Tuesday, December 10, 2024

ಬಂಗಾರಪೇಟೆಯಲ್ಲಿ ಕುಸಿದ ಮೂರು ಅಂತಸ್ತಿನ ಕಟ್ಟಡ

Most read

ಕೋಲಾರ: ಜಿಲ್ಲೆಯ ಬಂಗಾರಪೇಟೆಯಲ್ಲಿ ಮೂರು ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ. ವಾಸದ ಮನೆಗಳಿರುವ ಈ ಕಟ್ಟಡ ವಾಲಿತ್ತು. ಮುನ್ನೆಚ್ಚರಿಕೆಯ ಕ್ರಮವಾಗಿ ಮೊದಲೇ ಕ್ರಮ ಕೈಗೊಂಡಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಪಟ್ಟಣದ ಕೆಇಬಿ ರಸ್ತೆಯ ಬೂದಿಕೋಟೆ ರಾಜಕುಮಾರ್‌ ಈ ಕಟ್ಟಡದ ಮಾಲೀಕರು ಎಂದು ತಿಳಿದು ಬಂದಿದೆ.  ಮುಂಜಾನೆ ಕಟ್ಟಡ ವಾಲುತ್ತಿದ್ದಂತೆ ಮನೆಯಲ್ಲಿದ್ದವರು ಹೊರಗೆ ಬಂದಿದ್ದರು. ಈ ಕಟ್ಟಡದಲ್ಲಿ ಮೂರು ಮನೆಗಳಿದ್ದು ಎಲ್ಲರೂ ಹೊರ ಬಂದಿದ್ದಾರೆ. ಅಗ್ನಿಶಾಮಕ ದಳ, ಬೆಸ್ಕಾಂ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.  ಕಟ್ಟಡದ ವಿದ್ಯುತ್‌ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು. ಪೊಲೀಸರು ಜನಜಂಗುಳಿಯನ್ನು ನಿಯಂತ್ರಿಸಿದ್ದರು.

More articles

Latest article