“ಶ್ರೀರಂಗಪಟ್ಟಣದಲ್ಲಿ ಮಡಿದ ಹುಲಿ:ಟಿಪ್ಪು ಸುಲ್ತಾನ್ ಕೊನೆಯ ದಿನದ ಸಂಪೂರ್ಣ ಸತ್ಯಕಥೆ”

ಕಾವೇರಿ ನದಿಯ ಮಧ್ಯದ ದ್ವೀಪದಲ್ಲಿ, ಮೈಸೂರು ಸಾಮ್ರಾಜ್ಯದ ಹಳೆಯ ರಾಜಧಾನಿ ಶ್ರೀರಂಗಪಟ್ಟಣದ ಕೋಟೆ ಗೋಡೆಯ ಬಳಿ ಇಂದಿಗೂ ಒಂದು ಸಣ್ಣ ಕಲ್ಲು ನಿಂತಿದೆ. ಅದರ ಮೇಲೆ ಬರೆದಿದೆ
“THE BODY OF TIPPU SULTAN WAS FOUND HERE”
ಅಂದರೆ “ಟಿಪ್ಪು ಸುಲ್ತಾನರ ಮೃತ ಶರೀರ ಇಲ್ಲಿ ಸಿಕ್ಕಿತು”

ಆ ಕಲ್ಲು, ಅದರ ಪಕ್ಕದ ತ್ರಿಭಾಷಾ ವಿವರಣಾ ಫಲಕ ಮತ್ತು WATER GATE ಇವೆಲ್ಲವೂ ಒಂದೇ ದಿನದ, ಒಂದೇ ಯುದ್ಧದ ಸಾಕ್ಷಿಗಳು. ಆದರೆ ಟಿಪ್ಪು ಎಲ್ಲಿ ಮಡಿದರು? ಎಲ್ಲಿ ಶವ ಸಿಕ್ಕಿತು? ಎರಡು ಬೇರೆ ಬೇರೆ ಜಾಗಗಳು ಯಾಕೆ ಕಾಣಿಸುತ್ತವೆ? ಟಿಪ್ಪು ಶರಣಾಗತನಾಗಿದ್ದರೆ ಬದುಕಬಹುದಿತ್ತೇ? ಇಲ್ಲಿದೆ ಆಧಾರ ಸಹಿತ, ಸಮಗ್ರ ಉತ್ತರ.

ಶ್ರೀರಂಗಪಟ್ಟಣಕ್ಕೆ ಹೋಗುವ ಪ್ರತಿಯೊಬ್ಬ ಪ್ರವಾಸಿಗನೂ ಈ ಕಲ್ಲಿನ ಮುಂದೆ ನಿಂತು ಒಮ್ಮೆಯಾದರೂ ಯೋಚಿಸುತ್ತಾನೆ. ಇದು ಕೇವಲ ಒಂದು ಸ್ಮಾರಕವಲ್ಲ. ಇದು ಭಾರತದ ಇತಿಹಾಸದಲ್ಲಿ ಒಬ್ಬ ಅರಸು ಬ್ರಿಟಿಷರ ಎದುರು ತಲೆಬಾಗದೆ, ಯುದ್ಧಭೂಮಿಯಲ್ಲೇ ಮಡಿದ ಕೊನೆಯ ಕ್ಷಣದ ಸಾಕ್ಷಿ. ಈ ಲೇಖನದಲ್ಲಿ ಆ ದಿನದ ಪ್ರತಿಯೊಂದು ಘಂಟೆಯನ್ನೂ, ಪ್ರತಿಯೊಂದು ಸ್ಥಳವನ್ನೂ, ಪ್ರತಿಯೊಂದು ಆಧಾರವನ್ನೂ ಒಟ್ಟಿಗೆ ಜೋಡಿಸಿ ಹೇಳಲಾಗಿದೆ.

4ನೇ ಆಂಗ್ಲೋ-ಮೈಸೂರು ಯುದ್ಧ – 4 ಮೇ 1799, ಮಧ್ಯಾಹ್ನ 1 ಗಂಟೆಗೆ ಇತಿಹಾಸ ಬದಲಾಯಿತು.

ಯುದ್ಧ ಯಾಕೆ ಬಂತು? ಹಿನ್ನೆಲೆ.
ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ 1798-1799 ರಲ್ಲಿ ಮೈಸೂರು ಸಾಮ್ರಾಜ್ಯ ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ನಡುವೆ ನಡೆಯಿತು. ಇದು ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳ ಕೊನೆಯದು. ಇದಕ್ಕಿಂತ ಮೊದಲು ಮೂರು ಯುದ್ಧಗಳಲ್ಲಿ ಹೈದರ್ ಅಲಿ ಮತ್ತು ನಂತರ ಟಿಪ್ಪು ಸುಲ್ತಾನ್ ಬ್ರಿಟಿಷರಿಗೆ ತೀವ್ರ ಸವಾಲಾಗಿದ್ದರು. ಟಿಪ್ಪು ಕೇವಲ ಮೈಸೂರಿನ ಅರಸನಲ್ಲ, ದಕ್ಷಿಣ ಭಾರತದಲ್ಲಿ ಬ್ರಿಟಿಷ್ ವಿಸ್ತರಣೆಗೆ ಅಡ್ಡಗೋಡೆಯಾಗಿದ್ದರು.

