ನ್ಯೂಯಾರ್ಕ್: ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸಿರುವ ಕ್ರಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕ ಆರಂಭದಿಂದಲೂ ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದೆ. ಆದರೆ ಕಳೆದ ಹಲವು ವರ್ಷಗಳಿಂದ ಬಾಂಧವ್ಯ ಏಕಪಕ್ಷೀಯವಾಗಿತ್ತು. ಅಮೆರಿಕದ ಮೇಲೆ ಭಾರತ ಅಧಿಕ ಸುಂಕವನ್ನು ಹೇರುವ ಮೂಲಕ ಬಾಂಧವ್ಯ ಏಕಪಕ್ಷೀಯವಾಗಿತ್ತು ಎಂದು ಹೇಳಿದ್ದಾರೆ.
ಅಮೆರಿಕದ ವಸ್ತುಗಳ ಮೇಲೆ ಭಾರತ ಮೇಲೆ ಅಧಿಕ ಸುಂಕ ವಿಧಿಸುತ್ತಿತ್ತು. ಎಷ್ಟೆಂದರೆ ಆ ಸುಂಕ ಜಗತ್ತಿನಲ್ಲೇ ಅತ್ಯಧಿಕವಾಗಿತ್ತು. ಇದೇ ಕಾರಣಕ್ಕೆ ನಾವು ಭಾರತ ದೇಶದೊಂದಿಗೆ ಹೆಚ್ಚು ವ್ಯಾಪಾರ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ನಾವು ಹೆಚ್ಚು ಸುಂಕ ವಿಧಿಸುತ್ತಿರಲಿಲ್ಲ ಎಂಬ ಕಾರಣಕ್ಕೆ ಅಮೆರಿಕದ ಜತೆ ಅವರು ಹೆಚ್ಚು ವ್ಯವಹಾರ ಮಾಡುತ್ತಿದ್ದರು ಎಂದು ವಿಶ್ಲೇಷಿಸಿದ್ದಾರೆ.
ಸುಂಕ ಕಡಿಮೆ ಎಂಬ ಕಾರಣಕ್ಕೆ ಭಾರತ ಬೃಹತ್ ಪ್ರಮಾಣದಲ್ಲಿ ಅಮೆರಿಕಕ್ಕೆ ವಸ್ತುಗಳನ್ನು ರಫ್ತು ಮಾಡುತ್ತಿದ್ದರು. ಆದರೆ ಅಮೆರಿಕದ ಮೇಲೆ ಭಾರತ ಶೇ. 100ರಷ್ಟು ಸುಂಕ ವಿಧಿಸಿದ್ದರಿಂದ ನಾವು ಏನನ್ನೂ ರಫ್ತು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದಿ ಸರಿಯೇ ಎಂದು ಟ್ರಂಪ್ ಮರು ಪ್ರಶ್ನೆ ಮಾಹಿದ್ದಾರೆ.
ಹಾರ್ಲೆ ಡೇವಿಡ್ಸನ್ ದ್ವಿಚಕ್ರ ವಾಹನಗಳ ಮೇಲೆ ಭಾರತ ಶೇ. 200ರಷ್ಟು ಸುಂಕ ಹೇರುತ್ತಿತ್ತು. ಇದರ ಭಾರತಕ್ಕೆ ಹೋಗಿ ಹಾರ್ಲೆ ಡೇವಿಡ್ಸನ್ ಘಟಕ ತೆರೆಯಬೇಕಾಯಿತು. ಇದೇ ಮಾದರಿಯಲ್ಲಿ ಸಾವಿರಾರು ಕಂಪನಿಗಳು ಅಮೆರಿಕಕ್ಕೆ ಬಂದು ಘಟಕಗಳನ್ನು ಆರಮಭಿಸುತ್ತಿವೆ. ಚೀನಾ, ಮೆಕ್ಸಿಕೊ, ಕೆನಡಾದಿಂದಲೂ ಬಂಡವಾಳ ಹೂಡಿಕೆ ಹರಿದು ಬರುತ್ತಿವೆ ಎಂದು ಟ್ರಂಪ್ ಹೇಳಿದ್ದಾರೆ.