ಧರ್ಮಸ್ಥಳದಲ್ಲಿ ವಿದ್ಯುತ್ ಕಂಬದ ಕಾಮಗಾರಿ ವೇಳೆ ಮಾನವ ತಲೆಬುರುಡೆ ಪತ್ತೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ವಿದ್ಯುತ್ ಕಂಬದ ಮೇಲೆ ಕಾಮಗಾರಿ ನಡೆಸುತ್ತಿದ್ದ ಮೆಸ್ಕಾಂ ಸಿಬ್ಬಂದಿಗೆ ಮಾನವ ತಲೆಬುರುಡೆ ಪತ್ತೆಯಾಗಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಸಾಮೂಹಿಕ ಶವಸಂಸ್ಕಾರ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಗುರುತಿಸಿದ್ದ ಸ್ಥಳವೊಂದರ ಸಮೀಪವೇ ತಲೆಬುರುಡೆ ಪತ್ತೆಯಾಗಿರುವುದು ಕುತೂಹಲ ಮೂಡಿಸಿದೆ.

ಧರ್ಮಸ್ಥಳದ ಸ್ನಾನಘಟ್ಟದ ಸಮೀಪ ವಿದ್ಯುತ್ ಕಂಬದ ಕಾಮಗಾರಿ ನಡೆಸುತ್ತಿದ್ದಾಗ ಹುಲ್ಲು ಮತ್ತು ಪೊದೆಗಳ ನಡುವೆ ತಲೆಬುರುಡೆ ಬಿದ್ದಿರುವುದನ್ನು ಲೈನ್‌ಮನ್ ಗಮನಿಸಿದ್ದಾರೆ. ಈ ವಿಷಯವನ್ನು ತನಿಖೆ ನಡೆಸುತ್ತಿರುವ ಎಸ್‌ಐಟಿಯ ಗಮನಕ್ಕೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಾಮೂಹಿಕ ಶವ ಹೂತಿಟ್ಟಿರುವ ಆರೋಪದ ತನಿಖೆಗಾಗಿ ಎಸ್‌ಐಟಿ ಈ ಹಿಂದೆ ಧರ್ಮಸ್ಥಳ ಗ್ರಾಮದ 14 ಸ್ಥಳಗಳನ್ನು ಗುರುತಿಸಿ ಉತ್ಖನನ ನಡೆಸಿತ್ತು. ದೂರುದಾರ ಹಾಗೂ ಪ್ರಕರಣದ ಆರೋಪಿಯಾಗಿರುವ ಸಿ.ಎನ್. ಚಿನ್ನಯ್ಯ ನೀಡಿದ ಮಾಹಿತಿಯ ಆಧಾರದ ಮೇಲೆ ಈ ಸ್ಥಳಗಳನ್ನು ಗುರುತಿಸಲಾಗಿತ್ತು.

ಇದಕ್ಕೂ ಮೊದಲು ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದ ಎಸ್‌ಐಟಿ ಏಳು ಮಾನವ ತಲೆಬುರುಡೆಗಳು ಹಾಗೂ ಹಲವು ಮೂಳೆಗಳನ್ನು ಪತ್ತೆಹಚ್ಚಿತ್ತು. ಅವುಗಳನ್ನು ಡಿಎನ್‌ಎ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮೂರು ತಲೆಬುರುಡೆಗಳು ಹಾಗೂ ಒಂದು ಮೂಳೆಯ ಡಿಎನ್‌ಎ ನಾಪತ್ತೆಯಾದವರ ಕುಟುಂಬದ ಸದಸ್ಯರ ಡಿಎನ್‌ಎಗೆ ಹೊಂದಿಕೆಯಾಗಿತ್ತು.

ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಮುಂದಿನ ತನಿಖೆ ನಡೆಸಲು ರಾಜ್ಯ ಸರ್ಕಾರದ ಅನುಮತಿಗಾಗಿ ಎಸ್‌ಐಟಿ ಕಾಯುತ್ತಿದೆ. ಇದೀಗ ಧರ್ಮಸ್ಥಳ-ಉಜಿರೆ ರಸ್ತೆಯ ಸಮೀಪವೇ ಮತ್ತೊಂದು ತಲೆಬುರುಡೆ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅದನ್ನು ವಶಕ್ಕೆ ಪಡೆದು, ಡಿಎನ್‌ಎ ಪರೀಕ್ಷೆ ನಡೆಸಿ ಅದರ ಮೂಲ ಹಾಗೂ ಗುರುತಿನ ಬಗ್ಗೆ ತನಿಖೆ ನಡೆಸಬೇಕೆಂಬ ಒತ್ತಾಯ ವ್ಯಕ್ತವಾಗಿದೆ.

More articles

Latest article

Most read