ಟಿಪ್ಪು ಫ್ರೆಂಚರೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ, ಫ್ರೆಂಚ್ ಸೈನಿಕರ ಸಹಾಯ ಪಡೆಯುತ್ತಿದ್ದಾರೆ ಎಂಬುದು ಬ್ರಿಟಿಷ್ ಗವರ್ನರ್ ಜನರಲ್ ರಿಚರ್ಡ್ ವೆಲ್ಲೆಸ್ಲಿ (ಅರ್ಲ್ ಆಫ್ ಮಾರ್ನಿಂಗ್‌ಟನ್) ಗೆ ಯುದ್ಧಕ್ಕೆ ನೆಪವಾಯಿತು. ಅದೇ ಸಮಯದಲ್ಲಿ ನಿಜಾಮ ಮತ್ತು ಮರಾಠರನ್ನೂ ತನ್ನ ಕಡೆಗೆ ಸೆಳೆದುಕೊಂಡು, ಬ್ರಿಟಿಷರು ಮೈಸೂರನ್ನು ನಾಲ್ಕೂ ಕಡೆಯಿಂದ ಸುತ್ತುವರಿದರು.

ಮೂರು ಸೈನ್ಯಗಳು ಮೈಸೂರಿನತ್ತ ನುಗ್ಗಿದವು. ಒಂದು ಬಾಂಬೆಯಿಂದ, ಎರಡು ಮದ್ರಾಸ್ ಕಡೆಯಿಂದ. ಒಂದು ವಿಭಾಗದ ನೇತೃತ್ವವನ್ನು ಕರ್ನಲ್ ಆರ್ಥರ್ ವೆಲ್ಲೆಸ್ಲಿ ವಹಿಸಿದ್ದರು. ಅವರೇ ಮುಂದೆ ವಾಟರ್‌ಲೂ ಯುದ್ಧದಲ್ಲಿ ನೆಪೋಲಿಯನ್‌ನನ್ನು ಸೋಲಿಸಿದ ಡ್ಯೂಕ್ ಆಫ್ ವೆಲ್ಲಿಂಗ್‌ಟನ್. ಇನ್ನೊಂದು ಸೈನ್ಯದ ನೇತೃತ್ವ ಜನರಲ್ ಜಾರ್ಜ್ ಹ್ಯಾರಿಸ್ ಅವರದ್ದು. ಒಟ್ಟು ಬ್ರಿಟಿಷ್ ಮತ್ತು ಮಿತ್ರಪಡೆ ಸೈನ್ಯ 50,000 ಕ್ಕೂ ಹೆಚ್ಚು ಇತ್ತು. ಟಿಪ್ಪುವಿನ ಬಳಿ ಇದ್ದದ್ದು ಸುಮಾರು 30,000 ಸೈನಿಕರು ಮಾತ್ರ.

6 ಮಾರ್ಚ್ 1799: ಸೀಡಾಸೀರ್ ಕದನ ಟಿಪ್ಪುವಿನ ಮುನ್ನಡೆ ತಡೆ
27 ಮಾರ್ಚ್ 1799: ಮಳವಳ್ಳಿ ಕದನ ಬ್ರಿಟಿಷರಿಗೆ ಜಯ, ಟಿಪ್ಪು ಶ್ರೀರಂಗಪಟ್ಟಣಕ್ಕೆ ಹಿಮ್ಮೆಟ್ಟಿದರು
5 ಏಪ್ರಿಲ್ 1799: ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಆರಂಭ. ಕಾವೇರಿ ನದಿ ಆ ವರ್ಷ ಅತ್ಯಂತ ಕಡಿಮೆ ಮಟ್ಟದಲ್ಲಿತ್ತು, ಕಾಲ್ನಡಿಗೆಯಲ್ಲಿ ದಾಟಬಹುದಿತ್ತು. ಇದೇ ಬ್ರಿಟಿಷರಿಗೆ ದೊಡ್ಡ ಅನುಕೂಲವಾಯಿತು.
20 ಏಪ್ರಿಲ್ 1799: ಟಿಪ್ಪು ಸಂಧಾನಕ್ಕೆ ಪ್ರಯತ್ನಿಸಿದರು. ಜನರಲ್ ಹ್ಯಾರಿಸ್ ಕಠಿಣ ಷರತ್ತು ಹಾಕಿದ ಅರ್ಧ ರಾಜ್ಯ ಬಿಟ್ಟುಕೊಡಬೇಕು, 4 ಮಕ್ಕಳನ್ನು ಒತ್ತೆಯಾಗಿ ಕೊಡಬೇಕು, 2 ಕೋಟಿ ರೂಪಾಯಿ ಕೊಡಬೇಕು, 24 ಗಂಟೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಬೇಕು. ಟಿಪ್ಪು ಇದನ್ನು ಅವಮಾನಕರವೆಂದು ಭಾವಿಸಿ ಒಪ್ಪಲಿಲ್ಲ. “ಹುಲಿಯಾಗಿ ಒಂದು ದಿನ ಬದುಕುವುದೇ ಲೇಸು, ನರಿಯಾಗಿ ನೂರು ವರ್ಷ ಬದುಕುವುದಕ್ಕಿಂತ” ಎಂಬ ಅವರ ಮಾತು ಇಲ್ಲಿಯೇ ಅರ್ಥಪೂರ್ಣವಾಗುತ್ತದೆ.

ಕೋಟೆ ಬಿರುಕು Breach ಎಲ್ಲಿ?
ಗವರ್ನರ್ ಜನರಲ್ ಯೋಜನೆಯಂತೆ ಕೋಟೆಯ ಪಶ್ಚಿಮ ಗೋಡೆಯಲ್ಲಿ ಬಿರುಕು ಮಾಡಲು ನಿರ್ಧರಿಸಲಾಯಿತು. ಯುದ್ಧದ ಪ್ರತ್ಯಕ್ಷದರ್ಶಿ ಮೇಜರ್ ಅಲೆಕ್ಸಾಂಡರ್ ಬೀಟ್ಸನ್ ಬರೆದಂತೆ, ಬಿರುಕು ಇದ್ದದ್ದು “ಪಶ್ಚಿಮ ಗೋಡೆಯಲ್ಲಿ, ವಾಯವ್ಯ ಬುರುಜಿನ ಬಲಭಾಗಕ್ಕೆ ಸ್ವಲ್ಪ ಬಲಕ್ಕೆ. ಹಳೆಯ ಕೋಟೆ ಗೋಡೆ ಹೊಸದಕ್ಕಿಂತ ದುರ್ಬಲವಾಗಿ ಕಂಡಿತು.”

