ಪ್ರೇಮ, ಕಾಮ ಮತ್ತು ಬಲಪಂಥೀಯರ ಬೂಟಾಟಿಕೆ

ರಾಹುಲ್ ಗಾಂಧಿಯವರ ಬಾಲ್ಯದ ನೆನಪಿನ ಮಾತುಗಳ ಸುತ್ತ ಎದ್ದ ರಾಜಕೀಯ ಟೀಕೆಗಳ ಹಿನ್ನೆಲೆಯಲ್ಲಿ, ಪ್ರೀತಿ, ಆಪ್ತತೆ ಮತ್ತು ಕೌಟುಂಬಿಕ ಸಂಬಂಧಗಳ ಕುರಿತ ದ್ವಂದ್ವಗಳನ್ನು, ಭಾರತೀಯ ಸಾಂಸ್ಕೃತಿಕ-ಶಿಲ್ಪ ಪರಂಪರೆಯಲ್ಲಿರುವ ಪ್ರೇಮದ ಅಭಿವ್ಯಕ್ತಿಗಳನ್ನು ಹಾಗೂ ಬಲಪಂಥೀಯರ ಬೂಟಾಟಿಕೆಯನ್ನು ಸಮಾಜ ಚಿಂತಕ ಶ್ರೀನಿವಾಸ ಕಾರ್ಕಳ ಈ ಲೇಖನದಲ್ಲಿ ವಿಮರ್ಶಿಸಿದ್ದಾರೆ.

“ಮನೆಯಲ್ಲಿ, ಊಟದ ವೇಳೆಯಲ್ಲಿ, ನನ್ನ ಅಮ್ಮ ನನ್ನ ಅಪ್ಪನ ತೊಡೆಯ ಮೇಲೆ ಕುಳಿತು ಊಟ ಮಾಡುತ್ತಿದ್ದಳು. ಅದೊಂದು ತೀರಾ ಸಾಮಾನ್ಯ ಸಂಗತಿ ಎಂದು ನನಗನಿಸುತ್ತಿತ್ತು. ಹಾಗಾಗಿ, ನಾನು ಯಾರದಾದರೂ ಮನೆಗೆ ಹೋದಾಗ, ಏನಿದು? ನಿಮ್ಮ ಅಮ್ಮ ಯಾಕೆ ನಿಮ್ಮ ಅಪ್ಪನ ತೊಡೆಯ ಮೇಲೆ ಕುಳಿತುಕೊಳ್ಳುವುದಿಲ್ಲ ಎಂದು ಅಲ್ಲಿ ಅವರಲ್ಲೂ ಕೇಳುತ್ತಿದ್ದೆ, ಇಂತಹ ಪ್ರೀತಿ ತುಂಬಿ ತುಳುಕುವ ಪರಿಸರದಲ್ಲಿ ಬೆಳೆದವರು ನಾವು.” ಇದು ಮೊನ್ನೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತನ್ನ ಅಮ್ಮ ಸೋನಿಯಾ ಗಾಂಧಿಯವರ ಅವರ ಆತ್ಮಕತೆ ‌ʼಬಿಲಾಂಗಿಂಗ್: ಅ ಜರ್ನಿ ಆಫ್‌ ಲವ್ʼ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ, ತನ್ನ ಅಮ್ಮ ಅಪ್ಪನೊಂದಿಗಿನ ದಿನಗಳನ್ನು ನೆನಪಿಸಿಕೊಂಡು ಆಡಿದ ಮಾತುಗಳು.

