ತ್ರಿಶಾ ಕೃಷ್ಣನ್ ಬಗೆಗಿನ ಕುಹಕ ಗಂಡಾಳ್ವಿಕೆ ಮನಸ್ಥಿತಿಯ ಪ್ರತಿಬಿಂಬ

ವಿಜಯ್‌  ಮತ್ತು ತ್ರಿಶಾ ಬಗ್ಗೆ ನಡೆಯುವ ನಿರಂತರ ಕುತೂಹಲವು ಕೇವಲ gossip ಅಲ್ಲ, ಅದು ಸಮಾಜದ ಮನೋವೈಜ್ಞಾನಿಕ ಮತ್ತು ಸಾಂಸ್ಕೃತಿಕ ರಚನೆಯ ಪ್ರತಿಬಿಂಬ. ಜನರು ಆ ಇಬ್ಬರು ಕಲಾವಿದರ ಸಿನಿಮಾ, ಪ್ರತಿಭೆ ಅಥವಾ ಸಮಾಜದ ಮೇಲೆ ಅವರು ಬೀರಿರುವ  ಪ್ರಭಾವಕ್ಕಿಂತ ಅವರ ವೈಯಕ್ತಿಕ ಸಂಬಂಧಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿಸುವುದು, “ಕುಟುಂಬ”, “ನೈತಿಕತೆ”, “ಯಾರ ಜೊತೆ ಯಾರು” ಎಂಬ ಕಲ್ಪನೆಗಳು ಇನ್ನೂ ಭಾರತೀಯ ಸಮಾಜದಲ್ಲಿ ಎಷ್ಟು ಬಲವಾಗಿ ಬೇರು ಬಿಟ್ಟಿವೆ ಎನ್ನುವುದನ್ನು ತೋರಿಸುತ್ತದೆ ಅಶ್ವಿನಿ ದಾಸರೆ, (AI) ಸಂಶೋಧಕಿ.

ತಮಿಳು ವೆಟ್ರಿ ಕಳಗಂ ( ಟಿವಿಕೆ) ಮುಖ್ಯಸ್ಥ ಜೋಸೆಫ್‌ ವಿಜಯ್‌ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ ಅವರ ಆಪ್ತ ಸ್ನೇಹಿತೆ ತ್ರಿಶಾ ಕೃಷ್ಣನ್‌ ತಮ್ಮ ಕುಟುಂಬದವರೊಂದಿಗೆ ಆಗಮಿಸಿದ್ದರು. ತ್ರಿಶಾ  ಹಾಜರಾತಿಯನ್ನು  ಹಾಗೂ  ವಿಜಯ್‌ ಹೆಂಡತಿ ಹಾಗೂ ಮಕ್ಕಳ ಅನುಪಸ್ಥಿತಿಯನ್ನು ಆಧಾರ ಮಾಡಿಕೊಂಡು “ಕುಟುಂಬ ಸಂತೋಷವಾಗಿಲ್ಲ”, “CM ಆದರೂ ಏನು ಪ್ರಯೋಜನ” ಎಂಬ ರೀತಿಯ A reflection of the hypocritical patriarchal mentality towards Trisha Krishnan

ಗಳು ಹೊರಬಂದವು. ಈ ನೈತಿಕ ತೀರ್ಪುಗಳು ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿರುವ ಪಿತೃಪ್ರಧಾನ ಮನಸ್ಥಿತಿಯ ಪ್ರತಿಬಿಂಬವೇ ಆಗಿದೆ. ಸಾರ್ವಜನಿಕ ವ್ಯಕ್ತಿಗಳ ರಾಜಕೀಯ ಸಾಧನೆ, ಆಡಳಿತ ಸಾಮರ್ಥ್ಯ ಅಥವಾ ವೃತ್ತಿಜೀವನಕ್ಕಿಂತ ಅವರ ವೈಯಕ್ತಿಕ ಬದುಕನ್ನು ಹೆಚ್ಚು ತೂಕ ಮಾಡುವುದು ನಮ್ಮ ಸಮಾಜದಲ್ಲಿ ಹೊಸದೇನಲ್ಲ. ವಿಶೇಷವಾಗಿ ಒಬ್ಬ ಮಹಿಳೆ ಈ ಕಥನದ ಮಧ್ಯೆ ಬಂದಾಗ, ಆಕೆಯನ್ನು “home breaker” ( ಮನೆ ಮುರುಕಿ), “villain”( ಖಳನಾಯಕಿ) ಅಥವಾ “temptation” ̈ (ಅತ್ಯಾಸೆಯುಳ್ಳವಳು) ಆಗಿ ಚಿತ್ರಿಸುವ ಪ್ರವೃತ್ತಿ ಇನ್ನೂ ಬಲವಾಗಿಯೇ ಇದೆ.

