Saturday, September 14, 2024

ನಮ್ಮ ಮೆಟ್ರೋ ನೂತನ ನಿರ್ದೇಶಕರಾಗಿ ಮಹೇಶ್ವರ್ ರಾವ್ ನೇಮಕ

Most read

ಬೆಂಗಳೂರು ನಮ್ಮ ಮೆಟ್ರೋದ  BBMRCLಗೆ ನೂತನ ನಿರ್ದೇಶಕರಾಗಿ ಮಹೇಶ್ವರ್ ಅವರನ್ನು ನೇಮಕ ಮಾಡಿ ಎಂದು ಕೇಂದ್ರ ಸರ್ಕಾರ ಆದೇಶಿದೆ. ಈ ಮೂಲಕ  ಅಂಜುಂ ಪರ್ವೇಜ್ ಅವರ ಸ್ಥಾನದಿಂದ ತೆರವುಗೊಳಿಸಲಾಗಿದೆ.

ನಮ್ಮ ಮೆಟ್ರೋಗೆ ಪೂರ್ಣಾವಧಿ ನಿರ್ದೇಶಕ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಸಂಸದ ತೇಜಸ್ವಿ ಸೂರ್ಯ ಈ ಸಂಬಂಧ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪೂರಿ ಯವರನ್ನ ಭೇಟಿ ಮಾಡಿದ್ದರು. ಈ ಕುರಿತು ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೆ BMRCL ಎಂಡಿ ನೇಮಕವಾಗಿದೆ. 

ನಮ್ಮ ಮೆಟ್ರೋದ ಫೇಸ್- 2 ಕಾಮಗಾರಿ ತುಂಬಾ ವಿಳಂಬ ಆಗ್ತಿದೆ ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗ್ತಿದೆ ಇದೆಕ್ಕೆಲ್ಲಾ ಕಾರಣ ಬಿಎಂಆರ್ ಸಿಎಲ್ ನಲ್ಲಿ ಪೂರ್ಣಾವದಿ ಎಂಡಿ ಇಲ್ಲ ಎಂದು ಆರೋಪ ಮಾಡಿದ್ದ ರಾಜ್ಯ ಸರ್ಕಾರಕ್ಕೆ ಸೂಕ್ತ ವ್ಯಕ್ತಿಯನ್ನ ಶಿಫಾರಸ್ಸು ಕೇಳಿದ್ದರು. ಈ ಕುರಿತು ಕೇಂದ್ರದಿಂದ ನಾನು ಅನುಮತಿ ಕೊಡಿಸೋದಾಗಿ ಹೇಳಿದ್ದರು.  

ತೇಜಸ್ವಿ ಸೂರ್ಯ ಆಗ್ರಹ ಬೆನ್ನಲ್ಲೆ BMRCL ಎಂಡಿ ಅಂಜುಂ ಫರ್ವೇಜ್ ತೆರವುಗೊಳಿಸಿ ಆ ಜಾಗಕ್ಕೆ BMRCL ಗೆ ನೂತನ ನಿರ್ದೇಶಕರಾಗಿ ಮಹೇಶ್ವರ್ ರಾವ್ ನೇಮಕ ಗೊಂಡಿದ್ದಾರೆ.

More articles

Latest article