Saturday, July 27, 2024

ಭಾರತ್‌ ಜೋಡೊ ನ್ಯಾಯ ಯಾತ್ರೆ | 35 ನೇ ದಿನ

Most read

ರಾಹುಲ್ ಗಾಂಧಿ ನೇತೃತ್ವದ ನ್ಯಾಯ ಯಾತ್ರೆಯು ಇಂದು ಉತ್ತರಪ್ರದೇಶದಲ್ಲಿ ಮುಂದುವರಿದಿದೆ. ಇಂದಿನ (17.02.2024) ಕಾರ್ಯಕ್ರಮಗಳು ಹೀಗಿದ್ದವು. 

ಬೆಳಿಗ್ಗೆ 9.00 ಕ್ಕೆ ಯಾತ್ರೆ ಆರಂಭ. ಉತ್ತರಪ್ರದೇಶ ವಾರಣಾಸಿಯ ಗೊಲಗೊಡ್ಡ ಮಂದಿರ ಮಾರ್ಗದಿಂದ; ವಿಶ್ವೇಶ‍್ವರಗಂಜ್- ಇರಾಹ –ಮೈದಾಗಿನ್  ಚೌರಾಹ – ಶ್ರೀ ಕಾಶಿ ವಿಶ್ವನಾಥ ಮಂದಿರ ದರ್ಶನ –  ಗೋಡ್ವಾಲಿಯಾ ಚೌರಾಹ ಮಾರ್ಗವಾಗಿ ಬಳಿಕ ಸಾರ್ವಜನಿಕ ಭಾಷಣ. ವಾರಣಾಸಿಯ ಮಂದುವಾದಿಹ್ ಚೌರಾಹದಲ್ಲಿ ಸ್ವಾಗತ ಕಾರ್ಯಕ್ರಮ. 12.00 ಕ್ಕೆ ಮಧ‍್ಯಾಹ್ನದ ವಿರಾಮ ವಾರಣಾಸಿಯ ಕರೌನಾದಲ್ಲಿ.

ಮಧ್ಯಾಹ್ನದ ನಂತರ 2.00 ಕ್ಕೆ ಜನ್ಸಾ ಚೌರಾಹ, ಭದೊಹಿ ಯಿಂದ ಯಾತ್ರೆ ಮತ್ತೆ ಆರಂಭ. ಸಂಜೆ 5.00 ಕ್ಕೆ ಭದೋನಿಯ ಇಂದಿರಾ ಚೌರಾಹದಲ್ಲಿ ಸ್ವಾಗತ ಕಾರ್ಯಕ್ರಮ. ಬಳಿಕ ಸಾರ್ವಜನಿಕ ಸಭೆ. ಬಳಿಕ ಸಾರ್ವಜನಿಕ ಭಾಷಣ. ರಾತ್ರಿ ಗ್ಯಾನಪುರ ಇಂಟರ್ ಕಾಲೇಜಿನಲ್ಲಿ ವಾಸ್ತವ್ಯ.

ವಾರಣಾಸಿಯಲ್ಲಿ ಯಾತ್ರೆ ಮುಂದುವರಿಯುತ್ತಿದ್ದಾಗ ಯುವಕನೊಬ್ಬ ತನ್ನ ನಿರುದ್ಯೋಗದ ಸಮಸ್ಯೆಯನ್ನು ರಾಹುಲ್ ಬಳಿ ಹೇಳಿಕೊಂಡ. ತನ್ನ ಕುಟುಂಬದವರು ಲಕ್ಷಾಂತರ ರುಪಾಯಿ ಖರ್ಚು ಮಾಡಿದ ಬಳಿಕವೂ ಖಾಲಿ ಕೈಯೊಂದಿಗೆ ಅಲ್ಲಿ ಇಲ್ಲಿ ಅಲೆದಾಡುವಂತಾಗಿದೆ ಎಂದು ಹೇಳಿದ. ಈ ಬಾರಿ ನರೇಂದ್ರ ಮೋದಿ ಸರಕಾರವನ್ನು ಸೋಲಿಸುತ್ತೇವೆ ಎಂದೂ ಆತ ಹೇಳಿದ.

