ಸಿದ್ದು ಬಜೆಟ್‌ ಹೈಲೈಟ್ಸ್‌ : ಬೆಂಗಳೂರಿಗೆ ಏನು ಎಷ್ಟು?

ನಾಡಪ್ರಭು ಕೆಂಪೇಗೌಡರ ಕನಸಿನ ಬೆಂಗಳೂರನ್ನು ವಿಶ್ವದ ಅತ್ಯುತ್ತಮ ನಗರವನ್ನಾಗಿ ರೂಪಿಸಲು ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ದೃಢಸಂಕಲ್ಪ ಮಾಡಿದೆ. ಬೆಂಗಳೂರು ಅಭಿವೃದ್ಧಿಗೆ ನೀಡುವ ವಾರ್ಷಿಕ ಅನುದಾನವನ್ನು ₹3,000 ಕೋಟಿಯಿಂದ ₹7,000 ಕೋಟಿಗೆ ಹೆಚ್ಚಿಸುವ ಮೂಲಕ ಮೂಲಸೌಕರ್ಯ ಕ್ರಾಂತಿಗೆ ಚಾಲನೆ ನೀಡಲಾಗಿದೆ.

ಸಂಚಾರ ದಟ್ಟಣೆ ನಿವಾರಣೆಗೆ ‘ಸುರಂಗ ಮಾರ್ಗ’ ಮತ್ತು ‘ಬಿಸಿನೆಸ್‌ ಕಾರಿಡಾರ್‌’

ನಗರದ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರವು ಬೃಹತ್ ಯೋಜನೆಗಳನ್ನು ಹಮ್ಮಿಕೊಂಡಿದೆ:

  • ಸುರಂಗ ಮಾರ್ಗ (Tunnel Road): ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಕಾರಿಡಾರ್‌ಗಳಲ್ಲಿ ಒಟ್ಟು 40 ಕಿ.ಮೀ. ಉದ್ದದ ಸುರಂಗ ಮಾರ್ಗವನ್ನು ₹40,000 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಮೊದಲ ಹಂತದಲ್ಲಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗಿನ 17 ಕಿ.ಮೀ. ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ.
  • ಬೆಂಗಳೂರು ಬಿಸಿನೆಸ್‌ ಕಾರಿಡಾರ್‌: ತುಮಕೂರು ರಸ್ತೆಯಿಂದ ಹೊಸೂರು ರಸ್ತೆಯವರೆಗೆ 73 ಕಿ.ಮೀ ಉದ್ದದ ಈ ಕಾರಿಡಾರ್ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಂಡಿದ್ದು, ನಾಲ್ಕು ವರ್ಷಗಳಲ್ಲಿ ಇದನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
  • ಹೆಬ್ಬಾಳ ಜಂಕ್ಷನ್ ಸುಧಾರಣೆ: ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ಸರ್ಕಲ್‌ ವರೆಗೆ ಸುರಂಗ ಮತ್ತು ಮೇಲುಸೇತುವೆ ರಸ್ತೆಯನ್ನು ₹2,250 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು.

‘ನಮ್ಮ ಮೆಟ್ರೋ’ ಮತ್ತು ಸಾರ್ವಜನಿಕ ಸಾರಿಗೆ

ಮೆಟ್ರೋ ಜಾಲವನ್ನು ಮತ್ತಷ್ಟು ಬಲಪಡಿಸಲು ಸರ್ಕಾರವು ಸಜ್ಜಾಗಿದೆ. 2026-27ರ ಅವಧಿಯಲ್ಲಿ ಹೆಚ್ಚುವರಿಯಾಗಿ 41 ಕಿ.ಮೀ. ಮೆಟ್ರೋ ಮಾರ್ಗ ಪೂರ್ಣಗೊಳಿಸಲು ಯೋಜಿಸಲಾಗಿದ್ದು, ಇದರಿಂದ ದಿನಕ್ಕೆ 15 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಮೆಟ್ರೋ ವೆಚ್ಚದಲ್ಲಿ ರಾಜ್ಯದ ಪಾಲು ಶೇ. 88ರಷ್ಟಿದ್ದು, ಕೇಂದ್ರದ ಪಾಲು ಕೇವಲ ಶೇ. 12ರಷ್ಟಿದೆ ಎಂದು ಸರ್ಕಾರ ತಿಳಿಸಿದೆ. ಹೊರ ವರ್ತುಲ ರಸ್ತೆಯಲ್ಲಿ (ORR) 9 ಕಿ.ಮೀ ಉದ್ದದ ಪಾದಚಾರಿ ಮಾರ್ಗವನ್ನೂ ನಿರ್ಮಿಸಲಾಗುವುದು.

