Saturday, July 27, 2024

ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಗೆ ಮರಣೋತ್ತರ ಭಾರತ ರತ್ನ ಘೋಷಣೆ

Most read

ಪ್ರಮುಖ ಸಮಾಜವಾದಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಗುವುದು ಎಂದು ರಾಷ್ಟ್ರಪತಿ ಭವನ ಸೋಮವಾರ ಪ್ರಕಟಿಸಿದೆ.

ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ನಾಯಕರಾದ ಕರ್ಪೂರಿ ಠಾಕೂರ್ ಅವರು ಹಿಂದುಳಿದ ಜಾತಿಗಳನ್ನು ಬಲಪಡಿಸುವ ಕಾರ್ಯ ಮಾಡಿದ್ದರು. ಇದರಂದ ಅವರನ್ನು ‘ಜನ ನಾಯಕ’ ಎಂದು ಹೆಸರು ಮಾಡಿದ್ದಾರೆ. ನಾಳೆ, ಜನವರಿ 24ರಂದು ಜನ್ಮ ಶತಮಾನೋತ್ಸವ ಇದ್ದು, ಇದಕ್ಕೂ ಮುನ್ನವೇ ಇಂದು ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ (ಮರಣೋತ್ತರ) ಪ್ರಶಸ್ತಿ ನೀಡಲು ರಾಷ್ಟ್ರಪತಿಗಳು ನಿರ್ಧರಿಸಿದ್ದಾರೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.

ಜನವರಿ 24, 1924 ರಂದು ಜನಿಸಿದ ಠಾಕೂರ್ ಅವರು ಬ್ರಿಟಿಷ್ ಆಡಳಿತದ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದರು. ಅವರು 1952 ರಲ್ಲಿ ಮೊದಲ ಬಾರಿಗೆ ತಮ್ಮ ಚುನಾವಣೆಯಲ್ಲಿ ಗೆದ್ದರು ಮತ್ತವರ ವೃತ್ತಿಜೀವನದಲ್ಲಿ ಒಂದೇ ಒಂದು ಚುನಾವಣೆಯಲ್ಲಿ ಸೋತಿಲ್ಲ ಎಂಬುದು ವಿಶೇಷ.

ಕರ್ಪೂರಿ ಠಾಕೂರ್ ಅವರು 1978ರ ಬಿಹಾರ ಸರ್ಕಾರಿ ಸೇವೆಗಳಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಜಾರಿ ಮಾಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಇದರ ಪ್ರತಿಫಲವಾಗಿ 1990ರಲ್ಲಿ ಮಂಡಲ್ ಆಯೋಗದ ವರದಿಯ ಅನುಷ್ಠಾನ ಮಾಡಲಾಯಿತು.

More articles

Latest article