ರಾಜ್ಯಪಾಲರನ್ನು ನಾವು ಅವಮಾನಿಸಿಲ್ಲ, ರಾಜ್ಯಪಾಲರು ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ: ಬಿಕೆ ಹರಿಪ್ರಸಾದ್‌

Most read

ಮುಡಾ ಬದಲಿಸಿ ನಿವೇಶನ ಪ್ರಕರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಪರ ನಿಂತಿರುವ ಬಿಕೆ ಹರಿಪ್ರಸಾದ್‌, ರಾಜ್ಯಪಾಲರನ್ನು ನಾವು ಅವಮಾನಿಸಿಲ್ಲ ರಾಜ್ಯಪಾಲರು ಸಂವಿಧಾನಕ್ಕೆ ಅವಮಾನ ಆಗೋ ರೀತಿ ನಡೆದುಕೊಂಡರೆ ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡೋದು ನಮ್ಮ ಹಕ್ಕು ಎಂದು ಹೇಳಿದ್ದಾರೆ.

ಹಾವೇರಿಯಲ್ಲಿ ಈ ಕುರಿತು ಮಾತನಾಡಿದ ಅವರು, ಸಂವಿಧಾನದ ಮುಖ್ಯಸ್ಥರಾಗಿರುವ ಅವರು ಬಿಜೆಪಿಯವರ ನಿರ್ದೇಶನದಂತೆ ಅವರು ಕ್ರಮ ಜರುಗಿಸಲು ಆಗಲ್ಲ, ಹೀಗಾಗಿ ಪ್ರತಿಭಟನೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರತಿಭಟನೆಯ ವೇಳೆ ನಮ್ಮ ಮುಖಂಡರದ್ದು ಭಾಷೆಗಳಲ್ಲಿ ವ್ಯತ್ಯಾಸ ಆಗಿದೆ, ಆದರೆ ಅಪಮಾನ ಮಾಡುವಂತೆ ಎಲ್ಲು ಮಾತಾಡಿಲ್ಲ. ರಾಜ್ಯಪಾಲರು ದಲಿತರು ಅವರನ್ನು ಅವಮಾನ ಮಾಡಿದ್ದಾರೆ ಎಂದು ಬಿಜೆಪಿಯವರು ಹೇಳ್ತಾರೆ‌, ಬಿಜೆಪಿಯವರು ದಲಿತರ ಮೇಲೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಐವಾನ್ ಡಿಸೋಜಾ ತಪ್ಪು ಮಾಡಿದರೆ, ಕಾನೂನು ಕ್ರಮ ಜರುಗಿಸಲಿ, ಆದರೆ ಅವರ ಮನೆ ಮೇಲೆ ಕಲ್ಲು ಹೊಡೆಯೋದು ಹೇಡಿತನ ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯ ಸಂಘ ಪರಿವಾರದ ಕಿಡಿಗೇಡಿಗಳು ಮಾಡಿದ ಕೆಲಸ ಅದು, ಮುಡಾ ಆರೋಪ ಪ್ರತ್ಯಾರೋಪ ಆಗ್ತಾ ಇದೆ, ದೇಸಾಯಿ ಆಯೋಗ ನೇಮಕ ಆಗಿದೆ. ಆಯೋಗ ವರದಿ ಕೊಟ್ಟ ನಂತರ ವೈಟ್ನರ್ ಹಾಕಿದ್ದಾರಾ? ಇಂಕ್ ಹಾಕಿದ್ದಾರಾ, ಬ್ಲಾಕ್ ಇಂಕ್ ಹಾಕಿದ್ದಾರಾ ಗೊತ್ತಾಗುತ್ತೆ. ಕೂಲಂಕುಶ ತನಿಖೆ ನಡೆದ ಬಳಿಕ ಇವೆಲ್ಲದ ಬಗ್ಗೆ ಸತ್ಯಾಸತ್ಯತೆ ಗೊತ್ತಾಗುತ್ತೆ. ತನಿಖೆ ಆಗೋ ವರೆಗೆ ಕಾಯಬೇಕು ಎಂದು ಹರಿಪ್ರಸಾದ ತಿಳಿಸಿದರು.

100 ಸಿಎಂ ಬಂದರೂ ನನ್ನನ್ನು ಅರೆಸ್ಟ್ ಮಾಡಲು ಆಗಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರ ಕುರಿತಂತೆ ಮಾತನಾಡಿದ ಅವರು ಸಿಎಂ ಯಾರನ್ನೂ ಅರೆಸ್ಟ್ ಮಾಡಲ್ಲ ಅರೆಸ್ಟ್ ಮಾಡೋದು ಪೊಲೀಸರು ಎಂದು ಹರಿಪ್ರಸಾದ ತಿಳಿಸಿದರು.

ಕುಮಾರಸ್ವಾಮಿ ಕೇಂದ್ರ ಸಚಿವರು ಅವರ ಅಂತಸ್ಥಿಗೆ ತಕ್ಕಂತೆ ಯಾರಾದರೂ ಐಪಿಎಸ್ ಅಧಿಕಾರಿ ಹೋಗಿ ಪ್ರಶ್ನೆ ಮಾಡ್ತಾರೆ ಕಾನ್ಸಟೇಬಲ್ ಹೋಗಿ ಮಾಡೋಕೆ ಆಗಲ್ಲ. ಪ್ರಜಾಪ್ರಭುತ್ವದಲ್ಲಿ ಯಾರು ಯಾರನ್ನು ಹೆದರಿಸಲು ಆಗಲ್ಲ ಎಂದು ತಿಳಿಸಿದರು.

More articles

Latest article