ಹೀಗೊಂದು ರಂಗ ಗೌರವದ ಸುತ್ತ

ನಾಟಕ ಪ್ರದರ್ಶನಗಳು ಮುಗಿದ ನಂತರ ಅವುಗಳಿಗೆ ಅಯಸ್ಸು ಇರುವುದಿಲ್ಲ. “ರಂಗದ ಮೇಲೆ ಅವತ್ತೇ ಹುಟ್ಟಿ ಅವತ್ತೇ ನಾಟಕಗಳು ಸಾಯುತ್ತವೆ” ಎಂಬ ಮಾತು ಸುಳ್ಳಲ್ಲ. ಆದರೆ ನಿರ್ದೇಶಕರು,  ಕಲಾವಿದರು, ನೇಪಥ್ಯ ತಜ್ಞರುಗಳು ಸೇರಿ ಕಷ್ಟ ಪಟ್ಟು ಕಟ್ಟಿದ ನಾಟಕಗಳು ರಂಗ ವಿಮರ್ಶೆಗಳಲ್ಲಿ, ರಂಗ ಲೇಖನಗಳಲ್ಲಿ ದಾಖಲಾದರೆ ಹೆಚ್ಚು ಕಾಲ ಬದುಕುತ್ತವೆ. ಮುಂದಿನ ತಲೆಮಾರಿಗೂ ವರ್ಗಾಯಿಸಲ್ಪಡುತ್ತವೆ. ಅಧ್ಯಯನ ಮಾಡುವವರಿಗೆ ಆಕರಗಳಾಗುತ್ತವೆ. ಹೀಗಾಗಿ ಡಾಕ್ಟರೇಟ್ ಪಡೆಯಲು ಅಧ್ಯಯನ ಮಾಡುವವರಿಗೆ ನನ್ನ ಲೇಖನಗಳು ಪ್ರಯೋಜನಕ್ಕೆ ಬರುತ್ತವಲ್ಲಾ ಎನ್ನುವ ಸಾರ್ಥಕತೆ ನನ್ನದು ಶಶಿಕಾಂತ ಯಡಹಳ್ಳಿ, ರಂಗಕರ್ಮಿ.

ಈ ಸನ್ಮಾನ ಪ್ರಶಸ್ತಿಗಳೆಂದರೆ ಯಾಕೋ ನನಗೆ ಮೊದಲಿನಿಂದಲೂ ಒಂದು ರೀತಿಯ ಸಂಕೋಚ, ಅದೆಂತಹುದೋ ಮುಜುಗರ. ಇದನ್ನೆಲ್ಲಾ ಪಡೆಯಲು ಇನ್ನೂ ಅಂತಹ ಗಮನಾರ್ಹ ಸಾಧನೆ ನಾನಿನ್ನೂ ಮಾಡಿಲ್ಲ ಎನ್ನುವ ಮನೋಭಾವ. ಅದರಲ್ಲೂ ಮೂರೂವರೆ ದಶಕಗಳಿಂದ ನಾನು ಕನ್ನಡ ರಂಗಭೂಮಿಯಲ್ಲಿ ಬಹು ಆಯಾಮದಲ್ಲಿ ತೊಡಗಿಕೊಂಡಿದ್ದರೂ ರಂಗಭೂಮಿಗೆ ಕೊಟ್ಟ ಕೊಡುಗೆ ಸಾಲದು. ಆದರೆ ರಂಗಭೂಮಿ ನನಗೆ ಕೊಟ್ಟ ಅಸ್ಮಿತೆ ಅಂದರೆ ಐಡೆಂಟಿಟಿ ಇದೆಯಲ್ಲಾ ಅದು ದೊಡ್ಡದು.

