ಐಪಿಎಲ್, ಎಲೆಕ್ಷನ್ ಮುಗೀತು.. ಇನ್ನು ಸಿನಿಮಾ ಶುರು : ಜೂನ್ ನಲ್ಲಿ ಯಾವೆಲ್ಲಾ ಚಿತ್ರಗಳಿದಾವೆ..?

Most read

ಒಂದು ಕಡೆ ಐಪಿಎಲ್ ಫೀವರ್.. ಮತ್ತೊಂದು ಕಡೆ ಎಲೆಕ್ಷನ್ ಬಿಸಿ.. ಈ ಎರಡರಿಂದ ಚಿತ್ರಮಂದಿರ ಸ್ಟಾರ್ ಗಳ ಸಿನಿಮಾಗಳಿಲ್ಲದೆ ಖಾಲಿ ಖಾಲಿ ಹೊಡೆದಂತೆ ಆಗಿತ್ತು. ಥಿಯೇಟರ್ ಗೆ ಜನ ಬರಬೇಕು ಅಂದ್ರೆ ಒಳ್ಳೆಯ ಸಿನಿಮಾಗಳು ರಿಲೀಸ್ ಆಗಲೇಬೇಕಿತ್ತು. ಇದೀಗ ಆ ದೊಡ್ಡ ಸಿನಿಮಾಗಳು ರಿಲೀಸ್ ಆಗುವ ಸಮಯ ಬಂದೇ‌ ಬಿಟ್ಟಿದೆ. ಇನ್ನು ಮೂರು ದಿನದಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶವೂ ಬಂದು ಬಿಡುತ್ತದೆ. ಐಪಿಎಲ್ ಮುಗಿದಿದೆ. ಆದರೆ ವಿಶ್ವಕಪ್ ಶುರುವಾಗಲಿದೆ. ಇದರ ನಡುವೆ ಚಿತ್ರರಂಗ ಆಕ್ಟೀವ್ ಆಗಲಿದೆ.

ಜೂನ್ ತಿಂಗಳು ಶುರುವಾಗಿದೆ. ಶಾಲೆಗೆ ಮಕ್ಕಳು ಬಂದಂತೆ ಥಿಯೇಟರ್ ಗೆ ಜನ ಬರಬೇಕಿದೆ. ಈಗಾಗಲೇ ಬಿಗ್ ಸ್ಟಾರ್ ಗಳ ಸಿನಿಮಾ ಡೇಟ್ ಅನೌನ್ಸ್ ಆಗಿದೆ. ಆದರೆ ಈ ಜೂನ್ ತಿಂಗಳಲ್ಲಿ ಬಹುನಿರೀಕ್ಷಿತ ಡಾಲಿ ಧನಂಜಯ ಅವರ ಕೋಟಿ ಸಿನಿಮಾ ತೆರೆಗೆ ಬರಲಿದೆ. ಡಾಲಿ ಧನಂಜಯ ಹಾಗೂ ಮೋಕ್ಷಾ ಕುಶಾಲ್ ಅಭಿನಯದ ಕೋಟಿ ಸಿನಿಮಾ ಫ್ಯಾಮಿಲಿ ಡ್ರಾಮಾ ಆಗಿದ್ದು, ಕೋಟಿ ಮಾಡಬೇಕೆಂಬುದು ಡಾಲಿ ಕನಸಾಗಿರುತ್ತದೆ. ಮೊದಲ ಬಾರಿಗೆ ಪರಮ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.‌ ಜೂನ್ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಅನಿರುದ್ಧ ಅಭಿನಯದ ಚೆಫ್ ಚಿದಂಬರ ಕೂಡ ಜೂನ್ ನಲ್ಲೇ ರಿಲೀಸ್ ಆಗ್ತಾ ಇದೆ. ಸೀರಿಯಲ್ ಬಳಿಕ ಸಾಕಷ್ಟು ಗ್ಯಾಪ್ ತೆಗೆದುಕೊಂಡು ಅನಿರುದ್ಧ ಸಿನಿಮಾಗೆ ಬಂದಿದ್ದಾರೆ. ಜೂನ್ 14 ರಂದು ಕೋಟಿ ಜೊತೆಗೆ ಚೆಫ್ ಚಿದಂಬರ ಕೂಡ ರಿಲೀಸ್ ಆಗ್ತಾ ಇದೆ. ಇನ್ನು ಹೊಸಬರ ಸಹರಾ ಸಿನಿಮಾ ಜೂನ್ 7 ಕ್ಕೆ ತೆರೆಗೆ ಬರ್ತಾ ಇದೆ.

More articles

Latest article