ಆದರೆ ನಿಜವಾಗಿ ನೋಡಿದರೆ, ಹೊರಗಿನವರಿಗೆ ಯಾವ ಸಂಬಂಧದ ನಿಜಸ್ವರೂಪವೂ ಗೊತ್ತಿರುವುದಿಲ್ಲ. ಒಂದು ಪ್ರಮಾಣವಚನ ಸಮಾರಂಭದಲ್ಲಿ ಯಾರು ಬಂದರು, ಯಾರು ಬರಲಿಲ್ಲ ಎಂಬುದರಿಂದ ಕುಟುಂಬದ ಸಂತೋಷ ಅಥವಾ ದುಃಖವನ್ನು ತೀರ್ಮಾನಿಸುವುದು ಬಹಳ ಸರಳೀಕೃತ ಮತ್ತು sensational ದೃಷ್ಟಿಕೋನ. ಸಮಾಜ ಬಹಳ ಸಂಕೀರ್ಣವಾದ ಮಾನವ ಸಂಬಂಧಗಳನ್ನು ಒಂದು ಸಿನಿಮಾ ಕಥೆಯಂತೆ hero villain ಚೌಕಟ್ಟಿನಲ್ಲಿ ನೋಡಲು ಇಷ್ಟಪಡುತ್ತದೆ. ಅದರಲ್ಲೂ ಮಹಿಳೆಯರ ಮೇಲೆ ನೈತಿಕ ಹೊಣೆಗಾರಿಕೆಯನ್ನು ಹೆಚ್ಚು ಹಾಕಲಾಗುತ್ತದೆ.

ವಿಜಯ್‌ ಪತ್ನಿ ಮತ್ತು ಮಕ್ಕಳೊಂದಿಗೆ

ಚರಿತ್ರೆಯ ವಿವಿಧ ಕಾಲಘಟ್ಟಗಳಲ್ಲಿ ಮನುಷ್ಯನ ಲೈಂಗಿಕ ಸಂಬಂಧಗಳ ಸ್ವರೂಪ ಹೇಗೆ ಸಮಾಜದ ಆರ್ಥಿಕ ಮತ್ತು ಸಾಂಸ್ಕೃತಿಕ ರಚನೆಗಳ ಜೊತೆ ಬದಲಾಗುತ್ತವೆ ಎಂಬುದನ್ನು The Origin of the Family, Private Property and the State ನಲ್ಲಿ Friedrich Engels ವಿವರಿಸುತ್ತಾರೆ. ಅದೇ ದೃಷ್ಟಿಯಿಂದ ನೋಡಿದರೆ ವಿಜಯ್‌  ಮತ್ತು ತ್ರಿಶಾ ಬಗ್ಗೆ ನಡೆಯುವ ನಿರಂತರ ಕುತೂಹಲವೂ ಕೇವಲ gossip ಅಲ್ಲ, ಅದು ಸಮಾಜದ ಮನೋವೈಜ್ಞಾನಿಕ ಮತ್ತು ಸಾಂಸ್ಕೃತಿಕ ರಚನೆಯ ಪ್ರತಿಬಿಂಬ. ಜನರು ಆ ಇಬ್ಬರು ಕಲಾವಿದರ ಸಿನಿಮಾ, ಪ್ರತಿಭೆ ಅಥವಾ ಸಮಾಜದ ಮೇಲೆ ಅವರು ಬೀರಿರುವ  ಪ್ರಭಾವಕ್ಕಿಂತ ಅವರ ವೈಯಕ್ತಿಕ ಸಂಬಂಧಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿಸುವುದು, “ಕುಟುಂಬ”, “ನೈತಿಕತೆ”, “ಯಾರ ಜೊತೆ ಯಾರು” ಎಂಬ ಕಲ್ಪನೆಗಳು ಇನ್ನೂ ಭಾರತೀಯ ಸಮಾಜದಲ್ಲಿ ಎಷ್ಟು ಬಲವಾಗಿ ಬೇರು ಬಿಟ್ಟಿವೆ ಎನ್ನುವುದನ್ನು ತೋರಿಸುತ್ತದೆ.