ನಾನು ನಿರೀಕ್ಷಿಸದೇ ಇದ್ದರೂ ಹಲವಾರು ಪ್ರಶಸ್ತಿಗಳು, ನೂರಾರು ರಂಗಗೌರವ ಸನ್ಮಾನಗಳು ದೊರಕಿವೆ. ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯಿಂದ ಹಿಡಿದು ಆರ್ಯಭಟ ಎನ್ನುವ ಅಂತಾರಾಷ್ಟ್ರೀಯ ಪ್ರಶಸ್ತಿಯವರೆಗೂ ಬೇಕಾದಷ್ಟು ಅವಾರ್ಡ್ ಗಳು ದಕ್ಕಿವೆ. ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯತನದ ಭಾಗ್ಯವೂ ನನ್ನದಾಗಿದೆ. ಮನೆಯಲ್ಲಿ ಪ್ರಶಸ್ತಿ ಫಲಕ, ಮೆಮೆಂಟೋ, ಸ್ಮರಣ ಫಲಕಗಳನ್ನು ಹೊಂದಿಸಿ ಇಡಲು ಜಾಗದ ಕೊರತೆಯಾಗಿ ಮೂಟೆ ಕಟ್ಟಿ ಇಟ್ಟಿರುವೆ. ಪ್ರತಿ ವರ್ಷ ಸನ್ಮಾನಗಳಿಂದ ಬಂದ ಶಾಲುಗಳನ್ನು ಅಗತ್ಯ ಇರುವವರಿಗೆ ವರ್ಗಾಯಿಸಿರುವೆ. ಹಾರ ಪೇಟಗಳನ್ನು ನನ್ನ ಸಂಸ್ಥೆಯ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ಹಾಕಿ ಋಣಭಾರ ಕಳೆದುಕೊಂಡಿರುವೆ.

ಕಳೆದ ವರ್ಷ ಸರಕಾರ ಸುವರ್ಣ ಕರ್ನಾಟಕ ಹೆಸರಲ್ಲಿ ಹೆಚ್ಚುವರಿಯಾಗಿ 50 ರಾಜ್ಯೋತ್ಸವ ಪ್ರಶಸ್ತಿಗಳನ್ನು ಕೊಡುವುದಾಗಿ ನಿರ್ಧರಿಸಿತ್ತು. ಆಯ್ಕೆ ಸಮಿತಿಯಲ್ಲಿದ್ದ ಸ್ನೇಹಿತರೊಬ್ಬರು ಫೋನ್ ಮಾಡಿ ನನ್ನ ವಯಸ್ಸೆಷ್ಟು ಎಂದು ಕೇಳಿದರು. ಹೇಳಿದೆ. ‘ಛೇ 60 ವರ್ಷ ತುಂಬಿದ್ದರೆ ರಾಜ್ಯೋತ್ಸವ ಪ್ರಶಸ್ತಿ ಕೊಡಿಸಬಹುದಾಗಿತ್ತು’ ಎಂದು ವಿಷಾದ ವ್ಯಕ್ತಪಡಿಸಿದರು.

