ಬಿಜೆಪಿಯ ನಾಯಕರು ಇಡೀ ದೇಶದಲ್ಲಿ ದ್ವೇಷ ಹರಡುತ್ತಾರೆ. ಆದರೆ ಕಾಂಗ್ರೆಸ್ ಪ್ರೀತಿಯ ಸಂದೇಶ ಕೊಡುತ್ತದೆ. ಆದ್ದರಿಂದ ನಾವು ಎಲ್ಲರೂ ಒಂದುಗೂಡಿ ಬಿಜೆಪಿಯ ದ್ವೇಷದ ವಿರುದ್ಧ ಹೋರಾಡಬೇಕಾಗಿದೆ. ಯಾಕೆಂದರೆ ಇದು ಪ್ರೀತಿ ಮತ್ತು ಸಹೋದರತೆಯ ದೇಶ, ದ್ವೇಷದ ದೇಶವಲ್ಲ – ರಾಹುಲ್ ಗಾಂಧಿ
ನ್ಯಾಯ ಯಾತ್ರೆಯು ಬಿಹಾರ ರಾಜ್ಯದ ಬಳಿಕ ಇಂದು ಉತ್ತರಪ್ರದೇಶವನ್ನು ಪ್ರವೇಶಿಸಿದೆ. ಇಂದಿನ (16.02.2024) ಕಾರ್ಯಕ್ರಮಗಳು ಹೀಗಿದ್ದವು.
ಬೆಳಿಗ್ಗೆ 8.00 ಕ್ಕೆ ಬಿಹಾರ ಸಾಸಾರಾಮದ ಕಾಂಗ್ರೆಸ್ ಕಚೇರಿಯಿಂದ ಯಾತ್ರೆ ಆರಂಭ. 9.00 ಕ್ಕೆ ರೋಹಟಾಸ್ ನಲ್ಲಿ ಕಿಸಾನ್ ನ್ಯಾಯ ಪಂಚಾಯತ್. 12.00 ಕ್ಕೆ ಕೈಮೂರು ಮೊಹಾನಿಯಾದಲ್ಲಿ ಮಧ‍್ಯಾಹ್ನದ ವಿರಾಮ. ಅಪರಾಹ್ನ 2.00 ಕ್ಕೆ ರೊಹುವಾದಿಂದ ಯಾತ್ರೆ ಪುನರಾರಂಭ. ಬಿಹಾರ ಯಾತ್ರೆ ಕೊನೆ.
ಬಿಹಾರದ ನೌಬತ್ ಪುರ ಮತ್ತು ಉತ್ತರಪ್ರದೇಶದ ಗಡಿಯಲ್ಲಿ ಧ್ವಜ ಹಸ್ತಾಂತರ ಕಾರ್ಯಕ್ರಮ. ಉತ್ತರಪ್ರದೇಶದ ಚಾಂದೋಲಿಯ ಸಹಿಯದ್ರಾಜಾದಲ್ಲಿ ನೇಶನಲ್ ಇಂಟರ್ ಕಾಲೇಜ್ ನಿಂದ ಶಹೀದ ಸ್ಥಳದವರೆಗೆ ಪಾದಯಾತ್ರೆ. ಉತ್ತರಪ್ರದೇಶದ ಚಾಂದೋಲಿಯ ಪದಾವೋದಲ್ಲಿ ರಾತ್ರಿ ವಾಸ್ತವ್ಯ.