ಕೋಟೆ ಎಂದರೆ ಸಾಮಾನ್ಯ ಗೋಡೆ ಅಲ್ಲ. ಶ್ರೀರಂಗಪಟ್ಟಣ ಕೋಟೆ ಎರಡು ಸುತ್ತಿನ ಗೋಡೆ, ಆಳವಾದ ಕಂದಕ, ಬುರುಜುಗಳು, ರಾಕೆಟ್ ದಳಗಳಿಂದ ಕೂಡಿತ್ತು. ಟಿಪ್ಪು ಸ್ವತಃ ರಾಕೆಟ್ ತಂತ್ರಜ್ಞಾನದಲ್ಲಿ ಮುಂದಿದ್ದರು. ಅವರ ರಾಕೆಟ್‌ಗಳು ಬ್ರಿಟಿಷರಿಗೆ ಭಯ ಹುಟ್ಟಿಸಿದ್ದವು. ಆದರೆ ಈ ಬಾರಿ ಬ್ರಿಟಿಷರ ಫಿರಂಗಿ ದಾಳಿ ನಿರಂತರವಾಗಿತ್ತು.

22 ಏಪ್ರಿಲ್: ಉತ್ತರ ದಂಡೆಯಲ್ಲಿ ಬ್ಯಾಟರಿ ಹಾಕಲು ಮೈಸೂರು ಸೈನ್ಯ ಅಡ್ಡಿಪಡಿಸಿತು
1 ಮೇ ರಾತ್ರಿ: ಬ್ರಿಟಿಷರು ದಕ್ಷಿಣ ಬ್ಯಾಟರಿಗಳನ್ನು ಪೂರ್ಣಗೊಳಿಸಿದರು, ರಾತ್ರಿಯಿಡೀ ಕೆಲಸ ಮಾಡಿದರು
2 ಮೇ ಬೆಳಿಗ್ಗೆ: ನಿಜಾಮನ ಬ್ಯಾಟರಿಗಳು ಹೊರಗೋಡೆಯಲ್ಲಿ ಬಿರುಕು ತೆರೆದವು. ಅದೇ ದಿನ ರಾಕೆಟ್ ಮದ್ದುಗುಂಡಾರ ಸ್ಫೋಟಗೊಂಡು ಕೋಟೆಯ ರಕ್ಷಣೆ ದುರ್ಬಲವಾಯಿತು. ಕೆಲವು ದಾಖಲೆಗಳ ಪ್ರಕಾರ ಮದ್ದುಗುಂಡಾರದಲ್ಲಿ ನೀರು ಹಾಕಿದ ದ್ರೋಹವೂ ನಡೆದಿತ್ತು ಎಂದು ಹೇಳಲಾಗುತ್ತದೆ.

ಇದರ ಜೊತೆಗೆ ಒಳಗಿನ ದ್ರೋಹದ ಕಥೆಯೂ ಇದೆ. ಮಂತ್ರಿ ಮೀರ್ ಸಾದಿಕ್ ಬ್ರಿಟಿಷರೊಂದಿಗೆ ಸೇರಿಕೊಂಡಿದ್ದರು ಎಂಬ ಆರೋಪ ಇತಿಹಾಸದಲ್ಲಿ ಬಲವಾಗಿ ಉಳಿದಿದೆ. ಕೋಟೆ ಬಾಗಿಲು ತೆರೆಯಲು, ಸೈನಿಕರಿಗೆ ಸರಿಯಾದ ಮಾಹಿತಿ ನೀಡದಿರಲು ಅವರು ಕಾರಣರಾದರು ಎಂದು ಹೇಳಲಾಗುತ್ತದೆ. ಈ ದ್ರೋಹ ಇಲ್ಲದಿದ್ದರೆ ಯುದ್ಧದ ಫಲಿತಾಂಶ ಬೇರೆಯೇ ಇರುತ್ತಿತ್ತು ಎಂದು ಇಂದಿಗೂ ಅನೇಕ ಇತಿಹಾಸಕಾರರು ವಾದಿಸುತ್ತಾರೆ.

4 ಮೇ 1799 ಕೊನೆಯ ದಿನ, ಕೊನೆಯ ಹೋರಾಟ.

ಮೈಸೂರು ಗೆಜೆಟಿಯರ್ (ಬಿ. ಲೂಯಿಸ್ ರೈಸ್) ಪ್ರಕಾರ, 4 ಮೇ 1799, ಮಧ್ಯಾಹ್ನ 1 ಗಂಟೆಗೆ 2,490 ಯುರೋಪಿಯನ್ ಸೈನಿಕರು ಮತ್ತು 1,887 ಸ್ಥಳೀಯ ಮಿತ್ರಪಡೆ ಸೈನಿಕರು ಕೋಟೆಯನ್ನು ಭೇದಿಸಿದರು.

