Thursday, July 25, 2024

ಸ್ನೇಹಿತನಿಂದಲೇ ಬಲಾತ್ಕಾರ: ಇನ್ಸ್ಟಾದಲ್ಲಿ ಬಹಿರಂಗ ಪೋಸ್ಟ್ ಹಾಕಿದ ಸಂತ್ರಸ್ಥೆ

Most read

ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾಗಿ ಸ್ನೇಹಿತನಾದ ಯುವಕನೋರ್ವ ತನ್ನ ಮೇಲೆ ದಾರುಣವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ, ಈತನಿಗೆ ಶಿಕ್ಷೆ ನೀಡಿ ಎಂದು 21 ವರ್ಷದ ಯುವತಿಯೋರ್ವಳು ಇನ್ಸ್ಟಾಗ್ರಾಂ ನಲ್ಲೇ ಪೋಸ್ಟ್ ಹಾಕಿದ್ದಾಳೆ.

ನನಗೆ ಇನ್ಸ್ಟಾಗ್ರಾಂ ನಲ್ಲಿ ಯುವಕನೊಬ್ಬನ ಪರಿಚಯವಾಯಿತು. ಅವನ ಜೊತೆ ಸ್ನೇಹದಿಂದಿರಲು ನಿರ್ಧರಿಸಿದೆ. ಆದರೆ ಈ ನಿರ್ಧಾರ ನನ್ನ ಪಾಲಿಗೆ ಕರಾಳವಾಯಿತು ಎಂದು ಆಕೆ ಹೇಳಿಕೊಂಡಿದ್ದಾರೆ.

ಹೀತಿಕ್ ಶಾ ಎಂಬ ಯುವಕನ ಜೊತೆ ಪರಿಚಯವಾದ ಮೇಲೆ ಯುವತಿ ಪಾರ್ಟಿ ಮಾಡಲೆಂದು ಆತನ ಸ್ನೇಹಿತರ ಸ್ಥಳವೊಂದಕ್ಕೆ ತೆರಳಿದ್ದಾರೆ. ಹಲವು ಟಕೀಲಾ ಶಾಟ್ ಗಳ ನಂತರ ನನಗೆ ಅಮಲು ಏರಿತ್ತು. ನಾನು ಆ ಪಾರ್ಟಿಯಲ್ಲಿ ಏಕಾಂಗಿಯೆನಿಸತೊಡಗಿ ಗಾಬರಿಗೊಂಡೆ. ಆತ ನನಗೆ ಮತ್ತಷ್ಟು ಡ್ರಿಂಕ್ ಸೇವಿಸಲು ಹೇಳಿದ. ನಾನು ಸಂಪೂರ್ಣ ಬ್ಲಾಕ್ ಔಟ್ ಆಗಿದ್ದೆ. ನನ್ನ ಈ ಸ್ಥಿತಿಯನ್ನು ಬಳಸಿಕೊಂಡ ಆತ ನನ್ನ ಮೇಲೆ ಅತ್ಯಾಚಾರ ಮಾಡತೊಡಗಿದ. ನಾನು ಅವನನ್ನು ತಡೆಯಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ, ಆತ ನನ್ನ ಮೇಲೆ ಮೂರು ಬಾರಿ ಸಿಟ್ಟಿನಿಂದ ಹಲ್ಲೆ ಮಾಡಿದ ಎಂದು ಆಕೆ ಬರೆದುಕೊಂಡಿದ್ದಾರೆ.

ಅದು ಆತನ ಸ್ನೇಹಿತರ ಜಾಗವಾಗಿತ್ತು. ಎಲ್ಲರೂ ಆತನ ರಕ್ಷಣೆಗೆ ನಿಂತರು. ನಾನು ಸಹಾಯಕ್ಕೆ ಕೂಗಿಕೊಳ್ಳುವ ಮೊದಲೇ ನನ್ನನ್ನು ಅಲ್ಲಿಂದ ಸಾಗಿಸಲು ಯತ್ನಿಸಿದ. ನಾನು ನನ್ನ ಸೋದರ ಸಂಬಂಧಿಗೆ ಕರೆ ಮಾಡಿ ನನ್ನನ್ನು ಅಲ್ಲಿಂದ ಕರೆದುಕೊಂಡುಹೋಗುವಂತೆ ಹೇಳಿದೆ. ಆಘಾತಕ್ಕೆ ಒಳಗಾದ ನಾನು ನಡೆದ ಘಟನೆಯನ್ನು ಆ ರಾತ್ರಿ ನನ್ನ ಪೋಷಕರಿಗೂ ಈ ವಿಷಯ ತಿಳಿಸಲು ಸಾಧ್ಯವಾಗಲಿಲ್ಲ.

ನಂತರ ನನ್ನ ಕುಟುಂಬದವರಿಗೆ ನನ್ನ ಮೇಲೆ ಆಗಿರುವ ದೌರ್ಜನ್ಯ ತಿಳಿಯಿತು. ನಾನು ಕಳೆದ ವಾರ ಹೀತಿಕ್ ಶಾ ಮೇಲೆ ಎಫ್ಐಆರ್ ದಾಖಲಿಸಿದ್ದೇನೆ. ಹನ್ನೆರಡು ದಿನಗಳಾಗಿವೆ, ಆದರೆ ಅವನು ನಾಪತ್ತೆಯಾಗಿದ್ದಾನೆ. ಅವನು ಈಗ ನಿರೀಕ್ಷಣಾ ಜಾಮೀನಿಗೂ ಅರ್ಜಿ ಹಾಕಿಕೊಂಡಿದ್ದಾನೆ. ಅವನ ಮೇಲೆ ಐಪಿಸಿ ಸೆಕ್ಷನ್ 376, 323ರ ಅಡಿಯಲ್ಲಿ ದೂರು ದಾಖಲಾಗಿದೆ. ಅವನಿಗೆ ಶಿಕ್ಷೆಯಾಗಬೇಕು ಎಂದು ನೊಂದ ಮಹಿಳೆ ಬರೆದುಕೊಂಡಿದ್ದಾರೆ.

ತಮಗೆ ಸಹಾಯ ಮಾಡಬಲ್ಲ ಸಂಘಟನೆ, ಎನ್ ಜಿಓ ಗಳ ಮಾಹಿತಿ ಇದ್ದಲ್ಲಿ ಸಂದೇಶ ಕಳುಹಿಸುವಂತೆಯೂ ಅವರು ಮನವಿ ಮಾಡಿಕೊಂಡಿದ್ದಾರೆ.

Instagram Post link Here :-

https://www.instagram.com/p/C2giRy1Ij8E/?utm_source=ig_embed&ig_rid=f55cc354-f133-4361-ae37-c5f48c579f70

More articles

Latest article