ಫೆಮಿನಿಸಂ ನ ಸ್ವಲ್ಪ ಹೊತ್ತು ಒಂದು ಮೂಟೆ ಲಿ ಕಟ್ಟಿ ಯೋಚನೆ ಮಾಡೋಣ!! ಮನುಷ್ಯ ಅನ್ನುವ ಒಂದು ಪ್ರಾಣಿ, ಪಾಲಿಗಾಮಿ (ಅಂದ್ರೆ ಒಂದಕ್ಕಿಂತ ಹೆಚ್ಚು ಸಂಗಾತಿಯನ್ನು ಬಯಸುವ ಅಥವಾ ಹೊಂದುವ) ಪ್ರಭೇದಗಳಲ್ಲಿ ಎಂಟನೆದೋ ಹತ್ತನೇದೋ ಸ್ಥಾನ ಕೊಟ್ಟಿದಾರೆ ಎವೊಲ್ಯೂಷನ್ ಚಾರ್ಟ್ (ಜೀವಿಗಳ ವಿಕಾಸದ ಹಂತಗಳನ್ನು ತೋರಿಸುವ ನಕ್ಷೆ) ನಲ್ಲಿ ಅಂದ್ರೆ ಜೈವಿಕವಾಗಿ ಮನುಷ್ಯನಾದ ಮಾತ್ರಕ್ಕೆ ಉಳಿದ ಪ್ರಾಣಿಗಳಿಗಿಂತ ಲೈಂಗಿಕವಾಗಿ ಮನುಷ್ಯ ಪ್ರಾಣಿ ಬಹಳ ಭಿನ್ನವೇನಲ್ಲ. ಕಾಲ ಕ್ರಮೇಣ ನಾಗರೀಕತೆ, ಸಮಾಜ ಹಾಗೂ ಮದುವೆ ಎಂಬ ವ್ಯವಸ್ಥೆಯ ಭಾಗವಾಗಿ ಮೊನೊಗಾಮಿ (ಏಕಪತ್ನಿತ್ವ) ಯನ್ನು ಪಾಲಿಸಲು ಶುರುಮಾಡಲಾಯಿತು!! ಇದು ಆರೋಗ್ಯದ ದೃಷ್ಟಿಯಿಂದ ಹಾಗೂ ಕುಟುಂಬ ಎಂಬ ಕಲ್ಪನೆಗೆ ಒಂದು ದೊಡ್ಡ ಬಲ ಕೊಟ್ಟ ಸಂಗತಿ. ಆದರೆ ಅಗೈನ್ bilogically ಹೆಣ್ಣು ಮತ್ತು ಗಂಡು ತುಂಬ ವಿಭಿನ್ನವಾದ ಜೀವಿಗಳೇ!! ಯೋಚನಾ ಲಹರಿ ಹಾಗೂ ದೈಹಿಕ ಲಕ್ಷಣಗಳನ್ನು ಹೊರತು ಪಡಿಸಿ ವಾಟ್ ಒನ್ ಫೀಲ್ಸ್ ಭಾವನಾತ್ಮಕವಾಗಿ ಹಾರ್ಮೋನುಗಳ ಸ್ರವಿಸುವಿಕೆಯಿಂದ ಅಥವಾ ಪ್ರತಿ ತಿಂಗಳು ನಡೆಯುವ ದೇಹದ ಬದಲಾವಣೆಗಳಲ್ಲಿಯೂ ! ಹೀಗಿರುವಾಗ ಇಬ್ಬರನ್ನು ಒಂದೇ ತಕ್ಕಡಿಯಲ್ಲಿ ತೂಗಿ ಸರಿ ತಪ್ಪು judgement ಕೊಡುವಲ್ಲಿ ಸೋಶಿಯಲ್ ಮೀಡಿಯಾ ಯಾವಾಗಲೂ ಒಂದು ಕೈ ಮುಂದೆಯೇ ಅನ್ನಿ!!