ದಾಳಿಯ ನೇತೃತ್ವ ವಹಿಸಿದ್ದವರು ಮೇಜರ್ ಜನರಲ್ ಡೇವಿಡ್ ಬೈರ್ಡ್. ಮಧ್ಯಾಹ್ನ 1 ಗಂಟೆಗೆ ಬೈರ್ಡ್ ತನ್ನ ಗಡಿಯಾರ ನೋಡಿ, ಕತ್ತಿ ಎತ್ತಿ “Now, my brave fellows, follow me” ಎಂದು ಕೂಗಿ ಕಾವೇರಿ ದಾಟಿದರು. ಸುಮಾರು 2,000 ಯುರೋಪಿಯನ್ನರು ಮತ್ತು 1,800 ಸಿಪಾಯಿಗಳು ಬಿರುಕಿನತ್ತ ನುಗ್ಗಿದರು. ಮುಂಚೂಣಿಯಲ್ಲಿ “Forlorn Hope” ಎಂಬ ಸಣ್ಣ ತಂಡವಿತ್ತು. ಅವರು ಬಯೋನೆಟ್ ಮಾತ್ರ ಬಳಸಬೇಕು, ಅಗತ್ಯವಿಲ್ಲದಿದ್ದರೆ ಗುಂಡು ಹಾರಿಸಬಾರದು ಎಂಬ ಆದೇಶವಿತ್ತು.

ಟಿಪ್ಪು ಆಗ ಎಲ್ಲಿದ್ದರು? ಆಧಾರಗಳ ಪ್ರಕಾರ, ಟಿಪ್ಪು ಕಳೆದ ಕೆಲವು ವಾರಗಳಿಂದ ಕಳಲೆ ದಿಡ್ಡಿ ಅಥವಾ WATER GATE (ಹಳೆ ದಿಡ್ಡಿ ಬಾಗಿಲು) ಬಳಿಯ ಸಣ್ಣ ಕೊಠಡಿಯಲ್ಲಿ ವಾಸಿಸುತ್ತಿದ್ದರು, ಊಟ, ನಿದ್ರೆ ಅಲ್ಲೇ. ಕೋಟೆಯ ರಕ್ಷಣೆ ನೇರವಾಗಿ ನೋಡಲು ಅವರು ಅಲ್ಲಿಯೇ ಉಳಿದಿದ್ದರು. 4 ಮೇ ಮಧ್ಯಾಹ್ನ ಊಟಕ್ಕೆ ಕುಳಿತ್ತಿದ್ದ ತಮ್ಮ ನಂಬಿಕಸ್ಥ ಸೇನಾಧಿಪತಿ ಸೈಯದ್ ಗಫೂರ್ ಗುಂಡೇಟಿಗೆ ಬಲಿಯಾದ ಸುದ್ದಿ ಬಂತು.

ತಕ್ಷಣ ಕುದುರೆ ಏರಿ ಉತ್ತರದ ಕೋಟೆ ಗೋಡೆಯ ಉದ್ದಕ್ಕೂ ಪಶ್ಚಿಮಕ್ಕೆ, ಬಿರುಕಿನತ್ತ ಧಾವಿಸಿದರು. ಅಲ್ಲಿ ಸ್ವತಃ ಬಂದೂಕು ಹಿಡಿದು ಹೋರಾಡಿದರು. ಬ್ರಿಟಿಷ್ ಸೈನಿಕರು ಬರೆದಂತೆ, “ಕುಳ್ಳ, ದಪ್ಪಗಿನ ಅಧಿಕಾರಿ” ಒಬ್ಬರು ಪ್ರತಿ ತಿರುವಿನಲ್ಲೂ ನಿಂತು, ಸೇವಕರು ತುಂಬಿಕೊಡುತ್ತಿದ್ದ ಬೇಟೆ ಬಂದೂಕುಗಳಿಂದ ಗುಂಡು ಹಾರಿಸುತ್ತಿದ್ದರು. ಅದೇ ಟಿಪ್ಪು ಸುಲ್ತಾನ್. ಅವರು ಹಿಂದಿನಿಂದ ಆಜ್ಞೆ ಕೊಡುವ ಅರಸನಲ್ಲ, ಮುಂದೆ ನಿಂತು ಹೋರಾಡುವ ಸೈನಿಕನಾಗಿದ್ದರು.

ಬಿರುಕನ್ನು ತಡೆಯಲು ಸಾಧ್ಯವಿಲ್ಲ ಎಂದು ಕಂಡಾಗ, ಟಿಪ್ಪು ಪೂರ್ವಕ್ಕೆ ತಿರುಗಿ, ಕೋಟೆಯ ಒಳಗಿನ ಅರಮನೆಯ ಕಡೆಗೆ ಹೋಗಲು ಉತ್ತರದ ಸ್ಯಾಲಿ ಪೋರ್ಟ್ / ಹೊಳೆ ಗೇಟ್ (Hoally Gate)ಕಡೆಗೆ ಧಾವಿಸಿದರು. ಅರಮನೆಗೆ ಹೋಗಿ ಮತ್ತೆ ಸೈನ್ಯ ಸಂಘಟಿಸಿ ಹೋರಾಡುವುದು ಅವರ ಯೋಜನೆಯಾಗಿತ್ತು. ಆದರೆ ಅಲ್ಲಿಯೇ ವಿಧಿ ಕಾದಿತ್ತು.

ಟಿಪ್ಪು ಎಲ್ಲಿ ಮಡಿದರು? ಎರಡು ಫಲಕಗಳ ಗೊಂದಲಕ್ಕೆ ಉತ್ತರ.
ಇಲ್ಲೇ ಇತಿಹಾಸದಲ್ಲಿ ದೊಡ್ಡ ಗೊಂದಲವಿದೆ. ಇಂದು ಶ್ರೀರಂಗಪಟ್ಟಣದಲ್ಲಿ ಸುಮಾರು 200 ಮೀಟರ್ ಅಂತರದಲ್ಲಿ ಎರಡು ಗುರುತುಗಳಿವೆ:
WATER GATE ಮೇಲಿನ ಫಲಕ: “At the Northern End of this Archway fell Tippu Sultan – May 4th, 1799” ಎಂದು ಬರೆಯಲಾಗಿದೆ.