ಆದರೂ ಇಷ್ಟೆಲ್ಲಾ ಪ್ರೀತಿ ಗೌರವ ಸನ್ಮಾನಗಳಿಗೆ ನಾನು ಅರ್ಹನಾ? ಎನ್ನುವ ಪ್ರಶ್ನೆ ಆಗಾಗ ಕಾಡುತ್ತದೆ. ಆರಂಭದಲ್ಲಿ ಇಂತವನ್ನೆಲ್ಲಾ ನಿರಾಕರಿಸುತ್ತಿದ್ದೆ. ಅದೊಂದು ದಿನ ನನ್ನ ಗುರುಗಳಾದ ದಿ. ಎ.ಎಸ್.ಮೂರ್ತಿಗಳು “ಹುಚ್ಚಪ್ಪಾ, ನೀನಾಗಲೇ ಪ್ರಶಸ್ತಿ ಸನ್ಮಾನಗಳನ್ನು ಡಿಮಾಂಡ್ ಮಾಡಿ ಪಡೆದರೆ ಅದು ತಪ್ಪು, ಅವುಗಳೇ ಹುಡುಕಿಕೊಂಡು ಬಂದರೆ ಎಂದೂ ನಿರಾಕರಿಸಬೇಡ” ಎಂದು ಕಿವಿಮಾತು ಹೇಳಿ ಬೆನ್ನು ಚಪ್ಪರಿಸಿದ್ದರು. ಇನ್ನೊಬ್ಬ ರಂಗ ಗುರುಗಳಾದ ಆರ್.ನಾಗೇಶರವರು “ಪ್ರಶಸ್ತಿಗಳನ್ನು ಪಡಕೊಂಡವರಿಗಿಂತಾ ಹೊಡಕೊಂಡವರೇ ಹೆಚ್ಚಿರುವಾಗ ತಾನಾಗಿಯೇ ಬಂದ ಪ್ರಶಸ್ತಿ ಸನ್ಮಾನಗಳನ್ನು ಬೇಡ ಎನ್ನುವ ತಪ್ಪು ಮಾಡಬೇಡ” ಎಂದರು. ಹೀಗಾಗಿ… “ಬಂದಿದ್ದೆಲ್ಲಾ ಬರಲಿ ಆ ರಂಗಭೂಮಿಯ ದಯೆಯೊಂದಿರಲಿ” ಎಂದು ಅತ್ಯಂತ ವಿನಯದಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡೆ.

ಕಲಾಗ್ರಾಮದಲ್ಲಿ ರಂಗ ಗೌರವ ಸನ್ಮಾನ

ಇದೆಲ್ಲಾ ಈಗ ಯಾಕೆ ನೆನಪಿಸಿಕೊಳ್ಳಬೇಕಾಯಿತು ಎಂದರೆ, ಮಾರ್ಚ್ 24 ರಂದು ಕಲಾಸಂಗಮ ಹಾಗೂ ರಂಗದರ್ಶನ ರಂಗ ತಂಡದ ರಂಗ ಗೆಳೆಯರು ಕಲಾಗ್ರಾಮದಲ್ಲಿ ನನಗೊಂದು ರಂಗ ಗೌರವ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಕಲಾದರ್ಶನದ ಈಶ್ವರ್ ದಲ ಹಾಗೂ ರಂಗದರ್ಶನದ ಮೈಕೋ ಶಿವಶಂಕರ್ ರವರು ಫೋನ್ ಮಾಡಿ ಹೇಳಿದಾಗಲೇ ‘ಇದೆಲ್ಲಾ ಬೇಕಿಲ್ಲ, ಬೇರೆ ಯಾರಾದರೂ ಅರ್ಹರನ್ನು ಸನ್ಮಾನಿಸಿ’ ಎಂದು ಹೇಳಿದೆ. ಆದರೆ ಅವರು ಕೇಳಲಿಲ್ಲ. ಅವರ ಪ್ರೀತಿಯ ಒತ್ತಾಯಕ್ಕೆ ಮಣಿದು ಒಪ್ಪಿಕೊಳ್ಳಬೇಕಾಯ್ತು. ಹಾಗೂ ಅಂದು ತುಂಬಿದ ಕಲಾಗ್ರಾಮದ ರಂಗಮಂದಿರದಲ್ಲಿ ರಂಗಗೌರವ ಸಾಂಗವಾಗಿ ನೆರವೇರಿತು. ಪ್ರೀತಿ ಹಾಗೂ ಆತ್ಮೀಯತೆಯಿಂದ ಇಂತಹುದೊಂದು ಸನ್ಮಾನ ಸಮಾರಂಭ ಆಯೋಜಿಸಿದ ರಂಗ ಗೆಳೆಯರಿಗೆ ಧನ್ಯವಾದಗಳು.

