ಮಂಡ್ಯದ ಕೆರಗೋಡಿನಲ್ಲಿ (Keragod) ಹನುಮ ಧ್ವಜವನ್ನು ಇಳಿಸಿರುವುದನ್ನು ಖಂಡಿಸಿ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ನಾಯಕರು ವಿವಿಧ ಬಣ್ಣ ಹಚ್ಚಿ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ತಕ್ಕಂತೆ ಕುಣಿಯುತ್ತಿರುವ ಎರಡೂ ಪಕ್ಷದ ಕಾರ್ಯಕರ್ತರು ಇಂದು ಮಂಡ್ಯ ನಗರ ಬೀದಿಯಲ್ಲಿ ಪ್ರತಿಭಟನ ಮೆರೆವಣಿಗೆ ನಡೆಸಿದೆ. ಈ ವೇಳೆ ಬಿಜೆಪಿ,ಜೆಡಿಎಸ್ ಕಾರ್ಯಕರ್ತ ಸಿಕ್ಕ ಸಿಕ್ಕ ಕಾಂಗ್ರೆಸ್ ಬ್ಯಾನರ್ ಗಳನ್ನು ಹರಿದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಪೊಲೀಸರ ಮೇಲೆ ಗೊಂಡಾಗಿರಿ ವರ್ತನೆ ತೋರಿರುವ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹಾರಿಸಲಾಗಿದ್ದ ಹನುಮಾನ್ ಧ್ವಜವನ್ನು ಕಾಂಗ್ರೆಸ್ ಕೆಳಗಿಳಿಸಿ ಹರಿದುಹಾಕುವ ಮೂಲಕ ಅವಮಾನ ಮಾಡಿದೆ ಎಂದು ಮಂಡ್ಯ ನಗರ ಬೀದಿಗಳಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಪ್ರತಿಭಟನ ಮೆರೆವಣಿಗೆ ನಡೆಸುತ್ತಿದೆ. ಕಾಳಿಕಾಂಬ ದೇಗುಲದ ಬಳಿ ಆಗಮಿಸಿದ ಬಿಜೆಪಿ, ಕಾಂಗ್ರೆಸ್ ಅವಳಡಿಸಿದ್ದ ಶಾಸಕ ಗಣಿಗ ರವಿ ಬ್ಯಾನರ್ ಹರಿಯಲು ಯತ್ನಿಸಿದ್ದಾರೆ. ಫೆಕ್ಸ್ ಕೀಳಲು ಹೋದ ಬಿಜೆಪಿ ಕಾರ್ಯಕರ್ತರ ತಡೆಯಲು ಬಂದ ಪೊಲೀಸರ ವಿರುದ್ಧವೇ ಗೂಂಡಾಗಿರಿ ವರ್ತನೆ ತೋರಿದ್ದಾರೆ.
ನಂತರ ಹಳೇ ಬೆ-ಮೈ ಹೆದ್ದಾರಿಯಲ್ಲಿ ಸಾಗುತ್ತಿದ್ದ ಯಾತ್ರೆ ವೇಳೆ ಸಿಎಂ ಸಿದ್ಧರಾಮಯ್ಯ, ಶಾಸಕ ಗಣಿಗ ರವಿ, ಸಚಿವ ಚಲುವರಾಯಸ್ವಾಮಿ ಅವರ ಚಿತ್ರಗಳಿರುವ ಬ್ಯಾನರ್ ಮೇಲೆ ಕಲ್ಲು ತೂರಾಟ ನಡೆಸಿ, ಫ್ಲೆಕ್ಸ್ ಹರಿದು ಹಾಕಿ ಬೆಂಕಿ ಹಚ್ಚಿ ಪ್ರತಿಭಟಿಸಿದ್ದಾರೆ. ಇದನ್ನು ತಡೆಯಲು ಬಂದ ಪೊಲೀಸರು ಮತ್ತು ಬಿಜೆಪಿ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರ ಮೇಲೆ ಗೂಂಡಾಗಿರಿ ವರ್ತನೆ ತೋರಿದ್ದಾರೆ. ಪರಿಸ್ಥಿತಿ ಮಿತಿ ಮೀರಿದನ್ನು ಗಮನಿಸಿದ ಪೊಲೀಸರು ಅವರ ಮೇಲೆ ಲಾಠಿಚಾರ್ಜ್ ನಡೆಸಿದ್ದಾರೆ.
ಮಂಡ್ಯದ ಮಹಾವೀರ ವೃತ್ತದಲ್ಲಿ ಈ ಘಟನೆ ನಡೆದಿದ್ದು, ಫೆಕ್ಸ್ ಗೆ ಹೊಡೆದ ಕಲ್ಲು ವ್ಯಕ್ತಿ ತಲೆ ಮೇಲೆ ಬಿದಿದ್ದು, ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಪ್ರತಿಭಟನಾನಿರತ ಕಾರ್ಯಕರ್ತರು ಮುಂದಾಗಿದ್ದಾರೆ.
ಈ ಕೆಳಗಿನ ವಿಡಿಯೋದಲ್ಲಿ ಅನೇಕ ಸ್ಕೂಟರ್ಗಳನ್ನು ಬೀಳಿಸಿ, ಸಾವರ್ಜನಿಕ ಆಸ್ತಿಯನ್ನು ಹಾಳು ಮಾಡುತ್ತಿರುವ ಮತ್ತು ಪೊಲೀಸರು ತಡೆಯಲು ಬಂದಾಗ ಅವರ ವಿರುದ್ಧವೆ ತಿರುಗಿ ಬಿದ್ದದ್ದನ್ನು ಸ್ಪಷ್ಟವಾಗಿ ಕಾಣಬಹುದು.