“BODY FOUND HERE” ಕಲ್ಲು: ಇದು WATER GATE ನಿಂದ ಸುಮಾರು 200 ಮೀಟರ್ ಪೂರ್ವಕ್ಕೆ ಇದೆ.

ಯಾವುದು ಸರಿ? ಸಮಕಾಲೀನ ಚಿತ್ರಗಳು, ಫೋಟೋಗಳು ಮತ್ತು ದಾಖಲೆಗಳನ್ನು ಅಧ್ಯಯನ ಮಾಡಿದ ಸಂಶೋಧನೆ ಹೇಳುವಂತೆ, “BODY FOUND HERE” ಎಂದು ಬರೆದ ಕಲ್ಲೇ ಸರಿಯಾದ ಸ್ಥಳ. ಅಲ್ಲಿಯೇ ಸತ್ತ ಸೈನಿಕರ ರಾಶಿಗಳ ನಡುವೆ ಟಿಪ್ಪು ಮೃತ ದೇಹ ಸಿಲುಕಿತ್ತು. WATER GATE ಮೇಲಿನ ಫಲಕ ಟಿಪ್ಪು ತನ್ನ ಕುದುರೆಗೆ ಮೇಲಿಂದ ಕುಸಿದು ಬೀಳುತ್ತಾನೆ, ನೆಲದ ಮೇಲೆ ನಿಂತು ಯುದ್ಧ ಮಾಡಬೇಕಾಗಿ ದಿಡ್ಡಿ ಬಾಗಿಲ ಹತ್ತಿರ ಮಡಿದ ಸ್ಥಳವೆಂದು ನಿಖರ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮೃತ ದೇಹ ದೊರೆತ ಸ್ಥಳದಲ್ಲಿ ಟಿಪ್ಪು ಮಡಿದ ಸ್ಥಳ ಎಂದು ಫಲಕ ಹಾಕಿರುವುದು
ನಂತರದ ತಪ್ಪು ಗ್ರಹಿಕೆ.

ಅಸಲಿ ಘಟನೆ ಹೀಗಿತ್ತು: ಟಿಪ್ಪು ಹೊಳೆ ಗೇಟ್‌ನ ಕಿರಿದಾದ ಸುರಂಗ ಮಾರ್ಗದಲ್ಲಿ ಸಿಲುಕಿದರು. ಜನರು ಓಡುತ್ತಿದ್ದ, ಬ್ರಿಟಿಷ್ 12ನೇ ರೆಜಿಮೆಂಟ್ ಬೆನ್ನಟ್ಟುತ್ತಿದ್ದ ಆ ಗೇಟ್‌ನಲ್ಲಿ ಭೀಕರ ಕದನ ನಡೆಯಿತು. ಕಿರಿದಾದ ದಾರಿಯಲ್ಲಿ ನೂರಾರು ಜನರು ಒಟ್ಟಿಗೆ ಸಿಲುಕಿದರು. ಹೊರಗೆ ಹೋಗಲು ಸಾಧ್ಯವಾಗಲಿಲ್ಲ, ಹಿಂದೆ ಹೋಗಲೂ ಸಾಧ್ಯವಾಗಲಿಲ್ಲ.

ಮೈಸೂರು ಗೆಜೆಟಿಯರ್‌ನ ವರ್ಣನೆ: “ಅವರು ಬಿದ್ದಾಗ ಅವರ ದೇಹದ ಕೆಳಭಾಗ ಶವಗಳಡಿ ಸಿಲುಕಿತ್ತು. ಅವರ ಬೆಲ್ಟ್‌ನ ಚಿನ್ನದ ಬಕಲ್ ನೋಡಿ ಒಬ್ಬ ಸೈನಿಕ ಅದನ್ನು ಕಸಿಯಲು ಪ್ರಯತ್ನಿಸಿದ. ಟಿಪ್ಪು ಬಿದ್ದಲ್ಲಿಂದಲೇ ಕತ್ತಿ ಎತ್ತಿ ಅವನ ಮೇಲೆ ಹೊಡೆದರು. ಆಗ ಆ ಗ್ರೆನೇಡಿಯರ್ ಟಿಪ್ಪುವಿನ ಕಣತಲೆಗೆ ಗುಂಡು ಹೊಡೆದು ಅವರ ಜೀವನವನ್ನು ಕೊನೆಗೊಳಿಸಿದ.”

ಅಂದರೆ ಟಿಪ್ಪು ಮಡಿದದ್ದು ಹೊಳೆ ಗೇಟ್‌ನ ಸುರಂಗದಲ್ಲಿ, ಈಗ “BODY FOUND HERE” ಕಲ್ಲು ಇರುವ ಜಾಗದಲ್ಲೇ.ಆ ಹೊಳೆ ಗೇಟ್ ಈಗ ಇಲ್ಲ. 1804ರ ಹೊತ್ತಿಗೆ ರಸ್ತೆ ಅಗಲ ಮಾಡಲು ಅದನ್ನು ಕೆಡವಲಾಗಿತ್ತು ಎಂದು ಲಾರ್ಡ್ ವ್ಯಾಲೆಂಟಿಯಾ 1804ರಲ್ಲಿ ಬರೆದಿದ್ದಾರೆ. ಅದಕ್ಕೇ ಇಂದು ಅಲ್ಲಿ ಕೇವಲ ಕಲ್ಲು ಮಾತ್ರ ಉಳಿದಿದೆ, ಗೇಟ್ ಇಲ್ಲ.

