ರಾಜ್ಯದಲ್ಲಿ ವಿರೋಧ ಪಕ್ಷ ಹಣಿಯಲು ಹಿರಿಯ ಅಧಿಕಾರಿಗಳ ದುರುಪಯೋಗ: ಬಸವರಾಜ ಬೊಮ್ಮಾಯಿ

Most read

ರಾಜ್ಯದಲ್ಲಿ ರಾಜಕಾರಣ ಕೆಳಮಟ್ಟಕ್ಕೆ ಹೋಗಿದೆ. ವಿರೋಧ ಪಕ್ಷ ಹಣಿಯಲು ಹಲವಾರು ಕೇಸ್ ಹಾಕಿಸಿ, ಹಿರಿಯ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳುವ ಮಟ್ಟಕ್ಕಿಳಿದಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.


ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸ್ವಜನ ಪಕ್ಷಪಾತ ನಡೆಯುತ್ತಿದೆ. ರಾಜಕೀಯದಲ್ಲಿ ರಕ್ಷಣೆ ಇರುವ ಕಾರಣ ಅಧಿಕಾರಿಗಳಿಂದ ಕೀಳು ಮಟ್ಟದ ಮಾತು ಬರುತ್ತಿವೆ. ಇಂತಹ ಕೆಳಮಟ್ಟದ ರಾಜಕೀಯ ಹಿಂದೇಂದು ಆಗಲಿಲ್ಲ. ತಮ್ಮ ಮೇಲೆ ಆರೋಪದ ಕಪ್ಪು ಚುಕ್ಕೆ ಬಂದರೆ ಎಲ್ಲರಿಗೂ ಮಸಿ ಬಳಿಯುವ ಪ್ರಯತ್ನ ಆಗುತ್ತಿದೆ. ಇದು ಬಹಳಷ್ಟು ದಿನ ನಡೆಯುದಿಲ್ಲ. ಅಂತಿಮವಾಗಿ ಕಾನೂನು ತನ್ನ ಕೆಲಸ ಮಾಡುತ್ತದೆ ಎಂದು ಹೇಳಿದರು.


ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯದಲ್ಲಿ ಸಿಎಂ ಆಗಲು ಕೆಲವರು ಹಣ ಇಟ್ಟುಕೊಂಡು ಕಾಯುತ್ತಿದ್ದಾರೆ ಎಂದು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಬಸಬಗೌಡ ಪಾಟೀಲ್ ಯತ್ನಾಳಗೆ ಯಾವ ಮಾಹಿತಿಯಿದೆ ಅವರನ್ನೇ ಕೇಳಬೇಕು ನನಗೇನು ಮಾಹಿತಿ ಇಲ್ಲ. ಅವರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ.ಅದನ್ನು ಅವರಿಗೆ ಕೇಳಿ ಎಂದು ಹೇಳಿದರು.


ಮುಡಾ ಹಗರಣದಲ್ಲಿ ದೂರುದಾರ ಇಡಿ ಗೆ ಹೋಗಿದ್ದಾರೆ ಎಂಬ ಪ್ರಶ್ನೆಗೆ ಏನು ಆಗುತ್ತೆ ಅಂತ ಕಾದು ನೋಡೋಣ ಎಂದು ಹೇಳಿದರು.

More articles

Latest article