ಫೆಮಿನೈನ್ encouragement ಹಾಗೂ ಹೊಗಳಿಕೆ ಬಯಸುವುದು ಗಂಡಿನ ಸಹಜ ಪ್ರಕ್ರಿಯೆ. ಎಲ್ಲ ಸರಿ ಆದರೆ ಹೆಣ್ಣು ಅಂದರೆ nurturer ಅಂದರೆ ಆರೈಕೆ ಮಾಡುವವಳು, ಬೆಳೆಸುವವಳು ಅಂತಾನೆ ಸ್ಟೀರಿಯೋಟೈಪಿಕಲ್ ಆಗಿ ಯಾಕೆ ಯಾವಾಗ್ಲೂ ಯೋಚನೆ ಮಾಡ್ಬೇಕು? ಫೆಮಿನಿಸಂ ಒಳ ಹೊಕ್ಕ ಮನಸ್ಸಿಗೆ ಇದು ಹೌದಲ್ವಾ ಅಂತ ಅನ್ಸಿದ್ರೂ, ಜೈವಿಕವಾಗಿ ಅಮ್ಮನಾಗುವ, ಕುಟುಂಬ ಮುನ್ನಡೆಸುವ ಜವಾಬ್ದಾರಿಯನ್ನ ಪ್ರಕೃತಿ ಹೆಣ್ಣಿಗೇ ಅಲ್ವ ಕೊಟ್ಟಿದ್ದು?, ಅದನ್ನ ಪ್ರಶ್ನೆ ಮಾಡದೆ ಒಪ್ಪಿಕೊಂಡಿರುವಾಗ ಇದೂ ಅಷ್ಟೇ ಗಂಡು ಯಾವಾಗ್ಲೂ  ಮಾನ್ಯತೆ (ವ್ಯಾಲಿಡೇಷನ್)  ಬಯಸ್ತಾನೆ ಇರ್ತಾನೆ.  ಅದು ಅಮ್ಮ, ತಂಗಿ, ಗೆಳತಿ, ಪ್ರೇಯಸಿ ಅಥವಾ ಸಂಗಾತಿ ಎಲ್ಲರಲ್ಲೂ ವರ್ಡ್ of affirmation (ಪ್ರೋತ್ಸಾಹ/ ಮೆಚ್ಚುಗೆ) ಬೇಕು ಅಂತ ಇದ್ದೆ ಇರುತ್ತೆ, ಹಲವು ಸಲ ಗಂಡಿನ ಸಕ್ಸೆಸ್ ಕೂಡ ಯಾವುದೊ ಕಳೆದು ಕೊಂಡ ಪ್ರೇಮದ ನೋವನ್ನು ಮರೆಯುವ ಅಸ್ತ್ರವಾಗಿ ಹೊರ ಹೊಮ್ಮಿರುತ್ತೆ. ಹಂಗಾಗಿ ಯಾವ ಗಂಡಸು ತನ್ನ ಸಂಗಾತಿಗೆ ಸೇಫ್ ಸ್ಪೇಸ್ ಕೊಡಬಲ್ಲನೋ ಆತ ಮಾತ್ರ ಅಷ್ಟೇ ರೀತಿಯ ಆರೈಕೆ ಹಾಗೂ ಸೆಕ್ಯೂರಿಟಿ ಕೂಡ ಆ ಸಂಗಾತಿಯಿಂದ ಪಡೆಯಬಹುದು ಮತ್ತು ಅದರಿಂದ ಸಿಗುವ ಶಾಂತಿ ನೆಮ್ಮದಿಯಿಂದ ಏಳಿಗೆ ಹೊಂದಬಹುದು.