ಶವ ಪತ್ತೆ ಬ್ರಿಟಿಷರಿಗೇ ಗೊತ್ತಿರಲಿಲ್ಲ.
ಕೋಟೆ ಬಿದ್ದ ನಂತರವೂ ಬ್ರಿಟಿಷರಿಗೆ ಟಿಪ್ಪು ಸತ್ತಿದ್ದಾರೆಂದು ಗೊತ್ತಿರಲಿಲ್ಲ. ಅವರು ಅರಮನೆಯಲ್ಲಿ ಅಡಗಿದ್ದಾರೆಂದು ಭಾವಿಸಿ ಹುಡುಕಿದರು. ಜನರಲ್ ಬೈರ್ಡ್ ಮೇಜರ್ ಅಲೆಕ್ಸಾಂಡರ್ ಅಲನ್‌ರನ್ನು ಅರಮನೆಗೆ ಕಳುಹಿಸಿದರು. ಕಿಲ್ಲೇದಾರ್ ಮೀರ್ ನದೀಮ್ ಹೇಳಿದ “ಸುಲ್ತಾನ್ ಅರಮನೆಯಲ್ಲಿ ಇಲ್ಲ, ಉತ್ತರ ಬಾಗಿಲಿನಲ್ಲಿ ಗಾಯಗೊಂಡು ಬಿದ್ದಿದ್ದಾರೆ.”

ಬೈರ್ಡ್‌ರವರೇ ಹ್ಯಾರಿಸ್‌ಗೆ ಬರೆದ ಅಧಿಕೃತ ವರದಿ (Dispatch): “ಅರಮನೆಯಲ್ಲಿ ಒಬ್ಬ ಮನುಷ್ಯ ಸಿಕ್ಕ, ಬೆದರಿಸಿದಾಗ ಸುಲ್ತಾನ್ ಉತ್ತರದ ಸ್ಯಾಲಿ ಪೋರ್ಟ್‌ನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾ ಕೊಲ್ಲಲ್ಪಟ್ಟ ಎಂದು ಹೇಳಿದ. ನಾವು ಅಲ್ಲಿಗೆ ಹೋದೆವು. ನೂರಾರು ಶವಗಳ ರಾಶಿಯಡಿ ಸುಲ್ತಾನರ ಶವವನ್ನು ಕಂಡೆವು. ಅವರಿಗೆ ತಲೆ ಮತ್ತು ದೇಹಕ್ಕೆ ಗುಂಡು ತಗುಲಿತ್ತು, ಅವರು ಸಂಪೂರ್ಣ ಸತ್ತಿದ್ದರು.”

ಇನ್ನೊಂದು ಪ್ರತ್ಯಕ್ಷದರ್ಶಿ ವಿವರಣೆ:
ಶವವನ್ನು ಹೊರತೆಗೆದಾಗ ಕಣ್ಣು ತೆರೆದಿತ್ತು, ದೇಹ ಇನ್ನೂ ಬೆಚ್ಚಗಿತ್ತು. ಕರ್ನಲ್ ಆರ್ಥರ್ ವೆಲ್ಲೆಸ್ಲಿ ಮತ್ತು ಮೇಜರ್ ಅಲನ್ ಒಂದು ಕ್ಷಣ ಅವರು ಬದುಕಿದ್ದಾರೆಯೇ ಎಂದು ನಾಡಿ ಪರೀಕ್ಷಿಸಿದರು. ಟಿಪ್ಪುವಿಗೆ ನಾಲ್ಕು ಗಾಯಗಳಾಗಿದ್ದವು. ಮೂರು ದೇಹದಲ್ಲಿ (ಬಯೋನೆಟ್‌ನಿಂದ ಇರಬಹುದು), ಒಂದು ಕಣತಲೆಯಲ್ಲಿ. ಬಲ ಕಿವಿಯ ಮೇಲಿನಿಂದ ನುಗ್ಗಿದ ಗುಂಡು ಎಡ ಕೆನ್ನೆಯಲ್ಲಿ ಸಿಲುಕಿತ್ತು.

ಬೆಂಜಮಿನ್ ಸಿಡೆನ್‌ಹ್ಯಾಮ್ ಬರೆದ ದೇಹದ ವರ್ಣನೆ:
“ಬಲ ಕಿವಿಯ ಸ್ವಲ್ಪ ಮೇಲೆ ಗಾಯ, ಗುಂಡು ಎಡ ಕೆನ್ನೆಯಲ್ಲಿ ಸಿಲುಕಿತ್ತು. ದೇಹದಲ್ಲೂ ಮೂರು ಗಾಯಗಳು. ಎತ್ತರ ಸುಮಾರು 5 ಅಡಿ 8 ಇಂಚು, ಸ್ವಲ್ಪ ದಪ್ಪಗಿದ್ದರು, ಕತ್ತು ಚಿಕ್ಕದು, ಭುಜ ಎತ್ತರ, ಆದರೆ ಮಣಿಕಟ್ಟು ಮತ್ತು ಪಾದಗಳು ಚಿಕ್ಕವು, ನಾಜೂಕಾಗಿದ್ದವು.”

ಶವ ಗುರುತಿಸಿದ್ದು ಹೇಗೆ? ಅರಮನೆಯ ಪ್ರಮುಖರು ಮತ್ತು ಹರಮ್‌ನ ಇಬ್ಬರು ಕಂಚುಕಿಯರು ಶವವನ್ನು ಗುರುತಿಸಿದರು. ಬಲಗೈಯಲ್ಲಿ ಬೆಳ್ಳಿಯಂತಹ ಲೋಹದ ತಾಯಿತ, ಕೊರಳಲ್ಲಿ ಬೆಳ್ಳಿ ಪೆಟ್ಟಿಗೆಯಲ್ಲಿದ್ದ ಪುಟ್ಟ ಕುರಾನ್ ಸಿಕ್ಕಿತು. ಈ ವಸ್ತುಗಳೇ ಟಿಪ್ಪುವನ್ನು ಗುರುತಿಸಲು ಸಹಾಯ ಮಾಡಿದವು. ಆ ತಾಯಿತ ಮತ್ತು ಕುರಾನ್ ಈಗ ಲಂಡನ್‌ನ ವಸ್ತುಸಂಗ್ರಹಾಲಯದಲ್ಲಿವೆ ಎಂದು ಹೇಳಲಾಗುತ್ತದೆ.

