Tuesday, December 10, 2024

ಜನ ಅಧಿಕಾರ ಕೊಟ್ಟಿದ್ದಾರೆ ಸೌಜನ್ಯದಿಂದ ಚಲಾಯಿಸಿ:ಜೋಷಿ

Most read

ಸಂಡೂರು: ರಾಜ್ಯದ ಮತದಾರರು ನಿಮಗೆ ಅಧಿಕಾರ ಕೊಟ್ಟಿದ್ದಾರೆ. ಅದನ್ನು ಸೌಜನ್ಯದಿಂದ ಚಲಾಯಿಸಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ  ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಸಂಡೂರು ವಿಧಾನಸಭೆ ಕ್ಷೇತ್ರದ ಕುರೆಕುಪ್ಪ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಪರ ಬಹಿರಂಗ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಇಂದು ಬರೀ ಹಗರಣ, ಭ್ರಷ್ಟಾಚಾರ, ಮುಸ್ಲಿಂ ತುಷ್ಟೀಕರಣದಲ್ಲಿ ಮುಳಿಗಿದೆ. ಜನ ಕೊಟ್ಟ ಅಧಿಕಾರವನ್ನು ಸೌಜನ್ಯದಿಂದ ನಡೆಸಿ ಎಂದು ಹೇಳಿದರು. ಎಸ್‌ ಸಿ ಸಮುದಾಯದ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಯಾವತ್ತೂ ಬದ್ಧವಾಗಿದೆ. ಅದಕ್ಕಾಗಿಯೇ ಪ್ರತ್ಯೇಕ ನಿಗಮ ಮಂಡಳಿ ಮಾಡಿ  ಹೆಚ್ಚಿನ ಅನುದಾನ ನೀಡಿದೆ. ಆದರೆ, ಕಾಂಗ್ರೆಸ್ ಸರ್ಕಾರ ಅದರಲ್ಲಿನ ಹಣ ದೋಚುತ್ತಿದೆ ಎಂದರು.

ಸಂಡೂರು ಕ್ಷೇತ್ರದಲ್ಲಿ ನ್ಯಾಯಯುತ ಗಣಿಗಾರಿಕೆ ಮತ್ತು ಗಣಿ ಕಾರ್ಮಿಕರ ಹಿತರಕ್ಷಣೆ ಕೆಲಸವನ್ನು ಬಿಜೆಪಿ ಮಾಡಲಿದೆ. ಇಲ್ಲಿ ನ್ಯಾಯಸಮ್ಮತವಾಗಿ ಗಣಿಗಾರಿಕೆ, ಕೈಗಾರಿಕೆ, ಗಣಿ ಕಾರ್ಮಿಕರ, ಬಡವರ ಪರ ಅಭಿವೃದ್ಧಿ ಒಟ್ಟಾರೆ ಸಂಡೂರಿನ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರನ್ನು ಇಲ್ಲಿಯ ಮತದಾರರು ಶ್ರೀರಾಮನ ಸ್ಥಾನದಲ್ಲಿ ನಿಂತು ಆಶೀರ್ವದಿಸಬೇಕು ಎಂದು ಸಚಿವ ಜೋಶಿ ಕರೆ ನೀಡಿದರು.

More articles

Latest article