ಬಿಜೆಪಿಯವರೇ ತೊಂದರೆ ಕೊಟ್ಟರು; ಬಿವೈ ವಿಜಯೇಂದ್ರಗೆ ತರಾಟೆ ತೆಗೆದುಕೊಂಡ ಸೌಜನ್ಯ ತಾಯಿ

Most read

ಮಂಗಳೂರು: ತಮ್ಮ ಮಗಳ ಹತ್ಯೆಗೆ ನ್ಯಾಯ ಕೇಳಿದ್ದಕ್ಕೆ ಬಿಜೆಪಿಯವರೇ ಹಣ ಸಂಪಾದಿಸಿದ್ದೇವೆ ಎಂದು ನಮ್ಮ ಕುಟುಂಬವನ್ನು ಟೀಕಿಸಿದರು ಎಂದು ಸೌಜನ್ಯ ಅವರ ತಾಯಿ ಕುಸುಮಾವತಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

2012ರಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ಸೌಜನ್ಯ ಅವರ ಕುಟುಂಬ ವಾಸಿಸುತ್ತಿರುವ ಧರ್ಮಸ್ಥಳ ಗ್ರಾಮದ ಪಾಂಗಳದಲ್ಲಿರುವ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಿಯೋಗ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ವಿಜಯೇಂದ್ರ, ತಮ್ಮ ಮಗಳ ಹತ್ಯೆಗೆ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ನಿಮಗೆ ಬೆಂಬಲ ನೀಡುವುದಾಗಿ ಹೇಳಿದಾಗ ಕುಸುಮಾವತಿ ಈ ಆರೋಪ ಮಾಡಿದರು.

ಕುಸುಮಾವತಿ ಮಾತನಾಡಿ, ತಮ್ಮ ಮಗಳ ಸಾವಿಗೆ ನ್ಯಾಯ ದೊರಕಿಸಿ ಕೊಡಲು ಹೋರಾಟ ನಡೆಸಿದ್ದಾಕ್ಕಾಗಿ ತಮ್ಮನ್ನು ಗುರಿಯಾಗಿಸಿಕೊಂಡು ಆಪಾದನೆ ಮಾಡಲಾಗುತ್ತಿದೆ. ನ್ಯಾಯ ಕೇಳಿದ್ದಕ್ಕೆ ನಮ್ಮ ಮೇಲೆಯೇ ದಬ್ಬಾಳಿಕೆ ಮಾಡಲಾಗುತ್ತಿದೆ. ನಾವು ದೊಡ್ಡ ಮನೆ ಕಟ್ಟಿಕೊಂಡಿದ್ದೇವೆ ಮತ್ತು ಸೌಜನ್ಯ ಹೆಸರಿನಲ್ಲಿ ಹಣ ಸಂಪಾದಿಸುತ್ತಿದ್ದೇವೆ ಎಂದು ನಿಮ್ಮ ಪಕ್ಷದವರೇ ಆಪಾದನೆ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಅವರಿಗೆ ನೇರವಾಗಿ ಹೇಳಿದರು.

ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ಪಟ್ಟು ಹಿಡಿದಾಗ ನಮಗೆ ಜೀವ ಬೆದರಿಕೆ ಹಾಕಲಾಯಿತು. ಈಗಲೂ ನಮ್ಮ ಬಾಯಿ ಮುಚ್ಚಿಸುವ ಕೆಲಸಗಳು ನಡೆಯುತ್ತಿವೆ ಎಂದು ಕುಸುಮಾವತಿ ಕಣ್ಣೀರು ಹಾಕಿದರು.

ಆಗ ವಿಜೇಂದ್ರ ಅವರು, ನಿಮ್ಮ ಪುತ್ರಿಯ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.  ಒಂದು ವೇಳೆ ಸಿಬಿಐ ನ್ಯಾಯಾಲಯದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದರೆ ನಿಮಗೆ ಬಿಜೆಪಿ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.

More articles

Latest article