ಸಂಜೆ ಕತ್ತಲಾಗುತ್ತಿದ್ದಂತೆ, ಪೆಂಜಿನ ಬೆಳಕಿನಲ್ಲಿ ನೂರಾರು ಶವಗಳನ್ನು ಒಂದೊಂದಾಗಿ ಸರಿಸಿ ಟಿಪ್ಪುವಿನ ಶವವನ್ನು ಹೊರತೆಗೆಯಲಾಯಿತು. ಆ ದೃಶ್ಯವನ್ನು ಕಂಡ ಬ್ರಿಟಿಷ್ ಅಧಿಕಾರಿಗಳೇ ಟಿಪ್ಪುವಿನ ಧೈರ್ಯವನ್ನು ಮೆಚ್ಚಿದರು. ಅವರನ್ನು ಬ್ರಿಟಿಷ್ ಚಿತ್ರಕಾರ ಆರ್ಥರ್ ವಿಲಿಯಂ ಡೇವಿಸ್ ತಮ್ಮ ಪ್ರಸಿದ್ಧ ಚಿತ್ರ “The Finding of the Body of Tippoo Sahib” ನಲ್ಲಿ ಚಿತ್ರಿಸಿದ್ದಾರೆ. ಆ ಚಿತ್ರ ಇಂದಿಗೂ ಲಂಡನ್‌ನಲ್ಲಿ ಇದೆ.

ವೆಲ್ಲೆಸ್ಲಿಯ ಕಲ್ಲು ಶತ್ರುವೇ ಹಾಕಿದ ಗೌರವ.
ಟಿಪ್ಪುವಿನ ಶೌರ್ಯವನ್ನು ಮೆಚ್ಚಿದ ಕರ್ನಲ್ ವೆಲ್ಲೆಸ್ಲಿ ಆ ಸ್ಥಳದಲ್ಲಿ ಒಂದು ಸರಳ ಕಲ್ಲಿನ ಫಲಕ ನಿಲ್ಲಿಸಿದರು. ಅದರ ಮೇಲೆಯೇ “THE BODY OF TIPPU SULTAN WAS FOUND HERE” ಎಂದು ಬರೆಯಲಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಬೋರ್ಡ್‌ನಲ್ಲೂ ಇದೇ ಬರಹವಿದೆ: “In recognition of valiant Tipu, Colonel Wellesley set a stone tablet to mark the spot.”

ಶತ್ರುವೇ ಎದುರಾಳಿಯ ಶೌರ್ಯವನ್ನು ಗುರುತಿಸಿ ಸ್ಮಾರಕ ಹಾಕುವುದು ಅಪರೂಪ. ಅದೇ ಟಿಪ್ಪುವಿನ ವ್ಯಕ್ತಿತ್ವದ ಎತ್ತರವನ್ನು ತೋರಿಸುತ್ತದೆ. ಇಂದು ಆ ಕಲ್ಲಿನ ಮೇಲೆ ಚಂದ್ರ-ನಕ್ಷತ್ರದ ಚಿಹ್ನೆ ಕೆತ್ತಲಾಗಿದೆ. ಅದರ ಸುತ್ತಲೂ ಸಣ್ಣ ಬೇಲಿ ಹಾಕಿ ಸಂರಕ್ಷಿಸಲಾಗಿದೆ.

ಅಂತ್ಯಕ್ರಿಯೆ ಶೆಹರ್ ಗಂಜಾಂನ ಗುಂಬಜ್‌ನಲ್ಲಿ
5 ಮೇ 1799 ರಂದು ಟಿಪ್ಪುವಿಗೆ ಪೂರ್ಣ ಮಿಲಿಟರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. ಅವರ ಪಾರ್ಥಿವ ಶರೀರವನ್ನು ಅವರು ತಂದೆ ಹೈದರ್ ಅಲಿ ಮತ್ತು ತಾಯಿ ಫಕ್ರುನ್ನಿಸಾ ಅವರಿಗಾಗಿ ಕಟ್ಟಿಸಿದ್ದ ಗಂಜಾಂನ ಗುಂಬಜ್ ನಲ್ಲಿ ಸಮಾಧಿ ಮಾಡಲಾಯಿತು. ಯುದ್ಧದ ಸುದ್ದಿ ಲಂಡನ್ ತಲುಪಿದ್ದು 13 ಸೆಪ್ಟೆಂಬರ್ 1799 ರಂದು.

ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಬ್ರಿಟಿಷ್ ಸೈನಿಕರೂ ಭಾಗವಹಿಸಿದ್ದರು. ಫಿರಂಗಿ ಸೆಲ್ಯೂಟ್ ಮಾಡಲಾಯಿತು. ಮೈಸೂರಿನ ಜನರು ರಸ್ತೆಯ ಎರಡೂ ಬದಿಯಲ್ಲಿ ನಿಂತು ಕಣ್ಣೀರಿಟ್ಟರು ಎಂದು ದಾಖಲೆಗಳು ಹೇಳುತ್ತವೆ. ಟಿಪ್ಪುವಿನ ಕುಟುಂಬ ಮತ್ತು ಮಕ್ಕಳನ್ನು ವೆಲ್ಲೂರಿಗೆ, ನಂತರ ಕಲ್ಕತ್ತಾಗೆ ಕಳುಹಿಸಲಾಯಿತು.