ಜಗತ್ತಿನ ಅತೀ ಸುಂದರಿ ಪಟ್ಟ ಹೊಂದಿಯೂ ಕೂಡ ಹೆಣ್ಣು ತನ್ನ ಸಂಗಾತಿಯಿಂದ ಮೋಸಗೊಳಗಾಗಬಲ್ಲಳೇ?!! ಹೌದು ಖಂಡಿತ!! ಅದನ್ನು ಕ್ಷಮಿಸೋದು ಖಂಡಿಸೋದು ಅಥವಾ ಅದಕ್ಕೆ ತಕ್ಕ ಶಿಕ್ಷೆ ಕೊಡೋದು ಪ್ರತಿ ಹೆಣ್ಣಿನ ವೈಯಕ್ತಿಕ ಆಯ್ಕೆ. ಅದನ್ನು ಅಷ್ಟೇ ಗೌರವದಿಂದ ಸಮಾಜ ಸ್ವೀಕರಿಸಬೇಕು. ಬಟ್ unfortunately ಅದು ನಮ್ಮ ಸಮಾಜಕ್ಕೆ ನಾಗರೀಕತೆಗೆ ಅಂಟಿರುವ ಖಾಯಿಲೆಯಿಂದ ಸರಿ ಹೋಗುವಂಥದಲ್ಲ!! ಎಲ್ಲ ಸರಿ ಇರುವಾಗಲೂ(?!) ಕಾರಣಗಳೇ ಇಲ್ಲದೆ ಗಂಡು ಬೇರೆ ಕಡೆ ಮುಖ ಮಾಡುವುದು ಎಷ್ಟು ಸರಿ ಎಷ್ಟು ತಪ್ಪು ಅನ್ನೋದು ಅಗೈನ್ ಸಬ್ಜೆಕ್ಟಿವ್ ಕಲ್ಪನೆ. ಮನುಷ್ಯ ಯಾಕೆ ಹಾಗೆ ಯೋಚಿಸುತ್ತಾನೆ ಅನ್ನೋ ಲಹರಿಯೇ ತೀರಾ ಕಾಂಪ್ಲಿಕೇಟೆಡ್ . ಇಷ್ಟೆಲ್ಲಾ ಆದರೂ ಒಂದು ಹೆಣ್ಣು ಯಾಕೆ  ಇದನ್ನು ಸಹಿಸಿಕೊಳ್ಳುತ್ತಾಳೆ ಅನ್ನೋದು  ಇನ್ನೊಂದು ಎಕ್ಸ್ಟ್ರೀಮ್ ಕಾಂಪ್ಲಿಕೇಷನ್. ಇದರ ಮಧ್ಯೆ ಬೇಲಿ ಹಾರಿದ ಪ್ರತಿ ಗಂಡಸಿನದ್ದೇ ತಪ್ಪು ಅನ್ನೋಕೆ ನಾವ್ಯಾರು ಅವರ ಮನೆಯನ್ನು ಸಹ ನೋಡಿರುವುದಿಲ್ಲ. ಇನ್ನು ಅವರ ಒಳ ಜಗಳ ಮನಸ್ತಾಪ ನಮಗೆ ಗೊತ್ತೂ ಇರುವುದಿಲ್ಲ! ಕೆಲವೊಮ್ಮೆ ಗಂಡು ಸೌಂದರ್ಯವನ್ನು ಮೀರಿದ ಏನನ್ನೋ ಬಯಸುತ್ತಾನಾ ಅನಿಸುತ್ತೆ. ಇರಬಹುದೋ ಗೊತ್ತಿಲ್ಲ!