ಅತಿಥಿಗಳಾಗಿ ಬಂದ ನಟ, ನಿರ್ದೇಶಕರಾದ ಬಿ.ಸುರೇಶರವರು ನನ್ನ ಬಗ್ಗೆ ಕೆಲವು ಒಳ್ಳೆಯ ಮಾತುಗಳನ್ನಾಡಿದ್ದಕ್ಕೆ ಅವರಿಗೂ ಧನ್ಯವಾದಗಳು. ಕನ್ನಡ ರಂಗಭೂಮಿಯ ಅಮ್ಮ ವಿಜಯಮ್ಮನವರು ರಂಗಗೌರವ ಕಾರ್ಯಕ್ರಮಕ್ಕಾಗಿ ಬಂದು ಶುಭ ಹಾರೈಸಿದ್ದು ಹಾಗೂ ಸುಂದರವಾದ ಕಂಚಿನ ಬುದ್ಧನ ಕಲಾಕೃತಿಯನ್ನು ಕೊಡುಗೆಯಾಗಿ ನೀಡಿದ್ದು ಮರೆತೆನೆಂದರೂ ಮರೆಯಲಾಗದ ಸೋಜಿಗ.

ಕಾರ್ಯಕ್ರಮದ ನಂತರ ಬಿಳಿ ಗಡ್ಡದ ವ್ಯಕ್ತಿಯೊಬ್ಬರು ಹತ್ತಿರ ಬಂದರು. “ಸರ್ ನಾನು ಡಾಕ್ಟರ್‌ ನರಸಿಂಹ ಪ್ರಸಾದ್” ಎಂದು ಪರಿಚಯಿಸಿಕೊಂಡರು. “ತಮಿಳುನಾಡಿನ ಕುಪ್ಪಂ ಯೂನಿವರ್ಸಿಟಿಯಲ್ಲಿರುವೆ. ಕನ್ನಡ ನಾಟಕಗಳಲ್ಲಿ ಜಾನಪದದ ಪ್ರಭಾವ ಕುರಿತು ಡಾಕ್ಟರೇಟ್ ಮಾಡಿರುವೆ. ನಿಮ್ಮಿಂದಾಗಿ ನಾನು ಡಾಕ್ಟರೇಟ್ ಮಾಡಲು ಸಾಧ್ಯವಾಯಿತು” ಎಂದಾಗ ನಿಜಕ್ಕೂ ನನಗೆ ಅಚ್ಚರಿ ಆಯಿತು. ಯಾಕೆಂದರೆ ಅವರನ್ನು ಈ ಮೊದಲು ಎಲ್ಲಿಯೂ ನೋಡಿದ ನೆನಪಿರಲಿಲ್ಲ. ಎಂದೂ ಯಾವ ಚರ್ಚೆಯನ್ನೂ ಮಾಡಿರಲಿಲ್ಲ. ಆದರೂ ಈ ಆಧುನಿಕ ಏಕಲವ್ಯ ಎಲ್ಲಿಂದ ಉದ್ಭವಿಸಿದರು ಎಂಬುದು ಅಚ್ಚರಿಯ ಸಂಗತಿಯಾಯ್ತು. ಅದು ಹೇಗೆ ಸಾಧ್ಯ? ಎಂದು ಅನುಮಾನದಿಂದಲೇ ಪ್ರಶ್ನಿಸಿದೆ.