ಈ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕೆಲವು ಮುಖ್ಯ ಸಂಗತಿಗಳು ನಮ್ಮ ಗಮನಕ್ಕೆ ಬಂದಾವು. ಇಲ್ಲಿ ತನ್ನ ಅಪ್ಪ ಅಮ್ಮ ಪರಸ್ಪರ ಎಷ್ಟೊಂದು ಪ್ರೀತಿಯಿಂದ ಇರುತ್ತಿದ್ದರು ಎಂದು ಮಗನೊಬ್ಬ ಮುಗ್ಧವಾಗಿ, ಸಂತಸದಿಂದ ವರ್ಣಿಸುತ್ತಿದ್ದಾನೆ. ಇಂದು ರಾಹುಲ್‌ ಗಾಂಧಿ ಪದೇ ಪದೇ ಪ್ರೀತಿಯ ಬಗ್ಗೆ, ಕರುಣೆಯ ಬಗ್ಗೆ, ದ್ವೇಷದ ವಿರುದ್ಧ ಮಾತನಾಡುತ್ತಿದ್ದರೆ, ಅದಕ್ಕೆ ಅವರ ಮನೆಯ ಈ ಪ್ರೀತಿಯ ಪರಿಸರ ವಿಶೇಷವಾಗಿ ಕಾರಣವಾಗಿರಬಹುದು ಅಲ್ಲವೇ?

ʼಮನೆಯೇ ಮೊದಲ ಪಾಠ ಶಾಲೆʼ ಎಂಬ ಒಂದು ಮಾತಿದೆ. ದಿನ ಬೆಳಗಾದರೆ ತಂದೆ ತಾಯಿ ಪರಸ್ಪರ ಜಗಳಾಡುವುದನ್ನು, ಬಡಿದಾಡುವುದನ್ನು ನೋಡುತ್ತಾ ಬೆಳೆಯುವ ಮಗುವಿನ ಮೇಲೆ ಆ ಹಿಂಸೆಯ ವರ್ತನೆಗಳು ಪರಿಣಾಮ ಬೀರುತ್ತಾ ಹೋಗುವುದು, ಆ ಮಗುವೂ ಮುಂದೆ ದ್ವೇಷ, ಹಿಂಸೆಯ ಹಾದಿಯಲ್ಲಿ ಸಾಗುವುದು ತೀರಾ ಸ್ವಾಭಾವಿಕ. ಬದಲಿಗೆ, ತಂದೆ ತಾಯಿ ಪರಸ್ಪರ ಪ್ರೀತಿಯಿಂದ ಇರುವ, ಆ ಪ್ರೀತಿಯನ್ನು ಮುಟ್ಟುವುದು, ತಟ್ಟುವುದು, ಒತ್ತಿಕೊಂಡಂತೆ ಕುಳಿತುಕೊಳ್ಳುವುದು, ಅಪ್ಪುಗೆ ಇತ್ಯಾದಿ ಅಭಿವ್ಯಕ್ತಿಗಳ ಮೂಲಕ ವ್ಯಕ್ತಪಡಿಸುವ ಪರಿಸರದಲ್ಲಿ ಬೆಳೆಯುವ ಮಗುವೂ ದ್ವೇಷ, ಹಿಂಸೆಗಿಂತಲೂ ಪ್ರೀತಿಯ ಮನೋಭಾವವನ್ನೇ ಅಪ್ಪಿಕೊಳ್ಳುವ, ಅಂತಿಮವಾಗಿ ಇದರಿಂದ ಒಂದು ಸ್ವಸ್ಥ ಸಮಾಜ ನಿರ್ಮಾಣಗೊಳ್ಳುವ ಸಾಧ್ಯತೆಯೇ ಅಧಿಕವಲ್ಲವೇ? ಈ ಅರ್ಥದಲ್ಲಿ, ರಾಹುಲ್‌ ಗಾಂಧಿ ಹೇಳಿದ ಮಾತು ಎಷ್ಟೊಂದು ಮೌಲಿಕ, ಮಾರ್ಮಿಕ?!

