Saturday, May 18, 2024

ಭಾರತ್ ಜೋಡೋ ನ್ಯಾಯ ಯಾತ್ರೆ‌ | 36ನೆಯ ದಿನ

Most read

ಸಂಗಮದ ಪವಿತ್ರ ಭೂಮಿಯಲ್ಲಿ ಯುವಜನರ ಮೇಲೆ ಅತ್ಯಾಚಾರ ನಡೆಯುತ್ತಿದೆ. ದೇಶದಲ್ಲಿ ಸುಮಾರು 50% ಒಬಿಸಿ, 15% ದಲಿತರು ಮತ್ತು 8% ಆದಿವಾಸಿಗಳು ಇದ್ದಾರೆ. ಅಂದರೆ ಒಟ್ಟು 73%. ನಿಜಾಂಶವೇನೆಂದರೆ, ದೇಶದ ಯುವಜನರಿಗೆ ಯಾವ ಭವಿಷ್ಯವೂ ಇಲ್ಲವಾಗಿದೆ- ರಾಹುಲ್‌ ಗಾಂಧಿ

ರಾಹುಲ್ ಗಾಂಧಿ ನೇತೃತ್ವದ ನ್ಯಾಯ ಯಾತ್ರೆಯು ಇಂದು ಉತ್ತರಪ್ರದೇಶದಲ್ಲಿ ಮುಂದುವರಿದಿದೆ.

ರಾಹುಲ್ ಗಾಂಧಿಯವರ ಸಂಸದೀಯ ಕ್ಷೇತ್ರವಾದ ಕೇರಳದ ವಯನಾಡಿನಲ್ಲಿ ಇಬ್ಬರು ಆನೆ ದಾಳಿಗೆ ಬಲಿಯಾದುದರಿಂದ ರಾಹುಲ್ ಗಾಂಧಿಯವರು ನಿನ್ನೆ ವಯನಾಡಿಗೆ ಪಯಣಿಸಿದ್ದರು. ಅಲ್ಲಿ ಅವರು ಸಂತ್ರಸ್ತರ ಮನೆಗಳಿಗೆ ತೆರಳಿ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಹಾಗಾಗಿ ಇಂದಿನ ಭಾರತ ಜೋಡೋ ನ್ಯಾಯ ಯಾತ್ರೆ ನಿಗದಿತ ಸಮಯಕ್ಕಿಂತ ತಡವಾಗಿ ಆರಂಭವಾಯಿತು.

ಇಂದಿನ (18.02.2024) ಕಾರ್ಯಕ್ರಮಗಳು ಹೀಗಿದ್ದವು. ಮಧ್ಯಾಹ್ನ 2.30 ಕ್ಕೆ ಉತ್ತರಪ್ರದೇಶದ ಪ್ರಯಾಗರಾಜ್ ನ ಆನಂದ ಭವನ ದಿಂದ ಪಾದಯಾತ್ರೆ; ವಯಾ ಮನಮೋಹನ ಪಾರ್ಕ್ – ನೇತ್ರಂ ಚೌರಾಹ – ಲಕ್ಷ್ಮಿ ಚೌರಾಹ. ಬಳಿಕ ಸಾರ್ವಜನಿರನ್ನುದ್ದೇಶಿಸಿ ಮಾತು. ಸಂಜೆಯ ವಿರಾಮ ಪ್ರಯಾಗರಾಜ್ ನ ಮಾವ್ ಅಯಿಮಾದಲ್ಲಿ. ರಾತ್ರಿಯ ವಾಸ್ತವ್ಯ ಪ್ರಯಾಗರಾಜ್ ನ ಸಕರು ಮಾವ್.

ಯಾತ್ರೆಯ ಸಂದರ್ಭದಲ್ಲಿ ಯುವಕನೊಬ್ಬ ಜನನಾಯಕ ರಾಹುಲ್ ಜತೆ ಉತ್ತರಪ್ರದೇಶದ ಅನ್ಯಾಯ, ಪೇಪರ್ ಲೀಕ್ ಮತ್ತು ಹೋರಾಟದ ಬಗ್ಗೆ ಹೇಳಿಕೊಂಡ.

ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಉತ್ತರಪ್ರದೇಶದಲ್ಲಿ RO-ARO ನಂತಹ ಪೇಪರ್ ಕೂಡಾ ಲೀಕ್ ಆಗುತ್ತಿದೆ. ಇದು ಯುವಜನರಿಗೆ ಮಾಡುತ್ತಿರುವ ಅನ್ಯಾಯ. ಪ್ರಧಾನ ಮಂತ್ರಿಯವರು ಈ ಅನ್ಯಾಯವನ್ನು ನಿಮಗೆ ಮಾಡುತ್ತಿದ್ದಾರೆ. ಸಂಗಮದ ಪವಿತ್ರ ಭೂಮಿಯಲ್ಲಿ ಯುವಜನರ ಮೇಲೆ ಅತ್ಯಾಚಾರ ನಡೆಯುತ್ತಿದೆ. ದೇಶದಲ್ಲಿ ಸುಮಾರು 50% ಒಬಿಸಿ, 15% ದಲಿತರು ಮತ್ತು 8% ಆದಿವಾಸಿಗಳು ಇದ್ದಾರೆ. ಅಂದರೆ ಒಟ್ಟು 73%. ನಿಜಾಂಶವೇನೆಂದರೆ, ದೇಶದ ಯುವಜನರಿಗೆ ಯಾವ ಭವಿಷ್ಯವೂ ಇಲ್ಲವಾಗಿದೆ. ಯಾಕೆಂದರೆ 200 ದೊಡ್ಡ ಕಂಪೆನಿಗಳಲ್ಲಿ ಒಬ್ಬನೇ ಒಬ್ಬ ಒಬಿಸಿ, ದಲಿತ ಮತ್ತು ಆದಿವಾಸಿ ವರ್ಗದ ವ್ಯಕ್ತಿ ಇಲ್ಲ.

ರಾಮಮಂದಿರ ಪ್ರಾಣ ಪ್ರತಿಷ್ಠೆಯಲ್ಲಿ ನಿಮಗೆ ಒಬಿಸಿ, ದಲಿತ ಮತ್ತು ಆದಿವಾಸಿ ವರ್ಗದ ವ್ಯಕ್ತಿ ಕಾಣಸಿಗಲಿಲ್ಲ. ಅಂದರೆ ದೇಶದ 73% ಮಂದಿ ಆ ಕಾರ್ಯಕ್ರಮದಲ್ಲಿ ಕಾಣಸಿಗಲಿಲ್ಲ. ಇದು ದೇಶದ73% ಜನರ ಕತೆ. ಆದರೆ ಬಿಜೆಪಿಗೆ ನೀವು ದೇಶದ ಮೇಲೆ ನಿಯಂತ್ರಣ ಹೊಂದುವುದು ಇಷ್ಟವಿಲ್ಲ. ಜಾತಿ ಜನಗಣತಿಯಿಂದ ದೇಶದ ಯುವಜನರಿಗೆ ನ್ಯಾಯ ಸಿಗಲಿದೆ” ಎಂದು ಅವರು ಹೇಳಿದರು.  

ಶ್ರೀನಿವಾಸ ಕಾರ್ಕಳ, ಮಂಗಳೂರು

ಯಾತ್ರೆ- 35 ಓದಿಭಾರತ್‌ ಜೋಡೊ ನ್ಯಾಯ ಯಾತ್ರೆ | 35 ನೇ ದಿನ

More articles

Latest article