ತ್ರಿಶಾ ಕೃಷ್ಣನ್

ಇದರ ಮಧ್ಯೆ ಅವರನ್ನೆಲ್ಲ ಆಡಿಕೊಂಡು ಮಾನಸಿಕವಾಗಿ ಇನ್ನೊಬ್ಬ ಹೆಂಗಸನ್ನು ಬಯಸುವ ಗಂಡು, ದೈಹಿಕವಾಗಿ ಎಂತದ್ದು ಮಾಡಲಿಲ್ಲವಲ್ಲ ಹಂಗಾಗಿ ನಾನು ಸತಿ ಸಾವಿತ್ರಿಯ ಗಂಡು ರೂಪ ಅಂತ ಒಳಗೊಳಗೇ ಖುಷಿ ಪಡಬಹುದಷ್ಟೆ! ಇನ್ನು ಎಲ್ಲ ಕಷ್ಟ, ನೋವು, ತಾಪತ್ರೆಯ ಮೋಸ ಹೆಣ್ಣಿಗೇ ಆಗುತ್ತೇನೋ ಅಂದರೆ, ಹೂಂ! ಹೆಚ್ಚಿನ ಸಲ ಕೌಟುಂಬಿಕ ಕಟ್ಟಳೆಯೊಳಗೆ ಬಂದ ಹೆಂಗಸು, ಮಾನಸಿಕವಾಗಿ ಇನ್ನೊಂದು ಕಡೆ ಮುಖ ಮಾಡಿಯೂ ಗಂಡಿನಷ್ಟು ಧೈರ್ಯವಾಗಿ ಬೇಲಿ ಹಾರಲು ಯತ್ನಿಸದೆ ಇರಬಹುದು. ಆದರೆ ಎರಡೂ ಕಡೆ exceptions ಇದ್ದೇ ಇರುತ್ತವೆ. ಮನುಷ್ಯ ಸಹಜ ಕಾಮ ಮೀರಿ ಬೆಳೆದ ಯೋಗಿಗಳಿದ್ದಾರೆ, ಹಾಗೆ ಅದೇ ಕಾಮಕ್ಕೆ ಬಲಿಯಾದ ಗಂಡು ಹೆಣ್ಣು ಇಬ್ಬರೂ ಸಮ ಪ್ರಮಾಣದಲ್ಲೇ ಇದ್ದಾರೆ! ಆದರೆ ಹೆಣ್ಣು ಮಾಡುವ ಪ್ರಮಾದ ಒಂದಿಡೀ ಕುಟುಂಬ ಛಿದ್ರ ಗೊಳಿಸುವ ಸಂಭವ ಅತೀ ಹೆಚ್ಚು, ಗಂಡು ಬೇಲಿ ಹಾರಿ ವಾಪಸ್ಸು ಬಂದು ಏನೂ ಆಗಿಯೇ ಇಲ್ವೇನೋ ಎಂಬಂತೆ ಇದ್ದು ಬಿಡಬಹುದು. ಹೆಚ್ಚಿನ ಸಲ ಅದು ಮಕ್ಕಳ ವರೆಗೆ ದಾಟಿಯೇ ಇರುವುದಿಲ್ಲ!! ಇದು ಕೇವಲ ಮನರಂಜನೆ, ಕಾಲಹರಣ, ಹಾಗೂ ಆಡಿಕೊಳ್ಳುವ ವಿಷಯವಲ್ಲ. ಇದಕ್ಕೆ ಸಾಮಾಜಿಕ, ವೈಯಕ್ತಿಕ ಹಾಗೂ ಜೈವಿಕ ಕಟ್ಟುಪಾಡುಗಳೂ ಕಾರಣವಾಗಿರುತ್ತವೆ.

ಹೆಂಗಸಿಗೆ ನೋವುಂಟು ಮಾಡಿ, ಅವಳಿಗೆ ದ್ರೋಹ ಮಾಡಿ, ಅವಳ ಜೊತೆ ಬದುಕಲು ಇಚ್ಛಿಸದೆ ಇರುವ ಪುರುಷನ ಅವನತಿ ಖಚಿತ ಎನ್ನುವ ನಂಬಿಕೆ ನಮ್ಮ ಸಮಾಜದಲ್ಲಿ ಬಹಳ ಗಾಢವಾಗಿ ಇದೆ. ಅದು purely moral theory ಆಗಿರಬಹುದು, karmic justice ಅನ್ನುವ ಕಲ್ಪನೆಯಾಗಿರಬಹುದು, ಅಥವಾ ಶತಮಾನಗಳಿಂದ ಬಂದ ಮಾನವ ಅನುಭವಗಳ ಸಾರವಾಗಿರಬಹುದು. ಯಾಕೆಂದರೆ ವೈಯಕ್ತಿಕ ಜೀವನದಲ್ಲಿ ಅಸ್ಥಿರತೆ, ಗಿಲ್ಟ್, ಮುರಿದ ಸಂಬಂಧ  ಇವು ಮನುಷ್ಯನ ಒಳಜಗತ್ತಿನ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಯಾರೂ ಸಂಪೂರ್ಣ ತಳ್ಳಿಹಾಕಲು ಸಾಧ್ಯವಿಲ್ಲ.

