ್ರಗಾರಿಕೆ ಸಿಎಂ ರವರದ್ದು.

ಅತೀ ಹೆಚ್ಚು ನಿರ್ಣಾಯಕ ಮತಗಳನ್ನು ಹೊಂದಿದ ತಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ನೀಡದೇ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ ಕಾಂಗ್ರೆಸನ್ನು ಸೋಲಿಸಿ ಸೇಡು ತೀರಿಸಿಕೊಂಡು ತಮ್ಮ ಸಾಮರ್ಥ್ಯವನ್ನು ತೋರಿಸಬೇಕೆಂಬುದು ಬಹುತೇಕ ಮುಸಲ್ಮಾನರ ಭಾವನೆಯಾಗಿದೆ. ಆದರೆ ಅವರಿಗೆ ಪರ್ಯಾಯ ಇಲ್ಲವಾಗಿದೆ. ಮುಸ್ಲಿಂ ಸಮುದಾಯದ SDPI ಪಕ್ಷವೂ ಅಪ್ಸರ್ ಕೊಡ್ಲೀಪೇಟೆ ಎನ್ನುವ ಕ್ಯಾಂಡಿಡೇಟ್ ಹಾಕಿದೆ. ಜೊತೆಗೆ ಖಾದರ್ ಆದಿಲ್ ಬಾಷಾ ಸೇರಿದಂತೆ ಒಂಬತ್ತು ಜನ ಮುಸ್ಲಿಂ ಉಮೇದುವಾರರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.‌ ಮುಸ್ಲಿಂ ಬಾಹುಳ್ಯದ ಈ ಮತಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಮುಸ್ಲಿಂ ಪಕ್ಷವಾದ SDPI ಅಭ್ಯರ್ಥಿ ಕೇವಲ 1,311 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದರು. ಈ ಸಲವೂ ಗೆಲ್ಲುವ ಲಕ್ಷಣಗಳಿಲ್ಲ. ಪಕ್ಷೇತರರಾಗಿ ಸ್ಪರ್ಧಿಸಿರುವ ಎಲ್ಲಾ ಸ್ಪರ್ಧಿಗಳೂ ಮುಸ್ಲಿಂ ಮತಗಳನ್ನು ಹಂಚಿಕೊಳ್ಳುತ್ತಾರೆಯೇ ಹೊರತು ಗೆಲ್ಲುವ ಕ್ಯಾಂಡಿಡೇಟ್ ಗಳಲ್ಲ. ಈಗ ಮುಸ್ಲಿಂ ಸಮುದಾಯ ಗೊಂದಲದಲ್ಲಿದೆ. ಮತ್ತೆ ಕಾಂಗ್ರೆಸ್ ಅಭ್ಯರ್ಥಿಯನ್ನೇ ಬೆಂಬಲಿಸುವುದೋ ಅಥವಾ ಕಾಂಗ್ರೆಸ್ ಮೇಲೆ ಸೇಡು ತೀರಿಸಿಕೊಳ್ಳಲು ಈ ಸಲ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವುದೋ ಎನ್ನುವ ದ್ವಂದ್ವದಲ್ಲಿದ್ದಾರೆ. ಬಿಜೆಪಿ ಗೆದ್ದರೂ ಮುಸ್ಲಿಂ ದ್ವೇಷವನ್ನು ಆ ಪಕ್ಷ ನಿಲ್ಲಿಸುವುದಿಲ್ಲವೆಂಬುದು ಮುಸಲ್ಮಾನರಿಗೆ ಗೊತ್ತಿದೆ. ಕಾಂಗ್ರೆಸ್ ಬೆಂಬಲಿಸಿದರೆ ಒಂದಿಷ್ಟು ಪ್ರಯೋಜನವಾಗಬಹುದು ಎನ್ನುವ ನಿರೀಕ್ಷೆಯೂ ಇದೆ. ಕಾಂಗ್ರೆಸ್ ನಮಗೆ ಮೋಸ ಮಾಡಿತು ಎನ್ನುವ ಆಕ್ರೋಶವೂ ಇದೆ. ಈಗ ಏನು ಮಾಡಬೇಕು, ಯಾವ ಪಕ್ಷವನ್ನು ಬೆಂಬಲಿಸಬೇಕು ಎನ್ನುವ ಡೋಲಾಯಮಾನ ಮನಸ್ಥಿತಿಯಲ್ಲಿ ದಾವಣಗೆರೆ ಮುಸಲ್ಮಾನರಿದ್ದಾರೆ.