ಕಿಸಾನ್ ಪಂಚಾಯತ್ ನಲ್ಲಿ ಮಾತನಾಡಿದ ರಾಹುಲ್ ಗಾಂಧಿಯವರು, “ವಿಕಾಸ ಎಂದು ಹೇಳುವ ಸರಕಾರ ನಿಜವಾಗಿಯಾದರೆ ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ. ವಿಕಾಸದ ಹೆಸರಿನಲ್ಲಿ ಎಲ್ಲವನ್ನೂ ಅದಾನಿಯ ವಶಕ್ಕೆ ಕೊಟ್ಟುಬಿಟ್ಟಿದ್ದಾರೆ. ಇದು ವಿಕಾಸ ಅಲ್ಲ, ಇದು ಕಳ್ಳತನ. ರೈತರ ಬೆಳೆಗೆ ಸರಿಯಾದ ಬಲೆ ಸಿಗುತ್ತಿಲ್ಲ. ಸರಕಾರ ರಚಿಸಿದ ಬಳಿಕ ಕಾಂಗ್ರೆಸ್ ಎಂ ಎಸ್ ಪಿ (ಕನಿಷ್ಠ ಬೆಂಬಲ ಬೆಲೆ) ಯ ಕಾನೂನು ತರಲಿದೆ. ರೈತರು ಏನನ್ನೇ ಕಾಂಗ್ರೆಸ್ ಬಳಿ ಕೇಳಿದಾಗಲೂ ಅದನ್ನು ಕೊಡಲಾಗಿದೆ. ಅದು ಸಾಲ ಮನ್ನಾ ಇರಬಹುದು, ಎಂ ಎಸ್ ಪಿ ಇರಬಹುದು, ಕಾಂಗ್ರೆಸ್ ಯಾವಾಗಲೂ ರೈತರ ರಕ್ಷಣೆ ಮಾಡಿದೆ, ಯಾವಾಗಲೂ ಮಾಡಲಿದೆ.
ಬಿಹಾರದಲ್ಲಿ ತೇಜಸ್ವಿ ಅವರು ಸರಕಾರಿ ನೌಕರಿ ಭರ್ತಿ ಮಾಡುವ ಯತ್ನ ಮಾಡಿದರು. ಭಾರತದಲ್ಲಿ ಇಂಡಿಯಾ ಸರಕಾರ ಬಂದಾಗ ಇಡೀ ದೇಶದಲ್ಲಿ ಸರಕಾರಿ ನೌಕರಿ ಭರ್ತಿ ಮಾಡುತ್ತೇವೆ ಎಂದು ನಾನು ನಿಮಗೆ ಭರವಸೆ ಕೊಡುತ್ತೇವೆ. ಅಗ್ನಿಪಥ ಯೋಜನೆ ಬರುವ ಮುನ್ನ 1 ಲಕ್ಷ 50 ಸಾವಿರ ಯುವಕರು ವರ್ಷ ಇಡೀ ಶ್ರಮಿಸಿದರು ಮತ್ತು ಅವರಿಗೆ ಸೇನೆಯು ಅವಕಾಶ ನೀಡಿತು. ಅಗ ಕೊರೋನಾ ಬಂದಿತು. ಸುಮಾರು ಮೂರು ವರ್ಷ ಅಲೆದಾಡಿದ ಬಳಿಕ ಆ ಯುವಕರಿಗೆ ನಾವು ನಿಮಗೆ ಸೇನೆಯಲ್ಲಿ ಕೆಲಸ ಕೊಡುವುದು ಸಾಧ‍್ಯವಿಲ್ಲ ಎನ್ನಲಾಯಿತು. ಇಂದಿಗೂ ಆ ಯುವಕರು ಅಲೆದಾಡುತ್ತಿದ್ದಾರೆ. ಆದರೆ ನಿಮ್ಮ ಹೋರಾಟ ನಮ್ಮ ಹೋರಾಟ ಎಂದು ನಾವು ಅವರಿಗೆ ಹೇಳಿದ್ದೇವೆ” ಎಂದರು.