ಮುಗಿಬಿದ್ದ ಅಂಧ ಭಕ್ತರು

ರಾಹುಲ್‌ ಗಾಂಧಿ ಇಷ್ಟು ಹೇಳಿದ್ದೇ ತಡ, ಕಾರಣವೇ ಇಲ್ಲದೆ ಅವರ ಮೇಲೆ ಮುಗಿಬೀಳಲು ಸದಾ ತುದಿಗಾಲಿನಲ್ಲಿ ಕಾಯುತ್ತಿರುವ ಬಲಪಂಥೀಯ ಪಡೆ, ವಿಶೇಷವಾಗಿ ಮಾರಿಕೊಂಡ ಮಾಧ್ಯಮಗಳು, ಬಿಜೆಪಿಯ ಐಟಿ ಸೆಲ್‌ ಮತ್ತು ಟು ರುಪೀಸ್‌ ಭಕ್ತರು ಎದ್ದು ಕುಳಿತರು. ತೀರಾ ಗಲಿಬಿಲಿಗೊಂಡ ಅವರ ನಿಂದನೆಯ ಮಾತುಗಳು, ಬಾಲಿಶ ವಾದಗಳು ಅವರು ಮನೆಯಲ್ಲಿ ಪಡೆದ ಸಂಸ್ಕಾರವನ್ನು, ಅವರ ಬೌದ್ಧಿಕ ಬಂಡವಾಳವನ್ನು ಬಯಲು ಮಾಡುವಂತಿದ್ದವು. ಕೆಲವರ ಪ್ರತಿಕ್ರಿಯೆಗಳು ಉಲ್ಲೇಖಿಸಲೂ ಅರ್ಹವಲ್ಲದಷ್ಟು ಅಸಹ್ಯವೂ, ಕೆಲವೊಮ್ಮೆ ಹಾಸ್ಯಾಸ್ಪದವೂ ಆಗಿದ್ದವು. ಈ ವಾದಗಳಿಗೆ ನಾವು ಅಷ್ಟೇನೂ ಮಹತ್ವ ನೀಡುವ ಅಗತ್ಯವಿಲ್ಲ. ಯಾಕೆಂದರೆ, ಈ ದಾಳಿಯ ಮೂಲ ಇರುವುದು ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಬಗೆಗೆ ಅವರಲ್ಲಿರುವ ಭಯ ಮತ್ತು ಅದರಿಂದ ಉತ್ಪನ್ನವಾದ ದ್ವೇಷ ಎನ್ನುವುದು ಗುಟ್ಟಿನ ವಿಷಯವೇನೂ ಅಲ್ಲ.

ಯಾವುದು ಭಾರತೀಯ ಸಂಸ್ಕೃತಿ?

ಈಗ ನಾವು ಅಂಧಭಕ್ತರು ಎತ್ತಿದ ಭಾರತೀಯ ಸಂಸ್ಕೃತಿ, ಸಭ್ಯತೆ ಇತ್ಯಾದಿಗಳ ಬಗ್ಗೆ ಬರೋಣ. ಸಭ್ಯತೆ ಎಂದರೆ ಯಾವುದು? ಒಬ್ಬರಿಗೆ ಸಭ್ಯತೆ ಎನಿಸುವುದು ಇನ್ನೊಬ್ಬರಿಗೆ ಹಾಗೆ ಅನಿಸಬೇಕಾಗಿಲ್ಲ. ಅದೊಂದು ಸಾಪೇಕ್ಷ ಆಲೋಚನೆ. ಇನ್ನು, ಭಾರತೀಯ ಸಂಸ್ಕೃತಿಯ ಮತ್ತು ಹಿಂದೂಧರ್ಮದ ವಾರಸುದಾರರಂತೆ ಮಾತನಾಡುವ ಇವರಿಗೆ ಭಾರತೀಯ ಪರಂಪರೆಯ ಬಗ್ಗೆ, ನಮ್ಮ ದೇವ ದೇವತೆಗಳ ಬಗ್ಗೆ, ನಮ್ಮ ದೇಗುಲಗಳ ಶಿಲ್ಪಗಳ ಬಗ್ಗೆ ಕನಿಷ್ಠ ಅರಿವಾದರೂ ಇದೆಯೇ?