ಜಲಭದ್ರತೆ: ಕಾವೇರಿ 6ನೇ ಹಂತದ ಯೋಜನೆ

ಬೆಂಗಳೂರಿನ 1.40 ಕೋಟಿ ಜನರಿಗೆ ಕುಡಿಯುವ ನೀರು ಒದಗಿಸಲು ಕಾವೇರಿ 6ನೇ ಹಂತದ ಯೋಜನೆಯನ್ನು ರೂಪಿಸಲಾಗಿದೆ. JICA ನೆರವಿನಿಂದ ₹6,939 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಇದರಿಂದ ಹೆಚ್ಚುವರಿಯಾಗಿ 6 ಟಿ.ಎಂ.ಸಿ. ನೀರು ನಗರಕ್ಕೆ ಲಭ್ಯವಾಗಲಿದೆ.

ನಗರ ಸುಂದರೀಕರಣ ಮತ್ತು ಪರಿಸರ ಸ್ನೇಹಿ ಕ್ರಮಗಳು

  • ವೈಟ್ ಟಾಪಿಂಗ್: ರಸ್ತೆಗಳ ಬಾಳಿಕೆಗಾಗಿ ಮುಂದಿನ ಮೂರು ವರ್ಷಗಳಲ್ಲಿ ₹3,000 ಕೋಟಿ ವೆಚ್ಚದಲ್ಲಿ 450 ಕಿ.ಮೀ. ರಸ್ತೆಯನ್ನು ವೈಟ್ ಟಾಪಿಂಗ್ ಮಾಡಲಾಗುವುದು.
  • ಮಿಯಾವಾಕಿ ಪಾರ್ಕ್: ನಗರದ ಹಸಿರು ವಲಯವನ್ನು ಹೆಚ್ಚಿಸಲು 100 ಕಡೆಗಳಲ್ಲಿ ದಟ್ಟ ಸಸ್ಯಗಳನ್ನು ಬೆಳೆಸುವ  ‘ಮಿಯಾವಾಕಿ ಪಾರ್ಕ್‌’ಗಳನ್ನು ನಿರ್ಮಿಸಲಾಗುವುದು.
  • ಆಧುನಿಕ ಸೌಲಭ್ಯ: 175 ಜಂಕ್ಷನ್‌ಗಳ ಸೌಂದರ್ಯೀಕರಣ, 500 ಕಿ.ಮೀ. ಪಾದಚಾರಿ ಮಾರ್ಗ ಮೇಲ್ದರ್ಜೆ ಹಾಗೂ 100 ಸ್ಕೈ ವಾಕ್‌ (Sky Walk) ಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.

ಆಡಳಿತ ಸುಧಾರಣೆ ಮತ್ತು ಇತರೆ ನಗರಗಳ ಅಭಿವೃದ್ಧಿ

  • ಗ್ರೆಟರ್ ಬೆಂಗಳೂರು ಪ್ರಾಧಿಕಾರ: ಬೆಂಗಳೂರಿನ ಸುಗಮ ಆಡಳಿತಕ್ಕಾಗಿ ಐದು ಹೊಸ ಮಹಾನಗರ ಪಾಲಿಕೆಗಳನ್ನು ಸ್ಥಾಪಿಸಲಾಗಿದ್ದು, ಇವುಗಳ ಮೂಲಕ ‘ಮುನಿಸಿಪಲ್ ಬಾಂಡ್’ ಹೊರಡಿಸಿ ಸಂಪನ್ಮೂಲ ಕ್ರೋಢೀಕರಿಸಲಾಗುವುದು.
  • ಮಾಸ್ಟರ್ ಪ್ಲಾನ್-2041: 2027ರ ಅಂತ್ಯದೊಳಗೆ ಬೆಂಗಳೂರಿಗೆ ಹೊಸ ಪರಿಷ್ಕೃತ ಮಾಸ್ಟರ್ ಪ್ಲಾನ್ ಜಾರಿಗೆ ತರಲಾಗುವುದು.
  • ಇಂದಿರಾ ಕ್ಯಾಂಟೀನ್: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ ಎರಡು ಮತ್ತು ಧಾರವಾಡದಲ್ಲಿ ನಾಲ್ಕು ʻವಿದ್ಯಾರ್ಥಿ ಇಂದಿರಾ ಕ್ಯಾಂಟೀನ್‌ʼಗಳನ್ನು ಪ್ರಾರಂಭಿಸಲಾಗುವುದು.
  • ಕಲ್ಯಾಣ ಕರ್ನಾಟಕ: ರಾಯಚೂರು, ಬೀದರ್ ಮಹಾನಗರ ಪಾಲಿಕೆಗಳಿಗೆ ತಲಾ ₹200 ಕೋಟಿ ಹಾಗೂ ಕಲಬುರಗಿ ನಗರಕ್ಕೆ 24/7 ಕುಡಿಯುವ ನೀರು ಒದಗಿಸಲು ₹1,863 ಕೋಟಿ ಯೋಜನೆಯ DPR ಸಿದ್ಧಪಡಿಸಲಾಗುತ್ತಿದೆ.

More articles

Latest article

Most read