“ತಮಿಳುನಾಡಿನ ಕುಪ್ಪಂ ನಲ್ಲಿರುವ ನನಗೆ ಕನ್ನಡ ರಂಗಭೂಮಿಯ ಬಗ್ಗೆ ಹೆಚ್ಚು ಮಾಹಿತಿಗಳು ಲಭ್ಯವಿರಲಿಲ್ಲ. ಬ್ಲಾಗ್ ಹಾಗೂ ಪತ್ರಿಕೆಗಳಲ್ಲಿ ನೀವು ರಂಗಭೂಮಿಯ ಕುರಿತು ಬರೆದ ಲೇಖನ ವಿಮರ್ಶೆಗಳೇ ನನಗೆ ಪ್ರಮುಖ ಆಕರಗಳಾದವು.  ಅವುಗಳನ್ನು ಓದಿ ಅಧ್ಯಯನ ಮಾಡಿ ಡಾಕ್ಟರೇಟ್ ಮಾಡಿದೆ ಸರ್” ಎಂದಾಗ ನನಗೆ ರಂಗಗೌರವ ದೊರಕಿದ್ದಕ್ಕಿಂತಲೂ ಹೆಚ್ಚು ಸಂತೋಷವಾಯಿತು. ಎರಡುಮೂರು ದಶಕಗಳಿಂದ ಸತತವಾಗಿ ರಂಗಭೂಮಿ ಚಟುವಟಿಕೆಗಳನ್ನು ಅಕ್ಷರಗಳಲ್ಲಿ ದಾಖಲಿಸುತ್ತಲೇ ಬಂದಿರುವ ನನ್ನ ಶ್ರಮ ಸಾರ್ಥಕ ಅನ್ನಿಸಿತು.

ರಂಗ ಪ್ರಯೋಗಗಳು ಸಾಹಿತ್ಯ ಕೃತಿಗಳ ಹಾಗೆ ಅಲ್ಲ. ನಾಟಕ ಪ್ರದರ್ಶನಗಳು ಮುಗಿದ ನಂತರ ಅವುಗಳಿಗೆ ಅಯಸ್ಸು ಇರುವುದಿಲ್ಲ. ನೋಡಿದವರ ಸ್ಮರಣೆಯಲ್ಲೂ ಹೆಚ್ಚು ಕಾಲ ಉಳಿಯುವುದಿಲ್ಲ. “ರಂಗದ ಮೇಲೆ ಅವತ್ತೇ ಹುಟ್ಟಿ ಅವತ್ತೇ ನಾಟಕಗಳು ಸಾಯುತ್ತವೆ” ಎಂಬ ಮಾತು ಸುಳ್ಳಲ್ಲ. ಆದರೆ ನಿರ್ದೇಶಕರು,  ಕಲಾವಿದರು, ನೇಪಥ್ಯ ತಜ್ಞರುಗಳು ಸೇರಿ ಕಷ್ಟ ಪಟ್ಟು ಕಟ್ಟಿದ ನಾಟಕಗಳು ರಂಗ ವಿಮರ್ಶೆಗಳಲ್ಲಿ, ರಂಗ ಲೇಖನಗಳಲ್ಲಿ ದಾಖಲಾದರೆ ಹೆಚ್ಚು ಕಾಲ ಬದುಕುತ್ತವೆ. ಮುಂದಿನ ತಲೆಮಾರಿಗೂ ವರ್ಗಾಯಿಸಲ್ಪಡುತ್ತವೆ. ಅಧ್ಯಯನ ಮಾಡುವವರಿಗೆ ಆಕರಗಳಾಗುತ್ತವೆ. ಹೀಗಾಗಿ ಡಾಕ್ಟರೇಟ್ ಪಡೆಯಲು ಅಧ್ಯಯನ ಮಾಡುವವರಿಗೆ ನನ್ನ ಲೇಖನಗಳು ಪ್ರಯೋಜನಕ್ಕೆ ಬರುತ್ತವಲ್ಲಾ ಎನ್ನುವ ಸಾರ್ಥಕತೆ ನನ್ನದು.