ಯುದ್ಧದ ನಂತರ ಮೈಸೂರು ಒಡೆಯರ್ ವಂಶಕ್ಕೆ ಹಿಂತಿರುಗಿತು. 1907ರಲ್ಲಿ ಕೃಷ್ಣರಾಜ ಒಡೆಯರ್ IV ಅವರು ಬ್ರಿಟಿಷ್ ಸೈನಿಕರ ನೆನಪಿಗೆ Obelisk Monument ಕಟ್ಟಿಸಿದರು.

ಮೂರು ಸ್ಥಳಗಳ ಸಂಬಂಧ ಒಂದೇ ನೋಟದಲ್ಲಿ
ಸ್ಥಳ ಏನು?
BODY FOUND HERE ಕಲ್ಲು ಟಿಪ್ಪು ಮಡಿದ / ಶವ ಸಿಕ್ಕಿದ ಅಸಲಿ ಜಾಗ ಹೊಳೆ ಗೇಟ್ ಇದ್ದ ಜಾಗ
WATER GATE ಕಟ್ಟಡ ಟಿಪ್ಪು ವಾಸವಿದ್ದ ಕಳಲೆ ದಿಡ್ಡಿ ಬಾಗಿಲು, ಯುದ್ಧದ ಆರಂಭದ ಜಾಗ
WATER GATE ಹಿಂಭಾಗದ ಸುರಂಗ ಕೋಟೆಯಿಂದ ಕಾವೇರಿಗೆ ಹೋಗುವ ಸುರಂಗ ಮಾರ್ಗ, ಅದೇ ಗೋಡೆಯ ಇನ್ನೊಂದು ಬದಿ
ಒಂದು ವಾಕ್ಯದಲ್ಲಿ: ಟಿಪ್ಪು WATER GATE ನಲ್ಲಿ ಊಟ ಮುಗಿಸಿ ಬಿರುಕಿನತ್ತ ಹೋದರು, ಹೋರಾಡುತ್ತಾ ಪೂರ್ವಕ್ಕೆ ಹೊಳೆ ಗೇಟ್ ಸುರಂಗದಲ್ಲಿ ಸಿಲುಕಿ ಮಡಿದರು, ಸಂಜೆ ಕತ್ತಲಲ್ಲಿ ನೂರಾರು ಶವಗಳಡಿಯಿಂದ ಅವರ ಶವವನ್ನು ಹೊರತೆಗೆಯಲಾಯಿತು.

ಪ್ರವಾಸಿಗರಿಗೆ ಸೂಚನೆ: ಶ್ರೀರಂಗಪಟ್ಟಣಕ್ಕೆ ಹೋದರೆ ಈ ಮೂರು ಸ್ಥಳಗಳನ್ನು ಒಟ್ಟಿಗೆ ನೋಡಿ. ಮೊದಲು WATER GATE, ನಂತರ 200 ಮೀಟರ್ ನಡೆದು BODY FOUND HERE ಕಲ್ಲು, ನಂತರ 1.5 ಕಿ.ಮೀ ದೂರದ ಗುಂಬಜ್. ಆಗಲೇ ಈ ಇತಿಹಾಸ ಪೂರ್ಣವಾಗುತ್ತದೆ.

ಶ್ರೀರಂಗಪಟ್ಟಣದ ಸಮರ್ಪಣ ಟ್ರಸ್ಟ್ “ಸ್ಮಾರಕಗಳ ಜೊತೆ ಮೌನ ಮಾತುಕತೆ”ಕಾರ್ಯಕ್ರಮ ಆಯೋಜಿಸಿ ವ್ಯಾಖ್ಯಾನಿಸುತ್ತದೆ. ಭಾರತಾಂಬೆಯ ಸುಪುತ್ರರೇ,
ಇಂತಹ ಸ್ಥಳಕ್ಕೆ ಭೇಟಿ ನೀಡಿದಾಗ, ಅದು ಕೇವಲ ಕಲ್ಲಲ್ಲ, ಭಾರತದ ಒಬ್ಬ ಅರಸು “ಸಿಟಿಜನ್ ಟಿಪ್ಪು” ಬ್ರಿಟಿಷ್ ಸಿಂಹಗಳಿಗೆ ಶರಣಾಗದೆ ಹುಲಿಯಂತೆ ಹೋರಾಡಿ ತನ್ನ ತಾಯಿ ನೆಲಕ್ಕಾಗಿ ಯುದ್ಧಭೂಮಿ ಯಲ್ಲೇ ಮಡಿದ ಕೊನೆಯ ಕ್ಷಣದ ಸಾಕ್ಷಿ ಎಂಬುದನ್ನು ನೆನಪಿಡಿ.

ಬರಹ: ಕೆ ಎಸ್ ಜಯಶಂಕರ್

ಆಧಾರಗಳು: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಫಲಕಗಳು, ಮೈಸೂರು ಗೆಜೆಟಿಯರ್ (ಬಿ. ಲೂಯಿಸ್ ರೈಸ್, 1897), ಮೇಜರ್ ಜನರಲ್ ಡೇವಿಡ್ ಬೈರ್ಡ್‌ರವರ ಅಧಿಕೃತ Dispatch, ಮೇಜರ್ ಬೀಟ್ಸನ್‌ರವರ ಯುದ್ಧ ವಿವರಣೆ, http://Scroll.in ಸಂಶೋಧನಾ ಲೇಖನ ಎರಡು ಫಲಕಗಳ ಹೋಲಿಕೆ, ಬೆಂಜಮಿನ್ ಸಿಡೆನ್‌ಹ್ಯಾಮ್ ವರದಿ.

More articles

Latest article

Most read