“ದೇಶದಲ್ಲಿ ಇಂದು ಅತಿದೊಡ್ಡ ಎರಡು ಸಮಸ್ಯೆಯೆಂದರೆ – ನಿರುದ್ಯೋಗ ಮತ್ತು ಬೆಲೆ ಏರಿಕೆ. ಈಗ ಎರಡು ಭಾರತವಾಗಿದೆ. ಒಂದು ಬಿಲಿಯಾಧಿಪತಿಗಳದ್ದು, ಇನ್ನೊಂದು ಬಡವರದ್ದು. ದೇಶದ ದೊಡ್ಡ ದೊಡ್ಡ ಸುದ್ದಿ ಮಾಧ್ಯಮಗಳು ಅದಾನಿ ಮತ್ತು ಅಂಬಾನಿಯ ಕೈಯಲ್ಲಿವೆ. ಇವರು ರೈತರು, ಕಾರ್ಮಿಕರು, ಬಡವರನ್ನು ತೋರಿಸುವುದಿಲ್ಲ. ದಿನದ 24 ಗಂಟೆಯೂ ನರೇಂದ್ರಮೋದಿಯನ್ನು ತೋರಿಸುತ್ತಾರೆ. ನಾನಿಲ್ಲಿ ಗಂಗಾ ತಾಯಿಯ ಮುಂದೆ ಅಹಂಕಾರದಿಂದ ನಿಂತಿಲ್ಲ. ತಲೆ ಬಾಗಿಸಿ ನಿಂತಿದ್ದೇನೆ. ಇದೇ ರೀತಿಯಲ್ಲಿ ಭಾರತ ಜೋಡೋ ಯಾತ್ರೆಯೂ ನಡೆಯುತ್ತಿದೆ. ನಾನು ಎಲ್ಲರೊಂದಿಗೂ ತಲೆ ಬಾಗಿಸಿ ಬೆರೆಯುತ್ತಿದ್ದೇನೆ. ಯಾತ್ರೆಯಲ್ಲಿ ಯಾರೇ ಬರಲೀ, ತನ್ನ ಸಹೋದರನನ್ನು ಭೇಟಿಯಾಗಲು ಬಂದಿದ್ದೇನೆ ಎಂಬ ಭಾವನೆ ಅವರಲ್ಲಿ ಮೂಡಬೇಕು ಎನ್ನುವುದು ನನ್ನ ಆಶಯ” ಎಂದು ರಾಹುಲ್ ಹೇಳಿದರು.

ಇಂದು ಬೆಳಿಗ್ಗೆ 10.30 ರ ಸುಮಾರಿಗೆ ರಾಹುಲ್ ಗಾಂಧಿಯವರು ಕಾಶಿಯಲ್ಲಿ ಬಾಬಾ ವಿಶ‍್ವನಾಥ ಮಂದಿರದಲ್ಲಿ ದೇವರ ದರ್ಶನ ಪಡೆದು ಅಭಿಷೇಕ ಮಾಡಿದರು. ಕೊನೆ ಗಳಿಗೆಯಲ್ಲಿ ರಾಹುಲ್ ಅವರ ಕ್ಯಾಮರಾಮನ್ ಗೆ ಮಂದಿರದ ಒಳಗೆ ಹೋಗಲು ಅನುಮತಿ ಸಿಗಲಿಲ್ಲ. ಮೊದಲು ನೀಡಿದ್ದ ಅನುಮತಿಯನ್ನು ಹಿಂದೆಗೆದುಕೊಂಡರು. ಮಂದಿರದ ಕ್ಯಾಮರಾಮನ್ ಫೋಟೋ ತೆಗೆಯುತ್ತಾರೆ ಎಂದು ಜಿಲ್ಲಾಡಳಿತ ಭರವಸೆ ನೀಡಿತು. ಮೂರೂವರೆ ಗಂಟೆ ಕಾದ ಬಳಿಕವೂ ಫೋಟೋ ಸಿಗಲಿಲ್ಲ. ಕೇವಲ ಆರೇಳು ಚಿತ್ರಗಳನ್ನು ಕಳುಹಿಸಿದರು. ಅದರಲ್ಲಿ ಒಂದೂ ರಾಹುಲ್ ದೇವರ ದರ್ಶನ ಪಡೆಯುವ ಚಿತ್ರ ಇರಲಿಲ್ಲ. ಹೀಗೆ ಮಾಡಿ ಜಿಲ್ಲಾಡಳಿತವು ದಿಲ್ಲಿಯಲ್ಲಿ ಕುಳಿತ ‘ಕ್ಯಾಮರಾಜೀವಿ’ಯ ಸೇವಕನಿಗಿಂತ ಹೆಚ್ಚೇನೂ ಅಲ್ಲ ಎಂದು ಸಾಬೀತುಪಡಿಸಿತು.

ಇದು ರಾಜಕೀಯ ಮತ್ತು ವ್ಯಕ್ತಿ ಪೂಜೆಯಲ್ಲ, ಬದಲಿಗೆ ಸಣ್ಣತನವಾಗಿದೆ. ಆದರೆ ನೆನಪಿರಲಿ, ಶಿವನ ಭಕ್ತನನ್ನು ಆತನ ಸಂಕಲ್ಪದಿಂದ ನ್ಯಾಯದ ಈ ಮಹಾಸಂಗ್ರಾಮದಿಂದ ಯಾರೂ ಹಿಂದಕ್ಕೆ ಸರಿಸಲಾರರು, ಬಾಬಾ ವಿಶ‍್ವನಾಥ ಎಲ್ಲರಿಗೂ ಒಳ್ಳೆಯದು ಮಾಡಲಿ, ದುಷ್ಟರಿಗೂ ಸದ್ಬುದ್ಧಿ ಬರಲಿ ಎಂದು ಕಾಂಗ್ರೆಸ್  ಹೇಳಿದೆ.

ಶ್ರೀನಿವಾಸ ಕಾರ್ಕಳ, ಮಂಗಳೂರು

ನ್ಯಾಯ ಯಾತ್ರೆ- 34 ಭಾರತ್ ಜೋಡೋ ನ್ಯಾಯ ಯಾತ್ರೆ‌ | 34ನೆಯ ದಿನ

More articles

Latest article