ಇತ್ತೀಚೆಗೆ ಕರ್ಣಾಂತರಾಳ ಎಂಬ ಏಕವ್ಯಕ್ತಿ ನಾಟಕವನ್ನು ಬರೆದಿದ್ದೆ. ಆ ನಾಟಕಕ್ಕೆ ಯೋಧನಾದ ಕರ್ಣನಿಗೆ ಸೂಕ್ತವೆನಿಸುವ ಕಲಾವಿದನ ಹುಡುಕಾಟದಲ್ಲಿದ್ದೆ. ರಂಗಗೌರವ ಕಾರ್ಯಕ್ರಮಕ್ಕೆ ಬಂದು ನನ್ನನ್ನು ಭೇಟಿಯಾದ ನೀನಾಸಂ ಕಿಟ್ಟಿಯನ್ನು ನೋಡಿ ಕರ್ಣನ ಪಾತ್ರಕ್ಕೆ ಸೂಕ್ತವೆಂದುಕೊಂಡು ನಾಟಕದ ಸ್ಕ್ರಿಪ್ಟ್ ಕಳಿಸಿದೆ. ಅದನ್ನು ಓದಿ ಥ್ರಿಲ್ ಆದ ಕಿಟ್ಟಿ ಅದಾಗಲೇ ಕರ್ಣನ ಪಾತ್ರದೊಳಗೆ ಪ್ರವೇಶ ಮಾಡಿದ್ದರು. ಈ ನಾಟಕ ನನಗೆ ಮಹಾಪ್ರಸಾದ ಎಂದು ಹೇಳಿದರು. ಈ ನೀನಾಸಂ ಕಿಟ್ಟಿಯವರು ಇತ್ತೀಚೆಗೆ ಬಂದ “ಹಿಕೋರಾ” ಎನ್ನುವ ಮನೋವೈಜ್ಞಾನಿಕ ಸಿನೆಮಾದ ನಾಯಕ ಹಾಗೂ ನಿರ್ದೇಶಕರು. ಕೊನೆಗೂ ನನಗೆ ಕರ್ಣ ಸಿಕ್ಕಂತಾಯ್ತು.  ಅವರ ಸಿನೆಮಾ ಕೆಲಸಗಳ ಬ್ಯುಸಿ ಶೆಡ್ಯೂಲ್ ನಲ್ಲಿ ಕರ್ಣನ ನಾಟಕಕ್ಕೆ ಎಷ್ಟು ಬದ್ಧರಾಗಿರುತ್ತಾರೆ ಎಂಬುದನ್ನು ನೋಡಬೇಕಿದೆ.

ಹೀಗೆ ಒಂದು ರಂಗಗೌರವದ ನೆಪದಲ್ಲಿ ಇನ್ನೇನೋ ಆಗುತ್ತವೆ. ಇಂತಹ ಸನ್ಮಾನಗಳು ವೈಯಕ್ತಿಕವಾಗಿ ನನ್ನದಂತೂ ಅಲ್ಲವೇ ಅಲ್ಲಾ. ಎಲ್ಲಾ ರಂಗಭೂಮಿ ನನಗೆ ಕೊಟ್ಟ ಅವಕಾಶ ಹಾಗೂ ಅಸ್ಮಿತೆಯಿಂದಾಗಿದೆ. ಹೀಗಾಗಿ ನನಗೆ ದಕ್ಕಿದ ರಂಗ ಗೌರವ ಸನ್ಮಾನಗಳನ್ನೆಲ್ಲಾ ಮತ್ತೆ ಕನ್ನಡ ರಂಗಭೂಮಿಗೆ ಸಮರ್ಪಿಸುತ್ತಿದ್ದೇನೆ. ಸನ್ಮಾನಿಸಿದ, ಶುಭ ಹಾರೈಸಿದ ಎಲ್ಲಾ ಕ್ರಿಯಾಶೀಲ ಮನಸುಗಳಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ-ಕನ್ನಡ ಪ್ಲಾನೆಟ್‌ ಅಂಕಣಕಾರ ರಂಗಕರ್ಮಿ ಶಶಿಕಾಂತ ಯಡಹಳ್ಳಿ ʼಆರ್ಯಭಟʼ ಪ್ರಶಸ್ತಿಗೆ ಆಯ್ಕೆ

More articles

Latest article

Most read