ನಮ್ಮ ವೇದ, ಪುರಾಣ, ಮಹಾಕಾವ್ಯಗಳಲ್ಲಿ, ಖಜುರಾಹೋ ಎಲ್ಲೋರದ ಶಿಲ್ಪಗಳಲ್ಲಿ, ಭಿತ್ತಿ ಚಿತ್ರಗಳಲ್ಲಿ, ಶಿವ ಮತ್ತು ಶಕ್ತಿಯ ಅರ್ಧನಾರೀಶ್ವರ ರೂಪದಲ್ಲಿ, ರಾಧಾ ಕೃಷ್ಣರ ವಿರಹದಲ್ಲಿ, ಇರುವುದೆಲ್ಲ ಏನು? ಸ್ತ್ರೀ ಪುರುಷರ ಪ್ರೇಮದ ಪವಿತ್ರ ಉತ್ಕರ್ಷವಲ್ಲವೇ? ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಖಜುರಾಹೋ ಮಾತ್ರವಲ್ಲ, ನಮ್ಮಲ್ಲಿ ಅನೇಕ ದೇಗುಲಗಳ ಭಿತ್ತಿಗಳು ಮುಕ್ತ ಕಾಮದ ಮಿಥುನ ಶಿಲ್ಪಗಳನ್ನೂ ಹೊಂದಿಲ್ಲವೇ?

ನಮ್ಮದೇ ಹಾಸನದ ಹಳೆಬೀಡಿನ 11-13 ನೇ ಶತಮಾನದಲ್ಲಿ ನಿರ್ಮಾಣಗೊಂಡ ಹೊಯ್ಸಳೇಶ್ವರ ದೇಗುಲದಲ್ಲಿ (ಅಂದಿನ ದ್ವಾರಸಮುದ್ರ) ಪಾರ್ವತಿ ದೇವಿಯು ಭಗವಾನ್‌ ಶಿವನ ತೊಡೆಯ ಮೇಲೆ ಕುಳಿತ ಮೋಹಕ ಶಿಲ್ಪವಿದೆ. ಇಂತಹ ಚಿತ್ರಿಕೆಗಳನ್ನು ಅನೇಕ ದೇಗುಲಗಳ ಗರ್ಭಗುಡಿಯಲ್ಲಿಯೂ, ಗೋಡೆ ಕಂಬಗಳಲ್ಲಿಯೂ ಕಾಣಬಹುದು.

ಉಮಾ ಮಹೇಶ್ವರ, ಶಿವ ಮತ್ತು ಪಾರ್ವತಿ ಶಕ್ತಿಯ ದೈವಿಕ ದಂಪತಿಗಳು . ಇದು ಹಿಂದೂ ಪ್ರತಿಮಾಶಾಸ್ತ್ರ (ಐಕಾನಾಗ್ರಫಿ) ದಲ್ಲಿ ಚಿತ್ರಿತವಾಗಿರುವುದು ಸಾಮಾನ್ಯ. ಶಿವ ಮತ್ತು ಪಾರ್ವತಿ ಚಿತ್ರಿತವಾಗಿರುವುದೇ ಆಪ್ತವಾಗಿ ಕುಳಿತಂತೆ. ಪಾರ್ವತಿಯು ಸಾಮಾನ್ಯವಾಗಿ ಇರುವುದೇ ಶಿವನ ತೊಡೆಯ ಮೇಲೆ. ಬೇರೆ ಬೇರೆಯಲ್ಲ ಎಂಬ ಭಾವ ಮತ್ತು ಪ್ರೀತಿಯ ಪವಿತ್ರ ಕಲಾತ್ಮಕ ಅಭಿವ್ಯಕ್ತಿಯದು. ಈ ಚಿತ್ರಿಕೆಗಳು ಕೇವಲ ನಮ್ಮ ನಂಬಿಕೆಯ ಭಾಗವಲ್ಲ, ಅದು ಪ್ರೀತಿಯ ಬಯಕೆ, ಶಿವ ಶಕ್ತಿಯ ಹಾಗೆ ಪರಸ್ಪರ ಸಮರ್ಪಣಾಭಾವದಿಂದ ಇರುವುದರ ಬಯಕೆ ಕೂಡಾ.