ಇವರ ಈ ಗೊಂದಲಮಯ ಪರಿಸ್ಥಿತಿಗೆ ಅವರೇ ಕಾರಣರು ಎಂದರೆ ಮುಸಲ್ಮಾನರೂ ನಂಬುವುದಿಲ್ಲ. ಹೇಗೆ? ಎಂದು ಪ್ರಶ್ನಿಸುತ್ತಾರೆ. ಮೊದಲನೆಯದಾಗಿ ಚುನಾವಣಾ ಸಂದರ್ಭದಲ್ಲಿ ಮುಸಲ್ಮಾನರು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕಿತ್ತು. ಕಾಂಗ್ರೆಸ್ ಕೃಪಾ ಕಟಾಕ್ಷದಿಂದ ಹೊರಬಂದು ತಮ್ಮದೇ ಆದ ಅಸ್ಮಿತೆಯನ್ನು ಕಾಪಾಡಿಕೊಳ್ಳಬೇಕಾಗಿತ್ತು. ಮುಸ್ಲಿಂ ಸಮಯದಾಯದವರೆಲ್ಲಾ ಸೇರಿ ತಮ್ಮಲ್ಲೇ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿ ತಮ್ಮೆಲ್ಲಾ ಮತಗಳನ್ನು ಮೀಸಲಿಡಬೇಕಿತ್ತು. ಮುಸ್ಲಿಂ ಸಮುದಾಯದ ಮತ ಆ ಸಮುದಾಯದ ಒಮ್ಮತ ಅಭ್ಯರ್ಥಿಗೆ ಎಂದು ಘೋಷಿಸಬೇಕಿತ್ತು. ಆಗ ಕಾಂಗ್ರೆಸ್ಸಿಗೆ ಖಂಡಿತಾ ಆತಂಕವಾಗುತ್ತಿತ್ತು. ಈ ಸಲ ಅಲ್ಲದಿದ್ದರೂ 2029 ರ ಚುನಾವಣೆಯಲ್ಲಿಯಾದರೂ ಮುಸ್ಲಿಂ ಅಭ್ಯರ್ಥಿಗೆ ಬಿ ಫಾರಂ ಕೊಡುತ್ತೇವೆ ಎಂದು ಕಾಂಗ್ರೆಸ್ ಒಪ್ಪಿಕೊಳ್ಳಬೇಕಾಗುತ್ತಿತ್ತು. ಒಪ್ಪಿಕೊಳ್ಳದೇ ಹೋದರೆ ಮುಸ್ಲಿಂ ಕ್ಯಾಂಡಿಡೇಟ್ ಹಾಕಿ ಗೆಲ್ಲಿಸಿದ್ದರೆ ಮುಸ್ಲಿಂ ಸಮುದಾಯದವರ ತಾಕತ್ತು ಎಂತಹುದು ಎಂಬುದು ಕೈ ಪಕ್ಷಕ್ಕೆ ಮನವರಿಕೆಯಾಗುತ್ತಿತ್ತು. ಮುಸಲ್ಮಾನರನ್ನು ಬಿಟ್ಟರೆ ಗೆಲುವು ಅಸಾಧ್ಯವೆಂಬುದು ಮನದಟ್ಟಾದರೆ ಗೆಲುವಿಗಾಗಿಯಾದರೂ ಕಾಂಗ್ರೆಸ್ಸಿಗೆ ಮುಸ್ಲಿಂ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಬರುತ್ತಿತ್ತು. ಮುಸಲ್ಮಾನ ಸಮುದಾಯ ಒಂದಾಗಿದ್ದರೆ, ಕಾಂಗ್ರೆಸ್ ಹೈಕಮಾಂಡ್ ಮನಸ್ಸು ಮಾಡಿದ್ದರೆ ದಾವಣಗೆರೆಯಲ್ಲಿ ಕುಟುಂಬ ರಾಜಕಾರಣಕ್ಕೆ ನಿಯಂತ್ರಣ ಹೇರಬಹುದಾಗಿತ್ತು.

ಆದರೇನು ಮಾಡುವುದು? ದಾವಣಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಮುಸಲ್ಮಾನರ ಮತಗಳೇ ಹೆಚ್ಚಾಗಿದ್ದರೂ ಅಲ್ಲಿ ಆ ಸಮುದಾಯದ ಸರ್ವಸಮ್ಮತ ಮುಖಂಡರೇ ಇಲ್ಲವಾಗಿದೆ. ಹೀಗಾಗಿ ಈ ಹಿಂದೆ ಜೆಡಿಎಸ್ ಪಕ್ಷ ಮುಸಲ್ಮಾನರ ಮತಗಳನ್ನು ಕಬಳಿಸುತ್ತಿತ್ತು. ಈಗ ಕಾಂಗ್ರೆಸ್ ಪಕ್ಷ ಬಿಜೆಪಿ ಗುಮ್ಮನನ್ನು ತೋರಿಸಿ ಇಡೀ ಸಮುದಾಯದ ಮತಗಳನ್ನು ಪಡೆಯಲು ಹವಣಿಸುತ್ತಿದೆ. ಮುಸ್ಲಿಂ ಸಮುದಾಯ ಚುಕ್ಕಾಣಿ ಇಲ್ಲದ ಹಡಗಿನಂತೆ, ನಾಯಕನಿಲ್ಲದ ಸೈನ್ಯದಂತೆ ತತ್ತರಿಸುತ್ತಿದೆ.

