ಶಿವಾಜಿ ಮಹಾರಾಜರ ದಾರಿಯಲ್ಲಿ ನಡೆದು ಜನರ ಸೇವೆ : ಡಾ. ಅಂಜಲಿ ಹೇಮಂತ್‌ ನಿಂಬಾಳ್ಕರ್

Most read

ಹಳಿಯಾಳ: ಬಿಜೆಪಿ ಜನ ಛತ್ರಪತಿ ಶಿವಾಜಿಯಯವರನ್ನು ತಮ್ಮ ರಾಜಕಾರಣಕ್ಕೆ ಉಪಯೋಗ ಮಾಡುತ್ತಾರೆ. ಆದರೆ ನಾವು ಎಂದಿಗೂ ರಾಜಕಾರಣಕ್ಕೆ ಶಿವಾಜಿಯವರ ಹೆಸರನ್ನು ಉಪಯೋಗಿಸಿಕೊಳ್ಳುವುದಿಲ್ಲ. ಬದಲಿಗೆ ಅವರು ತೋರಿಸಿದ ದಾರಿಯಲ್ಲಿ ಹೋಗಿ ಬಡವರಿಗಾಗಿ ಕೆಲಸ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕಿ, ಉತ್ತರ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಹೇಳಿದರು.

ಲೋಕಸಭಾ ಚುನಾವಣಾ ಪ್ರಚಾರಾರ್ಥ ಹಳಿಯಾಳದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲ ಜಾತಿ ಸಮುದಾಯಗಳನ್ನು ಒಗ್ಗೂಡಿಸಿ ಕೆಲಸ ಮಾಡುವ ಪಕ್ಷ ನಮ್ಮದು. ಇದು ನಮ್ಮ ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಹಿಂದೆ ಎಲ್ಲ ಜಾತಿ ಜನಾಂಗವನ್ನು ಒಳಗೊಳ್ಳುವ ಸ್ವಸ್ಥ್ಯ ಸಮಾಜ ಕಟ್ಟುವ ಕನಸು ಹೊಂದಿದ್ದರು. ಅಂಥ ಸಮಾಜವನ್ನು ಮತ್ತೆ ಕಟ್ಟಲು ಸಿಕ್ಕಂತಹ ಇಂತಹ ಅವಕಾಶವನ್ನು ನಾವೆಲ್ಲ ಉಪಯೋಗಿಸಿಕೊಳ್ಳಬೇಕು.

ಮೇ 7 ರಂದು ಈ ಭಾಗದಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಕಾರ್ಯಕರ್ತರು ಸನ್ನದ್ಧರಾಗಬೇಕು. ನಮ್ಮ ಸರ್ಕಾರ ನೀಡಿದ 5 ಗ್ಯಾರಂಟಿ ಯೋಜನೆಗಳು ಮತ್ತು ಈ ಭಾಗದಲ್ಲಿ ದೇಶಪಾಂಡೆಯವರು ಮಾಡಿದ ಜನಪರ ಕೆಲಸಗಳ ಬಗ್ಗೆ ಜನರಿಗೆ ತಿಳಿಸಬೇಕು. ಕಾಂಗ್ರೆಸ್ ಅಭ್ಯರ್ಥಿಯಾದ ನನ್ನ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು.

More articles

Latest article