ನಾವು ಶತಮಾನಗಳಿಂದ ಪೂಜಿಸಿದ ದೇವರುಗಳನ್ನು ನೋಡಿ. ವರಾಹ ಭೂದೇವಿ, ವಿಷ್ಣು ಮತ್ತು ಲಕ್ಷ್ಮಿ ನವಿರು ಭಾವದಲ್ಲಿ ಒತ್ತಿಕೊಂಡಂತೆ ಕುಳಿತಿರುತ್ತಾರೆ. ಶಿವ ಪಾರ್ವತಿ ಪರಸ್ಪರರತ್ತ ವಾಲಿರುತ್ತಾರೆ, ಅವರ ದೇಹಗಳು ಮತ್ತು ನೋಟ ಪ್ರೇಮವನ್ನು ಬಿಂಬಿಸುತ್ತವೆ. ಉಮಾ ಮಹೇಶ್ವರ ಕಲ್ಪನೆಯಲ್ಲಿ ಒತ್ತಿಕೊಂಡಂತೆ ಕುಳಿತು ಕೊಂಡಿರುವುದು ಮಾತ್ರವಲ್ಲ, ಪಾರ್ವತಿಯು ಶಿವನ ತೊಡೆಯ ಮೇಲೇ ಕುಳಿತಿರುತ್ತಾಳೆ. ಶಿವನ ಕೈ ಆಕೆಯನ್ನು ಬಳಸಿರುತ್ತದೆ. ಅರ್ಧ ನಾರೀಶ್ವರದಲ್ಲಿಯೂ ಇದನ್ನೇ ಕಾಣಬಹುದು. ಅರ್ಧ ಶಿವ, ಅರ್ಧ ಶಕ್ತಿ. ಇವೆಲ್ಲ ಪ್ರೀತಿ ಪ್ರೇಮ, ಆಪ್ತತೆ ಮತ್ತು ಪ್ರೇಮಮಯ ಐಕ್ಯದ ಪ್ರತೀಕ. ಇದು ಶತಮಾನಗಳಿಂದ ನಮ್ಮ ದೇಗುಲಗಳಲ್ಲಿ, ಶಿಲ್ಪಗಳಲ್ಲಿ ಮತ್ತು ಮನೆಗಳಲ್ಲಿ ಉಳಿದುಕೊಂಡು ಬಂದ ಸನಾತನ ಪರಂಪರೆ.

ನಮ್ಮ ಕುಟುಂಬ ವ್ಯವಸ್ಥೆ ಹೇಗಿದೆ?

ನಮ್ಮದು ಶ್ರೇಷ್ಠ ಕೌಟುಂಬಿಕ ವ್ಯವಸ್ಥೆ ಎಂದು ನಾವು ನಮ್ಮದೇ ಬೆನ್ನು ತಟ್ಟಿಕೊಳ್ಳುವ ಕೌಟುಂಬಿಕ ವ್ಯವಸ್ಥೆಯಲ್ಲಿ ಪತಿ ಮತ್ತು ಪತ್ನಿಯರ ಸಂಬಂಧ ಹೇಗಿದೆ? ಎಷ್ಟು ಮಂದಿ ಹೆಣ್ಣುಮಕ್ಕಳು ದಾಂಪತ್ಯ ವ್ಯವಸ್ಥೆಯಲ್ಲಿ ನಿಜ ಅರ್ಥದ ಪ್ರೇಮವನ್ನು, ಅನುಭವಿಸಿರುತ್ತಾರೆ? ಇಲ್ಲಿ ಪುರುಷರೇಕೆ ಹಿಂಸಾ ಪ್ರಿಯರಾಗಿರುತ್ತಾರೆ? ಪ್ರೇಮ ಕಾಮದ ಪ್ರದರ್ಶನ ಬಿಡಿ, ಅವುಗಳ ಬಗ್ಗೆ ಮಾತನಾಡುವುದನ್ನೂ ನಿಷಿದ್ಧ ಎಂದು ಪರಿಗಣಿಸಿರುವ ಜನರಿರುವ ದೇಶದ ಜನಸಂಖ್ಯೆ ಮಾತ್ರ ನೂರೈವತ್ತು ಕೋಟಿ ಆದುದು ಹೇಗೆ?  ಇದು ಬೂಟಾಟಿಕೆಯಲ್ಲವೇ?