ಮುಸ್ಲಿಂ ಸಮುದಾಯ ಈಗ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ. ತಮ್ಮ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯವನ್ನು ಪಡೆಯಲು ಒಗ್ಗಟ್ಟಾಗಿ ನಿಲ್ಲುವ ಸಮಯ. ತನ್ನ ಸರ್ವ ಸಮ್ಮತ ನಾಯಕನನ್ನು ಆಯ್ಕೆ ಮಾಡಿಕೊಳ್ಳಬೇಕಾದ ಸಮಯ. ಇಲ್ಲದೇ ಹೋದರೆ ಕಾಂಗ್ರೆಸ್ಸಿನವರು ಮುಸ್ಲಿಂ ಸಮುದಾಯವನ್ನು ಓಟ್ ಬ್ಯಾಂಕ್ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಬಿಜೆಪಿಯವರು ಮುಸಲ್ಮಾನರನ್ನು ದೇಶದ್ರೋಹಿ ಭಯೋತ್ಪಾದಕರು ಎಂದು ಬಿಂಬಿಸಿ ಹಿಂದೂ ಮತಗಳನ್ನು ಪಡೆಯಲು ಪ್ರಯತ್ನಿಸುತ್ತಾರೆ.

ಚುನಾವಣೆ ಎನ್ನುವುದು ರಾಜಕೀಯದ ಚದುರಂಗದಾಟ. ಆಟದ ಯಜಮಾನಿಕೆಯನ್ನು ಸೂತ್ರಧಾರರ ಕೈಗೊಪ್ಪಿಸಿದರೆ ಮುಸ್ಲಿಂ ಸಮುದಾಯ ಕೇವಲ ಅವರಾಡಿಸಿದಂತೆ ಆಡುವ ಪಾತ್ರಧಾರಿಗಳಾಗುತ್ತಾರೆ. ನಮ್ಮ ಸಂಖ್ಯಾಬಲ ಹೆಚ್ಚಿದ್ದಲ್ಲಿ ನಾವೇ ಸೂತ್ರಧಾರರು ಎಂಬುದನ್ನು ಸಾಬೀತು ಪಡಿಸುವವರೆಗೂ ಮುಸ್ಲಿಂ ಸಮುದಾಯವನ್ನು ಬೇರೆಯವರು ಬಳಸಿಕೊಳ್ಳುತ್ತಾರೆ. ‘ಬಿಜೆಪಿ ಗೆದ್ದರೆ ನಿಮ್ಮ ಅಸ್ತಿತ್ವಕ್ಕೆ ಅಪಾಯ’ ಎಂದು ಕಾಂಗ್ರೆಸ್ ಮುಸಲ್ಮಾನರನ್ನು ಹೆದರಿಸುತ್ತದೆ. ‘ಕಾಂಗ್ರೆಸ್ ಗೆದ್ದರೆ ಮುಸಲ್ಮಾನರಿಗೆ ಬಲ ಬಂದು ಹಿಂದೂಗಳ ಮೇಲೆ ಸವಾರಿ ಮಾಡುತ್ತಾರೆ’ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಾರೆ. ಈ ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಮುಸಲ್ಮಾನರೇ ಟಾರ್ಗೆಟ್. ಬಿಜೆಪಿಗೆ ಹಿಂದೂಗಳ ಮತ ಕ್ರೋಢೀಕರಣ ಮಾಡಲು ಮುಸ್ಲಿಂ ಗುಮ್ಮ ಬೇಕಾಗಿದೆ.  ಬಿಜೆಪಿ ಗುಮ್ಮನನ್ನು ತೋರಿಸಿ ಕಾಂಗ್ರೆಸ್ ಮುಸಲ್ಮಾನರ ಮತ ಪಡೆದು ಗೆಲ್ಲಲು ಪ್ರಯತ್ನಿಸುತ್ತದೆ. ಈ ಎರಡೂ ಪಕ್ಷಗಳ ಗೆಲುವಿನ ಮಹತ್ವಾಕಾಂಕ್ಷೆಗೆ ಪ್ರತ್ಯಕ್ಷವಾಗಿಯೋ ಇಲ್ಲಾ ಪರೋಕ್ಷವಾಗಿಯೋ ಮುಸ್ಲಿಂ ಸಮುದಾಯ ಬಳಕೆಯಾಗುತ್ತಿದೆ. ಅತೀ ಹೆಚ್ಚು ಮತಗಳಿರುವ ಕ್ಷೇತ್ರದಲ್ಲೂ ಮುಸ್ಲಿಂ ಪ್ರಾತಿನಿಧ್ಯಕ್ಕೆ ಅವಕಾಶ ಇಲ್ಲವಾಗಿದೆ. ಎಲ್ಲಿಯವರೆಗೂ ಮುಸಲ್ಮಾನರು ಒಗ್ಗಟ್ಟಾಗಿ ಸ್ವತಂತ್ರ ನಿಲುವು ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಪಾತ್ರಧಾರಿಗಳಾಗಿಯೇ ಬಳಕೆಯಾಗುತ್ತಾರೆ. ಸೂತ್ರಧಾರರು ಬೇರೆಯವರಾಗಿರುತ್ತಾರೆ.

ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು

More articles

Latest article

Most read