ಕಲ್ಯಾಣ ಕರ್ನಾಟಕದಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಲು ಸಿಎಂಗೆ ಮನವಿ : ಡಾ. ಅಜಯ್ ಧರ್ಮಸಿಂಗ್

ರಾಯಚೂರು, ನ. 17 : ಮುಂದಿನ ವರ್ಷ ಅಂದರೆ, 2027ರಲ್ಲಿ ಕರ್ನಾಟಕದಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವ ಕುರಿತು ಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್ ಅವರು ಪ್ರಸ್ತಾಪಿಸಿದ್ದಾರೆ. ಆ ವಿಶ್ವ ಕನ್ನಡ ಸಮ್ಮೇಳನವನ್ನು ಕಲ್ಯಾಣ ಕರ್ನಾಟಕ ಭಾಗದಲ್ಲೇ ಆಯೋಜಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಇದರಿಂದ ಈ ಭಾಗದ ಸಾಹಿತ್ಯ, ಸಂಸ್ಕೃತಿ, ಇತಿಹಾಸ ಮತ್ತು ಜನಪದ ಪರಂಪರೆಗೆ ಜಾಗತಿಕ ವೇದಿಕೆ ದೊರೆಯಲಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ  ಸಚಿವ ಡಾ. ಅಜಯ್ ಧರ್ಮಸಿಂಗ್ ತಿಳಿಸಿದರು.

ರಾಯಚೂರು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ರಾಯಚೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ; ಅದು ನಮ್ಮ ನೆಲ, ಸಂಸ್ಕೃತಿ, ಬದುಕು ಮತ್ತು ಅಸ್ಮಿತೆಯ ಪ್ರತೀಕ. ಭಾಷೆಯನ್ನು ಉಳಿಸುವುದೆಂದರೆ ಅದನ್ನು ದಿನನಿತ್ಯ ಬಳಸುವುದು, ಓದುವುದು, ಬರೆಯುವುದು ಮತ್ತು ಮುಂದಿನ ಪೀಳಿಗೆಗೆ ತಲುಪಿಸುವುದು ಎಂದು ಅವರು ಹೇಳಿದರು.

ರಾಯಚೂರು ಜಿಲ್ಲೆ ಸಾಹಿತ್ಯ, ಸಂಸ್ಕೃತಿ ಮತ್ತು ಇತಿಹಾಸದ ಶ್ರೀಮಂತ ಪರಂಪರೆ ಹೊಂದಿದ್ದು, ಸೂಫಿ ಸಂತರು, ಶರಣರು, ದಾಸರು ಹಾಗೂ ಮಹಾನ್ ಚಿಂತಕರ ಹೆಜ್ಜೆಗುರುತುಗಳನ್ನು ಹೊಂದಿರುವ ಈ ನೆಲದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಚಿವ ಡಾ. ಅಜಯ್ ಧರ್ಮಸಿಂಗ್ ಹೇಳಿದರು.

“ಕಲ್ಯಾಣ ಕರ್ನಾಟಕವು ಬಸವಣ್ಣನವರ ಕರ್ಮಭೂಮಿ. 12ನೇ ಶತಮಾನದಲ್ಲಿಯೇ ಶರಣರು ಜಾತಿ, ಧರ್ಮದ ಭೇದಗಳನ್ನು ಮೀರಿ ಜ್ಞಾನ, ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರಿದರು. ಕನಕದಾಸರು, ಪುರಂದರದಾಸರು, ಅಕ್ಕಮಹಾದೇವಿ, ಸರ್ವಜ್ಞ ಸೇರಿದಂತೆ ನಮ್ಮ ಮಹಾನ್ ಸಂತರು ಮತ್ತು ಸಾಹಿತಿಗಳ ಚಿಂತನೆಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ,” ಎಂದು ಸಚಿವರು ಹೇಳಿದರು.

ರಾಯಚೂರು ಜಿಲ್ಲೆಯ ಜನಪದ ಹಾಡುಗಳಲ್ಲಿ ಮಣ್ಣಿನ ಸೊಗಡಿದೆ. ವಚನ ಸಾಹಿತ್ಯದಲ್ಲಿ ಸಮಾನತೆಯ ಸಂದೇಶವಿದೆ. ದಾಸ ಸಾಹಿತ್ಯದಲ್ಲಿ ಭಕ್ತಿಯ ಪರಿಮಳವಿದ್ದರೆ, ಸೂಫಿ ಪರಂಪರೆಯಲ್ಲಿ ಸಹಬಾಳ್ವೆ ಮತ್ತು ಸೌಹಾರ್ದತೆಯ ಆಶಯವಿದೆ. ಈ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ದಾಖಲಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ತಿಳಿಸಿದರು.