ಈ ನಿಟ್ಟಿನಲ್ಲಿ ಚಿಂತಕಿ ಸಂಯುಕ್ತಾ ಬಸು ಅವರ ಮಾತುಗಳು ಬಹಳ ಉಲ್ಲೇಖನೀಯ. “ಭಾರತೀಯ ಪುರುಷರು ಹಿಂಸಾಪ್ರಿಯರಾಗಿರಲು ಮತ್ತು ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತದಿರಲು ಕಾರಣವೇ ಅವರೆಂದೂ ತಮ್ಮ ತಾಯಿತಂದೆಯ ಪರಸ್ಪರ ಪ್ರೀತಿಯನ್ನು ನೋಡದಿರುವುದು. ಇಂಡಿಯಾದ ಜನಸಂಖ್ಯೆ ಜಗತ್ತಿನಲ್ಲಿಯೇ ಗರಿಷ್ಠ. ಇಂಡಿಯಾ ಕೌಟುಂಬಿಕ ಮೌಲ್ಯಗಳ ಬಗ್ಗೆ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತದೆ. ಆದರೆ ಯಾರೊಬ್ಬರೂ ತಮ್ಮ ಹೆತ್ತವರ ಪ್ರೀತಿಯನ್ನು ಕಂಡಿಲ್ಲ. ತಮ್ಮ ಹೆತ್ತವರು ಪರಸ್ಪರ ಮುದ್ದಾಡುವುದನ್ನು, ಪರಸ್ಪರರ ತೊಡೆಯ ಮೇಲೆ ಕುಳಿತಿರುವುದನ್ನು, ಕೈ ಕೈ ಹಿಡಿದುಕೊಂಡಿರುವುದನ್ನು, ಅಪ್ಪಿಕೊಂಡಿರುವುದನ್ನು, ಚುಂಬಿಸುವುದನ್ನು ಕಂಡಿಲ್ಲ. ನಾವು ಬಂದುದಾದರೂ ಎಲ್ಲಿಂದ? ಅಲ್ಲಿ ಲೈಂಗಿಕತೆ ಇತ್ತು. ಅದರಿಂದಲೇ ಮಕ್ಕಳು ಹುಟ್ಟಿದ್ದು. ಆದರೆ ಅವರು ಪ್ರೀತಿಯನ್ನು ಕಂಡಿಲ್ಲ. ಈ ರಾಷ್ಟ್ರ ಪ್ರೀತಿ, ನವಿರುಭಾವ ಮತ್ತು ಸಂವೇದನಾಶೀಲತೆಯ ಕೊರತೆಯಿಂದ ನರಳುತ್ತಿದೆ. ಅಲ್ಲದೆ ಪ್ರೀತಿ ರಹಿತ ಅರೇಂಜ್‌ ಡ್‌ ಮದುವೆಗಳಿಂದ, ಪ್ರೀತಿ ರಹಿತ ಸಂಭೋಗದಿಂದ ಮಿಲಿಯಟ್ಟಲೆ ಮಕ್ಕಳು ಹುಟ್ಟುತ್ತಿದ್ದಾರೆ. ಅಂತಹ ಮದುವೆಗಳಲ್ಲಿ ನಿಜ ಭಾವೋದ್ರಿಕ್ತ ಪ್ರೀತಿ ಎಂದರೆ ಏನೆಂಬುದೇ ಪುರುಷ ಮತ್ತು ಮಹಿಳೆಯರಿಗೆ ತಿಳಿದಿರುವುದಿಲ್ಲ. ತೀವ್ರ ಪ್ರಣಯ ರಹಿತ ಲೈಂಗಿಕ ಸಂಭೋಗ ಅಪೇಕ್ಷಣೀಯವಲ್ಲ. ಅದು ಇಷ್ಟ ಆಗುವುದಿಲ್ಲ. ಅದು ಮಹಿಳೆಯನ್ನು ಖುಷಿಪಡಿಸುವುದಿಲ್ಲ ಅಥವಾ ತಾನು ಪ್ರೀತಿಸಲ್ಪಡುತ್ತಿದ್ದೇನೆ ಎಂಬ ಭಾವವನ್ನು ಆಕೆಯಲ್ಲಿ ಮೂಡಿಸುವುದಿಲ್ಲ. ಇದು ಪ್ರತಿ ಮಹಿಳೆಗೆ ಗೊತ್ತಿದೆ. ಇದು ಪ್ರೇಮ ರಹಿತ ಭಾರತದ ವಾಸ್ತವ. ಅಲ್ಲಿ ಪುರುಷ ಮತ್ತು ಮಹಿಳೆ ಪ್ರೇಮ ರಹಿತ ಬದುಕು  ಬದುಕುತ್ತಿದ್ದಾರೆ. ಅವರು 7 – 8 ಮಕ್ಕಳನ್ನು ಹುಟ್ಟಿಸುತ್ತಾರೆ. ಆದರೆ ಅಲ್ಲಿ ಪ್ರೀತಿಯೂ ಇರುವುದಿಲ್ಲ, ಪ್ರಣಯವೂ ಇರುವುದಿಲ್ಲ” ಎನ್ನುತ್ತಾರೆ ಬಸು.