ಉತ್ತರಪ್ರದೇಶ ನೌಬತ್ ಪುರದಲ್ಲಿ ನಡೆದ ಬೃಹತ್ ಜನಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿಯವರು, “ಭಾರತ ಜೋಡೋ ಯಾತ್ರೆಯ ಸಮಯದಲ್ಲಿ ದ್ವೇಷದ ಬಾಜಾರಿನಲ್ಲಿ ಪ್ರೀತಿಯ ದುಕಾನು ತೆರೆಯಬೇಕಾಗಿದೆ ಎಂಬ ಘೋಷಣೆ ಹೊರಟಿತು. ಈ ಘೋಷಣೆಯೇ ಕಾಂಗ್ರೆಸ್ ನ ವಿಚಾರಧಾರೆ. ಬಿಜೆಪಿಯ ನಾಯಕರು ಇಡೀ ದೇಶದಲ್ಲಿ ದ್ವೇಷ ಹರಡುತ್ತಾರೆ. ಆದರೆ ಕಾಂಗ್ರೆಸ್ ಪ್ರೀತಿಯ ಸಂದೇಶ ಕೊಡುತ್ತದೆ. ಆದ್ದರಿಂದ ನಾವು ಎಲ್ಲರೂ ಒಂದುಗೂಡಿ ಬಿಜೆಪಿಯ ದ್ವೇಷದ ವಿರುದ್ಧ ಹೋರಾಡಬೇಕಾಗಿದೆ. ಯಾಕೆಂದರೆ ಇದು ಪ್ರೀತಿ ಮತ್ತು ಸಹೋದರತೆಯ ದೇಶ, ದ್ವೇಷದ ದೇಶವಲ್ಲ.
ಭಾರತ ಜೋಡೋ ನ್ಯಾಯ ಯಾತ್ರೆಯ ಸಮಯದಲ್ಲಿ ದೇಶದಲ್ಲಿ ಹರಡುತ್ತಿರುವ ದ್ವೇಷದ ಕಾರಣವೇನು ಎಂದು ಜನ ಕೇಳಿದರು. ದೇಶದಲ್ಲಿ ಹರಡುತ್ತಿರುವ ದ್ವೇಷಕ್ಕೆ ಕಾರಣ ಭಯ ಮತ್ತು ಭಯದ ಕಾರಣದಿಂದ ಅನ್ಯಾಯ ಎನ್ನುವುದೇ ಅದಕ್ಕೆ ಬಂದ ಉತ್ತರ. ದೇಶದ ಪ್ರತಿಯೊಂದು ಭಾಗದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಂತದಲ್ಲಿ ಅನ್ಯಾಯವಾಗುತ್ತಿದೆ. ಬಿಹಾರದ ಯುವಕರಿಗೆ ಸೇನೆ, ರೈಲ್ವೇ ಮತ್ತೆ ಸಾರ್ವಜನಿಕ ವಲಯದಲ್ಲಿ ಕೆಲಸ ಸಿಗುವುದಿಲ್ಲ. ಯಾಕೆಂದರೆ ನೀವೆಲ್ಲರೂ ಕಾಂಟ್ರಾಕ್ಟ್ ನಲ್ಲಿಯೇ ಕೆಲಸ ಮಾಡಬೇಕು ಎನ್ನುವುದು ಕೇಂದ್ರ ಸರಕಾರದ ಬಯಕೆ. ನೀವು ರಾಮ ಮಂದಿರದ ಪ್ರಾಣ ಪ್ರತಿಷ್ಠೆ ನೋಡಿದಿರಿ. ಅದರಲ್ಲಿ ಬಡವರು, ರೈತರು ಅಥವಾ ಕಾರ್ಮಿಕರು ನಿಮಗೆ ಕಂಡರೇ? ಅದರಲ್ಲಿ ಭಾಗವಹಿಸಿದ್ದು ದೊಡ್ಡ ದೊಡ್ಡ ಶ್ರೀಮಂತರು. ಅಲ್ಲಿ ಬಡವರು, ರೈತರು ಮತ್ತು ಕಾರ್ಮಿಕರು ಕಾಣಲಿಲ್ಲ” ಎಂದರು.
ನ್ಯಾಯ ಯಾತ್ರೆಯು ಉತ್ತರಪ್ರದೇಶ ಪ್ರವೇಶಿಸುವಾಗ ಬಿಹಾರದ ಕಾಂಗ್ರೆಸ್ ಅಧ್ಯಕ್ಷ ಡಾ ಅಖಿಲೇಶ‍್ ಪ್ರಸಾಧ್ ಸಿಂಗ್ ಅವರು ಉತ್ತರಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈಯವರಿಗೆ ಧ್ವಜ ಹಸ್ತಾಂತರ ಮಾಡಿದರು.
ಶ್ರೀನಿವಾಸ ಕಾರ್ಕಳ, ಮಂಗಳೂರು