Monday, May 20, 2024

SSLC ಫಲಿತಾಂಶ ಪ್ರಕಟ: ಬಾಗಲಕೋಟೆ ವಿದ್ಯಾರ್ಥಿನಿ ಅಂಕಿತ ಬಸಪ್ಪಗೆ 625ಕ್ಕೆ 625 ಅಂಕ: ರಾಜ್ಯಕ್ಕೆ ಏಕೈಕ ಪ್ರಥಮ!

Most read

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ಇಂದು 8.69 ಲಕ್ಷ ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಅನ್ನು ಬಿಡುಗಡೆ ಮಾಡಿದ್ದು, ಈ ಬಾರಿಯೂ ಬಾಲಕಿಯರೇ ಮೈಲುಗೈ ಸಾಧಿಸಿದ್ದಾರೆ. ಅದರಲ್ಲಿಯೂ ಬಾಗಲಕೋಟೆ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರು 625/625ಕ್ಕೆ ಅಂಕ ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.


*ಎಸ್ ಎಸ್ ಎಲ್ ಸಿ ಟಾಪರ್ಸ್*

• ಅಂಕಿತಾ ಬಸಪ್ಪ, ಬಾಗಲಕೋಟೆ- 625/625 ( ರಾಜ್ಯಕ್ಕೆ ಏಕೈಕ ಪ್ರಥಮ)
• ಹರ್ಷಿತಾ ಡಿಎಂ, ಮಧುಗಿರಿ- 624/625
• ಮೇದಾ ಪಿ.ಶೆಟ್ಟಿ, ಬೆಂಗಳೂರು- 624/625
• ಚಿನ್ಮಯ್‌, ದಕ್ಷಿಣ ಕನ್ನಡ- 624/625
• ಸಿದ್ದಾಂತ್‌, ಚಿಕ್ಕೋಡಿ – 624/625
• ದರ್ಶನ್‌, ಚಿನ್ಮಯ್,ಶ್ರೀರಾಮ್‌,ಶಿರಸಿ – 624/625

ಬೆಂಗಳೂರಿನ ಮಲ್ಲೇಶ್ವರಂ 6ನೇ ಅಡ್ಡರಸ್ತೆಯ ಕಚೇರಿಯಲ್ಲಿ ಫಲಿತಾಂಶ ಕುರಿತು ಸುದ್ದಿಗೋಷ್ಠಿ ನಡೆಸುವ ಮೂಲಕ ಫಲಿತಾಂಶ ಬಿಡುಗಡೆ ಮಾಡಿದೆ.

  • ಉಡುಪಿ‌ ಜಿಲ್ಲೆ ಪ್ರಥಮ ಸ್ಥಾನ – 94%
    • ದಕ್ಷಿಣ ಕನ್ನಡ ಜಿಲ್ಲೆಗೆ ಎರಡನೇ ಸ್ಥಾನ 92.12% .
    • ಶಿವಮೊಗ್ಗ ಜಿಲ್ಲೆಗೆ ಮೂರನೇ ಸ್ಥಾನ. 88.67%.
    • ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ, 50.59%
    • ಕೊಡಗು 88%,
    • ಉತ್ತರ ಕನ್ನಡ 86%.
    • ಹಾಸನ 86%
    • ಮೈಸೂರು 85%,
    • ಶಿರಸಿ 84%,
    • ಬೆಂಗಳೂರು ಗ್ರಾ.83%
    • ಚಿಕ್ಕಮಗಳೂರು 83%,
    • ವಿಜಯಪುರ 79%
    • ಬೆಂ.ದಕ್ಷಿಣ 79%,
    • ಬೆಂಗಳೂರು ಉತ್ತರ 77%

ಮೊಬೈಲ್‌ನಲ್ಲಿ ರಿಸಲ್ಟ್‌ ಚೆಕ್‌ ಮಾಡುವ ವಿಧಾನ
ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಕ್ರೋಮ್‌ ಅಪ್ಲಿಕೇಶನ್‌ಗೆ ಹೋಗಿ. ಸರ್ಚ್‌ ಬಾರ್‌ನಲ್ಲಿ https://karresults.nic.in ಎಂದು ಟೈಪಿಸಿ, ಎಂಟರ್‌ ಮಾಡಿ. ‘SSLC Exam 1 2024 Result’ ಗೆ ಸಂಬಂಧಿತ ಲಿಂಕ್ ಮೇಲೆ ಕ್ಲಿಕ್ ಮಾಡಿ. ತೆರೆದ ವೆಬ್‌ಪೇಜ್‌ನಲ್ಲಿ ನಿಮ್ಮ ರಿಜಿಸ್ಟರ್‌ / ರೋಲ್‌ ನಂಬರ್ ಟೈಪಿಸಿ. ನಂತರ ‘View’ ಎಂದಿರುವಲ್ಲಿ ಕ್ಲಿಕ್ ಮಾಡಿ. ರಿಸಲ್ಟ್‌ ಪ್ರದರ್ಶಿತವಾಗುತ್ತದೆ. ಚೆಕ್‌ ಮಾಡಿಕೊಳ್ಳಿ.

More articles

Latest article