ಬಿಜೆಪಿಗರ ಬೂಟಾಟಿಕೆ

ರಾಹುಲ್‌ ಗಾಂಧಿಯವರ ಮಾತುಗಳು ಅದೇನೋ ಭಯಂಕರ ಅಪರಾಧ ಎಂಬಂತೆ ಬಿಜೆಪಿಗರು ಅವರ ಮೇಲೆ ಮುಗಿಬಿದ್ದಾಗ, ರಾಹುಲ್‌ ಗಾಂಧಿಯವರನ್ನು ದೊಡ್ಡ ಮಟ್ಟದಲ್ಲಿ ಬೆಂಬಲಿಸಿ ಮಾತನಾಡಿದ್ದು ಪ್ರಜ್ಞಾವಂತ ಮಹಿಳೆಯರೇ ಎಂಬುದು ವಿಶೇಷ. ಅವರಲ್ಲಿ ಅನೇಕರು ಬೂಟಾಟಿಕೆಯ ನಮ್ಮ ಸಮಾಜ ಮತ್ತು ರಾಜಕೀಯದ ವಸ್ತುಸ್ಥಿತಿಗೆ ದಿಟ್ಟವಾಗಿ ಕನ್ನಡಿ ಹಿಡಿದರು.

“ಬಿಜೆಪಿಯ ಮಂದಿಗೆ ಪ್ರೀತಿ ಅರ್ಥವಾಗದು. ಅವರಿಗೆ ಅರ್ಥವಾಗುವುದು ದ್ವೇಷ ಮಾತ್ರ. ದ್ವೇಷಕಾರರಿಂದ ಪ್ರೀತಿ ನಿರೀಕ್ಷಿಸುವುದು ವ್ಯರ್ಥ. ಪ್ರೇಮಿಸುವುದು ಸಾಹಸದ ಕೆಲಸ. ಅದನ್ನು ಕಳೆದುಕೊಂಡೂ ನಗುವುದು ದುಪ್ಪಟ್ಟು ಸಾಹಸ. ಈ ಶಬ್ದವೂ ಭಾಜಪದವರ ಪದಕೋಶದಲ್ಲಿಲ್ಲ. ಅವರಿಂದ ನೀಚತೆಯನ್ನು ನಿರೀಕ್ಷಿಸಬಹುದು, ಪ್ರೇಮ ಅವರ ಅದೃಷ್ಟದಲ್ಲಿಲ್ಲ” ಎಂದು ರಾಜಕೀಯ ವಕ್ತಾರರಾದ ಪ್ರಿಯಾಂಕಾ ಭಾರತಿ ಹೇಳುತ್ತಾರೆ.

ಇದನ್ನೂ ಓದಿ- ಪ್ರೀತಿ ಏಕರೂಪದಲ್ಲಿ ಇರಬೇಕೆಂಬ ನಿರೀಕ್ಷೆ ಏಕೆ?