“ಮಕ್ಕಳ ಕೈಯಲ್ಲಿ ಮೊಬೈಲ್ ಇದೆ; ಪುಸ್ತಕ ದೂರವಾಗಬಾರದು”

ಇಂದಿನ ಯುವಪೀಳಿಗೆಯಲ್ಲಿ ಓದು ಮತ್ತು ಬರವಣಿಗೆಯ ಅಭ್ಯಾಸ ಕಡಿಮೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಡಾ. ಅಜಯ್ ಧರ್ಮಸಿಂಗ್, ತಂತ್ರಜ್ಞಾನದ ಜೊತೆಗೆ ಸಾಹಿತ್ಯದ ಒಡನಾಟವೂ ಉಳಿಯಬೇಕು ಎಂದರು.

“ಇಂದು ಮಕ್ಕಳ ಕೈಯಲ್ಲಿ ಮೊಬೈಲ್‌ಗಳಿವೆ; ಆದರೆ ಪುಸ್ತಕಗಳು ದೂರವಾಗುತ್ತಿವೆ. ರೀಲ್ಸ್ ನೋಡುವ ಆಸಕ್ತಿಯ ಜೊತೆಗೆ ಕವನ ಬರೆಯುವ, ಕಥೆ ಓದುವ ಮತ್ತು ತಮ್ಮ ಅನುಭವಗಳನ್ನು ದಾಖಲಿಸುವ ಆಸಕ್ತಿಯೂ ಬೆಳೆಯಬೇಕು. ವಾಟ್ಸಾಪ್‌ನಲ್ಲಿ ನೂರಾರು ಸಂದೇಶಗಳನ್ನು ಕಳುಹಿಸುವ ನಾವು ಒಂದು ಪತ್ರ ಬರೆಯುವ ಅಭ್ಯಾಸವನ್ನೂ ಮರೆಯಬಾರದು,” ಎಂದು ಹೇಳಿದರು.

ಮಕ್ಕಳು ತಮ್ಮ ಸುಖ–ದುಃಖ, ಕನಸು, ಗುರಿ ಮತ್ತು ಜೀವನಾನುಭವಗಳನ್ನು ಬರೆಯುವ ಅಭ್ಯಾಸ ಬೆಳೆಸಿಕೊಂಡರೆ ಅದು ಅವರ ವ್ಯಕ್ತಿತ್ವ ಮತ್ತು ಚಿಂತನೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ. ಸಾಹಿತ್ಯ ಸಮ್ಮೇಳನಗಳು ಯುವಪೀಳಿಗೆಯನ್ನು ಪುಸ್ತಕ, ಭಾಷೆ ಮತ್ತು ಸೃಜನಶೀಲತೆಯತ್ತ ಸೆಳೆಯುವ ವೇದಿಕೆಗಳಾಗಬೇಕು ಎಂದು ಸಚಿವರು ಹೇಳಿದರು.

ರಾಯಚೂರು ನಗರ ಶಾಸಕ ಡಾ. ಶಿವರಾಜ ಎಸ್. ಪಾಟೀಲ ಮಾತನಾಡಿ, ರಾಯಚೂರು ಜಿಲ್ಲೆಯ ಜನಪದ, ದಾಸ ಸಾಹಿತ್ಯ ಮತ್ತು ಗ್ರಾಮೀಣ ಕಥನ ಪರಂಪರೆಯನ್ನು ದಾಖಲಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದರು.

ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಅವರು, ಈ ಭಾಗದ ನೆಲ, ಜಲ ಮತ್ತು ಸಂಸ್ಕೃತಿ ಸಂರಕ್ಷಣೆ ಕುರಿತು ಸಾಹಿತ್ಯ ಸಮ್ಮೇಳನಗಳಲ್ಲಿ ಗಂಭೀರ ಚರ್ಚೆಗಳು ನಡೆಯಬೇಕು ಎಂದರು.

ದೇವದುರ್ಗ ಶಾಸಕಿ ಕರೆಮ್ಮ ಜಿ. ನಾಯಕ ಅವರು ಆದಿ ಅಮಾತೆಪ್ಪನವರ ಕೃತಿಗಳನ್ನು ಬಿಡುಗಡೆ ಮಾಡಿದರು. ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.

ಇದೇ ಸಂದರ್ಭದಲ್ಲಿ ಸಮ್ಮೇಳನದ ಲಾಂಛನ ಒಳಗೊಂಡ ₹5 ಮುಖಬೆಲೆಯ ವಿಶೇಷ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ಬಿ. ವೆಂಕಟ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ಸೇರಿದಂತೆ ಸಾಹಿತಿಗಳು, ಅಧಿಕಾರಿಗಳು, ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಹಾಗೂ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

More articles

Latest article

Most read