ಆದರೆ ವಿಚಿತ್ರ ಸತ್ಯ ಏನೆಂದರೆ, ರಾಜಕೀಯ ಮತ್ತು ಅಧಿಕಾರದ ಜಗತ್ತು ಈ ಸಿದ್ಧಾಂತಕ್ಕೆ ಸದಾ ತಲೆಬಾಗುವುದಿಲ್ಲ. ನಮ್ಮ ದೇಶದ ಇತಿಹಾಸದಲ್ಲೇ ಅನೇಕ Prime Minister ಗಳು, Chief Minister ಗಳು, MLA, MP ಗಳ ವೈಯಕ್ತಿಕ ಬದುಕು ವಿವಾದಗಳಿಂದ ಕೂಡಿದ್ದರೂ, ಅವರ ರಾಜಕೀಯ ಏರಿಕೆ ನಿಂತಿಲ್ಲ. ಅಧಿಕಾರದ ಲೋಕದಲ್ಲಿ ಜನರು ಹಲವಾರು ಬಾರಿ ವ್ಯಕ್ತಿಯ private morality ಮತ್ತು public success ಅನ್ನು ಬೇರೆ ಬೇರೆ ತೂಕದಲ್ಲಿ ಅಳೆಯುತ್ತಾರೆ. ಕೆಲವೊಮ್ಮೆ ಜನರು “ಒಳ್ಳೆಯ ಆಡಳಿತಗಾರನಾ?” ಅನ್ನುವುದನ್ನೇ ಮುಖ್ಯವಾಗಿ ನೋಡುತ್ತಾರೆ; “ಒಳ್ಳೆಯ ಗಂಡನಾ?” ಅನ್ನುವುದನ್ನು ಅಲ್ಲ.

ಅದೇ ಕಾರಣಕ್ಕೆ ಸಮಾಜ ಒಂದು ಕಡೆ ಕುಟುಂಬ ಮೌಲ್ಯಗಳ ಬಗ್ಗೆ ಮಾತನಾಡುತ್ತಾ, ಇನ್ನೊಂದು ಕಡೆ ವೈಯಕ್ತಿಕ ಬದುಕಿನಲ್ಲಿ ವಿವಾದಗಳಿದ್ದ ನಾಯಕರನ್ನೇ ಭಾರೀ ಮತಗಳಿಂದ ಗೆಲ್ಲಿಸುತ್ತದೆ. ಇದು ಮಾನವ ಸಮಾಜದ ದೊಡ್ಡ paradox. ವೈಯಕ್ತಿಕ ನೈತಿಕತೆ ಮತ್ತು ಸಾರ್ವಜನಿಕ ಯಶಸ್ಸು ಯಾವಾಗಲೂ ಒಂದೇ ದಾರಿಯಲ್ಲಿ ನಡೆಯುವುದಿಲ್ಲ ಎಂಬುದೇ ಆ ವಿಚಿತ್ರವಾದ ಸತ್ಯ.

ಇದನ್ನೇ Engels ಹೇಳುವ ಸಾಮಾಜಿಕ ನೈತಿಕತೆಯ ಭಾಗವಾಗಿ ನೋಡಬಹುದು. ಸಮಾಜ “ideal family image” ಅನ್ನು ಕಾಪಾಡಲು ಪ್ರಯತ್ನಿಸುವಾಗ, ವೈಯಕ್ತಿಕ ಸ್ವಾತಂತ್ರ್ಯ, ಸ್ನೇಹ, ಅಥವಾ ಮಾನವ ಸಂಬಂಧಗಳ ಸಂಕೀರ್ಣತೆಯನ್ನು ಒಪ್ಪಿಕೊಳ್ಳಲು ಅದು ಕಷ್ಟಪಡುತ್ತದೆ.

ಅದಕ್ಕೇ ತ್ರಿಶಾ ಕೃಷ್ಣನ್ ಅವರನ್ನು ವ್ಯಕ್ತಿಯಾಗಿ ನೋಡುವುದಕ್ಕಿಂತ, ಒಂದು ಸಂಕೇತವಾಗಿ ಅಥವಾ ಆರೋಪದ ಮುಖವಾಗಿ ಬಳಸಲಾಗುತ್ತಿದೆ.‌

ಅಶ್ವಿನಿ ದಾಸರೆ

ಇದನ್ನೂ ಓದಿ- ತಮಿಳುನಾಡಲ್ಲಿ ಪರಿವರ್ತನೆಯ ವಿಜಯ ಪರ್ವ

More articles

Latest article

Most read