“ನಿಮ್ಮ ತಾಯಿ ತಂದೆ ಪರಸ್ಪರರನ್ನು ಪ್ರೀತಿಸುತ್ತಿದ್ದರೆ, ಒಂದು ಆರೋಗ್ಯಕರ ಸಂಬಂಧವನ್ನು ಹೊಂದಿರುತ್ತಿದ್ದರೆ ನೀವು ಇಂದು ಈ ಪರಿಸ್ಥಿತಿಯಲ್ಲಿ ಇರುತ್ತಿರಲಿಲ್ಲ” ಎಂದು ಕಾಮಿಡಿಯನ್‌ ಮತ್ತು ಉಪನ್ಯಾಸಕಿಯಾದ ಡಾ ಮೆಡುಸಾ ಬರೆಯುತ್ತಾರೆ.

ಅದೆಲ್ಲ ಸರಿ, ಈ ತರ್ಕದ ಮಾತುಗಳನ್ನೆಲ್ಲ ಯಾರಿಗೆ ಹೇಳುವುದು? ಆಲಿಸುವ ವ್ಯವಧಾನ ಇರುವವರಿಗೆ. ಪೂರ್ವಗ್ರಹ ಪೀಡಿತರಲ್ಲದವರಿಗೆ. ಪ್ರೀತಿ, ಪ್ರೇಮ, ಪ್ರಣಯದ ಪ್ರದರ್ಶನ ಬಿಡಿ, ಅವುಗಳ ಬಗ್ಗೆ ಮಾತನಾಡುವುದೂ ಅಸಹ್ಯ, ಅಸಭ್ಯ ಎಂಬ ಮಡಿವಂತಿಕೆಯನ್ನು ಪ್ರದರ್ಶಿಸುವ ಬೂಟಾಟಿಕೆಯ ಈ ಮಂದಿಗೆ ನಾವು ಕೇಳಬೇಕಾದ ಸರಳ ಪ್ರಶ್ನೆ ಒಂದೇ – ʼನೀವು ಹುಟ್ಟಿದ್ದೂ ಪ್ರೇಮ ಮತ್ತು ಕಾಮದ ಫಲವಾಗಿಯೇ ಅಲ್ಲವೇ?ʼ

ಶ್ರೀನಿವಾಸ ಕಾರ್ಕಳ
ಸಮಾಜ ಚಿಂತಕರು

ಇದನ್ನೂ ಓದಿ- https://kannadaplanet.com/opposition-to-sonias-autobiography-what-are-those-two-pages/ ಸೋನಿಯಾ ಆತ್ಮಕಥನಕ್ಕೆ ವಿರೋಧ – ಆ ಎರಡು ಪುಟಗಳಲ್ಲಿ ಏನಿವೆ?

More articles

Latest article

Most read